ಅಣ್ಣಯ್ಯ ಸೀರಿಯಲ್‌ನಲ್ಲಿ ಜಿಮ್ ಸೀನಾ ಪಾತ್ರ ಮಾಡ್ತಿರೋ ನಟ ಸುಷ್ಮಿತ್ ಜೈನ್ ಕಮೆಂಟ್ಸ್ ಬಗ್ಗೆ ನೋವು ತೋಡಿಕೊಂಡಿದ್ದೇನು?
ನಾಲ್ವರು ತಂಗಿಯ ಮದುವೆಯ ಜವಾಬ್ದಾರಿ ಹೊತ್ತಿರೋ ಶಿವು ಒಬ್ಬಳು ತಂಗಿ ಗುಂಡಮ್ಮನ ಮದ್ವೆ ಮಾಡುವುದರಲ್ಲಿಯೇ ಸುಸ್ತಾಗಿ ಹೋಗಿದ್ದಾನೆ. ದೊಡ್ಡವಳನ್ನು ನೋಡಲು ಬಂದವರು ಗುಂಡಮ್ಮ ಅಂದ್ರೆ ರಶ್ಮಿಯನ್ನು ಒಪ್ಪಿಕೊಂಡಿದ್ದರು. ಕೊನೆಗೆ ಅವನ ಜೊತೆ ಮದ್ವೆಯಾಗಬೇಕಿತ್ತು. ಆದರೆ ಮದುವೆಯ ದಿನವೇ ವರದಕ್ಷಿಣೆಯ ಹಣ ಕಳೆದುಹೋಯಿತು. ಈ ಮದುವೆಯನ್ನು ತಪ್ಪಿಸುವುದಕ್ಕಾಗಿ ಶಿವುನ ಅಮ್ಮನೇ ಬೇರೆ ರೂಪದಲ್ಲಿ ಬಂದು ಹಣ ತೆಗೆದುಕೊಂಡು ಹೋಗಿದ್ದಾಳೆ. ಆದರೆ ವರದಕ್ಷಿಣೆ ಹಣ ಜೋಪಾನವಾಗಿ ಇಟ್ಟುಕೊಳ್ಳುವ ಜವಾಬ್ದಾರಿಯನ್ನು ಜಿಮ್ ಸೀನನಿಗೆ ನೀಡಲಾಗಿತ್ತು. ಬಟ್ಟೆ ಬದಲಿಸುವಾಗ ಬ್ಯಾಗ್ ಮರೆತದ್ದರಿಂದ ಈ ಅವಾಂತರವಾಗಿ, ಹಣ ಕಳುವಿಗೆ ಅವನೇ ಕಾರಣ ಎಂಬ ಆರೋಪ ಬಂತು. ಅತ್ತ ವರದಕ್ಷಿಣೆ ಕೊಡದ ಕಾರಣ ವರನ ಮನೆಯವರು ಮದುವೆ ಕ್ಯಾನ್ಸಲ್ ಮಾಡಿದರು. ಕೊನೆಗೆ ಸೀನನೇ ಗುಂಡಮ್ಮನಿಗೆ ತಾಳಿ ಕಟ್ಟುವಂತಾಯಿತು. ಬೇರೆಯವಳನ್ನು ಲವ್ ಮಾಡ್ತಿರೋ ಸೀನ ಸದ್ಯ ಗುಂಡಮ್ಮನ ಪತಿ.
