ನಾನು ಬಡವ ಅಂತ ಹೇಳೇ ಇಲ್ಲ, ಕಾರು ಬರ್ತಿದ್ದಂಗೆ ಉಲ್ಟಾ ಹೊಡೆದ್ರಾ?; ತುಕಾಲಿ ಸಂತು ಸ್ಪಷ್ಟನೆ

By Vaishnavi Chandrashekar  |  First Published Mar 7, 2024, 12:14 PM IST

ಬಡವ ಅಂತ ಹೇಳ್ಕೊಂಡೇ ಹಣ ಸಂಪಾದನೆ ಮಾಡಿಬಿಟ್ಟ ತುಕಾಲಿ. ಕಾರು ಖರೀದಿಸಿದ ಮೇಲೆ ಬರ್ತಿರುವ ನೆಗೆಟಿವ್ ಕಾಮೆಂಟ್‌ಗೆ ಉತ್ತರ ಕೊಟ್ಟ ಹಾಸ್ಯ ನಟ.....


ಕಾಮಿಡಿ ಕಿಲಾಡಿಗಳು ಹಾಸ್ಯ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದು ನಂತರ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿದ ತುಕಾಲಿ ಸಂತೋಷ್‌ ಕೆಲವು ದಿನಗಳ ಹಿಂದೆ ಹೊಸ ಕಾರು ಖರೀಸಿದ್ದಾರೆ. ಬಿಳಿ ಬಣ್ಣದ Kia Seltos ಮುಂದೆ ಪತ್ನಿ ಜೊತೆ ಪೋಸ್ ಕೊಟ್ಟಿದ್ದಾರೆ. ಈ ನಡುವೆ ತುಕಾಲಿ ವಿರುದ್ಧ ಸಾಕಷ್ಟು ನೆಗೆಟಿವ್ ಕಾಮೆಂಟ್ ಹರಿದಾಡುತ್ತಿದೆ. ಚಪ್ಪಲಿನೂ ಇರಲಿಲ್ಲ ಬಟ್ಟೆ ಇರಲಿಲ್ಲ ಬಡವ ಎಂದು ಹೇಳಿಕೊಂಡ ತುಕಾಲಿ ಇದ್ದಕ್ಕಿದ್ದಂತೆ ಕಾರು ಖರೀದಿಸಿದ್ದು ಹೇಗೆ? ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.

'ತುಂಬಾ ದಿನಗಳಿಂದ ಕಾರು ಖರೀದಿ ಮಾಡಬೇಕು ಅಂದುಕೊಳ್ಳುತ್ತಿದ್ದೆ ಆಗ ಕನಸು ನನಸು ಆಗಿದೆ. ದೊಡ್ಡ ಕಾರುಗಳನ್ನು ನೋಡಿದರೆ ನಮಗೂ ಆಸೆ ಆಗುತ್ತಿತ್ತು ಆದರೆ  EMI ಅನ್ನೋ ಭಯ ಜಾಸ್ತಿ ಇದೆ. ಬಿಗ್ ಬಾಸ್‌ ಮನೆಯಿಂದ ಬಂದ ಹಣದಲ್ಲಿ ಕಾರಿನ ಡೈನ್ ಪೇಮೆಂಟ್ ಮಾಡಲು ಸಾಕಾಗುಷ್ಟು ಹಣ ಬಂದಿದೆ...ಅದು ಡೈನ್‌ ಪೇಮೆಂಟ್ ಮಾಡಿರುವೆ ಅಷ್ಟೆ. ಸಂಪೂರ್ಣ ಹಣವನ್ನು ಒಂದಕ್ಕೆ ಹಾಕಲು ಆಗಲ್ಲ. ಗಿಚ್ಚಿ ಗಿಲಿಗಿಲಿ ಸೀಸನ್ 3 ಮಾಡುತ್ತಿರುವೆ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವೆ. ಜೀವನದಲ್ಲಿ ಕಮಿಟ್‌ಮೆಂಟ್ ಸಾಕಷ್ಟಿದೆ. EMI ಆದ್ರೂ ಪರ್ವಾಗಿಲ್ಲ ಬಿಗ್ ಬಾಸ್‌ನಿಂದ ಹಣದಲ್ಲಿ ಕಾರು ಖರೀದಿ ಮಾಡೋಣ ಅಂತ ಮನಸ್ಸು ಮಾಡಿದೆ. ಉತ್ತರ ಕನ್ನಡ ಕಡೆ ಜಾಸ್ತಿ ಪ್ರಯಾಣ ಮಾಡುವುದು ಹೀಗಾಗಿ ದೊಡ್ಡ ಕಾರಿದ್ದರೆ ಬೇಗ ಪ್ರಯಾಣ ಮಾಡಬಹುದು' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ತುಕಾಲಿ ಸಂತೋಷ್ ಮಾತನಾಡಿದ್ದಾರೆ.

