ಅನುಷಾ ಜೊತೆಗಿನ ಸಂಬಂಧ ಎಂಥದ್ದು? ಮದುವೆ ಮುರಿದು ಬಿದ್ದದ್ದು ಯಾಕೆ? ಬಿಗ್‌ಬಾಸ್‌ ಧರ್ಮ ಓಪನ್ ಮಾತು ಕೇಳಿ...

By Suchethana D  |  First Published Nov 26, 2024, 4:05 PM IST

ಬಿಗ್‌ಬಾಸ್‌ ಮನೆಯಲ್ಲಿ ಅನುಷಾ ಅವರ ಜೊತೆಗಿನ ಒಡನಾಟ ಮತ್ತು ಮದುವೆಯ ಬಗ್ಗೆ ಧರ್ಮ ಕೀರ್ತಿರಾಜ್‌ ಹೇಳಿದ್ದೇನು?
 


ಬಿಗ್ ಬಾಸ್ (Bigg Boss) ಮನೆಯಿಂದ ಧರ್ಮ ಕೀರ್ತಿರಾಜ್ (Dharma Keerthiraj) ಹೊರ ನಡೆದಿದ್ದಾರೆ. ನವಗ್ರಹ ಸಿನಿಮಾ ಖ್ಯಾತಿಯ ಧರ್ಮ ಕೀರ್ತಿರಾಜ್  ಎಂಟು ವಾರಗಳನ್ನು ಬಿಗ್‌ ಬಾಸ್‌ ಮನೆಯಲ್ಲಿ ಕಳೆದು, ಈಗ ಎಲಿಮಿನೇಟ್‌ ಆಗಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಒಳ್ಳೆಯತನಕ್ಕೇ ಹೆಸರಾಗಿದ್ದ ಧರ್ಮ ಅವರು,  ಕಡಿಮೆ ವೋಟಿನಿಂದಾಗಿ ಹೊರ ಬರಗಬೇಕಾಯಿತು.  ಅಲ್ಲಿ ವೋಟು ಪಡೆಯದಿದ್ದರೂ  ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಅವರು ಗೆದ್ದಿದ್ದಾರೆ ಎನ್ನುವುದಕ್ಕೆ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳೇ ಸಾಕ್ಷಿಯಾಗಿವೆ. ತುಂಬಾ ಸೈಲೆಂಟ್​ ಆಗಿಯೇ ಇರುತ್ತಿದ್ದರು ಧರ್ಮ ಕೀರ್ತಿರಾಜ್. ಇದು ಬಿಗ್‌ಬಾಸ್‌ಗೆ ಸರಿ ಹೊಂದುವುದಿಲ್ಲ ಎಂದು ಹಲವು ಬಾರಿ ಸುದೀಪ್‌ ಕಿವಿ ಮಾತು ಕೂಡ ಹೇಳಿದ್ದರು.  ಆದರೆ ಒಳ್ಳೆಯತನ ಮತ್ತು ಸೈಲೆಂಟ್‌ ವ್ಯಕ್ತಿತ್ವವನ್ನು ಮುಂದುವರೆಸಿಕೊಂಡ ಹಿನ್ನೆಲೆಯಲ್ಲಿ ಸಹಜವಾಗಿ ಬಿಗ್‌ಬಾಸ್‌ನಲ್ಲಿ ಇಂಥ  ಸ್ಪರ್ಧಿಗಳಿಗೆ ಅವಕಾಶ ಇಲ್ಲದೇ ಇರುವ ಕಾರಣ, ಎಲಿಮಿನೇಟ್‌ ಆಗಿದ್ದಾರೆ.
 
ಆದರೆ ಧರ್ಮ ಅವರ ಜೊತೆ ಬಿಗ್‌ಬಾಸ್‌ ಮನೆಯಲ್ಲಿ ಐಶ್ವರ್ಯ ಮತ್ತು ಅನುಷಾ ಅವರ ಜೊತೆ ಹೆಸರು ಥಳಕು ಹಾಕಿಕೊಂಡಿತ್ತು. ಅದರಲ್ಲಿಯೂ ಐಶ್ವರ್ಯ ಅವರ ಜೊತೆಗೆ ಹೆಸರು ಹೆಚ್ಚಾಗಿಯೇ ಕೇಳಿಬಂದಿತ್ತು. ಬಿಗ್‌ಬಾಸ್‌ಗೆ ಬರುವ ಮುನ್ನವೂ ಇವರಿಬ್ಬರಲ್ಲಿ ಆತ್ಮೀಯತೆ ಇದ್ದುದರಿಂದ ಮತ್ತು ಕೆಲವು ಕಾರಣಗಳಿಂದ ಫ್ರೆಂಡ್‌ಷಿಪ್‌ ಬ್ರೇಕ್‌ ಆಗಿದ್ದರಿಂದ ಹಾಗೂ ಬಿಗ್‌ಬಾಸ್‌ ಮನೆಯಲ್ಲಿ ಇವರ ನಡುವೆ ಸಲುಗೆ ಹೆಚ್ಚಾಗಿದ್ದರಿಂದ ಅವರ ಜೊತೆ ಇವರ ಹೆಸರು ಥಳಕು ಹಾಕಿಕೊಂಡಿತ್ತು. ಬಿಗ್‌ಬಾಸ್‌ನಿಂದ ಹೊರಕ್ಕೆ ಬಂದ ಮೇಲೆ ಅವರು, ಅನುಷಾ ಜೊತೆಗಿರುವ ಫ್ರೆಂಡ್‌ಷಿಪ್‌, ಮದುವೆ ಎಲ್ಲವುಗಳ ಬಗ್ಗೆ ಮಾತನಾಡಿದ್ದಾರೆ.  

