ಚಂದನವನದ ಖ್ಯಾತ ನಾಯಕಿ ಶ್ರುತಿ ಅವರ ಪುತ್ರಿ ಗೌರಿ, ಸಿನಿಮಾಕ್ಕೆ ಎಂಟ್ರಿ ಕೊಡದೇ ಇದ್ದರೂ ಕೂಡ, ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.
tv-talk Jul 04 2026
Author: Pavna Das Image Credits:Isntagram
Kannada
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್
ಗೌರಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಫೋಟೊಶೂಟ್, ರೀಲ್ಸ್ ಹಾಗೂ ಹಾಡಿನ ವಿಡಿಯೋ ಮೂಲಕ ಜನರ ಜೊತೆ ಕನೆಕ್ಟ್ ಆಗಿರುತ್ತಾರೆ.
Image credits: Isntagram
Kannada
217k ಫಾಲೋವರ್ಸ್
ಇನ್ನೂ ಇವರು ಸಿನಿಮಾಗೆ ಎಂಟ್ರಿ ಕೊಟ್ಟಿಲ್ಲ, ಆಗಲೇ ಗೌರಿ ತಮ್ಮ ಇನ್’ಸ್ಟಾಗ್ರಾಂ ನಲ್ಲಿ 217k ಫಾಲೋವರ್ಸ್ ಪಡೆದಿದ್ದು, ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ.
Image credits: Isntagram
Kannada
ಹೊಸ ರೀಲ್ಸ್ ಮೂಲಕ ಸದ್ದು
ಇದೀಗ ಗೌರಿ ಹೊಸ ರೀಲ್ಸ್ ಒಂದನ್ನು ಶೇರ್ ಮಾಡಿದ್ದು, ಅದರ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸಿಂಪಲ್ ಆಗಿರುವ ಸೀರೆಯುಟ್ಟು, ಜಡೆ ಹಾಕಿ, ಸರಳ ಸುಂದರಿಯಂತೆ ಕಾಣಿಸುತ್ತಿದ್ದಾರೆ.
Image credits: Isntagram
Kannada
ಪ್ರೇಮಂನ ಮಲರ್ ಮಿಸ್
ಗೌರಿ ಕ್ಯಾಪ್ಶನ್ ನಲ್ಲಿ Your malar ಎಂದು ಬರೆದಿದ್ದು, ಪ್ರೇಮಂ ಸಿನಿಮಾದ ಹಾಡನ್ನು ಕೂಡ ಬಿಜಿಎಂ ನಲ್ಲಿ ಹಾಕಿಕೊಂಡಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
Image credits: Isntagram
Kannada
ಕನ್ನಡದ ಮಲರ್ ಮಿಸ್ ಆಗ್ತಾರ?
ಪ್ರೇಮಂ ಸಿನಿಮಾದ ಮಲರ್ ಮಿಸ್ ಆಗುವ ಮೂಲಕ ಸಾಯಿ ಪಲ್ಲವಿ ಹೇಗೆ ಖ್ಯಾತಿ ಪಡೆದರೋ, ಅದೇ ರೀತಿ ಕನ್ನಡದ ಮುಂದಿನ ಮಲರ್ ಮಿಸ್ ಗೌರಿ ಆಗ್ತಾರ?
Image credits: Isntagram
Kannada
ಏನು ಮಾಡ್ತಿದ್ದಾರೆ ಗೌರಿ?
ಗೌರಿ ಸಿನಿಮಾಕ್ಕೆ ಬರಲು ಎಲ್ಲಾ ರೀತಿಯಲ್ಲೂ ತಯಾರಿ ನಡೆಸುತ್ತಿದ್ದಾರೆ. ಡ್ಯಾನ್ಸ್, ಡ್ರಾಮಾ ಎಲ್ಲವನ್ನು ಅಭ್ಯಾಸ ಮಾಡುವ ಮೂಲಕ ಶೀಘ್ರದಲ್ಲೇ ತೆರೆ ಮೇಲೆ ಬರಲು ಸಿದ್ಧತೆ ನಡೆಸಿದ್ದಾರೆ.
Image credits: Isntagram
Kannada
ತೆರೆ ಮೇಲೆ ನೋಡಲು ಕಾತುರ
ಇನ್ನು ಅಭಿಮಾನಿಗಳಂತೂ ಈಗಲೇ ಗೌರಿಯನ್ನು ತೆರೆ ಮೇಲೆ ಕಾಣಲು ಬಯಸಿದ್ದಾರೆ. ಆದರೆ ಗೌರಿ ನಾಯಕಿಯಾಗಿ ಯಾವಾಗ ಎಂಟ್ರಿ ಕೊಡ್ತಾರೆ ಎನ್ನುವುದನ್ನು ಕಾದು ನೋಡಬೇಕು.