ಪತ್ನಿ ಭಾಗ್ಯಳ ಮೇಲೆ ತಾಂಡವ್‌ಗೆ ಶುರುವಾಯ್ತಾ ಲವ್ವು? ಇಂಗು ತಿಂದ ಮಂಗನಂತಾದ ಶ್ರೇಷ್ಠಾ

Published : Mar 07, 2024, 03:09 PM IST
ಪತ್ನಿ ಭಾಗ್ಯಳ ಮೇಲೆ ತಾಂಡವ್‌ಗೆ ಶುರುವಾಯ್ತಾ ಲವ್ವು? ಇಂಗು ತಿಂದ ಮಂಗನಂತಾದ ಶ್ರೇಷ್ಠಾ

ಸಾರಾಂಶ

ತನ್ನ ಜೊತೆ ಡ್ಯಾನ್ಸ್‌ ಮಾಡಿದ ಪತ್ನಿಯನ್ನು ತಾಂಡವ್‌ ಹೊಗಳಿದ್ದಾನೆ. ಆತನಲ್ಲಿ ಏನೋ ಬದಲಾವಣೆ ಆಗಿದೆ. ಆದ್ರೆ ಶ್ರೇಷ್ಠಾ ಬಿಡಬೇಕಲ್ಲ!   

ಭಾಗ್ಯ ಮತ್ತು ತಾಂಡವ್‌ ಡ್ಯಾನ್ಸ್‌ ಕಾಂಪಿಟೇಷನ್‌ನಲ್ಲಿ ಗೆದ್ದಿದ್ದಾರೆ. ಪತಿಯ ಜೊತೆ ಅದ್ಭುತವಾಗಿ ನೃತ್ಯ ಮಾಡಿದ್ದಾಳೆ ಭಾಗ್ಯ. ಶ್ರೇಷ್ಠಾಳ ಕುತಂತ್ರ ಬುದ್ಧಿ ಪೂಜಾಗೆ ತಿಳಿದಿದೆ. ತನಗೆ ತಿಳಿದಿರೋ ಸತ್ಯವನ್ನೇ ಬಂಡವಾಳ ಮಾಡಿಕೊಂಡು ಪೂಜಾ ಶ್ರೇಷ್ಠಾಳನ್ನು ಆಡಿಸಲು ಶುರುವಿಟ್ಟುಕೊಂಡಿದ್ದಾಳೆ. ತನ್ನ ಅಕ್ಕ ಭಾಗ್ಯಳನ್ನು ಡ್ಯಾನ್ಸ್‌ಗಾಗಿ ಸುಂದರವಾಗಿ ರೆಡಿ ಮಾಡುವಂತೆ ಹೇಳಿದ್ದಳು. ಭಾಗ್ಯಳಿಗೆ ಇದೊಂದು ರೀತಿಯಲ್ಲಿ ವಿಚಿತ್ರವಾಗಿ ತೋರಿತ್ತು.  ಇದೆಲ್ಲಾ ಯಾಕೆ ಎಂದಳು. ಆದರೆ ಪೂಜಾ ಬಿಡಬೇಕಲ್ಲ, ನಿನಗೆ ಗೊತ್ತಾಗಲ್ಲ ಸುಮ್ಮನಿರು ಎನ್ನುತ್ತಲೇ ಶ್ರೇಷ್ಠಾ ಅವರೇ ಅಕ್ಕನಿಗೆ ಚೆನ್ನಾಗಿ ಮೇಕಪ್‌ ಮಾಡಿ ಎಂದು ಹೇಳುವ ಮೂಲಕ, ಮೇಕಪ್‌ ಮಾಡಿಸಿದ್ದಾಳೆ. ಎರಡು ಮಕ್ಕಳ ಅಪ್ಪನ ಹಿಂದೆ ಹೋದ ಶ್ರೇಷ್ಠಾಳಿಗೆ ಈಗ ಅಡಕತ್ತರಿಯಲ್ಲಿ ಸಿಲುಕಿದ ಅನುಭವ. ಪೂಜಾ ಭಾರಿ ಚಾಲಾಕಿ ಎನ್ನುವುದು ಆಕೆಗೆ ಗೊತ್ತು. ಭಾಗ್ಯಳನ್ನು ಚೆನ್ನಾಗಿ ಡ್ರೆಸ್‌ ಮಾಡದೇ ಹೋದರೆ ಪೂಜಾ ಏನಾದರೂ ಮಾಡಿ ತನ್ನ ಬಂಡವಾಳ ಬಯಲು ಮಾಡುವಳೋ ಎನ್ನುವ ಭಯ. ಇದೇ ಕಾರಣಕ್ಕೆ, ಭಾಗ್ಯಳನ್ನು ರೆಡಿ ಮಾಡಲು ಒಪ್ಪಿಕೊಂಡಿದ್ದಳು.  

 ಅದೇ ಇನ್ನೊಂದೆಡೆ, ಪತ್ನಿ ಭಾಗ್ಯ ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡುತ್ತಾಳೆ ಎಂದು ತಾಂಡವ್‌ಗೆ ತಿಳಿದೇ ಇರಲಿಲ್ಲ. ಎಲ್ಲಿ ಡ್ಯಾನ್ಸ್ ಕಲಿತದ್ದು ಎಂದು ಕೇಳುತ್ತಾನೆ. ತುಂಬಾ ಚೆನ್ನಾಗಿ ಮಾಡಿದಿ ಎಂದು ಹೊಗಳುತ್ತಾನೆ. ಇದನ್ನು ನೋಡುತ್ತಿದ್ದಂತೆಯೇ ಎಲ್ಲರೂ ಖುಷಿಪಟ್ಟರೆ, ಶ್ರೇಷ್ಠಾಳ ಮುಖ ಮಾತ್ರ ಇಂಗುತಿಂದ ಮಂಗನಂತಾಗುತ್ತದೆ. ಇವೆಲ್ಲವನ್ನೂ ಮಕ್ಕಳನ್ನು ಖುಷಿಪಡಿಸಲು ಪತಿ ಮಾತನಾಡುತ್ತಿದ್ದಾನೆ ಎಂದು ಭಾಗ್ಯ ಅಂದುಕೊಳ್ಳುತ್ತಾಳೆ. 

