ನದಿ ಬಳಿ ನಿಂತು ಬದುಕಿದ್ದರೆ ಮತ್ತೆ ಸಿಗ್ತೇನೆ ಎಂದ 'ಭಾಗ್ಯಲಕ್ಷ್ಮಿ' ನಟಿ ಸುಷ್ಮಾ: ಆತಂಕಗೊಂಡ ಫ್ಯಾನ್ಸ್​

By Suchethana D  |  First Published Oct 21, 2024, 1:07 PM IST

ಭಾಗ್ಯಲಕ್ಷ್ಮಿ ನಟಿ ಸುಷ್ಮಾ ಕೆ.ರಾವ್​ ಸೇತುವೆ ಮೇಲೆ ನಿಂತು ಬದುಕಿದ್ದರೆ ಸಿಗ್ತೇನೆ ಎಂದು ಹೇಳೋದಾ? ಮಾತು ಕೇಳಿ ನೊಂದುಕೊಂಡಿರುವ ಫ್ಯಾನ್ಸ್​
 


ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯ ಸುಷ್ಮಾ ಕೆ. ರಾವ್​ ಸೀರಿಯಲ್​ನಲ್ಲಿ ಒಮ್ಮೆ ಪೆದ್ದು, ಮತ್ತೊಮ್ಮೆ ದಿಟ್ಟ ಹೆಣ್ಣಾಗಿ ಸದ್ಯ ಅಳುಮುಂಜಿ ಪಾತ್ರ ಮಾಡುತ್ತಿದ್ದಾರೆ. ರಿಯಲ್​ ಲೈಫ್​ನಲ್ಲಿ ಸಕತ್​ ಹಾಸ್ಯ ಪ್ರಜ್ಞೆ ಹೊಂದಿರುವ ನಟಿ, ತಮಾಷೆಯ ರೀಲ್ಸ್​ ಮಾಡುತ್ತಿರುತ್ತಾರೆ. ಇದೀಗ ವೆಕೇಷನ್​ ಮೂಡ್​ನಲ್ಲಿದ್ದಾರೆ ನಟಿ. ನದಿಯ ಸೇತುವೆಯ ಮೇಲೇರಿ ನಿಂತು ನಟಿ, ಈಗ ಸ್ವಿಮ್ಮಿಂಗ್​ ಟೈಮ್​. ಟೈಮ್​ ಎಷ್ಟು ಎಂದು ಹೇಳುವುದಿಲ್ಲ. ಇದೇ ನನ್ನ ಸ್ವಿಮ್ಮಿಂಗ್​ ಫೂಲ್​ ಎಂದು ನದಿಯನ್ನು ತೋರಿಸಿದ್ದಾರೆ. ಬಳಿಕ ಸ್ವಿಮ್​ ಮಾಡಲು ಹೋಗುತ್ತಿದ್ದೇನೆ. ಬದುಕಿದ್ದರೆ ಸಿಗ್ತೇನೆ ಎಂದು ಹೇಳಿದ್ದಾರೆ. ಕೊನೆಯಲ್ಲಿ ನದಿಯಲ್ಲಿ ಸ್ವಿಮ್​ ಮಾಡುತ್ತಿರುವ ವಿಡಿಯೋ ಹಾಕಿದ್ದಾರೆ. ಇಲ್ಲಿ ಈಜುತ್ತಿರುವುದು ನಟಿ ಹೌದೋ, ಅಲ್ಲವೋ ಎನ್ನುವ ಗೊಂದಲವಿದೆ. ಅದನ್ನು ನೋಡಿದರೆ ಬೇರೆ ಯಾರೋ ಸ್ವಿಮ್​  ಮಾಡುವಂತೆ ಕಾಣುತ್ತಿದೆ ಎನ್ನುವುದು ನೆಟ್ಟಿಗರ ಅಭಿಮತ.

