ಅಭಿಮಾನಿಗಳಿಗೆ ಮುತ್ತುಕೊಟ್ಟು ಮೋಡಿ ಮಾಡಿದ ಜ್ಯೋತಿ ರೈ!

By Santosh Naik  |  First Published Nov 23, 2024, 6:32 PM IST

ಸೀರಿಯಲ್ ನಟಿ ಜ್ಯೋತಿ ರೈ ಇನ್ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳಿಗೆ ಮುತ್ತು ಕೊಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 40ರ ಆಸುಪಾಸಿನಲ್ಲಿದ್ದರೂ, ಗ್ಲಾಮರಸ್ ಲುಕ್‌ನಲ್ಲಿ ಮಿಂಚುತ್ತಿರುವ ಜ್ಯೋತಿ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.


ಸಾಲು ಸಾಲು ಚಿತ್ರಗಳು ಹಾಗೂ ವೆಬ್‌ ಸಿರೀಸ್‌ಗಳಲ್ಲಿ ಬ್ಯುಸಿಯಾಗಿರುವ ಸೀರಿಯಲ್‌ ನಟಿ, ಹಾಟ್‌ ಬೇಬಿ ಜ್ಯೋತಿ ರೈ ಇನ್ಸ್‌ಟಾಗ್ರಾಮ್‌ನಲ್ಲಿ ಅಭಿಮಾನಿಗಳಿಗೆ ಮುತ್ತುಕೊಟ್ಟು ಮೋಡಿ ಮಾಡಿದ್ದಾರೆ. ವರ್ಷಗಟ್ಟಲೆ ಧಾರಾಾಹಿಗಳಲ್ಲಿ ಹೀರೋ ಅಮ್ಮನ,ಹೀರೋಯಿನ್‌, ಅಕ್ಕ, ಅತ್ತಿಗೆ ಪಾತ್ರಗಳನ್ನು ಮಾಡುತ್ತಿದ್ದ ಜ್ಯೋತಿ ರೈ ಸೋಶಿಯಲ್‌ ಮೀಡಿಯಾ ಲೋಕ ಫುಲ್‌ ಡಿಫರೆಂಟ್‌. ಅಲ್ಲಿ ಯಾರಿಗೂ ಆಕೆ ಸೀರೆಯುಟ್ಟೇ ಕಾಣಿಸಿಕೊಳ್ಳಬೇಕು ಅನ್ನೋ ನಿಯಮವಿಲ್ಲ. ಸೋ ಅದಕ್ಕಾಗಿ, ಸೋಶಿಯಲ್‌ ಮೀಡಿಯಾದಲ್ಲಿ ಜ್ಯೋತಿ ರೈ ಫುಲ್‌ ಬಿಂದಾಸ್‌. ತನ್ನ ಅಭಿಮಾನಿಗಳು ತನ್ನನ್ನು ಯಾವ ರೀತಿ ನೋಡಲು ಬಯಸುತ್ತಾರೋ ಅದೇ ರೀತಿಯ ಲುಕ್‌ನಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಯಾರೊಬ್ಬರೂ ಆಕೆಯೀಗ 40 ವರ್ಷದ ಆಸುಪಾಸಿನ ನಟಿ ಅನ್ನೋದನ್ನೂ ನೋಡೋದಿಲ್ಲ.

