ಕೃಷ್ಣನಿಲ್ಲದೆ ಮಹಾಭಾರತವಿಲ್ಲ, ಕಿಚ್ಚನಿಲ್ಲದೆ Bigg boss Kannada ಇಲ್ಲ – ವಿನಯ್ ಗೌಡ

Published : Sep 14, 2024, 02:40 PM IST
ಕೃಷ್ಣನಿಲ್ಲದೆ ಮಹಾಭಾರತವಿಲ್ಲ, ಕಿಚ್ಚನಿಲ್ಲದೆ Bigg boss Kannada ಇಲ್ಲ – ವಿನಯ್ ಗೌಡ

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್ 11ರ ನಿರೂಪಣೆಯನ್ನು ಯಾರು ಮಾಡ್ತಾರೆ? ಈ ಪ್ರಶ್ನೆಗೆ ಇನ್ನೂ ಸರಿಯಾಗಿ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಬಿಗ್ ಬಾಸ್ 10ರ ಸ್ಪರ್ಧಿ ವಿನಯ್ ಗೌಡ, ಕಿಚ್ಚ ಸುದೀಪ್ ಬಗ್ಗೆ ಮಾತನಾಡಿದ್ದಾರೆ.   

ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ರ (Reality Show Bigg Boss Kannada Season 11) ತಯಾರಿ ಜೋರಾಗಿ ನಡೆದಿದೆ. ಬಿಗ್ ಬಾಸ್ ಹಿಂದಿನ ಸರಣಿಗಳು ಶುರುವಾಗುವ ಮೊದಲು ಯಾರೆಲ್ಲ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗ್ತಾರೆ ಎನ್ನುವ ಚರ್ಚೆಯಾಗ್ತಿತ್ತು. ಆದ್ರೆ ಈ ಬಾರಿ ಬಿಗ್ ಬಾಸ್ ಕನ್ನಡದ ನಿರೂಪಕರ್ಯಾರು ಎಂಬುದೇ ದೊಡ್ಡ ಚರ್ಚೆ ವಿಷ್ಯ. ಬಿಗ್ ಬಾಸ್ ನಿರೂಪಣೆ ಹೊಣೆಯನ್ನು ಈ ಬಾರಿ ಕಿಚ್ಚ ಸುದೀಪ್ (Kiccha Sudeep) ಹೊರೋದಿಲ್ಲ ಎಂಬುದು ಟ್ರೆಂಡ್ ಆಗಿದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಸುದೀಪ್ ಹೇಳಿದ್ದ ಕೆಲ ಮಾತುಗಳು ಈ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತ್ತು. ಒಮ್ಮೆ ಸುದೀಪ್, ಬಿಗ್ ಬಾಸ್ ಹೋಸ್ಟ್ ಮಾಡ್ತಾರೆ ಎನ್ನವು ಸುದ್ದಿ ಬಂದ್ರೆ ಇನ್ನೊಮ್ಮೆ ಇಲ್ಲ ಎನ್ನುವ ಸುದ್ದಿ ವೈರಲ್ ಆಗುತ್ತೆ. ಈ ಮಧ್ಯೆ ಬಿಗ್ ಬಾಸ್ ಶೋನಿಂದ ಸುದೀಪ್ ಹೊರ ಬಿದ್ರೆ ಎಂಬ ಪ್ರಶ್ನೆಗೆ ಬಿಗ್ ಬಾಸ್ 10ರ ಸ್ಪರ್ಧಿ ವಿನಯ್ ಗೌಡ (Bigg Boss 10 contestant Vinay Gowda) ರಿಯಾಕ್ಷನ್ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ವಿನಯ್ ಗೌಡ, ಕೃಷ್ಣ ಇಲ್ಲದೆ ಮಹಾಭಾರತ ನಡೆಯೋದಿಲ್ಲ ಹಾಗೆ ಸುದೀಪ್ ಸರ್ ಇಲ್ದೆ ಬಿಗ್ ಬಾಸ್ನಡೆಯೋದು ನನ್ನ ಪ್ರಕಾರ ಸಾಧ್ಯವಿಲ್ಲ ಅಂತ ವಿನಯ್ ಗೌಡ ಹೇಳಿದ್ದಾರೆ. ಬಿಗ್ ಬಾಸ್ ತಿರುಳೇ ಅವರು ಎನ್ನುತ್ತಾರೆ ವಿನಯ್ ಗೌಡ. ಬಿಗ್ ಬಾಸ್ ಯಾರು ಅಂತ ಯಾರೂ ನೋಡಿಲ್ಲ. ಬರೀ ಬಿಗ್ ಬಾಸ್ ವೈಸ್ ಮಾತ್ರ ನಮಗೆ ಗೊತ್ತು. ನಮಗೆ ಬಿಗ್ ಬಾಸ್ ಅಂದ್ರೆ ಸುದೀಪ್ ಸರ್ ಅಂತ ವಿನಯ್ ಹೇಳಿದ್ದಾರೆ. ಬಿಗ್ ಬಾಸೇ ಇಲ್ದೆ ಬಿಗ್ ಬಾಸ್ ಶೋ ನಡೆಯೋದು ಡೌಟ್ ಅಂತ ವಿನಯ್ ಗೌಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಭಾಗ್ಯ-ಕುಸುಮಾ ಎದುರೇ ಶ್ರೇಷ್ಠಾಗೆ ತಾಳಿ ಕಟ್ತಾನಾ ತಾಂಡವ್​? ಮನೆ ಬಿಡ್ತಾಳಾ ಭಾಗ್ಯ?

