ಮದ್ವೆ ಬಗ್ಗೆ ಅವಾರ್ಡ್​ ಪಂಕ್ಷನ್​ನಲ್ಲಿ ಕೊನೆಗೂ ಗುಟ್ಟು ಬಿಚ್ಚಿಟ್ಟ ಆ್ಯಂಕರ್​ ಅನುಶ್ರೀ! ಕುಣಿದು ಕುಪ್ಪಳಿಸಿದ ಅಕುಲ್​ ಬಾಲಾಜಿ..

By Suchethana D  |  First Published Oct 27, 2024, 1:23 PM IST

 ಅಭಿಮಾನಿಗಳಿಗೆಲ್ಲಾ ಕಾಡುತ್ತಿರುವ ಮದುವೆಯ ಪ್ರಶ್ನೆಗೆ ಆ್ಯಂಕರ್​ ಅನುಶ್ರೀ ಕೊನೆಗೂ ಬಾಯಿ ಬಿಟ್ಟಿದ್ದಾರೆ. ಜೀ ಕುಟುಂಬ ಅವಾರ್ಡ್​ನಲ್ಲಿ ಅವರು ಹೇಳಿದ್ದೇನು?
 


ಆ್ಯಂಕರ್​ ಅನುಶ್ರೀ ಎಂದಾಕ್ಷಣ, ಅವರ ಲಕ್ಷಾಂತರ ಅಭಿಮಾನಿಗಳು ಸದಾ ಕೇಳುವ ಪ್ರಶ್ನೆ ಒಂದೇ ಮೇಡಂ... ಮದ್ವೆ ಯಾವಾಗ ಎನ್ನುವುದು. ಇದಕ್ಕೆ ಉತ್ತರ ಕೊಟ್ಟೂ ಕೊಟ್ಟೂ ಅನುಶ್ರೀಯವರು ಸೋತು ಹೋಗಿದ್ದಾರೆ. ಒಂದೇ ಪ್ರಶ್ನೆಯನ್ನು ಎಷ್ಟೂ ಅಂತ ಕೇಳ್ತೀರಾ ಎಂದು ಬೇಸರ ವ್ಯಕ್ತಪಡಿಸಿದ್ದೂ ಇದೆ. ನಾನು ಮದ್ವೆಯಾಗದೇ ಇರುವುದಿಲ್ಲ, ಆಗೇ ಆಗ್ತೀನಿ. ನಿಮಗೆ ಹೇಳಿಯೇ ಆಗ್ತೀನಿ. ಅಲ್ಲಿಯವರೆಗೆ ಮದ್ವೆ ವಿಷಯ ಕೆದಕದೇ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ಅನುಶ್ರೀ ಅವರು ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದೂ ಆಗಿದೆ. ಆದರೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಫೋಟೋ, ವಿಡಿಯೋ ಶೇರ್​ ಮಾಡಿದಾಗಲೆಲ್ಲಾ ತರ್ಲೆ ಫ್ಯಾನ್ಸ್​ ಇದೇ ಪ್ರಶ್ನೆ ಕೇಳುತ್ತಾರೆ.   ಗೂಗಲ್​ ದಾಖಲೆ ಪ್ರಕಾರ, ನಟಿ 1988ರ ಜ.25ರಂದು ಹುಟ್ಟಿದ್ದು, ಅವರಿಗೆ 36ವರ್ಷ. ವಯಸ್ಸು ಇಷ್ಟಾದರೂ ಮದುವೆ ಇನ್ನೂ ಆಗಿಲ್ಲ ಎನ್ನುವುದೇ ಅನುಶ್ರೀ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಆದ್ದರಿಂದ ಹೋದಲ್ಲಿ, ಬಂದಲ್ಲಿ ಮದ್ವೆ ಯಾವಾಗ ಎನ್ನುವ ಪ್ರಶ್ನೆಯೇ ಎದುರಾಗುತ್ತಿರುತ್ತದೆ. ಈಗಲೂ ಅದನ್ನೇ ಕೇಳುತ್ತಿದ್ದಾರೆ. ನಾನೂ ಮದ್ವೆಯಾಗುತ್ತೇನೆ. ಆದ್ರೆ ಕೇಳಿದ್ದನ್ನೇ ಎಷ್ಟೂ ಅಂತ ಕೇಳ್ತೀರಾ ಎಂದು ಪದೇ ಪದೇ ಅನುಶ್ರೀ ಕೇಳಿದರೂ ಅಭಿಮಾನಿಗಳಿಗೆ ಇವರನ್ನು ಮದುವೆ ಮಾಡಿಸಿದ ಹೊರತೂ ಸಮಾಧಾನ ಇಲ್ಲ ಎನ್ನಿಸುತ್ತದೆ.

