ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸಿದ ನಿವೇದಿತಾ ಗೌಡ. ಜಾಮೂನ್ ಮಾಡುವುದನ್ನು ನೋಡಿ ನೆಟ್ಟಿಗರು ಫುಲ್ ಸುಸ್ತು.....
ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಈ ವರ್ಷ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ. ಮೈಸೂರಿನ ತಮ್ಮ ಮನೆಗೆ ಬಂದಿರುವ ತಾಯಿ ಹೇಮಾ ಅವರಿಗೆ ಜಾಮೂನ್ ಮಾಡಿಕೊಟ್ಟಿದ್ದಾರೆ. ನಿವಿ ಅಡುಗೆ ಮನೆಯಲ್ಲಿ ಮಾಡುತ್ತಿರುವ ಸರ್ಕಸ್ ನೋಡಿ ಕೊಂಚ ಗಾಬರಿ ಆಗುತ್ತಿದ್ದರೂ ಮಗಳು ಚೆನ್ನಾಗಿ ಮಾಡುತ್ತಾಳೆ ಎನ್ನುವ ಧೈರ್ಯವಿದೆ ಎನ್ನುತ್ತಾರೆ ಹೇಮಾ. ನಿವೇದಿತಾಗಿಂತ ಅವರ ತಾಯಿನೇ ಸೂಪರ್ ಎನ್ನುವ ನಟ್ಟಿಗರು ಇನ್ನು ಹೆಚ್ಚಿನ ವಿಡಿಯೋ ಮಾಡಬೇಕು ಎನ್ನುವ ಡಿಮ್ಯಾಂಡ್ ಮುಂದಿಟ್ಟಿದ್ದಾರೆ.
'ಮಹಿಳಾ ದಿನಾಚರಣೆಯನ್ನು ನನ್ನ ತಾಯಿ ಜೊತೆ ಆಚರಿಸಿಕೊಳ್ಳುತ್ತಿರುವೆ. ಭೂಮಿ ಮೇಲೆ ನನ್ನ ಫೇವರೆಟ್ ವ್ಯಕ್ತಿ ಅಂದ್ರೆ ನನ್ನ ಅಮ್ಮ. ನನ್ನ ಬಾಲ್ಯದಲ್ಲಿ ಏನೇ ವಿಶೇಷ ದಿನವಿದ್ದರೂ ತಾಯಿನೇ ಸ್ವೀಟ್ ಮಾಡಿಕೊಡುತ್ತಿದ್ದರು. ಹೀಗಾಗಿ ತಾಯಂದಿರ ದಿನ ನನ್ನ ತಾಯಿಗೆ ಅವರ ನೆಚ್ಚಿನ ಸ್ವೀಟ್ ಜಾಮೂನ್ ಮಾಡಿಕೊಡುವ ಪ್ಲ್ಯಾನ್ ಮಾಡಿರುವೆ. ನನ್ನ ಮನೆಗೆ ಬಂದರೂ ನನ್ನ ತಾಯಿನೇ ಅಡುಗೆ ಮಾಡುವುದು ನಾನು ಕೇಳಿದ ಪ್ರತಿಯೊಂದನ್ನು ಮಾಡಿ ಕೊಡುತ್ತಾರೆ. ಯಾವತ್ತೂ ಏನೂ ಮಾಡಿ ಕೊಟ್ಟಿಲ್ಲ...ಇದೇ ಮೊದಲು ಅವರಿಗೆ ನಾನು ಸ್ವೀಟ್ ಮಾಡಿ ಕೊಡುತ್ತಿರುವುದು' ಎಂದು ನಿವೇದಿತಾ ಗೌಡ ವಿಡಿಯೋ ಆರಂಭಿಸಿದ್ದಾರೆ.
ನಿವೇದಿತಾಗೆ ತಂದೆ ತಾಯಿ ಕಷ್ಟನೇ ತೋರಿಸಿಲ್ಲ: 3ನೇ ವಾರ್ಷಿಕೋತ್ಸವದ ದಿನ ಭಾವುಕರಾದ ಚಂದನ್-ನಿವಿ
'ಮೊದಲ ಸಲ ನೀನು ಜಾಮೂನ್ ಮಾಡುತ್ತಿರುವ ರುಚಿ ನೋಡಲು ಕಾಯುವೆ' ಎಂದು ನಿವಿ ತಾಯಿ ಹೇಮಾ ಹೇಳಿದ್ದಾರೆ. 'ನನ್ನ ತಾಯಿ ಜಾಮೂನ್ ಚೆನ್ನಾಗಿ ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲರೂ 3-4 ಜಾಮೂನ್ ತಿನ್ನುತ್ತಾರೆ ಆದರೆ ನನ್ನ ತಾಯಿ ಮಾಡುವ ಒಂದು ಜಾಮೂನ್ ತುಂಬಾ ದಪ್ಪಗಿರುತ್ತದೆ ಒಂದು ತಿಂದರೂ ಹೊಟ್ಟೆ ಫುಲ್ ಆಗುತ್ತದೆ' ಎಂದು ನಿವಿ ಮಾತನಾಡಿಕೊಂಡು ಜಾಮೂನ್ ತಯಾರಿ ಶುರು ಮಾಡಿದ್ದಾರೆ.
