ಲಾಯರ್ ಜಗದೀಶ್ ಕೆಟ್ಟ ಪದ ಬಳಕೆ ಮಾಡಿದ್ದರಿಂದ ಬಿಗ್ಬಾಸ್ನಿಂದ ಔಟ್ ಆಗಿದ್ದಾರೆ. ಇದಕ್ಕೆ ಬೇಸರಿಸಿ ಅವರು ಹೇಳಿದ್ದೇನು?
ನಾನು ಬಿಗ್ಬಾಸ್ ಮನೆಯೊಳಕ್ಕೆ ಬಳಸಿದ ಒಂದು ಚಿಕ್ಕ ಪದದಿಂದ ಬಿಗ್ಬಾಸ್ನಿಂದ ಹೊರಕ್ಕೆ ಕಳುಹಿಸಲಾಯಿತು. ಇದು ಇನ್ನೂ ನನಗೆ ಅರ್ಥವಾಗದ ವಿಷಯ. ಏಕೆಂದ್ರೆ, ಉಳಿದ ಸ್ಪರ್ಧಿಗಳಾಗಿರುವ ಚೈತ್ರಾ ಕುಂದಾಪುರ, ತುಕಾಲಿ ಮಾನಸ, ಮಂಜಣ್ಣ ಇವರೆಲ್ಲರೂ ನನ್ನ ಹಾಗೆಯೇ ಕೆಲವು ಸಲ ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ. ಆದರೆ ನನ್ನೊಬ್ಬನನ್ನೇ ಯಾಕೆ ಹೊರಗೆ ಕಳುಹಿಸಿದ್ದೋ ಗೊತ್ತಾಗುತ್ತಿಲ್ಲ, ನಾನೊಬ್ಬನೇ ಯಾಕೆ ಟಾರ್ಗೆಟ್ ಆದೆನೋ ಗೊತ್ತಿಲ್ಲ ಎಂದು ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದಿರುವ ಲಾಯರ್ ಜಗದೀಶ್ ನೋವಿನಿಂದ ನೊಂದು ನುಡಿದಿದ್ದಾರೆ. ಅಷ್ಟಕ್ಕೂ ಈ ಬಾರಿ, ಬಿಗ್ ಬಾಸ್ನಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದು ಲಾಯರ್ ಜಗದೀಶ್. ಬಿಗ್ಬಾಸ್ಗೆ ಹೇಳಿ ಮಾಡಿಸಿದಂಥ ಕಿರುಚಾಟ, ಗಲಾಟೆ ಜೊತೆಗೆ ತಮಾಷೆ ಮಾಡುತ್ತ ಹಲವು ವೀಕ್ಷಕರಿಗೆ ಬೇಕಾಗಿದ್ದವರು ಜಗದೀಶ್. ಈ ಸೀಸನ್ನಲ್ಲಿ ಹೈಲೈಟ್ ಅಂತ ಇದ್ದಿದ್ದೇ ಜಗದೀಶ್. ಕಂಡಕಂಡವರ ಜೊತೆಗೆ ಕಾಲು ಕೆರೆದುಕೊಡು ಜಗಳ ಆಡ್ತಾ, ಲಾಯರ್ ಪಾಯಿಂಟ್ಗಳನ್ನ ಹಾಕ್ತಾ ಇದ್ದ ಜಗ್ಗಿ ಜನರಿಗೆ ಹೇರಳ ಮನರಂಜನೆ ಕೊಟ್ಟಿದ್ರು. ಬರೀ ಮನೆಮಂದಿಗೆ ಮಾತ್ರ ಅಲ್ಲ , ಸಾಕ್ಷಾತ್ ಬಿಗ್ ಬಾಸ್ಗೇನೇ ಚಾಲೆಂಜ್ ಹಾಕಿದ್ರು ಜಗದೀಶ್.
ಬೇರೆ ಸ್ಪರ್ಧಿಗಳಿಗೆ ಮಾತ್ರ ಅಲ್ಲ ಖುದ್ದು ಬಿಗ್ ಬಾಸ್ಗೇನೇ ತಿರುಗೇಟು ಕೊಟ್ಟವರು. ಆದ್ರೆ ಈಗ ದೊಡ್ಮನೆಯಿಂದ ಜಗದೀಶ್ರನ್ನೇ ಹೊರಹಾಕಲಾಗಿದೆ. ಲಾಯರ್ ಜಗದೀಶ್ಗೆ ಗೇಟ್ ಪಾಸ್ ಕೊಟ್ಟಿದ್ದನ್ನ ನೋಡಿ ಈ ಸಾರಿಯ ಬಿಗ್ ಬಾಸ್ ಫಿನಿಶ್ ಅಂತಿದ್ದಾರೆ ಜನ. ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ನ ಆಚೆ ಹಾಕಲಾಗಿದೆ. ಮನೆಯ ಮೂಲಭೂತ ನಿಯಮ ಉಲ್ಲಂಘಿಸಿರೋದು, ಮತ್ತೊಂದು ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಕ್ಕೆ ಲಾಯರ್ ಜಗದೀಶ್ನ ಮನೆಯಿಂದ ಹೊರಹೋಗುವಂತೆ ಬಿಗ್ ಬಾಸ್ ಆದೇಶ ಬಂತು. ಆ ಆದೇಶಕ್ಕೆ ತಲೆಬಾಗಿದ ಜಗದೀಶ್ ದೊಡ್ಮನೆಯ ಮುಖ್ಯಬಾಗಿಲಿನಿಂದ ಹೊರಬಂದಿದ್ದಾರೆ. ಇದಾಗಲೇ ಸುದೀಪ್ ಅವರು, ಬಿಗ್ಬಾಸ್ಗೆ ಜಗದೀಶ್ ಮುಗಿದು ಹೋಗಿರೋ ಅಧ್ಯಾಯ ಎಂದಿದ್ದಾರೆ. ಆದ್ದರಿಂದ ಮತ್ತೆ ವಾಪಸ್ ಹೋಗುವ ಯಾವುದೇ ಚಾನ್ಸ್ ಇಲ್ಲ ಎಂದು ಇದೇ ವೇಳೆ ಜಗದೀಶ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
