
ಕಿರುತೆರೆ ವೀಕ್ಷಕರಿಗೆ ಅನುಶ್ರೀ ಅವರ ಬಗ್ಗೆ ಹೇಳುವುದೇ ಬೇಡ. ಆ್ಯಂಕರ್ ಅನುಶ್ರೀ ಎಂದೇ ಫೇಮಸ್ ಆಗಿರುವ ಚಟಪಟ ಮಾತಿನ ಮಲ್ಲಿ ಈಕೆ. ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್ ನಟಿಯ (Sandalwood star) ಪರಿಚಯ ಇಲ್ಲದವರೇ ಇಲ್ಲ ಎನ್ನಬಹುದೇನೋ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುತ್ತಾರೆ ಇವರು. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಅಷ್ಟಕ್ಕೂ, ಆ್ಯಂಕರ್ ಅನುಶ್ರೀ ಎಂದಾಕ್ಷಣ, ಅವರ ಲಕ್ಷಾಂತರ ಅಭಿಮಾನಿಗಳು ಸದಾ ಕೇಳುವ ಪ್ರಶ್ನೆ ಒಂದೇ ಮೇಡಂ... ಮದ್ವೆ ಯಾವಾಗ ಎನ್ನುವುದು. ಇದಕ್ಕೆ ಉತ್ತರ ಕೊಟ್ಟೂ ಕೊಟ್ಟೂ ಅನುಶ್ರೀಯವರು ಸೋತು ಹೋಗಿದ್ದಾರೆ. ಒಂದೇ ಪ್ರಶ್ನೆಯನ್ನು ಎಷ್ಟೂ ಅಂತ ಕೇಳ್ತೀರಾ ಎಂದು ಬೇಸರ ವ್ಯಕ್ತಪಡಿಸಿದ್ದೂ ಇದೆ. ನಾನು ಮದ್ವೆಯಾಗದೇ ಇರುವುದಿಲ್ಲ, ಆಗೇ ಆಗ್ತೀನಿ. ನಿಮಗೆ ಹೇಳಿಯೇ ಆಗ್ತೀನಿ. ಅಲ್ಲಿಯವರೆಗೆ ಮದ್ವೆ ವಿಷಯ ಕೆದಕದೇ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ಅನುಶ್ರೀ ಅವರು ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದೂ ಆಗಿದೆ.
ಆದರೆ ಅವರು ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ ಶೇರ್ ಮಾಡಿದಾಗಲೆಲ್ಲಾ ತರ್ಲೆ ಫ್ಯಾನ್ಸ್ ಇದೇ ಪ್ರಶ್ನೆ ಕೇಳುತ್ತಾರೆ. ಗೂಗಲ್ ದಾಖಲೆ ಪ್ರಕಾರ, ನಟಿ 1988ರ ಜ.25ರಂದು ಹುಟ್ಟಿದ್ದು, ಅವರಿಗೆ 37ವರ್ಷ. ವಯಸ್ಸು ಇಷ್ಟಾದರೂ ಮದುವೆ ಇನ್ನೂ ಆಗಿಲ್ಲ ಎನ್ನುವುದೇ ಅನುಶ್ರೀ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಆದ್ದರಿಂದ ಹೋದಲ್ಲಿ, ಬಂದಲ್ಲಿ ಮದ್ವೆ ಯಾವಾಗ ಎನ್ನುವ ಪ್ರಶ್ನೆಯೇ ಎದುರಾಗುತ್ತಿರುತ್ತದೆ. ಇದೀಗ ಇವರ ಮದುವೆಯ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ರಿವೀಲ್ ಮಾಡಿಬಿಟ್ಟಿದ್ದಾರೆ. ಜೀ ಕನ್ನಡದ ಬ್ಯಾಚುಲರ್ಸ್ ಪಾರ್ಟಿ ಕಾರ್ಯಕ್ರಮದಲ್ಲಿ, ರವಿಚಂದ್ರನ್ ಅವರು ಅನುಶ್ರೀ ಮದ್ವೆ ಫಿಕ್ಸ್ ಆಗಿದೆ ಎಂದು ಹೇಳಿದ್ದಾರೆ. ಅದಕ್ಕೆ ಅನುಶ್ರೀ ಫ್ಯಾನ್ಸ್ ಹುಡುಗ ಯಾರು ಎಂದು ಪ್ರಶ್ನಿಸುತ್ತಿದ್ದಾರೆ.
ಅಪ್ಪಾಜಿ ಸಮಾಧಿ ಬಳಿ ಯಾರೋ ಇಟ್ಟಿದ್ದ ಊಟ ಮಾರನೆಯ ದಿನ ತಿಂದಿದ್ದ ಅಪ್ಪು: ಆ ದಿನ ಆಗಿದ್ದೇನು?
