ಉಪದೇಶ ಕೊಡೋಕೆ ನೀವ್ಯಾರು?; ತಾಯಿ ಬಟ್ಟೆಗೆ ಕಮೆಂಟ್ಸ್, ಖಡಕ್ ಉತ್ತರ ಕೊಟ್ಟ ಬಿಗ್ ಬಾಸ್ ಸಾನ್ಯಾ

By Suvarna News  |  First Published Mar 9, 2023, 12:41 PM IST

ಸಾನ್ಯಾ ಐಯ್ಯರ್ ತಾಯಿ ದೀಪಾ ಐಯ್ಯರ್ ಡ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿದೆ. ಬರ್ತ್ ಡೇ ದಿನ ಅವರು ಧರಿಸಿದ ಔಟ್‌ಫಿಟ್ ಬಗ್ಗೆ ನೆಟ್ಟಿಗರು ಹಿಗ್ಗಾಮುಗ್ಗ ಕಮೆಂಟ್ ಮಾಡ್ತಿದ್ದಾರೆ, ಇದಕ್ಕೆ ಸಾನ್ಯಾ ಕೊಟ್ಟಿರೋ ಉತ್ತರ ಮಾತ್ರ ಮುಟ್ಟಿ ನೋಡ್ಕೊಳ್ಳೋ ಹಂಗಿದೆ.


ಸಾನ್ಯಾ ಐಯ್ಯರ್ ಪುಟ್ಟ ಗೌರಿ ಮದುವೆ ಸೀರಿಯಲ್ ನಲ್ಲಿ ಪುಟ್ಟ ಗೌರಿಯಾಗಿ ಮಿಂಚಿದ ಬೆಡಗಿ. ಈಗ ಆಕೆ ದೊಡ್ಡವಳಾಗಿದ್ದಾಳೆ. ಬಿಗ್‌ಬಾಸ್‌ನಲ್ಲಿ ಸಾಕಷ್ಟು ಸೌಂಡ್ ಮಾಡಿದ್ದಾರೆ. ಸಾನ್ಯಾ-ರೂಪೇಶ್ ಜೋಡಿ ಬಿಗ್‌ಬಾಸ್‌ನಲ್ಲಿ ಸಖತ್ ಪಾಪ್ಯುಲರ್ ಆಗಿತ್ತು. ವಿವಾದಗಳನ್ನು ಮೈಮೇಲೆ ಎಳ್ಕೊಳ್ಳೋದ್ರಲ್ಲಿ ಸಾನ್ಯಾ ಎತ್ತಿದ ಕೈ ಅಂತ ಜನ ಅವರ ಬಗ್ಗೆ ಕಮೆಂಟ್ ಮಾಡ್ತಿದ್ರು. ಬಿಗ್‌ಬಾಸ್ ಮನೆಯಲ್ಲಿರುವಾಗ ಅನೇಕ ಕಾರಣಗಳಿಗೆ ಸುದ್ದಿ ಆಗಿದ್ರೆ ಅಲ್ಲಿಂದ ಹೊರ ಬಂದಮೇಲೆ ಮತ್ತೂ ಅನೇಕ ವಿಚಾರಗಳಿಗೆ ಸೌಂಡ್ ಮಾಡಿದ್ರು. ಇದೀಗ ಅವರ ಅಮ್ಮನ ಡ್ರೆಸ್ ಕಾರಣಕ್ಕೆ ಮತ್ತೆ ಸೌಂಡ್ ಮಾಡ್ತಿದ್ದಾರೆ. ಅಷ್ಟಕ್ಕೂ ಕಾರಣವಾಗಿದ್ದು ಸಾನ್ಯಾ ಅಮ್ಮನ ಬರ್ತ್ ಡೆ ಪಾರ್ಟಿ. ಅಲ್ಲಿ ಏನು ನಡೀತು? ಅಷ್ಟಕ್ಕೂ ಸಾನ್ಯಾ ಅಮ್ಮ ಧರಿಸಿದ ಡ್ರೆಸ್ ಹೇಗಿತ್ತು, ನೆಟ್ಟಿಗರು ಇದಕ್ಕೆ ಯಾಕೆ ಕ್ಲಾಸ್ ತಗೊಂಡ್ರು ಅನ್ನೋದಕ್ಕೆ ಉತ್ತರ ಇಲ್ಲಿದೆ.