ಇದು ಜೀ ಕನ್ನಡದ ಅಣ್ಣಯ್ಯ ಸೀರಿಯಲ್. ಗುಂಡಮ್ಮ ಮತ್ತು ಸೀನಾ ಒಬ್ಬರನ್ನೊಬ್ಬರು ಕಿತ್ತಾಡುವುದು ವೀಕ್ಷಕರಿಗೆ ಸಕತ್ ಮಜಾ ನೀಡುತ್ತದೆ. ಮೊದಲ ರಾತ್ರಿಯಂದೇ ಗುಂಡಮ್ಮ ಮಂಚವನ್ನು ಮುರಿದಿದ್ದು ಕೂಡ ಸಕತ್ ಹಿಟ್ ಆಗಿತ್ತು. ಇದೀಗ ಈ ಜೋಡಿ ರೀಲ್ಸ್ ಮಾಡಿದೆ. ಅದರಲ್ಲಿ ಸೀನ ಬಂದು ನೋಡಿ ಏನೆಲ್ಲಾ ಕಮೆಂಟ್ ಹಾಕ್ತಾರೆ, ತುಂಬಾ ಬೇಜಾರು ಆಗುತ್ತೆ. ಈಕೆಯ ಬಟ್ಟೆ ಬಿಚ್ಚಲು ರೆಡಿನೇ ಕೇಳ್ತಾರೆ, ಗಂಡಸರಿಗೆ ಬೆಲೆನೇ ಇಲ್ಲ ಎಂದಿದ್ದಾರೆ. ಅದಕ್ಕೆ ಗುಂಡಮ್ಮಾ ನಿಜ ನಿಜ. ನಿಮ್ಗೆ ಬೆಲೆ ಇಲ್ಲ, ನೀವಿಲ್ಲಿ ಮಾತಾಡ್ತಾ ಇದ್ರೂ ಅಲ್ಲಿ ನೋಡಿ ನಿಮಗೆ ಡಿಸ್ಟರ್ಬ್ ಮಾಡ್ತಾ ಇದ್ದಾರೆ ಎಂದಿದ್ದಾರೆ. ಮದುವೆಯಾದ ಮೊದಲ ದಿನದ ಶೂಟಿಂಗ್ ಸಮಯದಲ್ಲಿ ಮಾಡಿರುವ ತಮಾಷೆಯ ವಿಡಿಯೋ ಇದಾಗಿದೆ.
ಮೊದಲ ರಾತ್ರಿಯಂದೇ ಮಂಚ ಮುರಿದ ಗುಂಡಮ್ಮನ ರಿಯಲ್ ಪತಿ ಹೇಗಿರಬೇಕು? ಅಣ್ಣಯ್ಯ ನಟಿಯ ಕನಸು ಕೇಳಿ...
ಇನ್ನು ಗುಂಡಮ್ಮ ಪಾತ್ರಧಾರಿಯ ಹೆಸರು ಪ್ರತೀಕ್ಷಾ. ಈ ಹಿಂದೆ ಒಂದು ಸಂದರ್ಶನದಲ್ಲಿ ಅವರು, ದಪ್ಪಗೆ ಇರುವ ಕಾರಣದಿಂದ ತಾವು ಈ ಹಿಂದೆ ಅನುಭವಿಸಿದ ಬಾಡಿ ಶೇಮಿಂಗ್ ಬಗ್ಗೆ ಮಾತನಾಡುತ್ತಲೇ ದಪ್ಪ ದಪ್ಪ ಎನ್ನುವವರಿಗೆ ತಿರುಗೇಟನ್ನೂ ನೀಡಿದ್ದ್ರು. ಈ ಹಿಂದೆ ಹಲವು ಬಾರಿ ದಪ್ಪ ಇರೋ ಕಾರಣದಿಂದ ಹಿಂಸೆ ಅನುಭವಿಸಿದ್ದು ಇದೆ. ಪಕ್ಕದ ಮನೆಯಾಕೆಯೊಬ್ಬರು ನಾನು ಹೋದಲ್ಲಿ ಬಂದಲ್ಲಿ ಪಾಪ ಪಾಂಡು ಪಾಚು ಎಂದೇ ಕರೆಯುತ್ತಿದ್ದರು. ಆಮೇಲೆ ಗೊತ್ತಾಯ್ತು ನನ್ನನ್ನು ನಟಿ ಶಾಲಿನಿ ಅವರಿಗೆ ಕಂಪೇರ್ ಮಾಡುತ್ತಿದ್ದಾರೆ ಎಂದು. ಆದರೆ ಶಾಲಿನಿ ಅವರಂಥ ನಟಿ, ಅವರ ನಟನೆಗೆ ಫಿದಾ ಆಗಿರುವವರಲ್ಲಿ ನಾನೂ ಒಬ್ಬಳು. ಅವರ ನಟನೆಯ ಕೌಶಲ ನೋಡಿದರೆ, ಅವರ ದೇಹದ ತೂಕ ಅಲ್ಲಿ ಗಣನೆಗೆ ಬರುವುದೇ ಇಲ್ಲ. ಆದರೆ, ದೇಹದ ತೂಕವನ್ನೇ ಇಟ್ಟುಕೊಂಡು ಮಾತನಾಡುತ್ತಾರೆ. ಅಂಥವರಿಗೆ ನಾನು ಉತ್ತರಿಸಲು ಹೋಗುವುದೇ ಇಲ್ಲ ಎಂದಿದ್ದರು.