ಅಷ್ಟು ಗ್ಲಾಮರಸ್ ಆಗಿ ಸೋಶಿಯಲ್‌ ಮೀಡಿಯಾದಲ್ಲಿ ಜ್ಯೋತಿ ರೈ ಕಾಣಿಸಿಕೊಳ್ಳುತ್ತಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ತಮ್ಮ ಮುಂಬರುವ ಚಿತ್ರ ಕಿಲ್ಲರ್‌ನ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಕೈಯಲ್ಲಿ ಕೊಡಲು ಹಿಡಿದು ಆಕೆ ನೀಡಿದ್ದ ಪೋಸ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಇಂದು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಕೆಲವೊಂದಿಷ್ಟು ಫೋಟೋಗಳನ್ನು ಜ್ಯೋತಿ ರೈ ಹಂಚಿಕೊಂಡಿದ್ದಾರೆ. ಎರಡು ಫೋಟೋಗಳನ್ನು ಸರಿಸಿ ಮೂರನೇ ಪೋಟೋ ನೋಡಿದ ಬೆನ್ನಲ್ಲಿಯೇ ಆಕೆ ನಿಮಗೆ ಕಿಸ್‌ ಕೊಟ್ಟಿದ್ದಾಳೆ ಎನ್ನುವ ಅರ್ಥದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಸೀರಿಯಲ್‌ನ ಬಳಿಕ ತೆಲುಗು ಸೀರಿಯಲ್‌ ಲೋಕದಲ್ಲಿ ಜಗತಿಯಾಗಿ ಮಿಂಚಿರುವ ಜ್ಯೋತಿ ರೈ ಅಲಿಯಾಸ್‌ ಜ್ಯೋತಿ ಪೂರ್ವಜ್‌, ಗುಪ್ಪೆದಂಥ ಮನಸು ಧಾರಾವಾಹಿಯ ಮೂಲಕ ತೆಲುಗು ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಅಲ್ಲಿ ಅಭಿನಯದ ಮೂಲಕ ಗಮನಸೆಳೆದಿದ್ದ ಆಕೆ ಬಳಿಕ ಧಾರವಾಹಿಯಿಂದ ಹೊರಬಂದಿದ್ದರು. ಈ ಧಾರವಾಹಿಯಲ್ಲಿ ಅವರು ಮಾಡಿದ್ದ ತಾಯಿಯ ಪಾತ್ರ ಜನಮೆಚ್ಚುಗೆಗೆ ಕಾರಣವಾಗಿತ್ತು.

Tap to resize

Latest Videos

undefined

'ಗಂಡನೊಂದಿಗೆ ಹೀಗೆ ವರ್ಕ್ಔಟ್ ಮಾಡಿದ್ರೆ ನನ್ನಂತೆ ಫಿಟ್ ಆಗ್ತೀರಿ..‌' ವಿಡಿಯೋ ಮಾಡಿ ತೋರಿಸಿದ‌ ಜ್ಯೋತಿ ರೈ!

ಸೋಶಿಯಲ್‌ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುವ ಫೋಟೋ ಸಾಕಷ್ಟು ವೀವ್ಸ್‌, ಲೈಕ್ಸ್‌, ಕಾಮೆಂಟ್‌ಗಳಿಗೆ ಕಾರಣವಾಗುತ್ತೆ. ಆಕೆಯ ಫ್ಯಾಶನ್‌, ಹಾಟ್‌ ಲುಕ್‌ ಹಾಗೂ ಸ್ಟನ್ನಿಂಗ್‌ ನೋಟ ಪ್ರತಿ ಫೋಟೋದಲ್ಲೂ ಕಾಣಿಸಿಕೊಳ್ಳುತ್ತದೆ. ಕೆಲ ದಿನಗಳ ಹಿಂದೆ ಸೂರ್ಯ ಬೆಳೆಕಿಗೆ ಮೈಯೊಡ್ಡಿದ್ದ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಇದಕ್ಕೆ ಬಂದಿರೋ ಕಾಮೆಂಟ್‌ಗಳು ಕೂಡ ಆಕೆಯ ಸೌಂದರ್ಯವನ್ನು ವರ್ಣನೆ ಮಾಡುವ ರೀತಿಯಲ್ಲಿದ್ದವು. ನೀವು ಸೂರ್ಯನಿಗೂ ಶಾಕ್‌ ನೀಡೋವಷ್ಟು ಸುಂದರಿ ಎಂದು ಅಭಿಮಾನಿಗಳು ಫೋಟೋಗೆ ಮೆಚ್ಚುಗೆ ನೀಡಿದ್ದರು.

ಕೈಯಲ್ಲಿ ಕೊಡಲಿ ಹಿಡಿದು 'ಕಿಲ್ಲರ್' ಆದ ಜ್ಯೋತಿ ರೈ, ಬ್ಯೂಟಿ ಲುಕ್‌ಗೆ ಫ್ಯಾನ್ಸ್‌ ಬೋಲ್ಡ್‌!‌

click me!