3500 ರೂ ಕಟ್ಟಲಾಗದೇ ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಕಮೀಡಿಯನ್ ಮುನಾವರ್ ತಾಯಿ!

By Suvarna News  |  First Published Apr 18, 2022, 4:20 PM IST

ತಾಯಿ ಎದುರಿಸುತ್ತಿದ್ದ ಕಷ್ಟ ದಿನಗಳ ಬಗ್ಗೆ ನೆನೆದು ಭಾವುಕನಾದ ಸ್ಟ್ಯಾಂಡಪ್ ಕಮೀಡಿಯನ್ ಮುನಾವರ್. ಏನಿದು ಕಥೆ? 


ಸ್ಟ್ಯಾಂಡಪ್ ಕಮೀಡಿಯನ್ ಮುನಾವರ್ ಫಾರುಕಿ ಲಾಕಪ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದು ಈ ಹಿಂದೆ ತಾಯಿ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು. ಬೇಸರದಲ್ಲಿದ್ದ ಮುನಾವರ್‌ಗೆ ಬೆನ್ನು ತಟ್ಟಿ ಧೈರ್ಯ ಕೊಟ್ಟಿದ್ದು ಜೈಲರ್ ಕರಣ್ ಕುಂದ್ರಾ. ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಜೀವನದ ಸೀಕ್ರೆಟ್‌ ಮತ್ತು ಕಹಿ ಘಟನೆಗಳನ್ನು ನಾಮಿನೇಷನ್‌ನಿಂದ ಪಾರಾಗಲು ಹಂಚಿಕೊಳ್ಳಬೇಕು. ನಿರೂಪಕಿ ಕಂಗನಾ ಅನುಮತಿ ಪಡೆದುಕೊಂಡು ಮುನಾವರ್ ತಾಯಿಯನ್ನು ಕಳೆದುಕೊಂದ್ದು ಹೇಗೆಂದು ಬಿಚ್ಚಿಟ್ಟಿದ್ದಾರೆ.

'2007 ಜನವರಿಯಲ್ಲಿ ನಡೆದ ಘಟನೆ, ನಮ್ಮ ಊರಿನಲ್ಲಿ ತುಂಬಾನೇ ಚಳಿ ಇತ್ತು. ಬೆಳಗ್ಗೆ 7 ಗಂಟೆಗೆ ಅಜ್ಜಿ ನನ್ನನ್ನು ಎಬ್ಬಿಸಿ ತಾಯಿಗೆ ಏನೋ ಆಗಿದೆ ಅವಳನ್ನು ಆಸ್ಪತ್ರೆಗೆ ಸೀರಿಸಲಾಗಿದೆ ಎಂದು ಹೇಳಿದಳು. ನಮ್ಮ ಮನೆಯಿಂದ 10 ನಿಮಿಷ ದೂರವಿತ್ತು ಅಷ್ಟೆ. ನಾನು ಆಸ್ಪತ್ರೆ ಎಂಟರ್ ಆಗುವಾಗ ತಾಯಿಯನ್ನು ಎಮರ್ಜೆನ್ಸಿ ರೂಮ್‌ನಿಂದ ಕರೆದುಕೊಂಡು ಬಂದರು. ಹೊಟ್ಟೆ ಹಿಡಿದುಕೊಂಡು ನೋವು ಎಂದು ಹೇಳುತ್ತಿದ್ದಳು. ನನ್ನ ತಾತ, ಅಪ್ಪ, ಅಜ್ಜಿ ಮತ್ತು ತಂಗಿ ಅಲ್ಲಿದ್ದರು. ಆವರಿಗೂ ಏನಾಗಿದೆ ಎಂದು ತಿಳಿಯಲಿಲ್ಲ ತಕ್ಷಣ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆಕೆಗೆ ಏನೋ ಕೊಟ್ಟರು, ನನಗೆ ತುಂಬಾನೇ ಭಯಾವಾಗಿತ್ತು' ಎಂದು ಮುನಾವರ್ ಮಾತನಾಡಿದ್ದಾರೆ.

ಜನರ ಗಂಟಲು ಕತ್ತರಿಸುವ ಹುಡುಗಿ ನಾನಲ್ಲ: ಎಲಿಮಿನೇಟ್ ಆದ ಮಂದನಾ ಕರೀಮಿ!