ಇನ್ನು ಸೀನ ಪಾತ್ರಧಾರಿಯ ಹೆಸರು ಸುಷ್ಮಿತ್ ಜೈನ್. ಮೈಸೂರಿನವರಾದ ಸುಷ್ಮಿತ್, ಮೆಕ್ಯಾನಿಕ್ ಇಂಜಿನಿಯರಿಂಗ್ ಓದಿಕೊಂಡಿದ್ದಾರೆ. ಇದೀಗ ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರು 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಸ್ಯಾಂಡಿ ಅಲಿಯಾಸ್ ಸುಂದರನಾಗಿ ನಟಿಸುವ ಮೂಲಕ ಕಿರುತೆರೆ ಎಂಟ್ರಿ ಕೊಟ್ಟರು. ನಂತರ ಹಲವು ಧಾರಾವಾಹಿಗಳಲ್ಲಿ ಫೋಷಕ ಪಾತ್ರದಲ್ಲಿ ನಟಿಸಿದ ಸುಷ್ಮಿತ್, ಭೂಮಿ ತಾಯಾಣೆ ಧಾರಾವಾಹಿ ಮೂಲಕ ನಾಯಕನಾಗಿ ಹೊರಹೊಮ್ಮಿದರು. ಮನಸೆಲ್ಲಾ ಸೀರಿಯಲ್‌ನಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದರು. ಖಳನಾಯಕನಾಯಕನಿದ್ದರೆ ಮಾತ್ರ ಹೀರೋಗೆ ಆದ್ಯತೆ ಸಿಗೋದು ಎನ್ನುವ ಸುಷ್ಮಿತ್‌ಗೆ ವಿಲನ್ ಆಗೋದು ಅಂದ್ರೆ ಇಷ್ಟವಂತೆ. ದೊರೆಸಾನಿ ಸೀರಿಯಲ್‌ನಲ್ಲಿ ಚಿನ್ಮಯ್ ಪಾತ್ರ ಮಾಡಿದ್ದ ಸುಷ್ಮಿತ್, ಕನ್ಯದಾನ ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಘು ಚರಣ್ ನಿರ್ದೇಶನದ ವರ್ಜಿನ್ ಎನ್ನುವ ಕನ್ನಡ ಕಿರು ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಸೀನಾ ಪಾತ್ರ ಸಕತ್ ಹೆಸರು ತಂದುಕೊಡುತ್ತಿದೆ.
ಡುಮ್ಮಿ ಡುಮ್ಮಿ ಎನ್ನುವವರಿಗೆ ಮುಟ್ಟಿಕೊಳ್ಳುವಂಥ ತಿರುಗೇಟು ನೀಡಿದ ಅಣ್ಣಯ್ಯ ಸೀರಿಯಲ್ ಗುಂಡಮ್ಮ...