ಮಹಿಳಾ ಸ್ಪರ್ಧಿಗಳ ವಿಚಾರವಾಗಿ ಅಸಭ್ಯ ಭಾಷೆ ಬಳಸಿದ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಆಚೆ ಹಾಕಲ್ಪಟ್ಟ ಜಗದೀಶ್‌ಗೆ ಹೊರಗೆ ಅಪಾರ ಬೆಂಬಲ ವ್ಯಕ್ತವಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ತಮ್ಮ ಬಿಗ್ ಬಾಸ್ ಜರ್ನಿ ಬಗ್ಗೆ ಅವರು ಮಾತನಾಡಿದ್ದಾರೆ.
ಬೆಂಗಳೂರು (ಅ.21): ಬಿಗ್ ಬಾಸ್‌ನಲ್ಲಿ ಕಳೆದ ವಾರ ಬಿಗ್ ಬೆಳವಣಿಗೆಗಳು ಆಗಿವೆ. ಮಹಿಳಾ ಸ್ಪರ್ಧಿಗಳ ಬಗ್ಗೆ ಅಸಭ್ಯವಾಗಿ ಮಾತನಾಡಿದ ಕಾರಣಕ್ಕೆ ಸ್ವತಃ ಬಿಗ್ ಬಾಸ್ ಜಗದೀಶ್ ಅವರನ್ನು ಮನೆಯಿಂದ ಹೊರಹಾಕಿದ್ದಾರೆ. ಇನ್ನು ಜಗದೀಶ್ ಮೇಲೆ ದೈಹಿಕ ಹಲ್ಲೆ ಮಾಡಿದ್ದ ಕಾರಣಕ್ಕೆ ಇನ್ನೊಬ್ಬ ಸ್ಪರ್ಧಿ ರಂಜಿತ್ ಅವರನ್ನೂ ಮನೆಯಿಂದ ಹೊರಹಾಕಲಾಗಿದೆ. ಮನೆಯಿಂದ ಹೊರಬಂದ ಬಳಿಕ ಜಗದೀಶ್‌ಗೆ ಸಿಕ್ಕಿರುವ ಬೆಂಬಲ ಕಂಡು ಅಚ್ಚರಿಪಟ್ಟಿದ್ದಾರೆ. ಇನ್ನು ಕಿಚ್ಚ ಸುದೀಪ್ ಕೂಡ ವಾರದ ಪಂಚಾಯ್ತಿಯಲ್ಲಿ ಮನೆಯ ಸದಸ್ಯರು ಜಗದೀಶ್ ಅವರ ವಿಚಾರದಲ್ಲಿ ಮಾಡಿದ ತಪ್ಪುಗಳನ್ನು ಎತ್ತಿ ತೋರಿಸಿದ ಬಳಿಕ, ಜಗದೀಶ್ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಹೋಗಬೇಕು ಎನ್ನುವ ವಾದಗಳೂ ಕೇಳಿ ಬರುತ್ತಿವೆ. ಈ ನಡುವೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಆಗಮಿಸಿದ್ದ ಜಗದೀಶ್ ತಮ್ಮ ಬಿಗ್ ಬಾಸ್ ಪ್ರಯಾಣವನ್ನು ಹಂಚಿಕೊಂಡಿದ್ದಲ್ಲದೆ, ಜನರ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ. ಅದರೊಂದಿಗೆ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನೂ ಅವರು ಹಂಚಿಕೊಂಡಿದ್ದಾರೆ.
ಶಿಶಿರ್: ಈತ ಬಿಗ್ ಬಾಸ್‌ನ ಶಕುನಿ. ಯೋಚನೆಗಳೂ ಹಾಗೆ ಇರುತ್ತದೆ.
ಧರ್ಮ ಕೀರ್ತಿರಾಜ್: ಬಿಗ್ ಬಾಸ್ ಮನೆಯ ಲವರ್ ಬಾಯ್.
ಅನುಷಾ ರೈ: ಬಿಗ್ ಬಾಸ್ ಮನೆಯ ಸೈಲೆಂಟ್ ಕಿಲ್ಲರ್ ಅನುಷಾ
ರಂಜಿತ್: ಬಿಗ್ ಬಾಸ್ ಮನೆಯ ಅಮಾಯಕ ರಂಜಿತ್. 14 ವರ್ಷದ ಹೋರಾಟ, ಒಂದೇ ಕ್ಷಣದಲ್ಲಿ ಹಾಳು ಮಾಡಿಕೊಂಡ. ಸ್ವೀಟ್ 16 ಈತನನ್ನ ಪ್ರಚೋದನೆ ಮಾಡಿದ್ರು ಅನ್ನೋದು ಗೊತ್ತಾಗುತ್ತೆ. ತಾನೊಬ್ಬ ನಟ ಅನ್ನೋದನ್ನ ರಂಜಿತ್ ಮರೆಯಬಾರದು.
ತ್ರಿವಿಕ್ರಮ್: ಷಡ್ಯಂತ್ರ ಮಾಡುವ ವ್ಯಕ್ತಿ.
ಮಾನಸ ತುಕಾಲಿ ಸಂತೋಷ್: ಏನೂ ಕಂಟೆಂಟ್ ಇಲ್ಲದೆ ಬಿಗ್ ಬಾಸ್ ಮನೆಯಲ್ಲಿರುವ ವ್ಯಕ್ತಿ
ಭವ್ಯ ಗೌಡ: ತಾನು ಭವ್ಯವಾಗಿದ್ದೇನೆ ಎಂದು ಆಕೆ ಅಂದುಕೊಳ್ತಿದ್ದಾಳೆ.ಆದರೆ, ಹಾಗೇನೂ ಇಲ್ಲ. ಆಕೆ ಖಾಲಿ ದೋಸೆ.