ಆದರೆ ಇದೀಗ ಇದೇ ಮೊದಲ ಬಾರಿಗೆ ಜೀ ಕುಟುಂಬ ಅವಾರ್ಡ್​ ವೇದಿಕೆಯ ಮೇಲೆಯೇ ಅನುಶ್ರೀ ಅವರಿಗೆ ಮದುವೆ ವಿಷಯವನ್ನು ಕೇಳಲಾಗಿದೆ. ಅದೂ ಆ್ಯಂಕರ್​ ಅಕುಲ್​ ಬಾಲಾಜಿಯವರು ಈ ಪ್ರಶ್ನೆಯನ್ನು ಇಟ್ಟಿದ್ದಾರೆ. ನೋಡಿ ಅನುಶ್ರೀ ಅವರು ಮದುವೆಯಾಗುವ ಹುಡುಗ ಇವರೇ ಎನ್ನುವ ಮೂಲಕ, ಅತ್ತ ಕಡೆ ತೋರಿಸಿದ್ದಾರೆ. ಆದರೆ ಅಲ್ಲಿ ಯಾರೂ ಬರಲಿಲ್ಲ. ಯಾರು ಬರ್ತಾರೆ ಎಂದು ಖುದ್ದು ಅನುಶ್ರೀ ಅವರೇ  ಆಶ್ಚರ್ಯದಿಂದ ಕಾಯುತ್ತಿದ್ದರು. ಕೊನೆಗೆ ಅಕುಲ್​ ಅವರು, ಅನುಶ್ರೀ ಅವರು ಹುಡುಗನಿಗೆ ಮೊದಲೇ ಹೇಳಿ, ಇಲ್ಲಿ ಬರಬೇಡ ಎಂದು ಹೇಳಿದ್ದಾರೆ ಎಂದು ತಮಾಷೆ ಮಾಡಿದರು. ಕೊನೆಗೆ ಅನುಶ್ರೀ ಅವರಿಗೆ ಮದ್ವೆ ಬಗ್ಗೆ ಹೇಳಿಬಿಡಿ ಎಂದು ಒತ್ತಾಯ ಮಾಡಿದರು.

Tap to resize

Latest Videos

undefined

ಸ್ಕ್ರಿಪ್ಟ್​ ಇಲ್ದೇ 10 ಗಂಟೆ ಷೋ ಮಾಡೋ ತಾಕತ್ತಿದೆ ಕಣ್ರೀ... ಕೊಂಕು ಮಾಡುವವರಿಗೆ ಅನುಶ್ರೀ ಕೊಟ್ಟ ತಿರುಗೇಟೇನು?

ಆಗ ಅನುಶ್ರೀ ಅವರು, ಇದಾಗಲೇ ನನ್ನ ಮದುವೆಯನ್ನು ಬೇರೆಬೇರೆಯವರ ಜೊತೆ ಮಾಡಿಸಿಬಿಟ್ಟಿದ್ದಾರೆ ನೆಟ್ಟಿಗರು ಅನ್ನುತ್ತಲೇ ತಮಾಷೆ ಮಾಡಿದರು. ನನಗೂ ಜೀವನದಲ್ಲಿ ಒಬ್ಬ ಬಾಳಸಂಗಾತಿ ಬರಬೇಕು ಎನ್ನುವ ಆಸೆ ಇದೆ. ಎಲ್ಲದಕ್ಕೂ ತನ್ನದೇ ಆದಂಥ ಒಂದು ಟೈಮ್​ ಇರುತ್ತೆ. ಎಲ್ಲದ್ದಕ್ಕೂ ಅದರದ್ದೇ ಆದ ಒಂದು ಘಳಿಗೆ ಇರುತ್ತೆ. ಸರಿಯಾದ ಟೈಮ್​ನಲ್ಲಿ ಸರಿಯಾದ ವ್ಯಕ್ತಿ ಬರಬೇಕಾಗುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನಾನು ಮನಸ್ಸು ಮಾಡಬೇಕಿತ್ತು. ಆದರೆ ಈಗ ಮನಸ್ಸು ಮಾಡಿದ್ದೇನೆ. ಇಷ್ಟು ವರ್ಷಗಳ ಕಾಲ ಮನಸ್ಸು ಮಾಡಿರಲಿಲ್ಲ, ಕನ್ನಡಿಗರ ಆಶೀರ್ವಾದದಿಂದ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವಂಥ ಆ ಸರದಾರ ನನ್ನ ಬದುಕಲ್ಲಿ ಬರಲಿ, ಅವನು ಬಂದರೆ ನಿಮ್ಮ ಮುಂದೆ ಅವನನ್ನು ಕರೆದುಕೊಂಡು ಬಂದು, ಪರಿಚಯ ಮಾಡಿಸಿ ಮುಂದಿನ ವರ್ಷವೇ ಮದ್ವೆಯಾಗುತ್ತೇನೆ ಎಂದಿದ್ದಾರೆ! ಇದನ್ನು ಕೇಳುತ್ತಿದ್ದಂತೆಯೇ ಅಕುಲ್​ ಬಾಲಾಜಿಯವರು ಕುಣಿದು ಕುಪ್ಪಳಿಸಿದ್ದಾರೆ. ನೆರೆದ ಪ್ರೇಕ್ಷಕರು ಹೋ ಎಂದು ಚಪ್ಪಾಳೆ ತಟ್ಟಿದ್ದಾರೆ. 

  ಇನ್ನು ಕಿರುತೆರೆ ವೀಕ್ಷಕರಿಗೆ ಅನುಶ್ರೀ ಅವರ ಬಗ್ಗೆ ಹೇಳುವುದೇ ಬೇಡ. ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಸರಿಗಮಪ ಸಂಗೀತದ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ.  ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2023ರಲ್ಲಿ ಅನುಶ್ರೀ ಅವರಿಗೆ ಹಲವಾರು ಪ್ರಶಸ್ತಿಗಳೂ ಸಂದಿವೆ.

ಐದಾರು ಮದ್ವೆ ಬೇಕಾದ್ರೂ ಆಗ್ಬೋದೆಂದು ತಮಾಷೆ ಮಾಡಿದ್ದ ಉಪೇಂದ್ರ UI ಚಿತ್ರದ ಬಗ್ಗೆ ಅನುಶ್ರೀ ಕಿವಿಯಲ್ಲಿ ಹೇಳಿದ್ದೇನು?

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!