
ಬೆಂಗಳೂರು(ಮಾ.09): ಲೂಸ್ ಮಾದ ಖ್ಯಾತಿಯ ನಟ ಯೋಗಿ, ನಟ ವಿನೋದ್ ಪ್ರಭಾಕರ್, ಟೀಂ ಇಂಡಿಯಾ ಕ್ರಿಕೆಟಿಗ ಅಭಿಮನ್ಯು ಮಿಥುನ್, ರಣಜಿ ಕ್ರಿಕೆಟಿಗರು, ನಟಿಯರ ಸಮಾಗವಾಗಿತ್ತು. ಕಿರುತೆರೆ ತಾರೆಯರ ಕ್ರಿಕೆಟ್ ಲೀಗ್ ಟೂರ್ನಿಯ ಟ್ರೋಫಿ ಅನಾವರಣ ಸಂಭ್ರಮ ಭಾರಿ ಸಂಚಲನ ಸೃಷ್ಟಿಸಿದೆ. ಮಾರ್ಚ್ 12 ರಿಂದ ಆರಂಭಗೊಳ್ಳುತ್ತಿರುವ ಸುನೀಲ್ ಕುಮಾರ್.ಬಿ.ಆರ್ ಸಾರಥ್ಯದ ಟಿಪಿಎಲ್ ಎರನೇ ಆವೃತ್ತಿಯ ಟ್ರೋಫಿ ಹಾಗೂ ಜೆರ್ಸಿ ಅನಾವರಣ ಮಾಡಲಾಗಿದೆ. ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಿಸುವ ಕಿರುತೆರೆ ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್‌ಗೆ ವೇದಿಕೆ ಸಜ್ಜಾಗಿದೆ.
ಕಾರ್ಯಕ್ರಮದಲ್ಲಿ ಟ ವಿನೋದ್ ಪ್ರಭಾಕರ್, ರಣಜಿ ಆಟಗಾರರಾದ ಶರತ್ ಶ್ರೀನಿವಾಸ್, ಅರ್ಜುನ್ ಹೊಯ್ಸಳ, ದೇಗ ನಿಶ್ಚಲ್, ಬಿ.ಯು.ಶಿವಕುಮಾರ್, ಅನಿರುದ್ಧ್ ಜೋಶಿ ಹಾಗೂ ಭಾರತ ತಂಡ ಪ್ರತಿನಿಧಿಸಿರುವ ಅಭಿಮನ್ಯು ಮಿಥುನ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಟಿಪಿಎಲ್ ಸೀಸನ್-2ಗೆ ಶುಭ ಹಾರೈಸಿದ್ದಾರೆ.
KCC League: 365 ದಿನದಲ್ಲಿ 363 ದಿನ ಕೆಲಸ ಮಾಡೋ ನಟ ಶಿವಣ್ಣನ ಸಂದರ್ಶನ ಮಾಡಿದ ಕಿಚ್ಚ ಸುದೀಪ್.!
ಮಾರ್ಚ್ 12ರಿಂದ 15ರ ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಟಿಪಿಎಲ್ ಸೀಸನ್ -2 ಟೂರ್ನಿ ನಡೆಯಲಿದೆ. ಮೊದಲ ಸೀಸನ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಎರಡನೇ ಆವೃತ್ತಿ ಆಯೋಜಿಸಲು ನಿರ್ಧರಿಸಲಾಗಿದೆ. ಎನ್ 1 ಕ್ರಿಕೆಟ್ ಅಕಾಡೆಮಿ ಆಯೋಜಕ ಸುನೀಲ್ ಕುಮಾರ್.ಬಿ.ಆರ್ ಇದೀಗ ಎರಡನೇ ಆವೃತ್ತಿ ಆಯೋಜಿಸಲು ಎಲ್ಲಾ ತಯಾರಿ ನಡೆದಿದೆ. ಕಳೆದ ಆವೃತ್ತಿಯಂತೆ ಅದ್ಧೂರಿಯಾಗಿ ಟೂರ್ನಿ ನಡೆಯಲಿದೆ ಎಂದು ಆಯೋಜಕರು ಹೇಳಿದ್ದಾರೆ
ಟಿಪಿಎಲ್ ಎರಡನೇ ಆವೃತ್ತಿ ಪಂದ್ಯಗಳು ಬೆಂಗಳೂರಿನ ಅಶೋಕ ರೈ ಸಿಂಗ್ ಸ್ಟಾರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಎನಿಎಲ್ಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಆರು ತಂಡಗಳಿವೆ. ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಮಾರ್ಚ್ 12ರಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ 2; ಎಷ್ಟು ತಂಡಗಳಿದೆ, ಯಾರೆಲ್ಲಾ ಇದ್ದಾರೆ ನೋಡಿ...
ಪ್ರತಿತಂಡಕ್ಕೂ ಓನರ್ ಹಾಗೂ ಸೆಲೆಬ್ರೆಟಿ ಅಂಬಾಸಿಡರ್ ಗಳಿರಲಿದ್ದು, ‘ದಿ ಪರ್ಪಲ್ ರಾಕ್ ಪ್ಯಾಂಥರ್ಸ್’ ತಂಡದ ಮಾಲಿಕತ್ವವನ್ನು ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ ವಹಿಸಿಕೊಂಡಿದ್ದು, ರಂಜಿತ್ ಕುಮಾರ್ ‘ಅಶ್ವಸೂರ್ಯ ರಿಯಾಲಿಟೀಸ್’, ಮೊಹಮ್ಮದ್ ಜಾಕೀರ್ ಹುಸೇನ್ ಮತ್ತು ಪೂಜಾ ಶ್ರೀ ‘ಎನಿಎಲ್ಪ್ ಟೂರ್ನಿವಲ್’, ಫೈಜಾನ್ ಖಾನ್ ‘ಇನ್ಸೇನ್ ಕ್ರಿಕೆಟ್ ಟೀಂ’, ಮೊನೀಶ್ ‘ದಿ ಬುಲ್ ಸ್ಕ್ವಾಡ್’, ಅನಿಲ್ ಬಿ.ಆರ್,ದೇವನಾಥ್.ಡಿ, ರವಿ.ಜಿ.ಎಸ್ ‘ಆಕ್ಸ್ ಫರ್ಡ್ ವಿನ್ ಟೀಂ’ ಮಾಲಿಕತ್ವ ವಹಿಸಿಕೊಂಡಿದ್ದಾರೆ. ಐಶ್ವರ್ಯ ಸಿಂದೋಗಿ, ವಿರಾನಿಕ ಶೆಟ್ಟಿ, ರಾಶಿಕ ಶೆಟ್ಟಿ, ಸೊಹಾರ್ಧ, ಗಾನವಿ ಸುರೇಶ್, ಸೀಮಾ ವಸಂತ್, ಅದ್ವಿತಿ ಶೆಟ್ಟಿ, ಶ್ವೇತ ಪ್ರಸಾದ್, ಲಿಖಿತಾ ಅನಂತ್, ಯಶಸ್ವಿನಿ, ಆಶಿಕಾ ಗೌಡ, ಶ್ವೇತ ಕೊಗ್ಲೂರ್ ಟಿಪಿಎಲ್ ಸೀಸನ್ -2 ಅಂಬಾಸಿಡರ್ ಪಟ್ಟಿಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.