ಆ ಮೂಲ, ಈ ಮೂಲ ಕೇಳಬಾರ್ದು ಎನ್ನುತ್ತಲೇ ಅಮ್ಮನ ಮಲಗುವ ಕೋಣೆ ರಹಸ್ಯ ತೆರೆದಿಟ್ಟ ವಿನೋದ್‌ ರಾಜ್!

Tap to resize

Latest Videos

ಎರಡು ವರ್ಷಗಳ ಹಿಂದೆ  ಬೇರೊಬ್ಬಳ ಜೊತೆ ಮದುವೆ ಫಿಕ್ಸ್‌ ಆಗಿತ್ತು.  ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಮದುವೆ ಮುರಿದು ಬಿತ್ತು. ಹಾಗೆಂದು ಮದುವೆ ಆಗದೇ ಇರುವುದಿಲ್ಲ. ಮದುವೆಯಾಗೇ ಆಗುತ್ತೇನೆ. ಆದರೆ ಅದಕ್ಕೂ ಮುನ್ನ ಕರಿಯರ್‍‌ ಮೇಲೆ ಗಮನ ಕೊಡಬೇಕಿದೆ. ಲೈಫ್‌ನಲ್ಲಿ ಅಪ್ಪ-ಅಮ್ಮನ ಜೊತೆ ಎಲ್ಲವೂ ಶೇರ್‍‌ ಮಾಡಲು ಆಗುವುದಿಲ್ಲ. ಲೈಫ್‌ ಪಾರ್ಟನರ್‍‌ ಬೇಕೇ ಬೇಕು. ಮದುವೆ ಎನ್ನುವುದೆಲ್ಲಾ ತಂತಾನೇ ಆಗುತ್ತದೆ, ಹಾಗೇ ಆಗಲಿ. ಈಗಲೇ ಅದರ ಬಗ್ಗೆ ಚಿಂತೆ ಮಾಡುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಅನುಷಾ ಮತ್ತು ಐಶ್ವರ್ಯ ಕುರಿತೂ ಹೇಳಿದ ಅವರು, ಇಬ್ಬರೂ ತುಂಬಾ ಒಳ್ಳೆಯವರು. ತುಂಬಾ ಎನರ್ಜಿಟಿಕಲ್‌ ಆಗಿ ಫೈಟ್‌ ಮಾಡುತ್ತಿದ್ದಾರೆ. ನಮ್ಮ ನಡುವೆ ಇರುವುದು ಫ್ರೆಂಡ್‌ಷಿಪ್‌ ಬಾಂಡಿಂಗ್‌ ಅಷ್ಟೇ. ನಾವು ಪರಸ್ಪರ ಒಬ್ಬರನ್ನೊಬ್ಬರು ಸಪೋರ್‍ಟ್‌ ಮಾಡುತ್ತಿದ್ದುದಷ್ಟೇ. ಅದನ್ನು ಬಿಟ್ಟರೆ ಸುಮ್ಮನೇ ನಮ್ಮ ನಡುವೆ ಸಂಬಂಧ ಕಟ್ಟುವುದು ಸರಿಯಲ್ಲ. ಗಂಡು ಹೆಣ್ಣಿನ ಸಂಬಂಧ ಕೇವಲ ಫ್ರೆಂಡ್‌ಷಿಪ್‌ ಕೂಡ ಆಗಿರಬಹುದು. ಹಾಗೆಂದು ಎಲ್ಲದ್ದಕ್ಕೂಒಂದೇ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ನೋವಿನಿಂದ ನುಡಿದಿದ್ದಾರೆ ಧರ್ಮ. 

