ಅರೆ ಸೀರಿಯಲ್ ಬಿಟ್ರಾ..? ಅಡಿಕೆ ಸುಲೀತಿದ್ದಾರೆ ರಂಜನಿ..!

By Suvarna News  |  First Published Dec 13, 2020, 10:50 AM IST

ಕನ್ನಡತಿ ಧಾರವಾಹಿಯ ಮೂಲಕ ಎಲ್ಲರ ಮೆಚ್ಚುಗೆ ಗಳಿಸುತ್ತಿರೋ ನಟಿ ರಂಜನಿ ರಾಘವನ್ ಸೀರಿಯಲ್ ಬಿಟ್ರಾ..? ಹೀಗಂತ ಡೌಟ್ ಬರೋ ಪೋಸ್ಟ್ ಹಾಕಿದ್ದಾರೆ ನಟಿ.


ಇದು ಮಲೆನಾಡು, ಕರಾವಳಿಯಲ್ಲಿ ಅಡಿಕೆ ಬೆಳೆಗಾರರು ಅಟ್ಟದಿಂದ ಅಡಿಕೆ ತೆಗೆದು ರಾಶಿ ಹಾಕಿ ಸುಲಿಯೋ ಸಮಯ. ಈ ಟೈಂನಲ್ಲಿ ಇದೇ ಕೆಲಸ ಅಡಿಕೆ ಬೆಳೆಗಾರರಿಗೆ. ಅರೆ ಆದ್ರೆ ನಟಿ ರಂಜನಿ ರಾಘವನ್‌ಗೂ ಇದೇ ಕೆಲಸಾನಾ..?

ಸೀರೆಯಲ್ ಬಿಟ್ರಾ ಪುಟ್ಟಗೌರಿ ಖ್ಯಾತಿ ರಂಜನಿ ರಾಘವನ್..? ಕನ್ನಡತಿ ಸೀರಿಯಲ್ ಸೂಪರ್ ಆಗಿ ಓಡ್ತಿರೋವಾ ನಟಿ ಇದ್ಯಾಕೆ ಅಡಿಕೆ ಸುಲೀತಾ ಕೂತಿದ್ದಾರೆ ? ಏನಿದು ಹೊಸ ಅಪ್‌ಡೇಟ್..?

Tap to resize

Latest Videos

ಸೀರೆಯಲ್ಲೇ ಮಿಂಚೋ ಕನ್ನಡತಿ ಸೀರಿಯಲ್‌ನ ಭುವಿ ಮಾಡರ್ನ್ ಲುಕ್ ಹೀಗಿದೆ

ಹೌದು. ಕನ್ನಡತಿ ನಟಿ ಅಡಿಕೆ ಸುಲೀಯೋದನ್ನು ಕಲಿಯುತ್ತಿದ್ದಾರೆ. ಮಣೆಯ ಮೇಲೆ ಕೂತು ನಿಧಾನವಾಗಿ ಅಡಿಕೆ ಸುಲೀಯೋದನ್ನು ಅಭ್ಯಾಸ ಮಾಡ್ತಿದ್ದಾರೆ ಈಕೆ. ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ಸೆಟ್‌ನಲ್ಲಿ ಇದೊಂದು ಹೊಸ ಕೆಲಸ ಟ್ರೈ ಮಾಡಿದ್ದಾರೆ ಈಕೆ.

ಅಡಿಕೆ ಸುಲಿಯೋದು.. ಇದನ್ನು ನಾನು ಇದೇ ಮೊದಲಬಾರಿ ಪ್ರಯತ್ನಿಸ್ತಿದ್ದೀನಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ರಂಜನಿ. ಸಿಂಪಲ್ ಆಗಿ ಸಲ್ವಾರ್ ಹಾಕಿ ಅಪ್ಪಟ ಮಲೆನಾಡ ಹುಡುಗಿಯಂತೆ ಅಡಿಕೆ ಸುಲೀತಿದ್ದಾರೆ ನಟಿ. ನೋಡೋಕೆ ತುಂಬಾ ಚೆನ್ನಾಗಿದೆ. ನೀವೂ ಟ್ರೈ ಮಾಡಿದ್ದೀರಾ ಅಂತ ಫ್ಯಾನ್ಸ್‌ ಹತ್ರ ಕೇಳಿದ್ದಾರೆ.

ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದ ಚಿತ್ರೀಕರಣ ಹೊಸನಗರದ ನಿಟ್ಟೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದೆ. ದಿಗಂತ್ ಜೊತೆ ಕಿರುತೆರೆ ನಟಿ ರಂಜನಿ ಸೇರಿ ಪ್ರಮುಖ ಕಲಾವಿದರು ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದಲ್ಲಿ ದಿಗಂತ್ ಅವರು ರಸಗೊಬ್ಬರ ಅಂಗಡಿಯ ಮಾಲೀಕನ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಪುಟ್ಟ ಗೌರಿ ಮದುವೆ ಖ್ಯಾತಿಯ ರಂಜನಿ ನಾಯಕಿಯಾಗಿ ಅಭಿನಯಿಸಲಿದ್ದಾರೆ.

click me!