ನಿಮ್ಮಿಬ್ಬರಲ್ಲಿ ಹೆಚ್ಚು ಪೋಲಿ ಯಾರು ಎಂದು ಪ್ರಶ್ನೆ ಕೇಳಿದ ಅನುಶ್ರೀ: ಸೋನಲ್​- ತರುಣ್​ ಹೇಳಿದ್ದೇನು ಕೇಳಿ...

By Suchethana D  |  First Published Oct 27, 2024, 2:54 PM IST

ಜೀ ಕುಟುಂಬ ಅವಾರ್ಡ್​ ಫಂಕ್ಷನ್​ನಲ್ಲಿ ಕಾಣಿಸಿಕೊಂಡಿರೋ ತರುಣ್​-ಸೋನಲ್​ ನೂತನ ದಂಪತಿಗೆ ಹೇಗೆಲ್ಲಾ ಪ್ರಶ್ನೆ ಕೇಳಿದ್ರು ನೋಡಿ...!
 


ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಕಳೆದ ಆಗಸ್ಟ್​ 11ರಂದು ಬೆಂಗಳೂರಿನ ನಡೆದಿದೆ.  ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ  ತಮ್ಮ ನಾಲ್ಕು ವರ್ಷದ  ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ.  ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿತ್ತು. ಸೋನಲ್​ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು  ವಿಶೇಷವೇ.  ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್​ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ. 

ಇನ್ನು ಈ ಜೋಡಿ ಈಗ ಜೀ ಕುಟುಂಬ ಅವಾರ್ಡ್​ ಫಂಕ್ಷನ್​ನಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ಇವರಿಗೆ ಆ್ಯಂಕರ್​ಗಳಾದ ಅನುಶ್ರೀ ಮತ್ತು ಅಕುಲ್​ ಬಾಲಾಜಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಇಬ್ಬರ ಫೋನ್​ನಲ್ಲಿ ಹೆಸರು ಏನೆಂದು ಸೇವ್​ ಆಗಿದೆ ಎಂದು ಪ್ರಶ್ನಿಸಿದಾಗ, ಸೋನಲ್​ ಅವರ ಬಳಿ ಎರಡು ನಂಬರ್​ ಇವೆ. ಒಂದರಲ್ಲಿ ಹಸ್​ಬಂಡ್​, ಇನ್ನೊಂದರಲ್ಲಿ ಲವ್​ ಎಂದು ಇದೆ ಎಂದಿದ್ದಾರೆ. ಆಮೇಲೆ ತರುಣ್​ ಅವರು ತುಂಬಾ ಹೊತ್ತು ಯೋಚನೆ ಮಾಡಿ,  'ಸೋ ಫೈನಲಿ' ಎಂದು ಸೇವ್​ ಮಾಡಿಕೊಂಡಿದ್ದೇನೆ ಎಂದರು. ಈ ಶಬ್ದಗಳಲ್ಲಿ, ಸೋನಲ್​ ಕೂಡ ಬರುತ್ತೆ. ಫೈನಲಿ ನನಗೂ ಯಾರೋ ಸಿಕ್ಕರು ಎನ್ನೋದು ಬರತ್ತೆ ಎಂದಾಗ ಎಲ್ಲರೂ ನಕ್ಕಿದ್ದಾರೆ. ಕೊನೆಗೆ, ಇಬ್ಬರಲ್ಲಿಯೂ ಜಾಸ್ತಿ ಗೊರಕೆ ಹೊಡೆಯುವವರು ಯಾರು ಕೇಳಿದಾಗ ತರುಣ್ ಹೆಸರು ಕೇಳಿ ಬಂದಿದೆ. ​ ಇಬ್ಬರಲ್ಲಿ ಒಳ್ಳೆ ಕುಕ್​ ಯಾರು ಎಂದು ಕೇಳಿದಾಗ ಇಬ್ಬರೂ ಸೋನಲ್​  ಫೋಟೋ ತೋರಿಸಿದ್ದಾರೆ. ಮಲಗೋದು ಯಾರು ಮೊದಲು ಎಂದು ಪ್ರಶ್ನಿಸಿದಾಗ ಇಬ್ಬರೂ ತರುಣ್​ ಫೋಟೋ ತೋರಿಸಿದರೆ, ಮಲಗುವ ಮುನ್ನ ಐ ಲವ್​ ಯೂ ಹೇಳೋದು ಯಾರು ಎಂದಾಗ ಇಬ್ಬರೂ ಇಬ್ಬರ ಫೋಟೋನೂ ತೋರಿಸಿದ್ದಾರೆ. 