ಬಿಗ್ ಬಾಸ್ ಕನ್ನಡ ಸೀಸನ್ 11 ಇದು ಸೆಪ್ಟೆಂಬರ್ 29ರಿಂದ ಶುರುವಾಗಲಿದೆ ಅಂತ ಸುದ್ದಿ ಇದೆ. ಬಿಗ್ ಬಾಸ್ ನ ಎರಡು ಪ್ರೋಮೋ ಔಟ್ ಆಗಿದೆ. ಒಂದ್ರಲ್ಲಿ ಬಿಗ್ ಬಾಸ್ ಕಣ್ಣಿದ್ರೆ, ಇನ್ನೊಂದರಲ್ಲಿ ಜನಸಾಮಾನ್ಯರನ್ನು ಬಳಸಿಕೊಳ್ಳಲಾಗಿದೆ. ಹೊಸ ಆಟ, ಹೊಸ ದಶಕ, ಹೊಸ ಅಧ್ಯಾಯ ಎನ್ನುತ್ತಲೇ, ಆಂಕರ್ ಹೊಸಬ್ರಾ ಎಂಬ ಪ್ರಶ್ನೆ ಮೂಲಕ ಪ್ರೇಕ್ಷಕರ ತಲೆಗೆ ಹುಳು ಬಿಟ್ಟಿದೆ ಎರಡನೇ ಪ್ರೊಮೋ. ಬಿಗ್ ಬಾಸ್ ಶೋವನ್ನು ಈ ಬಾರಿ ಸುದೀಪ್ ನಡೆಸಿಕೊಡೋದಿಲ್ಲ ಎನ್ನುವ ಸುದ್ದಿ ಆರಂಭದಿಂದಲೂ ಇದೆ. ನಟ ರಿಷಬ್ ಶೆಟ್ಟಿ (Rishabh Shetty) ಹೆಸರು ಕೂಡ ಬಂದು ಹೋಗಿದೆ. ಆದ್ರೆ ಈವರೆಗೂ ನಿರೂಪಕರು ಯಾರು ಎಂಬ ಕುತೂಹಲವನ್ನು ಬಿಗ್ ಬಾಸ್ ಉಳಿಸಿಕೊಂಡು ಬಂದಿದೆ.

 ಅಭಿಮಾನಿಗಳು ಸುದೀಪ್ ಬಿಟ್ಟುಕೊಡಲು ಸಿದ್ಧರಿಲ್ಲ. ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಂದ ಹಿಡಿದು ಜನಸಾಮಾನ್ಯರವೆಗೆ ಎಲ್ಲರೂ ಬಿಗ್ ಬಾಸ್ ಹೋಸ್ಟ್ ಸುದೀಪ್ ಮಾಡ್ಬೇಕು ಎನ್ನುತ್ತಿದ್ದಾರೆ. ಸುದೀಪ್ ಇಲ್ದೆ ಬಿಗ್ ಬಾಸ್ ಗೆ ಟಿಆರ್ ಪಿ ಇಲ್ಲ ಅನ್ನೋದು ವೀಕ್ಷಕರ ಮಾತು. ಸೆಪ್ಟೆಂಬರ್ 23ರಂದು ಸುದೀಪ್ ನೇತೃತ್ವದಲ್ಲಿ ಬಿಗ್ ಬಾಸ್ ಪತ್ರಿಕಾಗೋಷ್ಠಿ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇದನ್ನು ಓದಿದ ಅಭಿಮಾನಿಗಳು ಸ್ವಲ್ಪ ನೆಮ್ಮದಿಯಿದಿದ್ದಾರೆಯಾದ್ರೂ ನಿರೂಪಕರು ಬದಲಾದ್ರೆ ಎಂಬ ಭಯ ಮನಸ್ಸಿನಲ್ಲಿ ಇದ್ದೇ ಇದೆ. 

ಅವತ್ತು ಬಟ್ಟೆ ತೊಳೆಯುತ್ತಿದ್ದಾಗ ಅವನು ಬಂದು... ಬದುಕು ಬದಲಿಸಿದ ಆ ದಿನ ನೆನೆದ ಬಿಗ್​ಬಾಸ್​ ನೀತು

ಇನ್ನು ಬಿಗ್ ಬಾಸ್ ಶೋ ಶುರುವಾಗುವವರೆಗೂ ಸ್ಪರ್ಧಿಗಳು ಯಾರು ಅನ್ನೋದು ಸ್ಪಷ್ಟವಾಗದೆ ಹೋದ್ರೂ ಬಿಗ್ ಬಾಸ್ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಓಡಾಡ್ತಿದೆ. ನಿರೂಪಕರು, ಪತ್ರಕರ್ತರು, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ (Social Media Influencer) ಹೆಸರುಗಳು ಪಟ್ಟಿಯಲ್ಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