ನಾನು ಮತ್ತು ಅನುಷಾ ಈ ಮೊದಲು ಸಿನಿಮಾದಲ್ಲಿಒಟ್ಟಿಗೇ ಕೆಲಸ ಮಾಡಿದ್ವಿ. ಆಗಿಂದ್ಲೂ ತುಂಬಾ ಫ್ರೆಂಡ್ಸ್‌. ಫ್ರೆಂಡ್ಸ್‌ ಮಧ್ಯೆಯೂ ಕೆಲವೊಮ್ಮೆ ಮನಸ್ತಾಪ ಬರುತ್ತೆ. ಅದೇ ರೀತಿ ನಮ್ಮಿಬ್ಬರ ನಡುವೆಯೂ ಬಂದಿತ್ತು. ಬಿಗ್‌ಬಾಸ್‌ನಲ್ಲಿ ಅವರನ್ನು ನೋಡಿದಾಗ ಖುಷಿಯಾಯ್ತು. ಎಲ್ಲವನ್ನೂ ಲವ್‌ ಆಂಗಲ್‌ನಲ್ಲಿಯೇ ಪ್ಲೀಸ್ ನೋಡಬೇಡಿ. ಅನುಷಾ ಕೂಡ ಬಿಗ್‌ಬಾಸ್‌ನಲ್ಲಿ ಒಮ್ಮೆ ನೊಂದು ಇದೇ ಮಾತನ್ನು ಹೇಳಿದ್ದಾರೆ. ಫ್ರೆಂಡ್‌ ಆಗಿಯೇ ಇರಲು ಇಷ್ಟಪಡುತ್ತೇವೆ. ಅದನ್ನು ಹೊರತುಪಡಿಸಿದರೆ ನಮ್ಮ ನಡುವೆ ಏನೂ ಇಲ್ಲ ಎಂದು ನಟ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಸದ್ಯ ಅವಕಾಶಗಳ ನಿರೀಕ್ಷೆಯಲ್ಲಿದ್ದೇನೆ. ಬಿಗ್‌ಬಾಸ್‌ ನಮಗೆ ಒಳ್ಳೆಯ ವೇದಿಕೆ ಕಲ್ಪಿಸಿದೆ. ಸದ್ಯ ಗ್ರೋ ಆಗಬೇಕಿದೆ. ಅದರ ಕಡೆ ಗಮನ ಕೊಡುತ್ತೇನೆ. ಜನರು ನನ್ನನ್ನು ತುಂಬಾ ಒಳ್ಳೆಯ ರೀತಿಯಲ್ಲಿ ಒಪ್ಪಿಕೊಂಡಿದ್ದಾರೆ. ಅದಕ್ಕೆ ಖುಷಿ ಇದೆ. ಆದರೆ ಹೀಗೆ ಯಾರದ್ದೋ ಜೊತೆ ಹೆಸರು ಥಳಕು ಹಾಕಬೇಡಿ. ಬಿಗ್‌ಬಾಸ್ನಲ್ಲಿ ರೋಸ್‌ ಚಾಲೆಂಜ್‌ ಇದ್ದಾಗಲೂ ನಾನು ಅನುಷಾ ಅವರಿಗೆ ಫ್ರೆಂಡ್‌ ರೀತಿಯಲ್ಲಿಯೇ ರೋಸ್ ಕೊಟ್ಟಿರೋದು. ಅದು ಬಿಟ್ಟು ಬೇರೆ ಉದ್ದೇಶ ಇಲ್ಲ. ಅವರಿಗೆ ಅವರದ್ದೇ ಆದ ಲೈಫ್‌ಸ್ಟೈಲ್ ಇದೆ, ನನಗೆ ನನ್ನದೆ ಆದ ಲೈಫ್‌ಸ್ಟೈಲ್‌ ಇದೆ.  ಸೋ ನಮ್ಮಿಬ್ಬರನ್ನೂ ಹಾಗೆಯೇ ಬಿಟ್ಟುಬಿಡಿ. ಸದಾ ಸ್ನೇಹಿತರಾಗಿಯೇ ಮುಂದುವರೆಯುವ ಆಸೆ ಇದೆ. ಇಲ್ಲಸಲ್ಲದ ಸಂಬಂಧ ಕಲ್ಪಿಸಿದರೆ ಸರಿಯಾಗುವುದಿಲ್ಲ. ಅವರಿಗೂ ಅವರದ್ದೇ ಆದ ಲೈಫ್‌ ಇರುತ್ತದೆ ಎನ್ನುವ ಮೂಲಕ ಎಲ್ಲಾ ಗಾಸಿಪ್‌ಗಳಿಗೆ ತೆರೆ ಎಳೆದು ಸುಳ್ಳು ಸುದ್ದಿ ಪ್ರಚಾರ ಮಾಡದಂತೆ ಹೇಳಿದ್ದಾರೆ. 

ಎ.ಆರ್.ರೆಹಮಾನ್‌ ಜೊತೆಗಿರುವ ಸಂಬಂಧವೇನು? ವಿಡಿಯೋ ಮೂಲಕ ಸ್ಪಷ್ಟಪಡಿಸಿದ ಮೋಹಿನಿ ಡೇ!

click me!