ಸ್ಟಾರ್‌ ಸುವರ್ಣದಲ್ಲಿ ಲಾಕ್‌ಡೌನ್‌ ಬಳಿಕ ಕನ್ನಡದ ಮೊದಲ ಹೊಸ ಧಾರವಾಹಿ ಸಂಘರ್ಷ!

Kannadaprabha News   | Asianet News
Published : Jun 15, 2020, 09:42 AM ISTUpdated : Jun 15, 2020, 09:48 AM IST
ಸ್ಟಾರ್‌ ಸುವರ್ಣದಲ್ಲಿ ಲಾಕ್‌ಡೌನ್‌ ಬಳಿಕ ಕನ್ನಡದ ಮೊದಲ ಹೊಸ ಧಾರವಾಹಿ ಸಂಘರ್ಷ!

ಸಾರಾಂಶ

ಸ್ಟಾರ್‌ ಸುವರ್ಣ ವಾಹಿನಿಯ ವೀಕ್ಷಕರಿಗೆ ಜೂನ್‌ ತಿಂಗಳಿನಲ್ಲಿ ನೂತನ ಧಾರಾವಾಹಿ, ನೂತನ ಸಂಚಿಕೆಗಳ ಮನರಂಜನೆಯ ಹಬ್ಬ. ಲಾಕ್‌ಡೌನ್‌ ಸಮಯದಲ್ಲಿ ಮಹಾಭಾರತ ಮತ್ತು ರಾಧಾಕೃಷ್ಣ ಧಾರಾವಾಹಿಗಳನ್ನು ಕನ್ನಡದಲ್ಲಿ ಪ್ರಸಾರ ಮಾಡುವ ಮೂಲಕ ವೀಕ್ಷಕರ ಮನಗೆದ್ದು ಪ್ರೈಂ ಟೈಂನಲ್ಲಿ ನಂ.1 ಸ್ಥಾನಕ್ಕೇರಿದ್ದ ಸ್ಟಾರ್‌ ಸುವರ್ಣ ವಾಹಿನಿ ಇದೀಗ ಒಂದೇ ಗುರಿ ಎರಡು ದಾರಿ ಎನ್ನುವ ಇಬ್ಬರು ಪ್ರಭಾವಿ ಮಹಿಳೆಯರ ನಡುವಿನ ಸಂಘರ್ಷದ ಕತೆಯನ್ನು ಪ್ರಸ್ತುತಪಡಿಸುತ್ತಿದೆ.

ಅಧಿಕಾರ ಮತ್ತು ಅಹಂಕಾರದ ಪ್ರತಿರೂಪ ಭೈರಾದೇವಿ ಮತ್ತು ಕರ್ತವ್ಯವೇ ಬದುಕು ಎಂದು ನಂಬಿರುವ ಐಎಎಸ್‌ ಅಧಿಕಾರಿ ಇಂದಿರಾ ನಡುವಿನ ಕತೆ ಸಂಘರ್ಷ. ಭೈರಾದೇವಿಯ ಮಗ ರಾಜ ಮತ್ತು ಇಂದಿರಾ ನಡುವೆ ಪ್ರೀತಿ ಮೂಡಿದಾಗ , ಭೈರಾದೇವಿ ಮತ್ತು ಇಂದಿರಾ ನಡುವಿನ ಸಂಘರ್ಷ ದೊಡ್ಡ ತಿರುವು ಪಡೆಯಲಿದೆ. ಉತ್ತಮ ಕತೆ ಮತ್ತು ಅತ್ಯುತ್ತಮ ನಿರ್ಮಾಣದ ಮೂಲಕ ಧಾರಾವಾಹಿಯ ಪ್ರೋಮೋಗಳು ಈಗಾಗಲೇ ಸಾಮಾಜಿಕ ತಾಣಗಳಲ್ಲಿ ವೀಕ್ಷಕರ ಮೆಚ್ಚುಗೆ ಗಳಿಸಿವೆ.

ಡಬ್ಬಿಂಗಿಗೆ ದಾರಿ ಮಾಡಿಕೊಟ್ಟ ಲಾಕ್‌ಡೌನ್‌;ಡಬ್‌ ಆದ ಧಾರಾವಾಹಿ, ಸಿನಿಮಾ ಸೂಪರ್‌ ಹಿಟ್‌! 

