ಲಾಯರ್​ ಜಗದೀಶ್​ ಬಿಗ್​ಬಾಸ್​ಗೆ ವಾಪಸ್​ ಬರ್ತಾರಾ? ವೀಕ್ಷಕರ ಕಾಡ್ತಿರೋ ಪ್ರಶ್ನೆಗೆ ಸುದೀಪ್​ ಉತ್ರ ಕೇಳಿ

By Suchethana D  |  First Published Oct 21, 2024, 3:38 PM IST

ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆಗಿರುವ ಲಾಯರ್​ ಜಗದೀಶ್​ ಅವರು ಮತ್ತೊಮ್ಮೆ ವಾಪಸ್​ ಬಂದೇ ಬರುತ್ತಾರೆ ಎಂದು ಕಾಯುತ್ತಿರುವ ವೀಕ್ಷಕರಿಗೆ ಸುದೀಪ್​ ಕೊಟ್ಟ ಉತ್ತರ ಏನು?
 


ಈ ಸಾರಿ ಬಿಗ್ ಬಾಸ್​ನಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದು   ಲಾಯರ್ ಜಗದೀಶ್. ಬಿಗ್​ಬಾಸ್​ಗೆ ಹೇಳಿ ಮಾಡಿಸಿದಂಥ ಕಿರುಚಾಟ, ಗಲಾಟೆ ಜೊತೆಗೆ ತಮಾಷೆ ಮಾಡುತ್ತ ಹಲವು ವೀಕ್ಷಕರಿಗೆ ಬೇಕಾಗಿದ್ದವರು ಜಗದೀಶ್​.  ಈ ಸೀಸನ್​ನಲ್ಲಿ ಹೈಲೈಟ್ ಅಂತ ಇದ್ದಿದ್ದೇ ಜಗದೀಶ್. ಕಂಡಕಂಡವರ ಜೊತೆಗೆ ಕಾಲು ಕೆರೆದುಕೊಡು ಜಗಳ ಆಡ್ತಾ, ಲಾಯರ್ ಪಾಯಿಂಟ್​​ಗಳನ್ನ ಹಾಕ್ತಾ ಇದ್ದ ಜಗ್ಗಿ ಜನರಿಗೆ ಹೇರಳ ಮನರಂಜನೆ ಕೊಟ್ಟಿದ್ರು. ಬರೀ ಮನೆಮಂದಿಗೆ ಮಾತ್ರ ಅಲ್ಲ  , ಸಾಕ್ಷಾತ್ ಬಿಗ್ ಬಾಸ್​​ಗೇನೇ ಚಾಲೆಂಜ್ ಹಾಕಿದ್ರು   ಜಗದೀಶ್. 

ಬೇರೆ ಸ್ಪರ್ಧಿಗಳಿಗೆ  ಮಾತ್ರ ಅಲ್ಲ ಖುದ್ದು ಬಿಗ್ ಬಾಸ್​​ಗೇನೇ ತಿರುಗೇಟು ಕೊಟ್ಟವರು. ಆದ್ರೆ ಈಗ ದೊಡ್ಮನೆಯಿಂದ ಜಗದೀಶ್​ರನ್ನೇ ಹೊರಹಾಕಲಾಗಿದೆ.  ಲಾಯರ್ ಜಗದೀಶ್​ಗೆ ಗೇಟ್ ಪಾಸ್ ಕೊಟ್ಟಿದ್ದನ್ನ ನೋಡಿ ಈ ಸಾರಿಯ ಬಿಗ್ ಬಾಸ್ ಫಿನಿಶ್ ಅಂತಿದ್ದಾರೆ ಜನ. ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್​​ನ ಆಚೆ ಹಾಕಲಾಗಿದೆ. ಮನೆಯ ಮೂಲಭೂತ ನಿಯಮ ಉಲ್ಲಂಘಿಸಿರೋದು, ಮತ್ತೊಂದು ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಕ್ಕೆ  ಲಾಯರ್ ಜಗದೀಶ್​​ನ ಮನೆಯಿಂದ ಹೊರಹೋಗುವಂತೆ ಬಿಗ್ ಬಾಸ್ ಆದೇಶ ಬಂತು. ಆ ಆದೇಶಕ್ಕೆ ತಲೆಬಾಗಿದ ಜಗದೀಶ್ ದೊಡ್ಮನೆಯ ಮುಖ್ಯಬಾಗಿಲಿನಿಂದ ಹೊರಬಂದಿದ್ದಾರೆ. 

