
ಧಾರಾವಾಹಿಗಳಲ್ಲಿ (Kananda Serials) ಬರುವ ಒಂದಿಷ್ಟು ರೋಚಕ ಟ್ವಿಸ್ಟ್, ವಿಶೇಷ ಎಪಿಸೋಡ್ ಜೊತೆಗೆ ಕ್ರಿಕೆಟ್ (Naveen Suryavanshi, Cricket) ಅಬ್ಬರ, ಸಿನಿಮಾ (Cinema) ಅಥವಾ ಇನ್ನಿತರ ಬೆಳವಣಿಗೆಗಳಿಂದ ಕೂಡ ಸೀರಿಯಲ್ ಟಿಆರ್‌ಪಿಯಲ್ಲಿ (TRP) ಆಗಾಗ ಬದಲಾವಣೆ ಆಗುತ್ತಿರುತ್ತದೆ. ಎಲ್ಲ ವಾರವೂ ಎಲ್ಲ ಸೀರಿಯಲ್ ಟಿಆರ್‌ಪಿ ಒಂದೇ ರೀತಿ ಇರೋದಿಲ್ಲ. ಸೀರಿಯಲ್‌ಗಳ ಟಿಆರ್‌ಪಿ ಬದಲಾವಣೆ ಸಹಜ. ಹೀಗಾಗಿ ಈ ವಾರ ಕೂಡ ಕನ್ನಡ ಧಾರಾವಾಹಿಗಳ ಟಿಆರ್‌ಪಿಯಲ್ಲಿ ಬದಲಾವಣೆ ಆಗಿದೆ. ಹಾಗಾದರೆ ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ?
ನಂದಗೋಕುಲ (Nandagokula) ಧಾರಾವಾಹಿ ಆರಂಭ ಆದಾಗಿನಿಂದ ಒಳ್ಳೆಯ ಸ್ಥಾನ ಕಾಯ್ದುಕೊಂಡಿದೆ. ಟಿಆರ್‌ಪಿಯಲ್ಲಿ ಈಗ ಕಲರ್ಸ್ ಕನ್ನಡ ಸೀರಿಯಲ್‌ಗಳು ಒಳ್ಳೆಯ ಸುಧಾರಣೆ ಕಂಡಿರೋದಂತೂ ಸತ್ಯ. ಇನ್ನೊಂದು ಕಡೆ ಪವಿತ್ರ ಬಂಧನ ಸೀರಿಯಲ್ ಟಿಆರ್‌ಪಿ ಏರಿಕೆ ಆಗುತ್ತಲೇ ಇದೆ. ಕತೆಯಲ್ಲಿ ಬದಲಾವಣೆ, ಟ್ವಿಸ್ಟ್ ತಂದುಕೊಂಡು ವೀಕ್ಷಕರ ಪ್ರೀತಿಯನ್ನು ಗಳಿಸುತ್ತಿವೆ.
ಅಮೃತಧಾರೆ (Amrutadhare) ಹಾಗೂ ಕರ್ಣ (Karna) ಧಾರಾವಾಹಿಗಳಲ್ಲಿ ಸ್ಪರ್ಧೆ ಇದ್ದೇ ಇದೆ. ಈಗ ಅಣ್ಣಯ್ಯ (Annayya) ಸೀರಿಯಲ್ ಕೂಡ ಟಿಆರ್‌ಪಿಯಲ್ಲಿ ಏರಿಕೆ ಕಂಡಿದೆ. ಒಟ್ಟಿನಲ್ಲಿ ಈ ಸೀರಿಯಲ್‌ಗಳು ಒಂದಿಷ್ಟು ಮೆಗಾ ಎಪಿಸೋಡ್‌ಗಳನ್ನು ಕೂಡ ಕೊಡುತ್ತಿವೆ.
ಸ್ವಮೇಕ್ ಕಥೆಯಿಂದ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿ ಒಳ್ಳೆಯ ಟಿಆರ್‌ಪಿ ಕಾಯ್ದುಕೊಂಡು ಬಂದಿದೆ. ವಿಶೇಷ ಪಾತ್ರಗಳ ಮೂಲಕ ಈ ಸೀರಿಯಲ್ ಟಿಆರ್‌ಪಿ ಒಳ್ಳೆಯ ಸ್ಥಾನ ಕಾಯ್ದುಕೊಂಡಿದೆ. ಇತ್ತೀಚೆಗೆ ಹೊಸ ಧಾರಾವಾಹಿಗಳು ಕೂಡ ರೋಚಕ ಕಥೆಗಳಿಂದ ಒಳ್ಳೆಯ ಟಿಆರ್‌ಪಿ ಪಡೆಯುತ್ತಿವೆ.
ಒಟ್ಟಿನಲ್ಲಿ, ಒಂದಿಷ್ಟು ಧಾರಾವಾಹಿಗಳ ಸ್ಥಾನ ಬದಲಾವಣೆ ಆಗಿದೆ. ಬಿಗ್ ಬಾಸ್ ಜೊತೆಗೆ ಇನ್ನೂ ಕೆಲ ಕಾರಣದಿಂದ ಕೆಲ ಧಾರಾವಾಹಿಗಳು ಮುಕ್ತಾಯ ಆಗಲಿವೆ, ಅಷ್ಟೇ ಅಲ್ಲದೆ ಹೊಸ ಧಾರಾವಾಹಿಗಳ ಪ್ರೋಮೋ ಕೂಡ ಬಂದಿದ್ದು ಸಾಕಷ್ಟು ರೋಚಕತೆ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.