Tap to resize

Latest Videos

undefined

ತರುಣ್​ ಜೊತೆ ಮದ್ವೆ ಆದ್ಮೇಲೆ ದಪ್ಪ ಆಗಿದ್ಯಾಕೆ ಕೇಳಿದ್ರೆ ನಾಚುತ್ತಲೇ ನಟಿ ಸೋನಲ್​ ಮೊಂಥೆರೋ ಹೇಳಿದ್ದೇನು ಕೇಳಿ...

ಬಳಿಕ ಅನುಶ್ರೀ ಅವರು, ಇಬ್ಬರಲ್ಲಿ ಹೆಚ್ಚು ಪೋಲಿ ಯಾರು ಎಂದು ಕೇಳಿದಾಗ, ತರುಣ್​ ಸೋನಲ್​ ಅವರ ಹಾಗೂ ಸೋನಲ್​ ತರುಣ್​ ಅವರ ಚಿತ್ರ ತೋರಿಸಿದ್ದಾರೆ. ಕೊನೆಗೆ ತರುಣ್​ಗೆ ಈ ಬಗ್ಗೆ ಪ್ರಶ್ನಿಸಿದಾಗ, ಪೋಲಿ ಅಂದ್ರೆ ರೊಮಾನ್ಸ್​ನ ಮುಂದುವರೆದ ಭಾಗ ಅಷ್ಟೇ. ಹೆಚ್ಚು ನನಗಿಂತಲೂ ರೊಮ್ಯಾಂಟಿಕ್​ ಆಗಿರೋಳು ಇವಳೇ, ಅದಕ್ಕೇ ಪೋಲಿನೂ ಇವಳೇ ಎಂದಾಗ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಕೊನೆಗೆ ಇಬ್ಬರೂ ರೊಮ್ಯಾಂಟಿಕ್​ ಸಾಂಗ್​ಗೆ ಡಾನ್ಸ್​ ಮಾಡಿ ಕಾರ್ಯಕ್ರಮ ಮುಗಿಸಿದ್ದಾರೆ. ಅಂದಹಾಗೆ ತರುಣ್​ ಮತ್ತು ಸೋನಲ್​  ನಡುವಿನ ವಯಸ್ಸಿನ ಅಂತರ  11 ವರ್ಷ. ತರುಣ್ ಸುಧೀರ್‌ಗೆ 41 ವರ್ಷ ವಯಸ್ಸಾಗಿದೆ. ಇನ್ನು ನಟಿ ಸೋನಲ್ ಮೊಂಥೆರೋಗೆ 29 ವರ್ಷ ವಯಸ್ಸಾಗಿದೆ. 

ಸೋನಲ್‌  ಅವರು, ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು.  ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆನಂತರ ಶುಗರ್‌ ಫ್ಯಾಕ್ಟರಿ, ಬನಾರಸ್‌, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್‌, ಶಂಭೋ ಶಿವ ಶಂಕರ್‌ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಉಪೇಂದ್ರ ನಟನೆಯ ಬುದ್ಧಿವಂತ 2, ರೋಲೆಕ್ಸ್ ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸಿದ್ದಾರೆ.  

ಮೇಕಪ್​ ಮಾಡುವಾಗಲೇ ನಟಿ ಸೋನಲ್​ ಅರಿಶಿಣದ ಕೊಂಬು ಮಾಯ! ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!