ಅಪ್ಪು ನಿರ್ವಹಿಸುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಈ ಬಾರಿ ಕಿಚ್ಚ ಸುದೀಪ್ ಮಾಡ್ತಾರಾ?

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಜನಪ್ರಿಯವಾಗಿದ್ದು ಅಪ್ಪು ಅವರಿಂದ. ಬಿಗ್ ಬಾಸ್ ಕಾರ್ಯಕ್ರಮ ಹೋಸ್ಟ್ ಮಾಡೋ ಮೂಲಕ ಜನಮನ ಗೆದ್ದ ಕಿಚ್ಚ ಸುದೀಪ್ ಈ ಬಾರಿ ಕೋಟ್ಯಾಧಿಪತಿ ನಿರೂಪಣೆ ಮಾಡ್ತಾರಾ?

Will Sudeep host the kannadada kotyadhipati?

'ಕನ್ನಡದ ಕೋಟ್ಯಾಧಿಪತಿ' (Kannadad Kotyadhipati) ಅನ್ನೋ ಹೆಸರು ಕೇಳಿದ್ರೆ ಅಪ್ಪು (Puneeth Rajkumar) ನೆನಪಾಗ್ತಾರೆ. ನಗು ನಗುತ್ತಾ ಎಲ್ಲರ ಕಾಲೆಳೆಯುತ್ತಾ ಬಂದ ಸ್ಪರ್ಧಿಗಳಲ್ಲಿ ಕಾನ್ಫಿಡೆನ್ಸ್ (Confidence)  ತುಂಬುತ್ತಾ ಅವರು ಈ ಪ್ರೋಗ್ರಾಂ (Program)  ನಿರ್ವಹಿಸುತ್ತಿದ್ದ ರೀತಿಗೆ ಮಾರು ಹೋಗದವರಿಲ್ಲ. ಕೆಲವು ಹೋಸ್ಟ್‌ (Host) ಈ ಶೋಗೆ ಹಿಂದಿಯಲ್ಲಿ ಅಮಿತಾಬ್‌ ಬಚ್ಚನ್‌ ಅವರು ಹೋಸ್ಟ್‌ ಮಾಡುತ್ತಿದ್ದ ಕಾರ್ಯಕ್ರಮದ ಮಾದರಿಯನ್ನು ಅನುಸರಿಸುತ್ತಿದ್ದರು. ಆದರೆ ಪುನೀತ್‌ ಅವರು ಈ ಕಾರ್ಯಕ್ರಮದಲ್ಲೂ ತಮ್ಮದೇ ಯುನೀಕ್‌ ಸ್ಟೈಲ್‌ (Unique style)ಮೂಲಕ ಗಮನ ಸೆಳೆದರು. ಅಪ್ಪು ಅವರು ಆಜಾತ ಶತ್ರುವಿನ ಹಾಗೆ ಇದ್ದುದರಿಂದ ಅವರ ಶೋನಲ್ಲಿ ಭಾಗವಹಿಸಲು ಯಾವ ಸೆಲೆಬ್ರಿಟಿಯೂ ಹಿಂದೇಟು ಹಾಕುತ್ತಿರಲಿಲ್ಲ. ಅವರು ಎಲ್ಲರ ಜೊತೆಗೂ ಸ್ನೇಹದಿಂದಿದ್ದ ಕಾರಣ ಫ್ರೆಂಡ್ಲಿಯಾಗಿ ಮೂವ್ (Friendly move) ಮಾಡುತ್ತಿದ್ದರು. ಅವರ ವರ್ಚಸ್ಸಿನ ಕಾರಣಕ್ಕೆ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಸಖತ್ತಾಗಿ ಮೂಡಿಬಂತು.

KGF 2 Film Review: ಅಮ್ಮನ ಹಠದ ಹಿಂದೆ ಹೋಗುವ ಮಗನ ಕಥೆಯಿದು, ಕೆಜಿಎಫ್ 2 ಅದ್ದೂರಿತನ ಮಿಸ್ ಮಾಡ್ಕೊಳ್ಬೇಡಿ!
 