ಅಲ್ಲಿ ಈಜುತ್ತಿರುವುದು ಯಾರೇ ಆಗಿರಲಿ...  ಆದರೆ ಬದುಕಿದ್ದರೆ ಸಿಗ್ತೇನೆ ಎಂದು ನಟಿ ಹೇಳಿರುವುದನ್ನು ಕೇಳಿ ಸುಷ್ಮಾ ಅವರ ಫ್ಯಾನ್ಸ್​ ತುಂಬಾ ನೊಂದುಕೊಂಡಿದ್ದಾರೆ. ಪ್ಲೀಸ್​ ಹೀಗೆಲ್ಲಾ ಮಾತನಾಡಬೇಡಿ, ಯಾಕೆ ಬದುಕಿದ್ದರೆ ಎಂದು ಹೇಳುತ್ತೀರಿ. ಇಂಥ ಅಸಭ್ಯ ಮಾತು ಸಲ್ಲದು, ನಮಗೆ ತುಂಬಾ ನೋವಾಗುತ್ತದೆ ಎಂದು ಹೇಳಿದ್ದಾರೆ. ಬದುಕಿದ್ದರೆ ಅಂದೆ ಏನರ್ಥ? ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ನಿಮ್ಮ ಈ ಟ್ಯಾಲೆಂಟ್​ ಎಲ್ಲಾ ತಾಂಡವ್​ಗೆ ತೋರಿಸಿ, ಶ್ರೇಷ್ಠಾಳನ್ನು ಬಿಟ್ಟು ಓಡಿ ಬರ್ತಾನೆ ಗಂಡ ಎಂದು ತಮಾಷೆ ಮಾಡಿದ್ದರೆ, ಅಲ್ಲಿ ನೀವು-ತಾಂಡವ್​ ಒಂದಾಗ್ತಿರೋ ಇಲ್ಲವೋ ಎನ್ನುವ ಟೆನ್ಷನ್​ ನಮಗಾದರೆ, ಇಲ್ಲಿ ಜಾಲಿ ಮೂಡ್​ನಲ್ಲಿ ಇದ್ದೀರಿ ಎಂದು ಮತ್ತೆ ಕೆಲವರು ನಟಿಯ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಸುಷ್ಮಾ ಅವರ ಈ ವಿಡಿಯೋಗೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಸಾಮಾನ್ಯವಾಗಿ ನಟಿ, ತಮ್ಮ ವಿಡಿಯೋಗಳಿಗೆ ಕಮೆಂಟ್​ ಮಾಡುವವರಿಗೆ ರಿಪ್ಲೈ ಮಾಡುತ್ತಾರೆ. ಇದೇ ಕಾರಣಕ್ಕೆ ಇವರ ವಿಡಿಯೋಗೆ ಅಭಿಮಾನಿಗಳ ಸಂಖ್ಯೆ ಸ್ವಲ್ಪ ಹೆಚ್ಚಾಗಿಯೇ ಇದೆ. 

Tap to resize

Latest Videos

ಹೊಸ ಹೊಸ ಬಯಕೆಯು ನಿನ್ನಿಂದ... ಎಂದ ಪೂರ್ಣಿ- ಅಪೇಕ್ಷಾ: ಯಾರಿಂದ ಹೇಳ್ರಪ್ಪ ಅಂತಿರೋ ಕಮೆಂಟಿಗರು...

ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.  

undefined

ಇನ್ನು ಆ್ಯಂಕರ್​ ಆಗಿಯೂ ನಟಿ ಸಾಕಷ್ಟು ಫೇಮಸ್​ ಆಗಿದ್ದಾರೆ. ಈ ಹಿಂದೆ ಆ್ಯಂಕರಿಂಗ್​ ಸವಾಲುಗಳ ಬಗ್ಗೆಯೂ ಇವರು ಮಾತನಾಡಿದ್ದರು. ‘ಟಾಕ್‌ ಬ್ಯಾಕ್‌ನಲ್ಲಿ ಹಿಂದಿನಿಂದ ಕಮಾಂಡ್‌ ಕೊಡ್ತಾ ಇರುತ್ತಾರೆ. ಟಾಕ್‌ಬ್ಯಾಕ್‌ ಅಂದ್ರೆ ಮೈಕ್ರೋಫೋನಲ್ಲಿ ಸ್ಟೇಜ್‌ ಹಿಂದೆ ಕೂತವರು ಯಾರೋ ಸ್ಕ್ರಿಪ್ಟ್​ ಡಿಕ್ಟೇಟ್‌ ಮಾಡುತ್ತಾ ಇರುತ್ತಾರೆ. ಇನ್ಯಾರೋ ನಿರ್ದೇಶನ ಮಾಡುತ್ತಿರುತ್ತಾರೆ. ಇಷ್ಟನ್ನೂ ಏಕಕಾಲದಲ್ಲಿ ಗ್ರಹಿಸಿ ಮಾತನಾಡಬೇಕು. ರೀ​-ಟೇಕ್‌ಗೆ ಇಲ್ಲಿ ಆಸ್ಪದವಿಲ್ಲ. ಇದೇ ಹೊತ್ತಿಗೆ ಸ್ಟೇಜ್‌ನಲ್ಲಿರುವ ಸೆಲೆಬ್ರಿಟಿಗಳನ್ನು ಮಾತಾಡಿಸ್ತಾ, ಸಭಿಕರನ್ನೂ ಶೋದಲ್ಲಿ ಒಳಗೊಳಿಸ್ತಾ ಹೋಗಬೇಕು. ಇದೊಂಥರಾ ಹಗ್ಗದ ಮೇಲಿನ ನಡಿಗೆ ಇದ್ದಹಾಗೆ. ಸ್ವಲ್ಪ ಎಡವಟ್ಟಾದ್ರೂ ಹೋಯ್ತು. ಈ ಕಾಲದ ಆ್ಯಂಕರಿಂಗ್‌ಗೆ ಟ್ಯಾಲೆಂಟ್‌ ಜೊತೆಗೆ ಈ ಥರ ಮ್ಯಾನೇಜ್‌ ಮಾಡಿಕೊಂಡು ಹೋಗುವ ಸ್ಕಿಲ್‌ ಸಹ ಬೇಕು’ ಎಂದಿದ್ದರು.  

ವಿಚಿತ್ರ ಬಟ್ಟೆ ಧರಿಸಿ ವೇದಿಕೆಯಲ್ಲಿ ಒಂದೊಂದೇ ಕಳಚಿದ ಉರ್ಫಿ ಜಾವೇದ್! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು

click me!