ಸಂಘರ್ಷದ ಜೊತೆ ದೃಷ್ಟಿಧಾರಾವಾಹಿ ಕೂಡ ಕನ್ನಡದಲ್ಲಿ ಪ್ರಸಾರವಾಗಲಿದೆ. ಕನ್ನಡ ಕಿರುತೆರೆಯಲ್ಲಿ ಹಿಂದೆಂದು ಕಂಡಿರದ ಅಮಾನುಷ ಶಕ್ತಿಯ ಸೇಡಿನ ಧಾರಾವಾಹಿ ದೃಷ್ಟಿ, ತಂತ್ರಜ್ಞಾನ ಮತ್ತು ಗುಣಮಟ್ಟದ ಗ್ರಾಫಿಕ್ಸ್‌ ಮೂಲಕ ವೀಕ್ಷಕರ ಕುತೂಹಲ ಹೆಚ್ಚಿಸಿದೆ.

ಶ್ರುತಿ ನಾಯ್ಡು ನಿರ್ಮಾಣದ ಧಾರಾವಾಹಿ

ಸಿನಿಮಾ ಮತ್ತು ಕಿರುತೆರೆಯ ಜನಪ್ರಿಯ ನಟಿ ವನಿತಾ ವಾಸು, ಭೈರಾದೇವಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಐಎಎಸ್‌ ಅಧಿಕಾರಿ ಇಂದಿರಾ ಪಾತ್ರದಲ್ಲಿ ನೀಲಿ ಧಾರವಾಹಿ ಖ್ಯಾತಿಯ ತೇಜಸ್ವಿನಿ, ಮತ್ತು ಭೈರಾದೇವಿಯ ಮಗ ರಾಜನ ಪಾತ್ರದಲ್ಲಿ ರೋಹಿತ್‌ ನಟಿಸಿದ್ದಾರೆ. ಸುಂದರ್‌ರಾಜ್‌, ರೂಪ ಪ್ರಭಾಕರ್‌, ಸುಧಾ ಪ್ರಸನ್ನ, ಸುನಿಲ್‌ ಸಾಗರ್‌, ನಾಗೇಂದ್ರ ಶಾ, ಸುಂದರ್‌, ವಿರಾಟ್‌, ಸಿಂಚನ ಧಾರಾವಾಹಿಯ ಉಳಿದ ಪಾತ್ರಗಳಲ್ಲಿದ್ದಾರೆ. ಶ್ರುತಿ ನಾಯ್ಡು ನಿರ್ಮಾಣ ಸಂಸ್ಥೆ ಸಂಘರ್ಷ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ಲೋಕೇಶ್‌ ಭವಾನಿಯವರು ನಿರ್ದೇಶಿಸುತ್ತಿದ್ದಾರೆ.

ಸ್ಟಾರ್‌ ಸುವರ್ಣದಲ್ಲಿ ಪೌರಾಣಿಕ ಪಾತ್ರಗಳ ಮಹಾಕಥನ;ಮಹಾಭಾರತ, ರಾಧಾ-ಕೃಷ್ಣ!

‘ಪ್ರೇಮ ಲೋಕ’ ಧಾರಾವಾಹಿ ಕೂಡ ಶೀಘ್ರದಲ್ಲೇ ಪ್ರಸಾರವಾಗಲಿದ್ದುಸೂರ್ಯ ಮತ್ತು ಪ್ರೇರಣಾಳ ಪ್ರೇಮಕಾವ್ಯದಲ್ಲಿ ಸುಧೀರ್‌ ಪ್ರವೇಶವಾಗಲಿದೆ. ಸುಧೀರ್‌ ನೆನಪಿನ ಶಕ್ತಿ ಮರುಕಳಿಸುತ್ತಾ, ಮನಸ್ವಿನಿ ಇಷ್ಟುದಿನ ಸುಧೀರ್‌ ಎಂದು ನಂಬಿರುವ ವ್ಯಕ್ತಿ ಸೂರ್ಯ ಎನ್ನುವ ಸತ್ಯ ತಿಳಿಯುತ್ತಾ ಎನ್ನುವ ಪ್ರಶ್ನೆಗಳಿಗೆ ಹೊಸ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.

