
ಬೆಂಗಳೂರು(ಜೂ. 12) 'ಮಗಳು ಜಾನಕಿ'ಯ ಕೊನೆಯ ಕಂತು ಜೂ. 12 ರಂದು 9.30ಕ್ಕೆ ಪ್ರಸಾರವಾಗಲಿದ್ದು, ಅದನ್ನು ನಿರ್ದೇಶಕ ಟಿಎನ್ ಸೀತಾರಾಮ್ ಅತ್ಯಂತ ಭಾವುಕರಾಗಿ ಒಂದೇ ಸಾಲಿನಲ್ಲಿ ತಿಳಿಸಿದ್ದಾರೆ.
ಆಪ್ತರಿಗೆ ಅಂತಿಮ ವಿದಾಯ ಹೇಳುವಂತೆ ಸೀತಾರಾಮ್ 'ಮಗಳು ಜಾನಕಿ'ಗೂ ಹೇಳಿದ್ದಾರೆ. 'ಹೋಗಿ ಬಾ ಜಾನಕಿ' ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅವರ ಪೋಸ್ಟ್‌ಗೆ ಕೆಲವೇ ನಿಮಿಷಗಳಲ್ಲಿ ನೂರಾರು ಮಂದಿ ಕಾಮೆಂಟ್ ಮಾಡಿದ್ದು, ತಮ್ಮ ಬೇಸರ ಹಂಚಿಕೊಂಡಿದ್ದಾರೆ.
ಮಗಳು ಜಾನಕಿ ಧಾರಾವಾಹಿಗೆ ಸೀತಾರಾಮ್ ಮುಕ್ತಿ ಮುಕ್ತಿ ಮುಕ್ತಿ
ಈ ಕೊರೋನಾ ಲಾಕ್ ಡೌನ್ ಎನ್ನುವುದು ಸದಭಿರುಚಿಯ ಧಾರಾವಾಹಿಯೊಂದಕ್ಕೆ ಅಂತ್ಯ ಹಾಡಿದೆ. ಕಾಯಂ ವೀಕ್ಷಕರಿಗೆ ಇದೊಂದು ಅರಗಿಸಿಕೊಳ್ಳಲಾಗದ ಸಂಗತಿ. ನಿರ್ದೇಶಕ ಟಿಎನ್ ಸೀತಾರಾಮ್ ಮತ್ತೊಮ್ಮೆ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಅಭಿಮಾನಿಗಳ ಮುಂದೆ ಬಂದು ಮಗಳು ಜಾನಕಿಯ ಕತೆ ಹೇಳಿದ್ದರು ಮಗಳು ಜಾನಕಿ ನಿಲ್ಲುತ್ತಿರುವುದಕ್ಕೆ ವಾಹಿನಿ ಮುಖ್ಯಸ್ಥರ ಮೇಲೆ ಬೇಸರ ಮಾಡಿಕೊಳ್ಳುವುದು ಸರಿ ಅಲ್ಲ ಎಂದು ವಿನಂತಿ ಮಾಡಿಕೊಂಡಿದ್ದರು.
ಮಗಳು ಜಾನಕಿ, ಮಾತುಗಳಿವೆ ಬಾಕಿ; ಸೀತಾರಾಮ್ ಸಂದರ್ಶನ
ಮಗಳು ಜಾನಕಿಯಲ್ಲಿಗ ರಾಜಕೀಯ ಕಾವೇರಿತ್ತು. ಅಳಿಯ ನಿರಂಜನ್ ಮತ್ತು ಮಾವ ಚಂದು ಬಾರ್ಗಿ ನಡುವೆ ಚುನಾವಣೆ ಫೈಟ್ ನಡೆಯುತ್ತಿತ್ತು. ಇನ್ನೊಂದು ಕಡೆ ಮದುವೆ ಸಂಭ್ರಮ ಇತ್ತು. ಇದೆಲ್ಲದರ ನಡುವೆ ಸದಭಿರುಚಿಯ ಧಾರಾವಾಹಿ ಅಂತ್ಯವಾಗುತ್ತಿದೆ.
ಜಂಗಮದುರ್ಗ, ಸಿಎಸ್‌ಪಿ, ಮಂಗಳತ್ತೆ, ಚಂದು ಬಾರ್ಗಿ, ನಿರಂಜನ, ಚಂಚಲಾ, ಶೀಲಾ ಭೂಷಣ್, ಆನಂದ್, ಸಂಜನಾ ಇನ್ನು ಕಾಣಸಿಗುವುದಿಲ್ಲ. ಟಿ.ಎನ್.ಸೀತಾರಾಮ್ ಮುಖ್ಯ ಭೂಮಿಕೆಯಲ್ಲಿ ತಂದೆಯಾಗಿ ಕಾಣಿಸಿಕೊಂಡಿದ್ದರು. ಮಗಳು ಜಾನಕಿಯಾಗಿ, ಪೊಲೀಸ್ ಅಧಿಕಾರಿಯಾಗಿ ಗಾನವಿ ಮನಗೆದ್ದಿದ್ದರೆ ರಾಕೇಶ್ ಮಯ್ಯ ನಿರಂಜನನಾಗಿ ಮನಸ್ಸಿನ ಒಳಕ್ಕೆ ಸೇರಿಕೊಂಡಿದ್ದರು.
2018ರ ಮಧ್ಯದಲ್ಲಿ ಆರಂಭವಾದ ಧಾರಾವಾಹಿ ಒಂದೂವರೆ ವರ್ಷಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಕೌಟುಂಬಿಕ ಸಂಬಂಧ, ರಾಜಕಾರಣ, ವಾಸ್ತವದ ಬದುಕು, ಕಾನೂನು ಮತ್ತು ನ್ಯಾಯಾಲಯ ಸಂಗತಿಗಳ ಮೇಲೆ ಧಾರಾವಾಹಿ ಮುನ್ನಡೆಯುತ್ತಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.