ಶ್ರೀರಸ್ತು-ಶುಭಮಸ್ತು ತುಳಸಿಗೆ ಮನಮೆಚ್ಚಿದ ನಾಯಕಿ ಅವಾರ್ಡ್‌: ಸುಧಾರಾಣಿ ಕುರಿತು ಇಂಟರೆಸ್ಟಿಂಗ್ ಮಾಹಿತಿ

Published : Mar 07, 2024, 02:43 PM ISTUpdated : Mar 07, 2024, 02:44 PM IST
ಶ್ರೀರಸ್ತು-ಶುಭಮಸ್ತು ತುಳಸಿಗೆ ಮನಮೆಚ್ಚಿದ ನಾಯಕಿ ಅವಾರ್ಡ್‌: ಸುಧಾರಾಣಿ ಕುರಿತು ಇಂಟರೆಸ್ಟಿಂಗ್ ಮಾಹಿತಿ

ಸಾರಾಂಶ

ನಟಿ ಸುಧಾರಾಣಿ ಅವರಿಗೆ ಜೀ ಕನ್ನಡ ವಾಹಿನಿ ವತಿಯಿಂದ ಮನಮೆಚ್ಚಿದ ನಾಯಕಿ ಪ್ರಶಸ್ತಿ ನೀಡಲಾಗಿದೆ. ನಟಿ ಕುರಿತು ಕೆಲವೊಂದು ವಿಷಯಗಳು ಇಲ್ಲಿವೆ..   

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋಯಿನ್ ಎಂದೇ ಖ್ಯಾತಿ ಪಡೆದಿರುವ ನಟಿ ಸುಧಾರಾಣಿ (Sudharani).  ಬಾಲ ಕಲಾವಿದೆಯಾಗಿ ಕನ್ನಡದ ಮೇರು ನಟ ಡಾ.ರಾಜ್​ಕುಮಾರ್ ಅವರೊಂದಿಗೆ ಕೆಲವು ಚಿತ್ರಗಳಲ್ಲಿ ನಟಿಸಿ ನಂತರ ನಾಯಕಿಯಾಗಿ ಹಲವಾರು ಹಿಟ್​ ಚಿತ್ರಗಳನ್ನು ನೀಡಿದ ನಟಿಯೀಕೆ. ದೇವತಾ ಮನುಷ್ಯ ಚಿತ್ರದಲ್ಲಿ ಸುಧಾರಾಣಿ ರಾಜ್​ಕುಮಾರ್ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಜ್ ಅಭಿನಯದ ‘ಭಾಗ್ಯವಂತ’ ಹಾಗೂ ‘ಜೀವನ ಚೈತ್ರ’ ಚಿತ್ರದಲ್ಲೂ ಸುಧಾರಾಣಿ ಅಭಿನಯಕ್ಕೆ ಮನಸೋಲದವರೇ ಇಲ್ಲ. ಈಗ ನಟಿಗೆ 50 ವರ್ಷ. ಆದರೂ ಫಿಟ್​ ಆ್ಯಂಡ್​ ಫೈನ್​ ಆಗಿರುವ ಸುಧಾರಾಣಿ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಶ್ರೀರಸ್ತು, ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಮೂರು ವರ್ಷವಿದ್ದಾಗಲೇ ಬಾಲನಟಿಯಾಗಿ ನಟನೆ ಆರಂಭಿಸಿರುವ ಸುಧಾರಾಣಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಮೇರು ಕಲಾವಿದರ ಜೊತೆ ನಟಿಸಿದ್ದಾರೆ ಈಕೆ.  ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಪಡೆದಿದ್ದಾರೆ.   

ಸದ್ಯ ಶ್ರೀರಸ್ತು ಶುಭಮಸ್ತು ಸೀರಿಯಲ್‌ ಮೂಲಕ ಎಲ್ಲರನ್ನೂ ರಂಜಿಸುತ್ತಿರುವ, ತುಳಸಿ ಪಾತ್ರದ ಮೂಲಕ ಸೀರಿಯಲ್‌ಗೆ ಜೀವ ತುಂಬಿರುವ ಸುಧಾರಾಣಿ ಅವರಿಗೆ ಜೀ ಕನ್ನಡದ ಮನಮೆಚ್ಚಿದ ನಾಯಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರ ಪ್ರೊಮೋ ಅನ್ನು ಜೀ ವಾಹಿನಿ ಬಿಡುಗಡೆ ಮಾಡಿದೆ. ಜೀ಼ ಕನ್ನಡ 'ಸ್ತ್ರೀ Awards-2024' ಕಾರ್ಯಕ್ರಮದಲ್ಲಿ ನಟಿಗೆ ವಿಶೇಷ ಗೌರವ ನೀಡಲಾಗಿದೆ. ನಾಳೆ ಮಹಿಳಾ ದಿನಾಚರಣೆ ಇದ್ದು, ಅದರ ನಿಮಿತ್ತ ಈ ಅವಾರ್ಡ್‌ ನೀಡಲಾಗಿದೆ. 

ಅಡುಗೆ ಮನೆಯಲ್ಲಿ ಬಿಗ್​ಬಾಸ್​ ನಿವೇದಿತಾ- ತನಿಷಾ: ಹಾಲನ್ನು ಎಲ್ಲಿ ಸೇರಿಸ್ಲಿ ಎಂದು ಕೇಳಿದ ಬೆಡಗಿ!