ಅಡುಗೆ ಮನೆಯಲ್ಲಿ ಬಿಗ್​ಬಾಸ್​ ನಿವೇದಿತಾ- ತನಿಷಾ: ಹಾಲನ್ನು ಎಲ್ಲಿ ಸೇರಿಸ್ಲಿ ಎಂದು ಕೇಳಿದ ಬೆಡಗಿ!

ಕೊನೆಗೆ ಮಕ್ಕಳಿಗೆ ಐಸ್‌ಕ್ರೀಂ ತರಲು ಭಾಗ್ಯ ಹೋದಾಗ, ಕುಸುಮಾ ನೀನೂ ಐಸ್‌ಕ್ರೀಮ್‌ ತರಲು ಭಾಗ್ಯಳಿಗೆ ಸಹಾಯ ಮಾಡು ಎಂದು ತಾಂಡವ್‌ನನ್ನು ಕಳಿಸುತ್ತಾಳೆ. ಮತ್ತೆ ಶ್ರೇಷ್ಠಾಳ ಮುಖ ನೋಡಲು ಆಗುವುದಿಲ್ಲ. ಅಲ್ಲಿಯೂ ಡ್ಯಾನ್ಸ್‌ ಬಗ್ಗೆ ತಾಂಡವ್‌ ಹೊಗಳಿದಾಗ ಭಾಗ್ಯಳಿಗೆ ಖುಷಿಯ ಜೊತೆ ಆಶ್ಚರ್ಯವೂ ಆಗುತ್ತದೆ. ಹೀಗೆ ಹೇಳುವಾಗ ತಾಂಡವ್‌ನಲ್ಲಿ ಏನೋ ಒಂದು ಬದಲಾವಣೆ ಕಾಣುತ್ತದೆ. ಪತ್ನಿಯ ಬಗ್ಗೆ ಗೊತ್ತಿಲ್ಲದೇ ಲವ್‌ ಶುರುವಾಗಿದ್ಯೋ ಅನ್ನಿಸುತ್ತಿದೆ. ಈ ಬದಲಾವಣೆಯನ್ನು ಹೊರಗೆ ಹೇಳಿಕೊಳ್ಳಲು ಆಗುತ್ತಿಲ್ಲ ತಾಂಡವ್‌ಗೆ. ಪತ್ನಿಯ ಎದುರು ಶರಣಾಗುವುದೆ? ಅಬ್ಬಾ ತಾಂಡವ್‌ನಂಥ ಪತಿಗೆ ಇದು ಸಾಧ್ಯವೇ ಇಲ್ಲ.

ಇದೇ ಕಾರಣಕ್ಕೆ ಪತ್ನಿಯನ್ನು ಉದ್ದೇಶಿಸಿ, ತುಂಬಾ ಖುಷಿ ಪಡಬೇಕು. ನಾನು ನಿನ್ನನ್ನು ಹೊಗಳುತ್ತಿರುವುದು ಮಕ್ಕಳಿಗಾಗಿ ಅಷ್ಟೇ. ಹೊಗಳಿಬಿಟ್ಟೆ ಎಂದು ಖುಷಿ ಪಡಬೇಡ. ಏನೇನೋ ಅಂದುಕೊಳ್ಳಬೇಡ ಎನ್ನುತ್ತಾನೆ. ಹಾಗೆ ಹೇಳುತ್ತಲೇ ಅವನ ಮನಸ್ಸಿನಲ್ಲಿ ಏನೋ ಒಂದು ಬದಲಾವಣೆ ಆಗಿದೆ ಎನ್ನಿಸುತ್ತಿದೆ. ಗಂಡ-ಹೆಂಡತಿ ಮಾತನಾಡುವುದನ್ನು ನೋಡಿದ ಶ್ರೇಷ್ಠಾ ಮಾತ್ರ ಉರಿದುಕೊಳ್ಳುತ್ತಿದ್ದಾಳೆ. ಇಬ್ಬರೂ ಒಂದಾಗಿಬಿಟ್ಟರೆ ತನ್ನ ಕಥೆಏನು ಎಂದುಕೊಳ್ಳುತ್ತಿದ್ದಾಳೆ.

ಶ್ರೀರಸ್ತು-ಶುಭಮಸ್ತು ತುಳಸಿಗೆ ಮನಮೆಚ್ಚಿದ ನಾಯಕಿ ಅವಾರ್ಡ್‌: ಸುಧಾರಾಣಿ ಕುರಿತು ಇಂಟರೆಸ್ಟಿಂಗ್ ಮಾಹಿತಿ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬ್ಲ್ಯಾಕ್ ಸೀರೆ, ಓಪನ್ ಹೇರ್… ಅನುಪಮಾ Bold Look ಗೆ ಪಡ್ಡೆಗಳು ಫಿದಾ
ಹೊಸ ವರ್ಷಕ್ಕೆ ಮತ್ತೆ ಜೊತೆಯಾದ Shreerastu Shubhamastu ತಂಡ: ವೈಬ್ಸ್​ ಹೇಗಿದೆ ನೋಡಿ