Tap to resize

Latest Videos

'ಆಸ್ಪತ್ರೆಯಲ್ಲಿ ತಾಯಿ ಸಹೋದರಿ ಕೆಲಸ ಮಾಡುತ್ತಿದ್ದರು ಆವರನ್ನು ನಾನು ಪ್ರಶ್ನೆ ಮಾಡಿದೆ ಆಗ ಅಜ್ಜಿ ಪಕ್ಕ ಕರೆದುಕೊಂಡು ಹೋಗಿ ನಿನ್ನ ಅಮ್ಮ ಆಸಿಡ್ ಕುಡಿದಿದ್ದಾಳೆ ಎಂದು ಹೇಳಿದರು. ಯಾಕೆ ಆಸಿಡ್ ಕುಡಿದಿದ್ದಾಳೆ ಎಂದು ಮನೆಯವರು ಹೇಳಲಿಲ್ಲ ಆದರೆ ನಾನು ತಕ್ಷಣ ತಾಯಿ ಸಹೋದರಿ ಬಳಿ ಹೋಗಿ ಸತ್ಯ ಹೇಳಿದೆ. ಎಲ್ಲಾ ರೀತಿ ಚಿಕಿತ್ಸೆ ಶುರು ಮಾಡಿದ್ದರು. ತುಂಬಾ ಮಂದಿ ಆಸ್ಪತ್ರೆ ಮುಂದೆ ಸೇರಿದ್ದರು ಯಾರು ಏನೂ ಹೇಳಲಿಲ್ಲ ಆದರೆ ನಾನು ಅಮ್ಮ ಕೈ ಹಿಡಿದುಕೊಂಡು ನಿಂತಿದ್ದೆ. ಡಾಕ್ಟರ್ ನನ್ನ ಕೈ ಬಿಡಿಸಿ ಪಕ್ಕಕ್ಕೆ ಕಳುಹಿಸಿದ್ದರು ಆಗ ನನ್ನ ತಾಯಿ ಇನ್ನಿಲ್ಲ ಎಂದು ಗೊತ್ತಾಯಿತು' ಎಂದು ಮುನಾವರ್ ಹೇಳಿದ್ದಾರೆ.

'ಪ್ರತಿ ದಿನ ನಾನು ನನ್ನ ತಾಯಿ ಜೊತೆ ಮಲಗುತ್ತಿದ್ದೆ ಅವತ್ತು ಕೂಡ ನಾನು ಹಾಗೆ ಮಾಡಿದ್ದರೆ ಆಕೆ ಉಳಿಯುತ್ತಿದ್ದಳು. ಅವತ್ತು ಹಬ್ಬವಿದ್ದ ಕಾರಣ ಅಜ್ಜಿ ಜೊತೆ ಮಲಗಿಕೊಂಡೆ. post mortem ರಿಪೋರ್ಟ್‌ ಪ್ರಕಾರ ನನ್ನ ತಾಯಿ 7-8 ದಿನಗಳಿಂದ ಏನೂ ತಿಂದಿರಲಿಲ್ಲ ಹೀಗಾಗಿ ಅವಳ ದೇಹ ಸ್ಪಂದಿಸುತ್ತಿರಲಿಲ್ಲ. 22 ವರ್ಷಗಳ ಕಾಲ ಆಕೆ ವೈವಾಹಿಕ ಜೀವನದಲ್ಲಿ ಖುಷಿಯಾಗಿರಲಿಲ್ಲ ಎಂದು ತಿಳಿಯಿತ್ತು. ಬಾಲ್ಯದಲ್ಲಿ ನನಗೆ ನೆನಪಿರುವ ಪ್ರಕಾರ ಆಕೆಗೆ ಕುಟುಂಬದಲ್ಲಿ ಎಲ್ಲರು ಒಡೆಯುತ್ತಿದ್ದರು. ತಂದೆ ಅವರ ಲೋಕದಲ್ಲಿ ಇರುತ್ತಿದ್ದರು, ನನ್ನ ತಾಯಿ ಚಕ್ಕಲಿ ಮತ್ತು ಪಾಪಡ್ ತಯಾರಿಸಿ ಮಾರಾಟ ಮಾಡಿ ಮನೆ ನಡೆಸುತ್ತಿದ್ದಳು. ಆದರೆ ಆಕೆಗೆ ಯಾರೂ ಗೌರವ ನೀಡುತ್ತಿರಲಿಲ್ಲ. ತಾಯಿ ಅಗಲಿದ ನಂತರ ನನ್ನ ಅಕ್ಕ ಆಕೆ ಇಷ್ಟ ಪಟ್ಟವರನ್ನು ಮದುವೆ ಆಗಿದ್ದಕ್ಕೆ ನನ್ನ ತಾಯಿ ಗುಣದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು ಕುಟುಂಬಸ್ಥರು' ಎಂದಿದ್ದಾರೆ ಮುನಾವರ್.

