ಬಿಸಿಲೂರಿನ ಸ್ಟಾಂಡಪ್ ಕಾಮಿಡಿಯನ್ ರಾಘವೇಂದ್ರ ಆಚಾರ್ಯ, ಅಶ್ಲೀಲವಲ್ಲದ ಜೋಕಿಗೇ ಇವರು ಫೇಮಸ್

Published : Nov 19, 2022, 02:38 PM ISTUpdated : Nov 19, 2022, 02:43 PM IST
ಬಿಸಿಲೂರಿನ ಸ್ಟಾಂಡಪ್ ಕಾಮಿಡಿಯನ್ ರಾಘವೇಂದ್ರ ಆಚಾರ್ಯ, ಅಶ್ಲೀಲವಲ್ಲದ ಜೋಕಿಗೇ ಇವರು ಫೇಮಸ್

ಸಾರಾಂಶ

ರಾಘವೇಂದ್ರ ಆಚಾರ್ಯ, ಕನ್ನಡದ ಯುವ ಸ್ಟಾಂಡಪ್‌ ಕಾಮೆಡಿಯನ್‌ಗಳಲ್ಲಿ ಗಮನ ಸೆಳೆಯೋ ಹೆಸರು. ಈಗಾಗ್ಲೇ ಯೂಟ್ಯೂಬ್‌ನಲ್ಲಿ ಅವರ ಹಲವಾರು ಸ್ಟಾಂಡಪ್‌ ವಿಡಿಯೋಗಳಿವೆ. ರಾಯಚೂರು ಮೂಲದ ಆಚಾರ್ಯ, ಅಲ್ಲಿನ ಭಾಷೆಯನ್ನು ತುಂಬಾ ಚೆನ್ನಾಗಿ ಕಾಮಿಡಿಯಲ್ಲಿ ಬಳಸಿಕೊಳ್ತಾರೆ.

ಈ ಮೇಲಿನ ಶೀರ್ಷಿಕೆ ನೋಡಿದರೆ ತಮಾಷೆ ಅನಿಸುತ್ತದಲ್ಲವೇ? ನಾವು ನಮ್ಮ ಹೆಲ್ತ್‌ (health) ಬಗ್ಗೆ ಎಷ್ಟು ಅಪ್‌ಸೆಟ್‌ ಆಗಿರ್ತೀವಿ ಅಂದ್ರೆ ಯಾವಾಗ್ಲೂ ಗೂಗಲ್‌ ಸರ್ಚ್‌ (google search) ಮಾಡಿ ಹುಡುಕ್ತಾ ಇರ್ತೀವಿ. ಜೋರಾಗಿ ನಾಲ್ಕು ಕೆಮ್ಮು ಬಂದ್ರೆ ಸಾಕು, ಗೂಗಲ್‌ ಮಾಡಿ ನೋಡ್ತೀವಿ. ಅದು ನಮ್ಮನ್ನು ಯಾವ್ಯಾವುದೋ ವೆಬ್‌ಸೈಟ್‌ಗೆ ಕರ್ಕೊಂಡು ಹೋಗಿ ಕ್ಯಾನ್ಸರ್‌ ಲಕ್ಷಣಗಳನ್ನೆಲ್ಲಾ ತೋರ್ಸಿ ನಮ್ಮನ್ನ ಬೆಚ್ಚಿ ಬೀಳಿಸಿರುತ್ತೆ. ನಿಜವಾಗ್ಲೂ ನಂಗೆ ಕ್ಯಾನ್ಸರೇ ಬಂದುಬಿಟ್ಟಿದೆಯಾ ಅಂತ ಹಲವಾರು ದಿನ ನಿದ್ರೆಯಿಲ್ಲದೆ ಕಳೆದುಬಿಟ್ಟಿರ್ತೀವಿ. ನಮ್ಮ ಇಂಥ ಮೈಂಡ್‌ಸೆಟ್‌ ಅನ್ನು ಸ್ಟಾಂಡ್‌ಅಪ್‌ ಕಾಮಿಡಿಯಲ್ಲಿ ಮೇಲಿನ ಮಾತಿನ ಮೂಲಕ ಗೇಲಿ ಮಾಡ್ತಾರೆ ರಾಘವೇಂದ್ರ ಆಚಾರ್ಯ.  

