
ಆರ್‌ಜೆ, ನಿರೂಪಕಿ, ನಟಿ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಪಾಚು ಅಲಿಯಾಸ್ ಶಾಲಿನಿ ಸತ್ಯನಾರಾಯಣ್ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಸೂಪರ್ ಕ್ಯಾಪ್ಷನ್ ಕೊಟ್ಟವರಿಗೆ ಬಹುಮಾನವಿದೆ ಎಂದೂ ಘೋಷಿಸಿದ್ದಾರೆ. ಶೇರ್ ಆದ ಕೆಲವೇ ನಿಮಿಷಗಳಲ್ಲಿ ಕಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಕಮೆಂಟ್‌ಗಳಲ್ಲಿ ಶಾಲಿನಿ ಯಾವುದನ್ನು ಆಯ್ಕೆ ಮಾಡಿದ್ದಾರೆಂದು ಗೊತ್ತಿಲ್ಲ ಆದರೆ ಪ್ರತಿ ಕಮೆಂಟ್ ಓದಲು ಡಿಫರೆಂಟ್ ಆಗಿವೆ.
'ಪಾಪ ಪಾಂಡು' ಶಾಲಿನಿ 'ಶಾಲಿವುಡ್' ಹೇಗಿದೆ ನೋಡಿ!
ಸ್ವಿಮಿಂಗ್ ಪೂಲ್‌ನಲ್ಲಿ ಶಾಲಿನಿ ಮತ್ತು ಪತಿ ಅನಿಲ್ ಡಿಫರೆಂಟ್ ಆಗಿ ಫೋಸ್ ನೀಡಿದ್ದಾರೆ. ಅನಿಲ್ ಪುಂಗಿ ಊದುತ್ತಿದ್ದರೆ, ಶಾಲಿನಿ ಹೆಡೆ ಎತ್ತಿರುವ ಹಾವಿನ ರೂಪದಲ್ಲಿ ನಿಂತಿದ್ದಾರೆ. ಸದಾ #couplesgoal ಕೊಡುವ ಈ ಜೋಡಿ ಫೋಟೋಗೆ ನೆಟ್ಟಿಗರ ಕಮೆಂಟ್ ಸಕತ್ತೂ ಇಂಟರೆಸ್ಟಿಂಗ್ ಆಗಿವೆ.
ನೆನಪಿರಲಿ ನಟಿ ವರ್ಷಾ ಕಮ್‌ಬ್ಯಾಕ್; ಶಾಲಿವುಡ್ ವಿಡಿಯೋ ಮೆಚ್ಚಿಕೊಂಡ ನೆಟ್ಟಿಗರು!
'ಏನ್ ಬುಲ್‌ಬುಲ್ ಪುಂಗಿ ಊದಿದ್ರೂ ಬರಕಿಲ್ವಾ? ,'ಫಸ್ಟ್ ಟೈಂ ಶಾಲಿನಿ ಗಂಡನ ಕಂಟ್ರೋಲ್‌ನಲ್ಲಿ ಇರುವುದು', 'ತಾಳೆ ಹೂವಿನ ಪೊದೆಯಿಂದ ಜಾರಿ ಜಾರಿ ಹೊರ ಬಂದ', 'ಅವ್ರು ಪುಂಗಿ ಊದ್ತಾ ಇರ್ತಾರೆ, ನಾವ್ ಅದ್ಕೆ ತಲೆ ಆಡಿಸ್ತಾ ಇರ್ತೀವಿ' ಹೀಗೆ ಡಿಫರೆಂಟ್ ಆಗಿ ಕಮೆಂಟ್ ಬಂದಿವೆ.
ಹೊಟ್ಟೆ ಹೊಣ್ಣಾಗುವಂತೆ ಸಿಕ್ಕಾಪಟ್ಟೆ ನಗಿಸುವ ಶಾಲಿನಿ ತಮ್ಮದೇ ಯುಟ್ಯೂಬ್ ಚಾನೆಲ್ 'ಶಾಲಿವುಡ್'ನಲ್ಲಿ ನೆನಪಿರಲಿ ನಟಿ ವರ್ಷಾ ಜೊತೆ ಫನ್ನಿ ವಿಡಿಯೋ ಮಾಡಿ ಡಿಜಿಟಲ್ ವೀಕ್ಷಕರನ್ನು ಮನೋರಂಜಿಸುತ್ತಾರೆ. ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಸೂಪರ್ ಸ್ಟಾರ್' ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.