ಸ್ಟಾರ್‌ ಸುವರ್ಣ ವಾಹಿನಿ ಜೂನ್‌ ತಿಂಗಳಿನಲ್ಲಿ ಮುದ್ದುಲಕ್ಷ್ಮಿ, ಇಂತಿ ನಿಮ್ಮ ಆಶಾ ಮತ್ತು ಜೀವಾ ಹೂವಾಗಿದೆ ಧಾರಾವಾಹಿಗಳ ಹೊಸ ಸಂಚಿಕೆಗಳನ್ನು ಪ್ರಸಾರ ಮಾಡುವ ಮೂಲಕ, ಅಂದು ಇಂದು ಎಂದೆಂದು ನಿರಂತರವಾಗಿ ವೀಕ್ಷಕರನ್ನು ರಂಜಿಸುತ್ತಿದ್ದು, ಇನ್ನಷ್ಟುವಿನೂತನ ಕತೆಗಳ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನಗೆಲ್ಲಲು ಸಜ್ಜಾಗಿದೆ.

'ಸರ್ವಮಂಗಳ ಮಾಂಗಲ್ಯ'ಯ ಮುದ್ದಾದ ನಟಿ ಐಶ್ವರ್ಯ ಪಿಸ್ಸೆ ಫೋಟೋ ನೋಡಿ!

ಸ್ಟಾರ್‌ ಮೂವೀಸ್‌ನಲ್ಲಿ ಟಾಯ್‌ ಸ್ಟೋರಿ 4

ಸ್ಟಾರ್‌ ಇಂಡಿಯಾ ನೆಟ್‌ವರ್ಕ್ ತನ್ನ ವಿನೂತನ ಮತ್ತು ಅತ್ಯಾಕರ್ಷಕ ಕಾರ್ಯಕ್ರಮಗಳ ಮೂಲಕ ಪ್ರತಿ ತಿಂಗಳು 70 ಕೋಟಿ ಮನೆಗಳನ್ನು ತಲುಪುತ್ತಿದೆ. ಹಾಲಿವುಡ್‌ ಸಿನಿಮಾ ಪ್ರಿಯರಿಗೆ ಜೂನ್‌ 14ರಂದು ಸ್ಟಾರ್‌ ಮೂವೀಸ್‌ ವಾಹಿನಿಯಲ್ಲಿ ಡಿಸ್ನಿ-ಪಿಕ್ಸಾರ್‌ನ ಟಾಯ್‌ ಸ್ಟೋರಿ 4, ಎಕ್ಸ್‌ ಮೆನ್‌- ಡಾರ್ಕ್ ಫೀನಿಕ್ಸ್‌ ಸಿನಿಮಾಗಳು ಪ್ರಸಾರವಾಗಲಿವೆ. ನ್ಯಾಷನಲ್‌ ಜಿಯೋಗ್ರಾಫಿಕ್‌ ವಾಹಿನಿಯಲ್ಲಿ ಜೂನ್‌ 12 ರಂದು Coronavirus Race aginst pandemic ಪ್ರಸಾರವಾಗಲಿದೆ. ಸ್ಟಾರ್‌ ಸ್ಪೋಟ್ಸ್‌ರ್‍ನಲ್ಲಿ ಜೂನ್‌ 17ರಿಂದ ರೋಮಾಂಚನಕಾರಿ & Bundesliga  ಮತ್ತು Premiere league(Foodball) ಪ್ರಸಾರವಾಗಲಿದೆ. ಮಕ್ಕಳಿಗಾಗಿ ಡಿಸ್ನಿ ಚಾನಲ್‌ನಲ್ಲಿ ಬಾಪು ಮತ್ತು ಗುಡ್ಡು ಹಾಗು ಹಂಗಾಮಾ ಚಾನಲ್‌ನಲ್ಲಿ ಹಾಗೆಮಾರು ಕಾರ್ಯಕ್ರಮಗಳು ಪ್ರಸಾರವಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!