ಮದ್ವೆಯಾಗ್ದೇ ಸೀರಿಯಲ್​ಗೆ ಬಂದ್ರೆ ಹೀಗೇ ಆಗೋದು! ಹೆಂಡ್ತಿಗೆ ತುತ್ತು ನೀಡುವಷ್ಟ್ರಲ್ಲಿ ಲಕ್ಷ್ಮೀ ನಿವಾಸ ಸಿದ್ದೇಗೌಡ್ರು ಸುಸ್ತು...

Published : Apr 08, 2025, 12:18 PM ISTUpdated : Apr 08, 2025, 12:51 PM IST
ಮದ್ವೆಯಾಗ್ದೇ ಸೀರಿಯಲ್​ಗೆ ಬಂದ್ರೆ ಹೀಗೇ ಆಗೋದು! ಹೆಂಡ್ತಿಗೆ ತುತ್ತು ನೀಡುವಷ್ಟ್ರಲ್ಲಿ ಲಕ್ಷ್ಮೀ ನಿವಾಸ ಸಿದ್ದೇಗೌಡ್ರು ಸುಸ್ತು...

ಸಾರಾಂಶ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ-ಜಯಂತ್, ಭಾವನಾ-ಸಿದ್ದೇಗೌಡ್ರ ಕಥೆಗಳು ಕುತೂಹಲ ಮೂಡಿಸಿವೆ. ಸಿದ್ದೇಗೌಡ್ರ ಪಾತ್ರಧಾರಿ ಧನಂಜಯ್ ಡಿಜೆ ಆಗಿ ಹೆಸರುವಾಸಿಯಾಗಿದ್ದು, ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದಾರೆ. ಭಾವನಾ ಪಾತ್ರಧಾರಿ ದಿಶಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, 'ಫ್ರೆಂಚ್ ಬಿರಿಯಾನಿ' ಚಿತ್ರದಲ್ಲಿ ನಟಿಸಿದ್ದಾರೆ. ಇವರಿಗೆ ಕರ್ನಾಟಕ ವಿಮೆನ್ ಅಚೀವರ್ಸ್ ಅವಾರ್ಡ್ ಲಭಿಸಿದೆ. ಇತ್ತೀಚೆಗೆ ಶೂಟಿಂಗ್ ವಿಡಿಯೋ ವೈರಲ್ ಆಗಿದೆ.

ಲಕ್ಷ್ಮೀ ನಿವಾಸ ಸೀರಿಯಲ್​ ಇದೀಗ ಸಾಕಷ್ಟು ಕುತೂಹಲ ಹಂತ ತಲುಪಿದೆ. ಒಂದೆಡೆ ಜಾಹ್ನವಿ ಮತ್ತು ಜಯಂತ್​ ಸ್ಟೋರಿ. ಇನ್ನೊಂದೆಡೆ ಭಾವನಾ ಮತ್ತು ಸಿದ್ದೇಗೌಡ್ರು ಸ್ಟೋರಿ. ತಂಗಿ ಗಂಡನಿಂದ ಬೇರೆಯಾಗುತ್ತಿದ್ದರೆ, ಅಕ್ಕ ಗಂಡನ ಹತ್ತಿರ ಬರುತ್ತಿದ್ದಾಳೆ. ಅತ್ತ ದಾಂಪತ್ಯದಲ್ಲಿ ವಿರಸ, ಇತ್ತ ಸರಸ...ಅತ್ತ ಜೀವಕ್ಕಿಂತ ಅತಿಯಾಗಿ ಪ್ರೀತಿಸುವ ಗಂಡ, ಪ್ರೀತಿಯ ಹೆಸರಿನಲ್ಲಿ ನೀಡ್ತಿರೋ ಟಾರ್ಚರ್​ ಸಹಿಸಿಕೊಳ್ಳಲಾಗದೇ ಸಾವಿನ ಹಾದಿ ಹಿಡಿದಿದ್ದ ಜಾಹ್ನವಿ, ಕೊನೆಗೂ ಬದುಕಿ ಬಂದಿದ್ದಾಳೆ, ಈಗ ವಿಶ್ವನ ಮನೆಗೆ ಹೋಗಿದ್ದಾಳೆ. ಅದೇ ಇನ್ನೊಂದೆಡೆ, ಸಿದ್ದೇಗೌಡ್ರ ಮೇಲೆ ಕೋಪಗೊಂಡಿದ್ದ ಭಾವನಾಗೆ ಲವ್​ ಶುರುವಾಗಿದೆ. ಒಟ್ಟಿನಲ್ಲಿ ಮುಂದೇನು ಎನ್ನುವ ಕುತೂಹಲ ಕೆರಳಿಸಿದೆ. 

