ದೀಪಾವಳಿ ಧಮಕಾ! ಸೀರೆ ಕಳಚಿ ಮಿನಿ ಡ್ರೆಸ್​ನಲ್ಲಿ ಭಾಗ್ಯ... ತಾಂಡವ್​ ಮಾಸ್ಟರ್​ಪ್ಲ್ಯಾನ್ ವರ್ಕ್​ ಆಗತ್ತಾ?

By Suchethana D  |  First Published Nov 1, 2024, 12:38 PM IST

ದೀಪಾವಳಿ ಹಬ್ಬಕ್ಕೆ ಭಾಗ್ಯಳಿಗೆ ಸೀರೆಯ ಬದಲು ಮಿನಿ ಡ್ರೆಸ್​ ತಂದುಕೊಟ್ಟಿದ್ದಾನೆ ಭಾಗ್ಯ. ಅದನ್ನು ಭಾಗ್ಯ ಧರಿಸ್ತಾಳಾ? ಅವಳು ಹೇಗೆ ಕಾಣಿಸ್ತಾಳೆ?
 


 ಕುಸುಮಾ ಒಂದು ತಿಂಗಳಿನಲ್ಲಿ ಭಾಗ್ಯಳನ್ನು ಬದಲಾಯಿಸುವ ಪಣ ತೊಟ್ಟಿದ್ದಾಳೆ.  ಭಾಗ್ಯ ನಿನಗೆ ಹೇಗೆ ಬೇಕೋ ಹಾಗೆ ಇರ್ತಾಳೆ. ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ ಹೇಳಿದ್ದಾಳೆ. ಆದರೆ ಏನೇ ಮಾಡಿದರೂ ತಾಂಡವ್​ ಮಾತ್ರ ಬದಲಾಗಿರಲಿಲ್ಲ. ಸೀರೆಯಲ್ಲಿ ಭಾಗ್ಯಳನ್ನು  ಚೆನ್ನಾಗಿ ರೆಡಿ ಮಾಡಿದ್ದಳು ಕುಸುಮಾ. ಅರೆ ಕ್ಷಣ ಭಾಗ್ಯಳ ಸೌಂದರ್ಯ ನೋಡಿ ತಾಂಡವ್​ ಖುಷಿ ಪಟ್ಟರೂ ಕೊನೆಗೆ ಇನ್ನಿಲ್ಲದ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗೂಬೆ, ಕತ್ತೆ ಎಂದಿದ್ದ. ಗೂಬೆಗೆ ಸೌಂದರ್ಯ ಮಾಡಿದರೆ ನವಿಲು ಆಗಲ್ಲ. ಮಾಡುವ ನಾಲ್ಕು ದೋಸೆ, ಚಪಾತಿಗೆ ಏಪ್ರಾನ್​ ಸಾಕು, ಇದೆಲ್ಲಾ ಯಾಕೆ ಎಂದು ನಿಂದಿಸಿದ್ದ.  ಆದರೂ ಈಗ ತಾಂಡವ್​ ಭಾಗ್ಯಳನ್ನು ಒಪ್ಪಿಕೊಳ್ಳುವಂತೆ ಮಾಡುವ ಪಣ ಬಿಡಲಿಲ್ಲ ಕುಸುಮಾ. 