ಅಷ್ಟಕ್ಕೂ, ರವಿಚಂದ್ರನ್ ಅವರು ಸೀರಿಯಸ್ ಆಗಿ ಇದನ್ನೇನೂ ಹೇಳಿದ್ದಲ್ಲ. ಭರ್ಜರಿ ಬ್ಯಾಚುಲರ್ಸ್ನ ಸುನೀಲ್ ಮತ್ತು ಅಮೃತಾ ಸಕತ್ ಹಾಟ್ ಆಗಿ ಡಾನ್ಸ್ ಮಾಡಿದರು. ಆ ಡಾನ್ಸ್ಗೆ ಮಳೆ ನೀರನ್ನು ಸುರಿಸಲಾಗಿತ್ತು. ನೃತ್ಯ ಮುಗಿಯುತ್ತಿದ್ದಂತೆ ಅಮೃತಾ ನನಗೆ ತುಂಬಾ ಚಳಿಯಾಗುತ್ತಿದೆ ಎಂದು ಹೇಳಿದರು. ಆಗ ಅಲ್ಲಿಯೇ ಇದ್ದ ಅನುಶ್ರೀ ನಿಮಗೆ ಚಳಿಯಾಗುತ್ತಿದೆ. ಆದರೆ, ನೋಡಿದವರಿಗೆ ಬಿಸಿಯಾಗುತ್ತಿದೆ ಎಂದು ಹೇಳಿದರು. ತೀರ್ಪುಗಾರರ ಸ್ಥಾನದಲ್ಲಿ ಕುಳಿತಿದ್ದ ರವಿಚಂದ್ರನ್ ಅವರು, ಅನುಗೆ ಬಿಸಿ ಆಯ್ತು ಅಂದ್ರೆ ಮದುವೆ ಫಿಕ್ಸ್ ಆಯ್ತು ಅಂತ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ. ಆಗ ಅನುಶ್ರೀ ನಾಚಿ ನೀರಾಗಿದ್ದಾರೆ. ಅಲ್ಲಿಗೆ ರವಿಚಂದ್ರನ್ ಅವರಿಗೂ ಅನುಶ್ರೀ ಮದುವೆ ಯಾವಾಗ ಎನ್ನುವ ಚಿಂತೆ ಇದೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.
ಕಳೆದ ವರ್ಷ ಅನುಶ್ರೀ ಅವರು ಮದುವೆಯ ಬಗ್ಗೆ ಮಾತನಾಡುತ್ತಾ, ನನಗೂ ಜೀವನದಲ್ಲಿ ಒಬ್ಬ ಬಾಳಸಂಗಾತಿ ಬರಬೇಕು ಎನ್ನುವ ಆಸೆ ಇದೆ. ಎಲ್ಲದಕ್ಕೂ ತನ್ನದೇ ಆದಂಥ ಒಂದು ಟೈಮ್ ಇರುತ್ತೆ. ಎಲ್ಲದ್ದಕ್ಕೂ ಅದರದ್ದೇ ಆದ ಒಂದು ಘಳಿಗೆ ಇರುತ್ತೆ. ಸರಿಯಾದ ಟೈಮ್ನಲ್ಲಿ ಸರಿಯಾದ ವ್ಯಕ್ತಿ ಬರಬೇಕಾಗುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನಾನು ಮನಸ್ಸು ಮಾಡಬೇಕಿತ್ತು. ಆದರೆ ಈಗ ಮನಸ್ಸು ಮಾಡಿದ್ದೇನೆ. ಇಷ್ಟು ವರ್ಷಗಳ ಕಾಲ ಮನಸ್ಸು ಮಾಡಿರಲಿಲ್ಲ, ಕನ್ನಡಿಗರ ಆಶೀರ್ವಾದದಿಂದ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವಂಥ ಆ ಸರದಾರ ನನ್ನ ಬದುಕಲ್ಲಿ ಬರಲಿ, ಅವನು ಬಂದರೆ ನಿಮ್ಮ ಮುಂದೆ ಅವನನ್ನು ಕರೆದುಕೊಂಡು ಬಂದು, ಪರಿಚಯ ಮಾಡಿಸಿ ಮುಂದಿನ ವರ್ಷವೇ ವಿಶೇಷ ದಿನದಂದು ಮದ್ವೆಯಾಗುತ್ತೇನೆ ಎಂದಿದ್ದರು. 2025 ಬಂದು ನಾಲ್ಕನೇ ತಿಂಗಳಿಗೆ ಕಾಲಿಟ್ಟಿದೆ. ಈ ವರ್ಷವಾದ್ರೂ ಮದ್ವೆಯಾಗಿ ಎನ್ನುತ್ತಿದ್ದಾರೆ ಫ್ಯಾನ್ಸ್.
ಅಪ್ಪು ಎಂದು ಗೊತ್ತಾಗ್ದೇ ರಪರಪ ಅಂತ ಲಾಠಿ ಏಟು ಕೊಟ್ರಂತ ಪೊಲೀಸ್ರು! ಆ ಘಟನೆ ವಿವರಿಸಿದ್ದ ಪುನೀತ್ ರಾಜ್...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.