ಹಂಸ: ಆಕೆ ಸ್ವೀಟ್ ಹಾರ್ಟ್. ತಮ್ಮಿಂದ ಏನು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದಾಳೆ. ಆಕೆ ಆಟ ಆಡ್ತಿದ್ದಾಳೆ.ನನ್ನ ಜೊತೆ ಸೇಫ್ ಜೋನ್‌ಅನ್ನ ರೂಪಿಸಿಕೊಳ್ತಾ ಇದ್ರು. ಕಂಟೆಂಟ್ ಕ್ರಿಯೇಟ್ ಮಾಡೋಕೆ ಅವರು ಸಹಾಯ ಮಾಡಿದ್ದಾರೆ. ಆಕೆಯ ವಿಚಾರವಾಗಿ ಸಾಫ್ಟ್ ಕಾರ್ನರ್ ಇದೆ.
ಐಶ್ವರ್ಯಾ: ಒಳ್ಳೆಯ ವ್ಯಕ್ತಿ.ಸಮಯ ಇದ್ದಾಗ ಆಕೆ ನನ್ನನ್ನು ಬಳಸಿಕೊಂಡ್ರು.ಐಶ್ವರ್ಯಾ ಅನ್ನೋ ಹೆಸರೇ ನನಗೆ ಇಷ್ಟ.
ಮೋಕ್ಷಿತಾ: ಬಿಗ್ ಬಾಸ್ ಮನೆಯ ಬಕೆಟ್. ಶಿಶಿರ್‌ಗೆ ಆಕೆ ಬಕೆಟ್ ಅಷ್ಟೇ.
ಗೌತಮಿ ಜಾಧವ್: ಆಕೆ ಮನೆಯಲ್ಲಿ ಕ್ಯಾಟ್‌ವಾಕ್ ಮಾಡೋಕೆ ಮಾತ್ರ ಇದ್ದಾರೆ.ಆಕೆ ಏನೂ ಕಂಟೆಂಟ್ ಕೊಡೋದಿಲ್ಲ.
ಧನರಾಜ್: ಸ್ವೀಟ್‌ಬೇಬಿ, ಉತ್ತಮ ಕಾಮಿಡಿಯನ್.ಆದ್ರೆ ಕಾಮಿಡಿ ಮಾಡೋಕೆ ಅವನಲ್ಲೇ ಭಯ ಇದೆ.
ಗೋಲ್ಡ್ ಸುರೇಶ್: ಹೇಳೋಕೆ ಮಾತ್ರ ಗೋಲ್ಡ್ ಸುರೇಶ್. ಆತ ರೋಲ್ಡ್ ಗೋಲ್ಡ್ ಸುರೇಶ್. ಅವನ ಮನಸ್ಸು ಗೋಲ್ಡ್ ಇದೆ ಅಂತಾ ಅನಿಸ್ಲಿಲ್ಲ. ಆತ ತುಂಬಾ ಸ್ವಾರ್ಥಿ ಅನಿಸುತ್ತೆ.
ಉಗ್ರಂ ಮಂಜು: ನಾನು ಬಿಗ್ ಬಾಸ್ ಮನೆಯಲ್ಲಿ ಹೀರೋ ಆಗಿದ್ದರೆ ಅದಕ್ಕೆ ಮಂಜಣ್ಣನೇ ಕಾರಣ. ಐ ಲವ್ ಹಿಮ್
ಚೈತ್ರಾ ಕುಂದಾಪುರ: ಆಕೆ ಡ್ರಾಮಾ ಕ್ವೀನ್. ಅದು ಇರೋದೇ ಬೇರೆ ಥರ. ಅಲ್ಲಿ ಆಡ್ತಾ ಇರೋದೇ ಬೇರೆ ರೀತಿ.
ಲಾಯರ್ ಜಗದೀಶ್ ಎಕ್ಸ್‌ಕ್ಲೂಸಿವ್ ಸಂದರ್ಶನ: ಬಿಗ್ ಬಾಸ್ ಸ್ಪರ್ಧೆ ಬಗ್ಗೆ ಉಲ್ಟಾ ಹೊಡೆದ ವಕೀಲ!
ಯಮುನಾ ಶ್ರೀನಿಧಿ: ನನ್ನ ತಂಗಿ ರೀತಿ. ಒಳ್ಳೆಯ ವ್ಯಕ್ತಿ.ನನ್ನ ರೀತಿಯಲ್ಲೇ ನೇರವಾಗಿ ಮಾತನಾಡ್ತಾ ಇದ್ರು. ಅವರಿಗೆ ಅವಕಾಶ ಸಿಗಬೇಕಾಗಿತ್ತು. 2-3 ವಾರ ಅವರು ಇರಬೇಕಾಗಿತ್ತು.
ಉಗ್ರಂ ಮಂಜು, ಚೈತ್ರಾ, ಮಾನಸಗೆ ಪಂಚಾಯ್ತಿಯಲ್ಲಿ ಬೆಂಡೆತ್ತಿದ ಕಿಚ್ಚ ಸುದೀಪ್
ಹನುಮಂತು: ಇವನನ್ನು ಹಿಂಡಿ ಹಿಪ್ಪೆ ಮಾಡಿ ಹಾಕ್ತಾರೆ. ಡಸ್ಟ್‌ಬಿನ್‌ಗೆ ನೆಕ್ಸ್ಟ್ ಅವನೇ ಹೋಗೋದು.