ಎಸ್​ಎಸ್​ಎಲ್​ಸಿ ಬರೆದಳು, ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಳು, ಕಾರು ಕಲಿತಳು, ಡಾನ್ಸ್​ ಮಾಡಿದಳು, ಚೆನ್ನಾಗಿ ಡ್ರೆಸ್​ ಮಾಡಿಕೊಂಡಲು... ಹೂಂ ಹೂಂ... ಯಾವುದೂ ತಾಂಡವ್​ ಮನಸ್ಸನ್ನು ಬದಲಾಯಿಸಲೇ ಇಲ್ಲ. ಕೊನೆಗೆ ಭಾಗ್ಯಳನ್ನು ಇನ್​ಸಲ್ಟ್​ ಮಾಡಲು ಶ್ರೇಷ್ಠಾ ಡಾನ್ಸ್​ ಟೀಚರ್​ ಮೊರೆ ಹೋದಳು. ಆರಂಭದಲ್ಲಿ ಭಾಗ್ಯಳನ್ನು ಸಾಕಷ್ಟು ಕೆಟ್ಟ ಪದಗಳಿಂದ ನಿಂದಿಸಿದಳು ಟೀಚರ್​. ಕೊನೆಗೆ ಅತ್ತೆ ಕುಸುಮಾ ಬಿಡಬೇಕಲ್ಲ. ಆ ಟೀಚರ್​ ಅನ್ನು ಕರೆಸಿ, ಭಾಗ್ಯಳಿಂದ ಭರತನಾಟ್ಯ ಮಾಡಿಸಿ, ಟೀಚರ್​ ಕ್ಷಮೆ ಕೇಳುವ ಹಾಗೆ ಮಾಡಿದಳು. ಇದರಿಂದ ತಾಂಡವ್​ ಮತ್ತು ಶ್ರೇಷ್ಠಾಗೆ ಶಾಕ್​ ಆಯಿತು. ಆದರೆ ಇದ್ದಕ್ಕಿಂತೆಯೇ ತಾಂಡವ್​ ಬದಲಾಗಿ ಬಿಟ್ಟಿದ್ದಾನೆ! ಎಲ್ಲರ ಮೇಲೂ ಪ್ರೀತಿಯ ಧಾರೆ ಹರಿಸುತ್ತಿದ್ದಾರೆ. ಭಾಗ್ಯ ಮತ್ತು ತಾಂಡವ್​ ಅಪ್ಪ, ಪೂಜಾ ಎಲ್ಲರಿಗೂ ಈ ಬದಲಾವಣೆ ನುಂಗಲಾಗದ ತುತ್ತಾಗಿದೆ. ಆದರೂ ಮಗನನ್ನು ನಂಬಿದ್ದಾಳೆ ಕುಸುಮಾ.

Tap to resize

Latest Videos

undefined

ದೀಪಾವಳಿ ಹೊಸ ಪಟಾಕಿ! ಕೋಳಿಗೆ ಬೆಂಕಿ ಹಚ್ಚಿದ್ರೆ ಮೊಟ್ಟೆ ಇಡತ್ತೆ: ವೈರಲ್​ ಆಗಿದೆ ನೋಡಿ ಈ ವಿಡಿಯೋ

ತಾಂಡವ್​ ಎನೋ ಮಾಸ್ಟರ್​ಪ್ಲ್ಯಾನ್​ ಮಾಡಿಕೊಂಡಿದ್ದಾನೆ. ಅದಕ್ಕಾಗಿಯೇ ಎಲ್ಲ ಬದಲಾವಣೆ ಮಾಡಿಕೊಂಡಿದ್ದು, ಒಳ್ಳೆಯವನ ರೀತಿ ನಟಿಸುತ್ತಿದ್ದಾನೆ. ದೀಪಾವಳಿಗೆ ಎಲ್ಲರಿಗೂ ಹೊಸ ಬಟ್ಟೆ ತಂದಿದ್ದಾನೆ. ಕೊನೆಗೆ ಭಾಗ್ಯಳಿಗೆ ತಂದಿರೋ ಬಟ್ಟೆ ತೋರಿಸು ಎಂದಾಗ, ಎಲ್ಲರೂ ಸೀರೆ ತಂದಿರಬಹುದು ಎಂದುಕೊಂಡರೆ ತಾಂಡವ್​ ಮಿನಿ ಡ್ರೆಸ್ ತಂದಿದ್ದಾನೆ. ಎಲ್ಲರೂ ಷಾಕ್​ ಆಗಿದ್ದಾರೆ. ಕೊನೆಗೆ ಭಾಗ್ಯಳಿಗೂ ಡ್ರೆಸ್​ ನೋಡಿ ಷಾಕ್​ ಆಗಿದೆ. ಇಲ್ಲಿಯವರೆಗೆ ಮನೆಯಲ್ಲಿಯೂ ಸೀರೆಯಲ್ಲಿಯೇ ಕಾಣಿಸಿಕೊಳ್ತಿರೋ ಭಾಗ್ಯಳಿಗೆ ಇದು ನುಂಗಲಾಗದ ತುತ್ತಾಗಿದೆ. ಆದರೆ ಗಂಡ ಪ್ರೀತಿಯಿಂದ ತಂದಿರುವ ಬಟ್ಟೆ ಹಾಕಿಕೊಂಡು ಬಾ ಎಂದು ಅತ್ತೆ ಒತ್ತಾಯ ಮಾಡಿದ್ದಾಳೆ. 