ಸಾನ್ಯಾ ಐಯ್ಯರ್ ಅಷ್ಟಲ್ಲದಿದ್ದರೂ ನಟಿಯಾಗಿ, ಡಬಿಂಗ್ ಆರ್ಟಿಸ್ಟ್ ಆಗಿ ಹೆಸರು ಮಾಡಿದವರು ದೀಪಾ ಐಯ್ಯರ್. ಕಿರುತೆರೆಯಲ್ಲಿ ಸದ್ಯ ಜನಪ್ರಿಯವಾಗ್ತಿರೋ ಸೀರಿಯಲ್ 'ಲಕ್ಷಣ'ದಲ್ಲಿ ನಕ್ಷತ್ರ ಅಮ್ಮನ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸಾಕಷ್ಟು ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಬ್ಬಿಂಗ್ ಆರ್ಟಿಸ್ಟ್ ಜೊತೆಗೆ ವಸ್ತ್ರ ವಿನ್ಯಾಸಕಿಯಾಗಿಯೂ ಗುರುತಿಸಿಕೊಂಡವರು. ಆದರೆ ಈಗ ಅವರ ಉಡುಗೆಯೇ ನೆಟ್ಟಿಗರು ಕೆಂಗಣ್ಣಿಗೆ ಕಾರಣವಾಗಿದೆ.

Tap to resize

Latest Videos

ಎರಡು ದಿನಗಳ ಕೆಳಗೆ ದೀಪಾ ಐಯ್ಯರ್ ಹ್ಯಾಪಿ ಬರ್ತ್ ಡೇ. ಜನ್ಮದಿನದ ಪ್ರಯುಕ್ತ ಸಾನ್ಯಾ ಅಮ್ಮನಿಗೆ ಸರ್ಪೈಸ್ ಉಡುಗೊರೆ ನೀಡಿದ್ದಾರೆ. ದೊಡ್ಡ ಹೊಟೇಲಿಗೆ ಕರೆದೊಯ್ದು ಕ್ಯೂಟ್ ಕೇಕ್ ಆರ್ಡರ್ ಮಾಡಿ ಅಮ್ಮನಿಂದ ಕಟ್ ಮಾಡಿಸಿದ್ದಾರೆ. ಅಮ್ಮ ಕೇಕ್ ಕಟ್ ಮಾಡ್ತಿರೋವಾಗ ಬರ್ತ್ ಡೇ ವಿಶ್ ಮಾಡಿದ್ದಾರೆ. ಈ ಖುಷಿಯ ಸನ್ನಿವೇಶವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ನೆಟ್ಟಿಗರು ಈ ಬಗ್ಗೆ ಬಾಯಿಗೆ ಬಂದಂಗೆ ಕಮೆಂಟ್ ಮಾಡ್ತಿದ್ದಾರೆ. ಅವರು ಹೀಗೆ ಕಮೆಂಟ್ ಮಾಡೋದಕ್ಕೆ ಕಾರಣ ಸಾನ್ಯಾ ತಾಯಿ ದೀಪಾ ತೊಟ್ಟಿರುವ ಡ್ರೆಸ್.