ಇದರ ನಡುವೆಯೇ, ಲಕ್ಷ್ಮೀ ನಿವಾಸ ಸೀರಿಯಲ್​ ಶೂಟಿಂಗ್​ ವಿಡಿಯೋ ಒಂದು ವೈರಲ್​ ಆಗಿದೆ. ಇದರಲ್ಲಿ ನಟ-ನಟಿಯರು ಒಂದು ಸೀನ್​ ಮಾಡಲು ಕೆಲವೊಮ್ಮೆ ಎಷ್ಟು ಶ್ರಮ ಪಡುತ್ತಾರೆ, ಹೇಗೆ ಡೈಲಾಗ್​ ಹೇಳುತ್ತಾರೆ, ಡೈಲಾಗ್​  ಮರೆತಾಗ ಏನಾಗತ್ತೆ ಎನ್ನುವುದನ್ನೆಲ್ಲಾ ನೋಡಬಹುದಾಗಿದೆ. ಸಿದ್ದೇಗೌಡ್ರು, ಪತ್ನಿ ಭಾವನಂಗೆ ಊಟ ಮಾಡಿಸುವ ಸನ್ನಿವೇಶವಿದೆ. ಆದರೆ ಸಿದ್ದೇಗೌಡ್ರು ಪಾತ್ರಧಾರಿ ಧನಂಜಯ ಅವರು ಇದನ್ನು ಮಾಡಲಾಗದೇ ಪೇಚಿಗೆ ಸಿಲುಕಿ ಕೊನೆಗೆ ಉಫ್​ ಎಂದಿದ್ದನ್ನು ನೋಡಬಹುದಾಗಿದೆ. ಇದನ್ನು ನೋಡಿದವರು ಎಲ್ಲರೂ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಇದೇ ವೇಳೆ, ಉಳಿದ ಕಲಾವಿದರೂ ಹೇಗೆಲ್ಲಾ ಡೈಲಾಗ್​ ಹೇಳುತ್ತಿದ್ದಾರೆ ಎನ್ನುವುದನ್ನೂ ನೋಡಬಹುದು. ಆದರೆ ಹೈಲೈಟ್​ ಆಗಿದ್ದು ಮಾತ್ರ ಸಿದ್ದೇಗೌಡ್ರು ಊಟ ಮಾಡಿಸಿದ್ದು. ಇದನ್ನು ನೋಡಿದ ನೆಟ್ಟಿಗರು, ಬೇಗ ಮದ್ವೆಯಾಗಿ, ರಿಯಲ್​ ಆಗಿ ಮದ್ವೆಯಾಗದೇ ಸೀರಿಯಲ್​ನಲ್ಲಿ ಮದ್ವೆಯಾದ್ರೆ ಹೀಗೇ ಆಗೋದು ಎಂದು ತಮಾಷೆ ಮಾಡುತ್ತಿದ್ದಾರೆ.

ಈಗಷ್ಟೇ ಶುರುವಾಗ್ತಿದೆ ಲವ್​: ಮೇಡಂನವ್ರೇ ಎನ್ನುತ್ತಲೇ ಭಾವನಾ ಮನ ಕದ್ದ ಸಿದ್ಧೇಗೌಡ್ರ ರೊಮಾನ್ಸ್​ ನೋಡಿ...