ನೀನು ಈ ಡ್ರೆಸ್​ ಹಾಕಿಕೊಂಡು ಬಂದರೆ, ಒಂದು ತಿಂಗಳು ಮೊದ್ಲೇ ತಾಂಡವ್​ ನಿನ್ನನ್ನು ಒಪ್ಪಿಕೊಂಡು ಬಿಡ್ತಾನೆ ಎಂದು ಹೇಳಿದ್ದಾಳೆ. ಬಾಯಿ ತಪ್ಪಿ ಈ ಮಾತು ಆಡಿಬಿಟ್ಟಿದ್ದಾಳೆ. ಏಕೆಂದರೆ ಭಾಗ್ಯಳನ್ನು ತಾಂಡವ್​ನಂತೆ ಬದಲಾಯಿಸಲು ಒಂದು ತಿಂಗಳು ಟೈಮ್​  ತೆಗೆದುಕೊಂಡಿದ್ದಾಳೆ ಅವಳು. ಆದರೆ ಭಾಗ್ಯಳಿಗೆ ವಿಷಯ ಗೊತ್ತಿಲ್ಲ. ಬಾಯಿ ತಪ್ಪಿನಿಂದ ಈ ಮಾತು ಹೊರ ಬಿದ್ದಿದೆ. ಕೂಡಲೇ ಭಾಗ್ಯ ಇದೇನಿದು ಒಂದು ತಿಂಗಳು ಎಂದು ಪ್ರಶ್ನಿಸಿದ್ದಾಳೆ. ಕುಸುಮಾಳಿಗೆ ತಪ್ಪಿನ ಅರಿವಾಗಿದೆ. ಇದರ ಪ್ರೊಮೋ ಬಿಡುಗಡೆಯಾಗಿದೆ. ಕುಸುಮಾ ಹೇಗೋ ಸಮಜಾಯಿಷಿ ಕೊಡುತ್ತಾಳೆ ಎನ್ನುವುದು ತಿಳಿದಿರುವ ವಿಷಯ. ಆದರೆ ಈ ಮಿನಿ ಡ್ರೆಸ್​ನಲ್ಲಿ ಅಪ್ಪಟ ಗೃಹಿಣಿ ಭಾಗ್ಯ ಹೇಗೆ ಕಾಣಿಸಬಹುದು ಎನ್ನುವುದು ವೀಕ್ಷಕರಿಗೆ ಇರುವ ಕುತೂಹಲ.  ಅಷ್ಟಕ್ಕೂ, ಈ ಡ್ರೆಸ್​ ಭಾಗ್ಯ ಹಾಕಿಕೊಳ್ಳುವುದಿಲ್ಲ, ಅವಳನ್ನು ಇನ್​ಸಲ್ಟ್​ ಮಾಡಬೇಕು ಎಂದೇ ತಾಂಡವ್​ ಈ ಡ್ರೆಸ್​ ತಂದಿದ್ದಾನೆ ಎನ್ನುವುದು ತಿಳಿದಿರುವ ವಿಷಯವೇ. ಮುಂದೇನು? 

ರಿಯಾಲಿಟಿ ಷೋನೋ ಅಥ್ವಾ ಸೆ*.. ಷೋ ನೋ? ಅವಾರ್ಡ್​ ಫಂಕ್ಷನ್​ನಲ್ಲಿ ಅಶ್ಲೀಲ ಸಂಭಾಷಣೆ- ಹಿಗ್ಗಾಮುಗ್ಗಾ ತರಾಟೆಗೆ

click me!