ಚಿತ್ರರಂಗದಲ್ಲಿರುವ ಏಕೈಕಾ ಸಪೋರ್ಟರ್‌ ಹೆಸರು ರಿವೀಲ್ ಮಾಡಿದ ನಟಿ ಕಂಗನಾ ರಣಾವತ್!

'2007ರಲ್ಲಿ ನಮಗೆ ಜೀವನ ನಡೆಸಲು ಕಷ್ಟ ಆಗಿತ್ತು. ಮನೆಯಲ್ಲಿದ್ದ ಪಾತ್ರೆಗಳನ್ನು ಮಾರಿ ಊಟ ತರಬೇಕಿತ್ತು. ಅದಲ್ಲದೆ ಆಕೆ 3500 ರೂಪಾಯಿ ಸಾಲ ಮಾಡಿದ್ದಳು. ನಮಗೆಂದು ಮಾಡಿದ ಸಾಲ ಅದು . ಈಗ ಯೋಚನೆ ಮಾಡಿದರೆ ಹಿಂಸೆ ಆಗುತ್ತೆ ಯಾಕೆ ನಮ್ಮ ಬಳಿ ಅಷ್ಟು ಹಣ ಇರಲಿಲ್ಲ ಯಾಕೆ ನಾನು ಅವಳ ಜೊತೆ ಮಲಗಿಲ್ಲ ಯಾಕೆ ನಾನು ಆಸ್ಪತ್ರೆಗೆ ಬೇಗ ಹೋಗಲಿಲ್ಲ. ಇವತ್ತು ನಾನು ದುಡಿಯುತ್ತಿರುವ ಸೆಟಲ್ ಆಗಿರುವ ಆದರೆ ಏನು ಉಪಯೋಗ? ಅವತ್ತು ಆಸ್ಪತ್ರೆ ಮುಂದೆ ಅಷ್ಟು ಜನ ಸೇರಲು ಕಾರಣ ನನ್ನ ತಾಯಿ, ಯಾರಿಗೆ ಕಷ್ಟ ಆದರೂ ಅವರ ಪರ ನಿಲ್ಲುತ್ತಿದ್ದಳು.  ಹುಷಾರಿಲ್ಲ ಅಂದ್ರೆ ಹಣ್ಣು ತೆಗೆದುಕೊಂಡು ಹೋಗುತ್ತಿದ್ದಳು. ಆಕೆ ಒಳ್ಳೆಯ ಹೆಣ್ಣು ಗಟ್ಟಿಗಿತ್ತಿ ಆದರೆ ಆಕೆ ಮೌನವಾಗಿದ್ದಾಗ ನಾನು ಯಾಕೆ ಪ್ರಶ್ನೆ ಮಾಡಲಿಲ್ಲ ನನಗೆ ಗೊತ್ತಿಲ್ಲ. ನಾನು ಬಾಲ್ಯದಲ್ಲಿ ಅಮ್ಮನ ಜೊತೆ ರಸ್ತೆಯಲ್ಲಿ ನಿಂತುಕೊಂಡು ವಿಮಾನ ನೋಡುತ್ತಿದ್ದೆ. ಈಗಲ್ಲೂ ಅದೇ ನೆನಪು ಅದಿಕ್ಕೆ ಇದುವರೆಯೂ ವಿಮಾನದಲ್ಲಿ ಪ್ರಯಾಣ ಮಾಡಿಲ್ಲ'ಎಂದು ಮುನಾವರ್ ಹೇಳಿದ್ದಾರೆ.

click me!