ಹೀಗಾಗಿ ಕನ್ನಡ ಕೋಟ್ಯಧಿಪತಿ ಅಂದ್ರೆ ಥಟ್ ಅಂತ ನೆನಪಾಗೋದು ಕರ್ನಾಟಕದ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಕನ್ನಡ ಕೋಟ್ಯಧಿಪತಿ ಶೋ ಸೂಪರ್ ಡೂಪರ್ ಹಿಟ್ ಆಗಲು ಮೂಲ ಕಾರಣವೇ ಅಪ್ಪು ಅನ್ನೋದ್ರಲ್ಲಿ ನೋಡೌಟ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಟ್ ಆದ ಸೋನಿ ಪಿಕ್ಚರ್ಸ್‌ನ ಗೇಮ್ ಶೋ ʻಹು ವಾಂಟ್ಸ್ ಟು ಬಿ ಅ ಮಿಲೇನಿಯರ್'ನ (Who wants to be a Millionaire) ಕನ್ನಡ ರೂಪಾಂತರ ಕಾರ್ಯಕ್ರಮವೇ ಈ ಕನ್ನಡದ ಕೋಟ್ಯಧಿಪತಿ. ಹು ವಾಂಟ್ಸ್ ಟು ಬಿ ಅ ಮಿಲೇನಿಯರ್‌ನಿಂದ ಪ್ರೇರಣೆಗೊಂಡು ಹಿಂದಿಯಲ್ಲಿ ಮೂಡಿಬಂದ ಕೌನ್ ಬನೇಗಾ ಕರೋಡ್ ಪತಿ (Kon banega karodpati)  ಕನ್ನಡದಲ್ಲಿ ಕನ್ನಡ ಕೋಟ್ಯಧಿಪತಿಯಾಗಿ ಜನಪ್ರಿಯತೆಯನ್ನು ಪಡೆದಿತ್ತು. 2012ರಲ್ಲಿ ಸ್ಟಾರ್ ಸುವರ್ಣ ವಾಹಿನಿ ಈ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ಮೂರು ಆವೃತ್ತಿಗಳನ್ನು ನಡೆಸಿತ್ತು. ಇದಾದ ನಂತರ 2019ರಲ್ಲಿ 4ನೇ ಸೀಸನ್ ಕಲರ್ಸ್ ಕನ್ನಡದಲ್ಲಿ ನಡೆಸಿತು. ಈ ಕಾರ್ಯಕ್ರಮದ ಮೊದಲ ಹಾಗೂ ಎರಡನೇ ಸೀಸನ್ ಅನ್ನು ಪುನೀತ್‌ ರಾಜ್‌ಕುಮಾರ್ ನಡೆಸಿಕೊಟ್ಟಿದ್ದರು. ಆದರೆ 3ನೇ ಸೀಸನ್ ಅನ್ನು ಕಾರಣಾಂತರಗಳಿಂದಾಗಿ ಪುನೀತ್ ಅವರಿಗೆ ನಡೆಸಿಕೊಡಲು ಆಗಿರಲಿಲ್ಲ, ಇವರ ಬದಲಾಗಿ ಎವರ್ ಗ್ರೀನ್ ಹೀರೋ ರಮೇಶ್ ಅರವಿಂದ್ 3ನೇ ಸೀಸನ್ ಅನ್ನು ನಡೆಸಿಕೊಟ್ಟಿದ್ದರು.‌ ರಮೇಶ್ ಅವರು ನಡೆಸಿಕೊಳ್ಳ ಶೋ ಏನೋ ಚೆನ್ನಾಗಿಯೇ ಮೂಡಿಬಂತು. ಆದರೆ ಅವರ ನಿರೂಪಣೆಯ ಕೋಟ್ಯಧಿಪತಿ ಕಾರ್ಯಕ್ರಮ ಪುನೀತ್ ನಡೆಸಿಕೊಟ್ಟಷ್ಟು ಜನಪ್ರಿಯತೆ ತಂದುಕೊಡಲಿಲ್ಲ. ಹೀಗಾಗಿ 4ನೇ ಸೀಸನ್‌ಗೆ ಪುನಃ ಪುನೀತ್ ರಾಜ್‌ಕುಮಾರ್ ಬರಲೇಬೇಕಾಯಿತು.