Tap to resize

Latest Videos

undefined

ಜೀನೀ ಗೆಟಪ್​ಗೆ ಬಿಗ್​ಬಾಸ್​ ತುಕಾಲಿ ಸಂತೋಷ್​ ರೆಡಿಯಾಗಿದ್ದು ಹೀಗೆ ನೋಡಿ... ವಿಡಿಯೋ ವೈರಲ್

'ನಾನು ಎಲ್ಲಿ ಹೋದ್ರೂ ಬಂಗಾರ ಯಾರನ್ನು ಕೇಳಿಲ್ಲ. ನನಗೆ ಬಂದಿರುವ ಡಾಲರ್‌ ಬಿಗ್ ಸರ್‌ಪ್ರೈಸ್‌ ಆಗಿದೆ. ಯಾರಾದರೂ ಬಂದು ಚೈನ್ ಹಾಕಿದರೆ ಬೇಡ ಅಂತ ಹೇಳಲು ಆಗಲ್ಲ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ಮತ್ತೊಬ್ಬರಿಗೆ ನಾನು ಗೋಲ್ಡ್‌ ಚೈನ್ ಹಾಕುವ ಶಕ್ತಿ ದೇವರ ಕೊಡಲಿ. ಪ್ರತಿ ಸಲ ನಾನು XUV ಕಾರುಗಳನ್ನು ನೋಡಿದಾಗ ನಾನು ಕೂಡ ದೊಡ್ಡ ಕಾರುಗಳನ್ನು ಖರೀದಿ ಮಾಡುವ ಆಸೆ ಹುಟ್ಟುತ್ತಿತ್ತು. ಒಮ್ಮೆ ತಾಯಿ ಜೊತೆ ಧರ್ಮಸ್ಥಳಕ್ಕೆ ಹೋದಾಗ ಸಣ್ಣ ಕಾರು ಖರೀದಿ ಮಾಡುವ ಶಕ್ತಿ ಕೊಡಪ್ಪ ಎಂದು ಬೇಡಿಕೊಳ್ಳುತ್ತಿದ್ದೆ. ಆಗ ಬೇಡಿಕೊಂಡ ವರಕ್ಕೆ ಈಗ ಫಲ ಸಿಕ್ಕಿದೆ. ಈ ಹಿಂದೆ ಸಣ್ಣ ಕಾರು ತೆಗೆದುಕೊಂಡಿದ್ದೆ...ಈಗ ದೊಡ್ಡ ಕಾರು ತೆಗೆದುಕೊಂಡಿರುವೆ. ಒಂದು ಚೀಲದಲ್ಲಿ ನಿಂಬೆ ಹಣ್ಣು ಹಾಕಿಕೊಂಡು ನಮ್ಮ ತಾಯಿ ಮತ್ತು ನಾನು ಓಡಾಡುತ್ತಿದ್ದ ರಸ್ತೆಯಲ್ಲಿ ನಾನು ಈಗ ಕಾರಿನಲ್ಲಿ ಓಡಾಡುತ್ತಿರುವೆ ಈಗ ಅದೇ ರಸ್ತೆಯಲ್ಲಿ ಓಡಾಡುತ್ತಿರುವೆ ಆದರೆ ತಾಯಿ ಇಲ್ಲ' ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ.

ಬಟ್ಟೆ ಬರ್ತಿಲ್ಲ ಅಂತ ನೋವಿತ್ತು; ವರ್ತೂರ್ ಚಪ್ಪಲಿ, ವಿನಯ್ ಬಟ್ಟೆ ಸಹಾಯ ಮೆಚ್ಚಿದ ತುಕಾಲಿ ಸಂತೋಷ್!

'ನೆಗೆಟಿವ್ ಕಾಮೆಂಟ್ ಮಾಡುವವರಿಗೆ ನಾನು ಎಂದೂ ಉತ್ತರ ಕೊಡುವುದಿಲ್ಲ ನಮ್ಮ ಕೆಲಸಗಳು ಎಲ್ಲದಕ್ಕೂ ಉತ್ತರ ಕೊಡಬೇಕು. ಬಡವ ಬಡವ ಅಂದುಕೊಂಡು ಕಾರು ಖರೀದಿ ಮಾಡಿಬಿಟ್ಟ, ಚಪ್ಪಲಿಗೂ ಗತಿ ಇಲ್ಲ ಅಂತಾನೆ ಕಾರು ಖರೀದಿ ಮಾಡಿದ್ದಾನೆ ಎಂದು ನೆಗೆಟಿವ್ ಕಾಮೆಂಟ್ ಬರ್ತಿದೆ. ನಾನು ಬಡವ ಅಂತ ಎಲ್ಲೂ ಹೇಳಿಕೊಂಡಿಲ್ಲ ನಾನು ಶ್ರಮ ಜೀವಿ...ಇರುವುದರಲ್ಲಿ ಜೀವನ ಬ್ಯಾಲೆನ್ಸ್ ಮಾಡಿಕೊಂಡು ಕೆಲಸ ಮಾಡುತ್ತಿರುವೆ' ಎಂದಿದ್ದಾರೆ ತುಕಾಲಿ. 

click me!