Reels ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ರಾ ಬಿಗ್ ಬಾಸ್ ಜೋಡಿ?: ತನಿಖೆಯತ್ತ ಎಲ್ಲರ ಚಿತ್ತ!

Published : Jun 24, 2026, 05:35 PM IST
Niveditha Gowda

ಸಾರಾಂಶ

Cinema Hungama: ‘ಹೇ ನವಿಲೇ’ ಹಾಡಿಗೆ ರೀಲ್ಸ್ ಮಾಡಿದ್ದ ನಿವೇದಿತಾ ಗೌಡ ಮತ್ತು ಕಿಶನ್ ಬಿಳಿಗಲಿ ವಿರುದ್ಧ ನವಿಲುಗರಿ ಬಳಕೆ ಆರೋಪ ಕೇಳಿಬಂದಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

ಇತ್ತೀಚಿಗೆ ಬೊಂಬೆ ನಿವೇದಿತಾ ಗೌಡ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿಶನ್ ಒಂದು ರೀಲ್ಸ್ ಮಾಡಿದ್ರು. ‘ಹೇ ನವಿಲೇ' ಹಾಡಿಗೆ ನವಿಲುಗರಿ ಹೋಲುವ ಉಡುಪು ಧರಿಸಿ ರೀಲ್ಸ್ ಮಾಡಿದ್ದ ಈ ಜೋಡಿಗೆ ಈಗ ಸಂಕಷ್ಟ ಎದುರಾಗಿದೆ. ಅರಣ್ಯ ಇವರಿಬ್ಬರು ಧರಿಸಿದ್ದ ಡ್ರೆಸ್‌ನಲ್ಲಿರೋದು ಅಸಲಿ ನವಿಲುಗರಿಗಳೇ ಅನ್ನೋ ಅನುಮಾನದ ಅರಣ್ಯ ಇಲಾಖೆಯಲ್ಲಿ ಕೇಸ್ ದಾಖಲಾಗಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ನಿವೇದಿತಾ ಗೌಡ ಮತ್ತು ಕಿಶನ್ ಬಿಳಿಗಲಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಜೋಡಿ.

ಇತ್ತೀಚೆಗೆ ಇವರಿಬ್ಬರು 'ಹೇ ನವಿಲೇ' ಅನ್ನೋ ಹಾಡಿಗೆ ಅದ್ಭುತವಾಗಿ ಕಾಸ್ಟ್ಯೂಮ್ ಡಿಸೈನ್ ಮಾಡಿಸಿ ರೀಲ್ಸ್ ಒಂದನ್ನ ಹಂಚಿಕೊಂಡಿದ್ದರು. ಆದರೆ, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣು ಬಿದ್ದಿದ್ದೇ ಆ ಉಡುಪಿಗೆ ಬಳಸಲಾದ ನವಿಲುಗರಿಗಳ ಮೇಲೆ! ಇಷ್ಟು ದೊಡ್ಡ ಪ್ರಮಾಣದ ನವಿಲುಗರಿಗಳನ್ನ ಇವರು ಎಲ್ಲಿಂದ ತಂದರು? ಇದು ನಮ್ಮ ದೇಶದ ರಾಷ್ಟ್ರಪಕ್ಷಿ ನವಿಲಿಗೆ ಮಾಡಿದ ಅಪಚಾರ ಅಲ್ವಾ ಅನ್ನೋ ಆಕ್ರೋಶ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಕೇಳಿಬಂತು.

ಈ ನವಿಲಾಟ ಕೇವಲ ಸೋಶಿಯಲ್ ಮೀಡಿಯಾ ಟ್ರೋಲ್‌ಗೆ ಮಾತ್ರ ಸೀಮಿತವಾಗುಳಿಯಲಿಲ್ಲ. ಈ ಇಬ್ಬರ ವಿರುದ್ಧ ಈಗ ಅರಣ್ಯ ಇಲಾಖೆಗೆ ಅಧಿಕೃತವಾಗಿ ದೂರು ಸಲ್ಲಿಕೆಯಾಗಿದೆ. ಹೌದು, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನಿವೇದಿತಾ ಗೌಡ ಹಾಗೂ ಕಿಶನ್ ವಿರುದ್ಧ ಗಂಭೀರ ದೂರು ದಾಖಲಿಸಿದ್ದಾರೆ. ನವಿಲುಗರಿ ಉಡುಪು ಧರಿಸಿ ರೀಲ್ಸ್ ಮಾಡಿರುವುದು ಕಣ್ಣಿಗೆ ಕಾಣಿಸ್ತಾ ಇದೆ. ಆದರೆ, ಈ ಕಾಸ್ಟ್ಯೂಮ್‌ಗೆ ಬಳಸಿರುವುದು ನೈಜ ನವಿಲು ಗರಿಗಳೇ ಅನ್ನೋ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಅಂತ ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ.

ಕಾನೂನು ಬಾಹಿರ

ನಮ್ಮ ದೇಶದ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ರಾಷ್ಟ್ರಪಕ್ಷಿ ನವಿಲಿನ ಗರಿಗಳನ್ನ ವಾಣಿಜ್ಯ ಉದ್ದೇಶಕ್ಕೆ ಅಥವಾ ಕಾನೂನು ಬಾಹಿರವಾಗಿ ದೊಡ್ಡ ಮಟ್ಟದಲ್ಲಿ ಬಳಸುವುದು ಅಪರಾಧದ ವ್ಯಾಪ್ತಿಗೆ ಬರುತ್ತೆ. ಸದ್ಯಕ್ಕೆ ನಿವೇದಿತಾ ಮತ್ತು ಕಿಶನ್ ವಿರುದ್ಧ ದೂರು ದಾಖಲಾಗಿದ್ದು, ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿ ತನಿಖೆ ನಡೆಸುವ ಸಾಧ್ಯತೆ ಇದೆ. ಒಂದು ವೇಳೆ ತನಿಖೆಯಲ್ಲಿ ಅದು ನೈಜ ನವಿಲುಗರಿ ಎಂದು ಸಾಬೀತಾದರೆ ಈ ಮಾಜಿ ಬಿಗ್‌ಬಾಸ್ ಜೋಡಿಗೆ ಸಂಕಷ್ಟ ತಪ್ಪಿದ್ದಲ್ಲ..! ಹುಲಿ ಉಗುರು ಧರಿಸಿ ಜೈಲು ಸೇರಿದ್ದ ಬಿಗ್ ಬಾಸ್ ಸ್ಪರ್ಧಿ ರೀತಿ ಇವರು ಕಂಬಿ ಎಣಿಸುವ ಸ್ಥಿತಿ ಬಂದರೂ ಅಚ್ಚರಿಯಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Second Marriage: ತನ್ನದೇ ಹೆಂಡತಿಯ 2ನೇ ಮದುವೆಗೆ ಬಂದು ದಾಂಪತ್ಯಕ್ಕೆ ಶುಭ ಕೋರಿದ ಮಾಜಿ ಗಂಡ! ಫೋಟೋ ವೈರಲ್
Amruthadhaare Serial ರೋಚಕ ಟ್ವಿಸ್ಟ್​: ಬರ್ತ್​ಡೇ ಕೇಕ್​ನಲ್ಲಿ ಬಾಂಬ್​ ಇಟ್ಟದ್ದು ಶಕುಂತಲನಾ, ಜೈದೇವನಾ