undefined
ಬಿಗ್ಬಾಸ್ ಅನ್ನೋದು ಸ್ಕ್ರಿಪ್ಟೆಡ್ ಎನ್ನುವ ಆರೋಪ ತಳ್ಳಿ ಹಾಕಿರುವ ಅವರು, ಇವೆಲ್ಲಾ ಸುಳ್ಳು ಎಂದೂ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಬಿಗ್ಬಾಸ್ ಮನೆಯ ಕೆಲವು ವಿಷಯಗಳನ್ನು ಹೇಳಿದ ಜಗದೀಶ್, ಬಿಗ್ಬಾಸ್ ಒಂದು ಕನ್ನಡಿ ಇದ್ದ ಹಾಗೆ. ನಮ್ಮ ಭಾವನೆಗಳನ್ನು ಅದು ತೋರಿಸುತ್ತದೆ. ನಾವು ಮುಖವಾಡ ಹಾಕಿಕೊಂಡಿದ್ದರೆ, ಅದನ್ನು ಕಳಚಿ ನಮ್ಮನ್ನು ಜನರ ಮುಂದೆ ಇಡುತ್ತದೆ ಎಂದಿದ್ದಾರೆ. ಕೆಲವೇ ದಿನ ಬಿಗ್ಬಾಸ್ ಮನೆಯಲ್ಲಿ ಇದ್ದರೂ ಅದು ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂದ ಲಾಯರ್ ಜಗದೀಶ್, ಮೊದಲು ನಾನು ಜೋರಾಗಿ ಮಾತಾಡ್ತಿದ್ದೆ. ಈಗ ಸಮಾಧಾನವಾಗಿ ಮಾತನಾಡುವುದನ್ನು ಕಲಿತಿದ್ದೇನೆ. ಅಕ್ಕಪಕ್ಕ ಕ್ಯಾಮೆರಾ ಇರುತ್ತೋ ಎನ್ನುವ ಭಯ ಕಾಡ್ತಿದೆ. ಸಮಾಜದ ಪ್ರತಿಬಿಂಬ ಬಿಗ್ಬಾಸ್ ಅನ್ನಿಸಿದ್ದು ನಿಜ ಎಂದು ಹೇಳಿದ್ದಾರೆ.
ಇದೇ ವೇಳೆ ಬಿಗ್ಬಾಸ್ನಿಂದ ಹೊರ ಬಂದ ಮೇಲೆ ಅವರು ಅಲ್ಲಿಯ ಮನೆಯ ವಾತಾವರಣದ ಕುರಿತು ಈ ಹಿಂದೆ ಮಾತನಾಡಿದ್ದರು. ಆಟದ ವೇಳೆ ತಾವು ಮಾಡಿದ ತಪ್ಪು-ಸರಿಗಳ ಬಗ್ಗೆ ಚರ್ಚೆ ಮಾಡಿದರು. ಕೆಲ ಸ್ಪರ್ಧಿಗಳು ಮಾಡಿದ ಕೆಲಸ ನೆನೆದು ಗರಂ ಆಗಿದ್ದರು. ಅಪ್ರಾಮಾಣಿಕ, ಕುತಂತ್ರಿ ಅನ್ನೋ ಹಣೆಪಟ್ಟಿಗಳು ನನಗೆ ಬರ್ತಿತ್ತು ಅನಿಸುತ್ತೆ ಎಂದ ಜಗದೀಶ್, ಆ ಮನೆಯಲ್ಲಿರೋ ಅಪ್ರಾಮಾಣಿಕರೇ, ನಾನು ಮನೆಯಿಂದ ಹೊರಗೆ ಬಂದ್ಮೇಲೆ ಚಪ್ಪಾಳೆ ತಟ್ಟಿದ್ರು. ಆ ಖುಷಿ ನೋಡಿ ಜನರೇ ಬೇಸರಗೊಂಡಿದ್ದಾರೆ. ಎಲ್ಲರೂ ಸೇರಿ ನನ್ನನ್ನು ಟಾರ್ಗೆಟ್ ಮಾಡಿದ್ರು. ನಾನು ಮನೆ ಬಿಟ್ಟು ಹೋದಾಗ ಸ್ಪರ್ಧಿಗಳು ಖುಷಿ ಪಟ್ಟ ರೀತಿ ನೋಡಿ ನನ್ನ ಜೊತೆ ಮಾತು ಬಿಟ್ಟಿದ್ದ ಗೆಳತಿ ಫೋನ್ ಮಾಡಿ ಕಣ್ಣೀರು ಹಾಕಿದ್ರು ಎಂದು ಜಗದೀಶ್ ಹೇಳಿಕೊಂಡಿದ್ದರು.
ನಿಮ್ಮಿಬ್ಬರಲ್ಲಿ ಹೆಚ್ಚು ಪೋಲಿ ಯಾರು ಎಂದು ಪ್ರಶ್ನೆ ಕೇಳಿದ ಅನುಶ್ರೀ: ಸೋನಲ್- ತರುಣ್ ಹೇಳಿದ್ದೇನು ಕೇಳಿ...