ಇನ್ನು ಸಿದ್ದೇಗೌಡ್ರು ಪಾತ್ರಧಾರಿ ಧನಂಜಯ ಕುರಿತು ಹೇಳುವುದಾದರೆ, ಇವರು ಡಿಜೆ ಎಂದೇ ಫೇಮಸ್ಸು. ಇವರು ಇದಾಗಲೇ ಕೆಲವು ಸಿನಿಮಾಗಳಲ್ಲಿ ಪೋಷಕರಾಗಿ ನಟಿಸಿದ್ದಾರೆ. ‘ಜಿಲ್‌ ಜಿಲ್‌’, ‘ವಾಸಂತಿ ನಲಿದಾಗ’ ಸೇರಿದಂತೆ ಐದಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕೊನೆಗೆ,  ಈರಣ್ಣಯ್ಯ ಎನ್‌ ಮಧುಗಿರಿ ನಿರ್ದೇಶನದ ‘ಕನಕ ಪುಷ್ಪ’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದಾರೆ. ರಂಗಭೂಮಿ ಹಿನ್ನೆಯವರಾಗಿರುವ ಇವರು, 80ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.  ತಮ್ಮ ನೆಚ್ಚಿನ ನಾಯಕ ಚಿರಂಜೀವಿ ಅವರನ್ನು ನೋಡಿ,  ಸಿನಿಮಾ ನಾಯಕನಾಗಬೇಕೆಂಬ ಆಸೆ ಚಿಗುರೊಡೆದಿತ್ತು. ಅವರೇ ನನ್ನ ರೋಲ್‌ ಮಾಡೆಲ್‌ ಎಂದು ಹಿಂದೊಮ್ಮೆ ಧನಂಜಯ್​ ಹೇಳಿದ್ದರು. 350ಕ್ಕೂ ಹೆಚ್ಚು ಸಿನಿಮಾಗಳಿಗೆ ಡಬ್ಬಿಂಗ್‌ ಕಲಾವಿದನಾಗಿ ಕಾರ್ಯ ನಿರ್ವಹಿಸಿದ್ದಾರೆ.
 
ಅಂದಹಾಗೆ, ಈ ಸೀರಿಯಲ್​ನಲ್ಲಿ ಗರತಿ ಗೌರಮ್ಮನ ರೀತಿ ಇರೋ ಭಾವನಾ ಅರ್ಥಾತ್​ ದಿಶಾ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಇದ್ದು, ಹಾಟ್​ ಫೋಟೋಶೂಟ್​ ಮಾಡಿಸಿಕೊಳ್ಳುತ್ತಿರುತ್ತಾರೆ. ಇವರನ್ನು ಮೊದಲಿಗೆ ನೋಡದವರು ನಿಜಕ್ಕೂ ಈಕೆ ಭಾವವನಾ ಎಂದು ಅಚ್ಚರಿಪಟ್ಟುಕೊಳ್ಳುವುದು ಉಂಟು. ಹಾಗಿರುತ್ತೆ ಇವರ ಗೆಟಪ್​. ಇನ್ನು ದಿಶಾ ಕುರಿತು ಹೇಳುವುದಾದರೆ ಇವರು ಬೆಳ್ಳಿ ಪರದೆಯ ಮೇಲೂ ಮಿಂಚಿದ್ದಾರೆ.  ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ  ನಟಿಸಿದ್ದಾರೆ.  'ಹಂಬಲ್ ಪೊಲಿಟಿಷಿಯನ್ ನಾಗರಾಜ್' ವೆಬ್ ಸೀರೀಸ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನೂ ಒಂದು ವಿಶೇಷ ಎಂದರೆ ಈಚೆಗಷ್ಟೇ ದಿಶಾ ಅವರಿಗೆ ಕರ್ನಾಟಕ ವಿಮೆನ್ ಅಚೀವರ್ಸ್ ಅವಾರ್ಡ್‌ ಲಭಿಸಿತ್ತು. 2024ನೇ ಸಾಲಿನ ಪ್ರಶಸ್ತಿ ಇವರ ಪಾಲಿಗೆ ಬಂದಿದೆ. ನಟಿಯ  ನಟನಾ ಪಯಣವನ್ನು ಗಮನಿಸಿ, ಈ ಪ್ರಶಸ್ತಿ ನೀಡಲಾಗಿದೆ.   

ಮಗಳ ಜೊತೆ ಸಕತ್​ ರೀಲ್ಸ್​ ಮಾಡಿದ ಲಕ್ಷ್ಮೀ ನಿವಾಸ ಗರತಿ ಭಾವನಾ: ಹೇಗಿದೆ ನೋಡಿ ಈ ಸ್ಟೈಲ್​?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
Brahmagantu ರೂಪಾಗೆ ಕಿಚ್ಚನ ವಾರದ ಚಪ್ಪಾಳೆ: ಸೀರಿಯಲ್​ನಲ್ಲಿ ತಲೆ ಇರೋದು ಇವಳೊಬ್ಬಳಿಗೆ ಮಾತ್ರವಂತೆ!