ಖ್ಯಾತ ನಟಿಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಟಿಯ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರಸಿದ್ಧ ತಮಿಳು ನಟಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ನಟಿಯ ಪತಿಯನ್ನು ಅರೆಸ್ಟ್ ಮಾಡಲಾಗಿದೆ. ನಟಿ ಮತ್ತು ನಿರೂಪಕಿ ಚಿತ್ರಾ ಅವರು ಚೆನ್ನೈನ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ನಟಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದಕ್ಕೆ ಪತಿಯನ್ನು ಅರೆಸ್ಟ್ ಮಾಡಲಾಗಿದೆ.
ತಮಿಳು ನಟಿ ಎಂಗೇಜ್‌ಮೆಂಟ್ ಆದ ಸುದ್ದಿ ಎಲ್ಲರಿಗೂ ಗೊತ್ತಿತ್ತು. ಆದರೆ ಇಬ್ಬರ ವಿವಾಹವೂ ರಿಜಿಸ್ಟರ್ ಆಗಿತ್ತು. ಟ್ರೆಡೀಷನಲ್ ಮದುವೆಯಷ್ಟೇ ಬಾಕಿ ಇತ್ತು. ಈ ನಡುವೆ ಜೊತೆಗೇ ಚೆನ್ನೈನಲ್ಲಿ ಉಳಿದುಕೊಂಡಿದ್ದರು ಈ ಜೋಡಿ.
ಇತ್ತೀಚೆಗಷ್ಟೇ ನಡೆದಿತ್ತು ನಿಶ್ಚಿತಾರ್ಥ: ನಟಿ ಚೈತ್ರಾ ಆತ್ಮಹತ್ಯೆ ಬಗ್ಗೆ ಭಾವೀ ವರ ಹೇಳಿದ್ದಿಷ್ಟು
ಕಳೆದ ಕೆಲವು ದಿನ ನಟಿಯ ಸಾವಿನ ಸಂಬಂಧ ನಡೆದ ತನಿಖೆಯಲ್ಲಿ ಈ ವಿಚಾರ ಬಯಲಾಗಿದೆ. ಎರಡು ತಿಂಗಳ ಹಿಂದೆ ನಟಿ ಚೈತ್ರಾ ಹಾಗೂ ಹೇಮಂತ್ ವಿವಾಹವಾಗಿದ್ದರು. ಇಬ್ಬರ ಸಂಪ್ರದಾಯಿಕ ವಿವಾಹ ಜನವರಿಯಲ್ಲಿ ನಡೆಯಬೇಕಿತ್ತು.
ಕಿರುತೆರೆಯ ಜನಪ್ರಿಯ ನಟಿ 28 ವರ್ಷದ ಚೈತ್ರಾ ಆತ್ಮಹತ್ಯೆಗೆ ಶರಣು
ಚಿತ್ರಾ ಅವರ ಕುಟುಂಬ ಈ ಘಟನೆಯಲ್ಲಿ ಸಂದೇಹ ವ್ಯಕ್ತಪಡಿಸಿ ನಟಿಯ ಸಾವಿನ ಪ್ರಕರಣ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ನಟಿ ಡಿಸೆಂಬರ್ 9ರಂದು ಚೆನ್ನೈನ ಹೋಟೆಲ್ ರೂಂನಲ್ಲಿ ಮೃತಪಟ್ಟಿದ್ದರು.