The Kashmir Files: ಜನರ ಭಾವನೆ ಜೊತೆ ಆಟ ಆಡಿ ಹಣ ಮಾಡಿದ್ದಾಯ್ತು, ಈಗ ಬ್ಯಾಂಕಾಕ್ ನಲ್ಲಿ ಪಾರ್ಟಿನಾ?
ಪುನೀತ್ ಅವರ ಸ್ಥಾನಕ್ಕೆ ಕನ್ನಡ ಕೋಟ್ಯಧಿಪತಿ ನಿರ್ವಹಣೆಗೆ ಯಾರನ್ನೂ ಕರೆತರಲು ಸಾಧ್ಯವಿಲ್ಲ. ಆದರೆ ಅಪ್ಪು ಅವರ ಅಗಲಿಕೆಯಲ್ಲಿ 5ನೇ ಸೀಸನ್ ಕೋಟ್ಯಧಿಪತಿಗೆ ಹೊಸಬರನ್ನು ಹುಡುಕಿಕೊಳ್ಳಲೇ ಬೇಕಿದೆ. ರಮೇಶ್ ಅರವಿಂದ್ ಮತ್ತೆ ಕೋಟ್ಯಧಿಪತಿ ಜವಾಬ್ದಾರಿ ಹೊರುವುದು ಅನುಮಾನ. ಹೀಗಾಗಿ ಕಿಚ್ಚ ಸುದೀಪ್ ಅವರಿಗೆ ಈ ಹೊಣೆಗಾರಿಕೆ ಬರುವ ಸಾಧ್ಯತೆ ಇದೆ. ಏಕೆಂದರೆ ರಿಯಾಲಿಟಿ ಶೋ ನಡೆಸಿಕೊಡಬಲ್ಲ ಸ್ಟಾರ್ ನಟರಲ್ಲಿ ಮುಂಚೂಣಿಯಲ್ಲಿರುವುದು ಕಿಚ್ಚ ಸುದೀಪ್ (Kichcha Sudeep). ಬಿಗ್ ಬಾಸ್‌ನ ಹೋಸ್ಟ್‌ ಆಗಿ ಸಖತ್ ಪಾಪ್ಯುಲರ್ ಆಗಿರುವ ಕಿಚ್ಚ ಈಗ ಕೋಟ್ಯಧಿಪತಿಯ ಜವಾಬ್ದಾರಿಯನ್ನು ಹೊರುವ ಸಾಧ್ಯತೆ ಇದೆ.‌

ಮತ್ತೆ ಬರುತ್ತಾ ಮಜಾ ಟಾಕೀಸ್; ಟಾಕಿಂಗ್ ಸ್ಟಾರ್ ಸೃಜನ್ ಹೇಳಿದ್ದೇನು?
ಪುನೀತ್ ರಾಜ್‌ಕುಮಾರ್ ಮತ್ತು ಸುದೀಪ್ ಬಾಲ್ಯದಿಂದಲೂ ಸ್ನೇಹಿತರು. ಪುನೀತ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಸದಾ ಮುಂದುವರೆಯಬೇಕೆಂಬುದು ಎಲ್ಲರ ಆಸೆ. ಈ ಕಾರ್ಯಕ್ರಮ ಅದ್ಭುತವಾದ ರಿಯಾಲಿಟಿ ಶೋ ಕೂಡ‌ ಅನ್ನೋದ್ರಲ್ಲಿ‌ ನೋ ಡೌಟ್. ಹೀಗಾಗಿ ಸುದೀಪ್ ಅವರು ಕೋಟ್ಯಾಧಿಪತಿ ಕಾರ್ಯಕ್ರಮದ ಸಾರಥ್ಯವನ್ನು ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್ ಅವರೇ ಈ ಕಾರ್ಯಕ್ರಮ ನಡೆಸಿಕೊಡ್ತಾರ ಇಲ್ವಾ ಅನ್ನೋದು ಬಹುತೇಕ ಖಚಿತವಾದಂತೆ ಕಂಡರೂ ಅಧಿಕೃತ ಸುದ್ದಿ ಇನ್ನಷ್ಟೇ ಹೊರಬರಬೇಕಿದೆ. ಆದರೆ ಕಿಚ್ಚ ಸುದೀಪ್‌ ಈ ಕಾರ್ಯಕ್ರಮ ನಿರ್ವಹಿಸಿದರೆ ಕನ್ನಡದ ಕೋಟ್ಯಾಧಿಪತಿ ಸಕ್ಸಸ್‌ಫುಲ್‌ (Sucsessful) ಆಗೋದ್ರಲ್ಲಿ ಅನುಮಾನ ಇಲ್ಲ.

Latest Videos
Follow Us:
Download App:
  • android
  • ios