ನಿನ್ನಷ್ಟೇ ಚೆನ್ನಾಗಿದೆ ಜಾಮೂನ್; ಮೊದಲ ಸಲ ತಾಯಿಗೋಸ್ಕರ ಅಡುಗೆ ಮಾಡಿದ ನಿವೇದಿತಾ ಗೌಡ

ಅಷ್ಟಕ್ಕೂ ದೀಪ ಅಯ್ಯರ್ ಅವರು ತೊಟ್ಟಿರೋ ಡ್ರೆಸ್‌ಗೆ ಏನಾಗಿದೆ ಅಂದ್ರೆ ಅವರು ತೊಟ್ಟಿರೋದು ಮಾಡರ್ನ್ ಗೌನ್(Modern gown). ಅದು ಎಕ್ಸ್‌ಪೋಸಿವ್‌ ಆಗಿದೆ ಅನ್ನೋ ನೆಟ್ಟಿಗರ ಅಪವಾದ. ಮೈಗಂಟಿನಿಲ್ಲೋ ಈ ಗೌನ್‌ ಅನ್ನು ದೀಪಾ ಅಯ್ಯರ್ ಏನೋ ತೊಟ್ಟುಕೊಂಡಿದ್ದಾರೆ, ಆದರೆ ಅವರು ಅದರಲ್ಲಿ ಕಂಫರ್ಟೇಬಲ್ ಆದ ಹಾಗೆ ಈ ವೀಡಿಯೋದಲ್ಲಿ ಕಾಣಿಸೋದಿಲ್ಲ. ಕೊಂಚ ಮುಜುಗರದಿಂದಲೆ ಫೋಟೋಗೆ ಪೋಸ್ ಕೊಡ್ತಿರೋ ಹಾಗಿದೆ. ಈ ವೀಡಿಯೋವನ್ನು ಸಾನ್ಯಾ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಥರಾವರಿ ಕಮೆಂಟ್ಸ್ ಮಾಡ್ತಿದ್ದಾರೆ. 'ತಾಯಿನೇ ಹೀಗಿರೋವಾಗ ಮಗಳು ಹಾಗಿರೋದ್ರಲ್ಲಿ ಆಶ್ಚರ್ಯ ಇಲ್ಲ' ಅನ್ನೋ ಒಂದು ಕಮೆಂಟಿದೆ. ಇದರ ಜೊತೆಗೆ ಕೆಟ್ಟ ಕೆಟ್ಟದಾದ ಇನ್ನೊಂದಿಷ್ಟು ಕಮೆಂಟ್ಸ್ ಇವೆ. ಹೆಚ್ಚಿನವರು ದೀಪಾ ಅವರ ಬಟ್ಟೆ ಬಗ್ಗೆ ಕಮೆಂಟ್ ಮಾಡಿದ್ದಾರೆ. ಇದನ್ನು ನೋಡಿ ಸಾನ್ಯಾ ಕೆಂಡಾಮಂಡಲ ಆಗಿದ್ದಾರೆ. ನಾವ್ಯಾವ ಕಾಲದಲ್ಲಿದ್ದೀವಿ. ನಮಗೆ ಬೇಕಾದ ಬಟ್ಟೆಯನ್ನು ಹಾಕ್ಕೊಳ್ಳೋ ಸ್ವಾತಂತ್ರ್ಯನೂ(Freedom) ನಮಗಿಲ್ವಾ. ಯಾರು ಯಾವ ಥರದ ಬಟ್ಟೆ ಹಾಕ್ಕೊಬೇಕು ಅಂತ ಉಪದೇಶ ಕೊಡೋದಕ್ಕೆ ನೀವ್ಯಾರು, ನಿಮಗೆ ಬೇಕಾದ ಬಟ್ಟೆ ನೀವು ಹಾಕಿ, ಅದು ಬಿಟ್ಟು ಉಳಿದೋರ ಬಟ್ಟೆ ಬಗ್ಗೆ ಹೀಗೆಲ್ಲ ಕಮೆಂಟ್(Comment) ಮಾಡೋದು ತಪ್ಪು ಅಂತ ಕ್ಲಾಸ್ ತಗೊಂಡಿದ್ದಾರೆ.

 

ಈ ವೇಳೆ ಒಂದಿಷ್ಟು ಜನ ಸಾನ್ಯಾಗೆ ಸಪೋರ್ಟಿವ್ ಆಗಿ ನಿಂತಿದ್ದಾರೆ. ಅವರ ಡ್ರೆಸ್ ಅವರ ಆಯ್ಕೆ, ಅದನ್ನು ಪ್ರಶ್ನಿಸೋ ಅಧಿಕಾರ ಯಾರಿಗೂ ಇಲ್ಲ ಅಂತಲೂ ಒಂದಿಷ್ಟು ಜನ ಹೇಳ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಇಂಥಾ ಕೆಟ್ಟ ಕಮೆಂಟ್ಸ್ ಬಗ್ಗೆ ಸೆಲೆಬ್ರಿಟಿಗಳು ದನಿ ಎತ್ತುತ್ತಲೇ ಇದ್ದಾರೆ. ಈಗ ಸಾನ್ಯಾ ಆ ಸಾಲಿನಲ್ಲಿದ್ದಾರೆ.

ಅತ್ತಿಗೆ ಮೇಲೆ ದಬ್ಬಾಳಿಕೆ ಮಾಡಿದ್ದೀನಿ; ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಕಣ್ಣೀರಿಟ ಮುರುಗಾ

click me!