Tap to resize

Latest Videos

ಇದೇ ಮೊದಲ ಬಾರಿಗೆ ಬಿಗ್​ಬಾಸ್​ ನಿರ್ಧಾರವನ್ನೇ ಪ್ರಶ್ನಿಸಿದ ಸುದೀಪ್​! ಪ್ರೊಮೋ ರಿಲೀಸ್​

ಈಗ ಹೊರ ಬಂದ ಮೇಲೆ, ತಾವು ಕಿರುಚಾಡಲ್ಲ, ಪುನಃ ಕರೆಸಿಕೊಳ್ಳಿ ಎಂದು ಸುದೀಪ್​ ಅವರ ಬಳಿ ಜಗದೀಶ್​ ದುಂಬಾಲು ಬಿದ್ದಿದ್ದಾರೆ. ಬಿಗ್​ಬಾಸ್​ ಪ್ರೇಮಿಗಳ ಆಸೆಯೂ ಅದೇ ಆಗಿದೆ. ಜಗದೀಶ್​ ಇಲ್ಲದ ಬಿಗ್​ಬಾಸ್​  ನಮಗೆ ಬೇಡ ಎಂದೇ ಸೋಷಿಯಲ್​  ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಇವೆಲ್ಲಾ ಬಿಗ್​ಬಾಸ್​ ಗಿಮಿಕ್​. ಮತ್ತೆ ಜಗದೀಶ್​ ಬಂದೇ ಬರ್ತಾರೆ ಎಂದು ಬಿಗ್​ಬಾಸ್​ ಪ್ರೇಮಿಗಳು ಅಂದುಕೊಂಡಿದ್ದು ಉಂಟು. ಆದರೆ ಯಾವುದೇ ಕಾರಣಕ್ಕೂ ಜಗದೀಶ್​ ಅವರನ್ನು ವಾಪಸ್​ ಕರೆಸಿಕೊಳ್ಳುವುದಿಲ್ಲ ಎಂದು ಸುದೀಪ್​ ಹೇಳಿದ್ದಾರೆ.   ತಪ್ಪು ಮಾಡಿ ಮನೆಯಿಂದ ಹೊರಗೆ ಹಾಕಿಸಿಕೊಂಡವರನ್ನು ಪುನಃ ಮನೆಯ ಒಳಗೆ ಕರೆಸಿಕೊಳ್ಳಬೇಕು ಎಂಬುದಾದರೆ 3ನೇ ಸೀಸನ್​ನಲ್ಲಿ ಹಲ್ಲೆ ಮಾಡಿ ಹೊರಹಾಕಿಸಿಕೊಂಡ ಹುಚ್ಚ ವೆಂಕಟ್​ ಅವರನ್ನು ಕೂಡ ಮತ್ತೆ ಕರೆಸಬೇಕಾಗುತ್ತದೆ. ಆದರೆ ಅದು ಸಾಧ್ಯವಿಲ್ಲ. ಅದನ್ನು ಸುದೀಪ್ ಅವರು ಸ್ಪಷ್ಟಪಡಿಸಿದ್ದಾರೆ. ‘ಹೋಗಿರುವವರ ಬಗ್ಗೆ ಜಾಸ್ತಿ ಮಾತಾಡಲ್ಲ’ ಎಂದು ಹೇಳುವುದರೊಂದಿಗೆ  ಜಗದೀಶ್ ಮತ್ತೆ ಬಿಗ್ ಬಾಸ್ ಮನೆಗೆ ಬರಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
 
ಅಸಲಿಗೆ ಲಾಯರ್ ಜಗದೀಶ್ ಮತ್ತು ರಂಜಿತ್ ನಡುವೆ ಕಳೆದ ಗುರುವಾರ ಮಾರಾಮಾರಿ ನಡೆದಿತ್ತು. ರಂಜಿತ್ ದೈಹಿಕವಾಗಿ ಜಗದೀಶ್​ಗೆ ಘಾಸಿಯಾಗುವಂತೆ ತಳ್ಳಿದ್ರು. ಅಸಲಿಗೆ ಆವಾಗಲೇ ಇವರಿಬ್ಬರನ್ನೂ ಮನೆಯಿಂದ ಹೊರಹಾಕಬೇಕಿತ್ತು. ಆದ್ರೆ ವಾರಾಂತ್ಯದ ಕಿಚ್ಚನ ಪಂಚಾಯತಿಯಲ್ಲಿ ಈ ವಿಚಾರವನ್ನಿಟ್ಟು ಆ ಬಳಿಕ ಮುಂದಿನ ತೀರ್ಮಾನ ಮಾಡಬೇಕು ಅಂತ ಯೋಚಿಸಲಾಗಿತ್ತು. ಆದ್ರೆ ಅದಕ್ಕೆ ಅವಕಾಶವೇ ಕೊಡದಂತೆ ಮತ್ತೆ ಮನೆಯಲ್ಲಿ ಗಲಾಟೆ ಶುರುವಾಗಿತ್ತು. ಸೋ ಏಕಾಏಕಿ ಮಧ್ಯಪ್ರವೇಶಿಸಿದ ಬಿಗ್ ಬಾಸ್ ಈ ಇಬ್ಬರನ್ನೂ ಮನೆಯಿಂದ ಆಚೆ ಹಾಕಿದ್ದಾರೆ. ಹೌದು ಲಾಯರ್​ ಜಗದೀಶ್​ನ ಬಿಗ್ ಬಾಸ್ ಮನೆಯಿಂದ ಆಚೆಹಾಕಿದಾಗ ಮನೆಮಂದಿಯೆಲ್ಲಾ ಚಪ್ಪಾಳೆ ತಟ್ಟಿ ಖುಷಿ ಪಟ್ಟಿದ್ದರು. ಆದರೆ ಬಿಗ್​ಬಾಸ್​ನ ಹಲವು ವೀಕ್ಷಕರಿಗೆ ಇದು ಅಸಮಾಧಾನ ತಂದಿದೆ. 

ಬಿಗ್​ಬಾಸ್​ ಗೌತಮಿ ಜಾಧವ್​ ಮದ್ವೆಯಾಗಿ ಐದು ವರ್ಷ: ಸಿನೆಮಾ ಸೆಟ್​ನಲ್ಲಿ ಶುರುವಾದ ಲವ್​ ಸ್ಟೋರಿ ಕೇಳಿ...

click me!