ಜಾಮೂನ್ ಮಾಡುವುದು ಹೇಗೆ ಎಂದು ಯೂಟ್ಯೂಬ್‌ನಲ್ಲಿ ನೋಡಿಕೊಂಡು ನಿವಿ ಮಾಡಿದ್ದಾರೆ. ಪ್ರತಿ ಸಲ ಅಡುಗೆ ಮಾಡುವಾಗ ಎಡವಟ್ಟು ಮಾಡಿಕೊಳ್ಳುವಂತೆ ಈ ಸಲವೂ ಗ್ಯಾಸ್ ಅಂಟಿಸಲು ಹೆದರಿಕೊಂಡಿದ್ದಾರೆ. ಜಾಮೂನ್ ಮಿಕ್ಸ್ ಸರಿ ಮಾಡಿಕೊಳ್ಳಲು ಆಗದೇ ನೀರು ಮಿಕ್ಸ್-ಮಿಕ್ಸ್ ನೀರು ಮಾಡಿ ಸರ್ಕಸ್ ಮಾಡಿ ಹಿಟ್ ರೆಡಿ ಮಾಡಿಕೊಳ್ಳುತ್ತಾರೆ. ಜಾಮೂನ್ ಮಾಡುವುದು ಇಷ್ಟು ಸುಲಭ ಎಂದು ಗೊತ್ತಿರಲಿಲ್ಲ ಇಷ್ಟು ಬೇಗ ಮಾಡುತ್ತಿರುವುದಕ್ಕೆ ತಪ್ಪು ಮಾಡುತ್ತಿರುವೆ ಅಂದುಕೊಂಡೆ ಆದರೆ ಇಲ್ಲ ಎಣ್ಣೆಯಲ್ಲಿ ಫ್ರೈ ಮಾಡಿರುವ ಜಾಮೂನ್‌ನ ಸ್ವೀಟ್ ಪಾಕದಲ್ಲಿ ಹಾಕಿದ ಮೇಲೆ ಸಮಯ ತೆಗೆದುಳ್ಳುತ್ತದೆ ಎಂದು ಗೊತ್ತಾಗಿದ್ದು ಎಂದು ನಿವಿ ಹೇಳಿದ್ದಾರೆ.
24 ಕ್ಯಾರೆಟ್ ಗೋಲ್ಡ್‌ನ ಐಸ್ ಕ್ರೀಮ್‌ಗೆ ಹಾಕಿಕೊಂಡು ತಿಂದ ನಿವೇದಿತಾ ಗೌಡ; ಐಷಾರಾಮಿ ಜೀವನ ಎಂದ ನೆಟ್ಟಿಗರು
'ಭಯ ಆಗುತ್ತಿದೆ ಏನು ಮಾಡುತ್ತಾಳೆ ಅಂತ. ಗೊತ್ತಾಗದಂತೆ ಬಂದು ನೋಡುತ್ತಿರುವೆ. ಸ್ವಲ್ಪ ಕರೆಕ್ಟ್ ಆಗಿ ಮಾಡುತ್ತಿದ್ದಾಳೆ ನೀಟ್ ಆಗಿ ಹೇಳಿಕೊಟ್ಟರೆ ಪರ್ಫೆಕ್ಟ್ ಆಗಿ ಮಾಡುತ್ತಾಳೆ. ನಾನೇ ಮಾಡುತ್ತೀನಿ ಎಂದು ನನ್ನ ಮಗಳು ನನ್ನ ಮಾತು ಕೇಳುತ್ತಿಲ್ಲ' ಎಂದು ನಿವಿ ತಾಯಿ ಹೇಳಿದ್ದಾರೆ. 'ಯೂಟ್ಯೂಬ್‌ನಲ್ಲಿ ನೀವು ನೋಡುವ ಹಾಗೆ ಅಡುಗೆ ಸುಲಭವಾಗಿ ನಾನು ಮಾಡುವುದಿಲ್ಲ. ಡಬ್ಬ ಡಬ್ಬ ತರ ಮಾಡುವೆ ಅದನ್ನು ಎಡಿಟ್ ಮಾಡಿ ತೋರಿಸುತ್ತಾರೆ. ಇದೇ ಮೊದಲು ನಾನು ಇಷ್ಟು ನೀಟ್ ಆಗಿ ಅಡುಗೆ ಮಾಡುತ್ತಿರುವುದು' ಎಂದಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ನಿವಿ.
ಕಪ್‌ನಲ್ಲಿ ತಾಯಿಗೆ ಜಾಮೂನ್ ಕೊಟ್ಟು ರುಚಿ ನೋಡಲು ಹೇಳಿದ್ದಾರೆ. ಜಾಮೂನ್ ಮಾಡಿದ ಚಿನ್ನಾ ಎಂದು ನಿವಿ ತಾಯಿ ಓಡೋದಿ ಬರುತ್ತಾರೆ. ರುಚಿ ನೋಡಿ 'ತುಂಬಾ ಚೆನ್ನಾಗಿ ಮಾಡಿರುವೆ. ರುಚಿ ಚೆನ್ನಾಗಿದೆ. ನಿನ್ನಷ್ಟೇ ಚೆನ್ನಾಗಿದೆ ಜಾಮೂನ್. ನಿಜ ಹೇಳಬೇಕು ಅಂದ್ರೆ ಈ ವರ್ಷ ಮಹಿಳಾ ದಿನಾಚರಣೆ ನನಗೆ ತುಂಬಾ ಸ್ಪೆಷಲ್ ಏಕೆಂದರೆ ಮೊದಲ ಸಲ ನನ್ನ ಮಗಳು ನನಗೆ ಜಾಮೂನ್ ಮಾಡಿಕೊಟ್ಟಿರುವುದ' ಎಂದು ತಾಯಿಯಿಂದ ಕಾಂಪ್ಲಿಮೆಂಟ್ ಪಡೆದುಕೊಂಡಿದ್ದಾರೆ.