ಕೆಲ ದಿನಗಳ ಹಿಂದೆ ನಡೆದ ಸಂದರ್ಶನದಲ್ಲಿ ಜೀವನದ ಕೆಲವೊಂದು ಘಟನೆಗಳ ಕುರಿತು  ನಟಿ ಹೇಳಿಕೊಂಡಿದ್ದರು. 1999ರಲ್ಲಿ ಮದುವೆಯಾಗುವ ಮೂಲಕ ಬಣ್ಣದ ಬದುಕಿನಿಂದ ಸುಧಾರಾಣಿಯವರು ಮೊದಲ ಬಾರಿಗೆ ದೂರವಾದರು. ಆದರೆ, ಮದುವೆ ಅವರ ಪಾಲಿಗೆ ವರವಾಗುವ ಬದಲು ಶಾಫವಾಯಿತು. ಅಮೆರಿಕದಲ್ಲಿ ಅನಸ್ತೇಷಿಯಾ ಸ್ಪೆಷಲಿಸ್ಟ್ ಆಗಿದ್ದ ಗಂಡ ಡಾ ಸಂಜಯ್, ಯಾವುದೋ ರಹಸ್ಯ ಕೆಮಿಕಲ್ಸ್ ನೀಡಿ ಸುಧಾರಾಣಿಯವರನ್ನು ಮುಗಿಸಲು ಕೂಡ ಪ್ಲಾನ್ ಮಾಡಿದ್ದರಂತೆ. ಜತೆಗೆ, ಮದುವೆಯಾದ ಸ್ವಲ್ಪ ದಿನಗಳ ಬಳಿಕ ಸುಧಾರಾಣಿಯವರಿಗೆ ಇನ್ನಿಲ್ಲದ ಟಾರ್ಚರ್ ಕೊಡಲು ಶುರು ಮಾಡಿದ್ದರಂತೆ. ಒಟ್ಟಿನಲ್ಲಿ, ಡಾ ಸಂಜಯ್ ಮೂಲಕ ಅಮೆರಿಕದಲ್ಲಿ ಸುಧಾರಾಣಿ ವೈವಾಹಿಕ ಬದುಕು ನರಕವಾಯಿತು. ಗಂಡನಿಂದ ತಪ್ಪಿಸಿಕೊಂಡು ಬಂದು ಗೆಳತಿ ಮನೆಯಲ್ಲಿ ರಹಸ್ಯವಾಗಿ ಆಶ್ರಯ ಪಡೆದು, ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಅಂಬರೀಶ್‌ ಸಹಾಯದಿಂದ ಅಮೆರಿಕದಿಂದ ತಪ್ಪಿಸಿಕೊಂಡು ಬಂದು ಸುಧಾರಾಣಿಯವರು ಬೆಂಗಳೂರಿನ ತವರುಮನೆ ಸೇರಿಕೊಂಡರು ಎನ್ನಲಾಗಿದೆ. ಅಂದು ಸುಧಾರಾಣಿಯವರು ಖಿನ್ನತೆಗೆ ಕೂಡ ಜಾರಿದ್ದರಂತೆ. 

ನಟನೆಗಾಗಿ ಮೊದಲ ಸಲ ಬೈಸಿಕೊಂಡದ್ದು ಯಾವ ನಿರ್ದೇಶಕರಿಂದಲೂ ಅಲ್ಲ, ಬದಲಿಗೆ ಅಮ್ಮನಿಂದ ಎಂದರು. ನಾನು ನಟನೆಗೆ ಬಂದಾಗ ತುಂಬಾ ಚಿಕ್ಕವಳಿದ್ದರಿಂದ ಯಾವ ನಿರ್ದೇಶಕರೂ ಬೈತಾ ಇರಲಿಲ್ಲ. ಆದ್ರೆ ಅಮ್ಮ ತುಂಬಾ ಸಲ ಬೈದಿದ್ದಾರೆ ಎಂದು ನೆನಪಿಸಿಕೊಂಡಿದ್ದರು. ಮೊದಲ ಚಿತ್ರ 100 ದಿನ ಓಡಿದ್ದರ ಕುರಿತು ಹೇಳಿದ ನಟಿ, ಅದು ಡಾ.ರಾಜ್​ಕುಮಾರ್​ (Dr.Rajkumar) ಜೊತೆ ಮಗಳಾಗಿ ನಟಿಸಿದ ಭಾಗ್ಯವಂತ ಚಿತ್ರ ಎಂದಿದ್ದರು. 100 ದಿನ ಓಡಿದಾಗ ತಮಗೆ ಬೆಳ್ಳಿಲೋಟ ಕೊಟ್ಟಿದ್ದನ್ನು ನೆನಪಿಸಿಕೊಂಡಿದ್ದ ಅವರು,  ಅದೇ ರೀತಿ ಮೊದಲ ವಿದೇಶ ಪ್ರಯಾಣ, ಸಿಂಗಪುರ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.  

ಚಿಕ್ಕ ವಯಸ್ಸಲ್ಲೇ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ್ರಾ ಆರಾಧ್ಯ ಬಚ್ಚನ್​? ಐಶ್​ ಪುತ್ರಿಯ ಕುರಿತು ಏನಿದು ಸುದ್ದಿ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss Kannada: ಚಾಮುಂಡಿ ದೇವಿ ಮುಂದೆ ಮಾತು ಕೊಟ್ಟು ತಪ್ಪಿದ ಗಿಲ್ಲಿ ನಟ; ಇಂಥ ಮಹಾಪ್ರಮಾದ ಯಾಕೆ?
BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?