ರಾಘವೇಂದ್ರ ಆಚಾರ್ಯ (Raghavendra acharya), ಕನ್ನಡದ ಯುವ ಸ್ಟಾಂಡಪ್‌ ಕಾಮೆಡಿಯನ್‌ಗಳಲ್ಲಿ (stand up comedy) ಗಮನ ಸೆಳೆಯೋ ಹೆಸರು. ಈಗಾಗ್ಲೇ ಯೂಟ್ಯೂಬ್‌ನಲ್ಲಿ ಅವರ ಹಲವಾರು ಸ್ಟಾಂಡಪ್‌ ವಿಡಿಯೋಗಳಿವೆ. ರಾಯಚೂರು ಮೂಲದ ಆಚಾರ್ಯ, ಅಲ್ಲಿನ ಭಾಷೆಯನ್ನು ತುಂಬಾ ಚೆನ್ನಾಗಿ ಕಾಮಿಡಿಯಲ್ಲಿ ಬಳಸಿಕೊಳ್ತಾರೆ. ಈಗಾಗ್ಲೇ ಪ್ರಾಣೇಶ್‌ ಆಚಾರ್ಯ ಮುಂತಾದ ಹಿರಿಯ ಸ್ಟಾಂಡಪ್‌ ಕಾಮಿಡಿಯನ್‌ಗಳು ಉತ್ತರ ಕರ್ನಾಟಕದ ಭಾಷೆಯನ್ನು ಮಜ್‌ಮಜಾ ರೀತಿಯಲ್ಲಿ ಬಳಸಿ ನಮಗೆ ಕಚಗುಳಿ ಕೊಟ್ಟಿದ್ದಾರೆ. ಇದೀಗ ಮತ್ತದೇ ಭಾಷೆಯಲ್ಲಿ ಹೊಸಾ ಸಾಧ್ಯತೆಗಳು, ಹೊಸಾ ಜೋಕ್‌ಗಳು, ಹೊಸಾ ಕಚಗುಳಿಗಳ ಮೂಲಕ ಬಂದಿರೋರು ರಾಘವೇಂದ್ರ ಆಚಾರ್ಯ.

 

ಅವರು ಮೊದಲು ಪತ್ರಿಕೋದ್ಯಮದಲ್ಲಿದ್ದವುರು. ಪತಿಕೋದ್ಯಮವನ್ನು ಕನ್ನಡಪ್ರಭದಲ್ಲಿ ಆರಂಭಿಸಿ, ವಿಜಯ ಕರ್ನಾಟಕ, ನಂತ್ರ ಉದಯವಾಣಿಯಲ್ಲಿ ಇದ್ದರು. ಆಗ ಪ್ರವೃತ್ತಿಯಾಗಿದ್ದ ಸ್ಟಾಂಡಪ್‌ ಕಾಮಿಡಿಯನ್ನು ನಂತ್ರ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡು ಈಗ ಜನರನ್ನು ನಗಿಸುವ ಕಾರ್ಯದಲ್ಲಿ ಫುಲ್‌ಟೈಂ ನಿರತರಾಗಿದಾರೆ. ಅವರದೇ ಆದ ʼನಮ್ದುಕನ್ನಡʼ ಎಂಬ ಒಂದು ಯೂಟ್ಯೂಬ್‌ ಚಾನೆಲ್‌, ಫೇಸ್‌ಬುಕ್‌ ಪೇಜ್‌ ಇತ್ಯಾದಿಗಳಿವೆ. ಇಲ್ಲೆಲ್ಲಾ ಅವರ ತಂಡದ ಕಾಮಿಡಿಗಳಿವೆ. ವೀಕೆಂಡ್‌ ಶೋಗಳನ್ನೂ ಕೊಡ್ತಾರೆ. ರಾಘವೇಂದ್ರ ಆಚಾರ್ಯ ಕಾಮಿಡಿ ಶೋಗಳಿಗೆ ಜನ ಬರೋದು ನಗೋದಕ್ಕಾಗಿ ಮಾತ್ರ ಅಲ್ಲ. ಸಭ್ಯ ಹಾಸ್ಯಕ್ಕಾಗಿ. ಅವರು ಜನರನ್ನು ನಗಿಸುವುದಕ್ಕಾಗಿ ಡಬಲ್‌ ಮೀನಿಂಗ್‌ ಜೋಕ್‌ಗಳನ್ನು ಹೇಳಲ್ಲ. ಹೆಂಗಸರನ್ನ ಅಪಹಾಸ್ಯ ಮಾಡಲ್ಲ. ಅವರ ಹಾಸ್ಯ ಔಚಿತ್ಯದ ಗೆರೆ ದಾಟೊಲ್ಲ. ಹೀಗಾಗಿ ಸಭ್ಯ ಹಾಸ್ಯ ಬಯಸಿ ಬರೋ ಜನರಿಗೆ ಅವರು ಇಷ್ಟವಾಗ್ತಾರೆ.

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಸತ್ಯ' ಧಾರಾವಾಹಿ ಹೀರೋ ಸಾಗರ

ಸಾಮಾನ್ಯ ಜನರ ಪೀಕಲಾಟಗಳೇ ರಾಘವೇಂದ್ರ ಆಚಾರ್ಯರ ಕಾಮಿಡಿಯ ವಸ್ತು. ʼಹಳ್ಳಿತಿಂಡಿʼ ʼಹಳ್ಳಿಮನೆʼ ʼನಾಟಿತಿಂಡಿʼ ಮುಂತಾದ ಹೆಸರುಗಳು ಇತ್ತೀಚೆಗೆ ಫ್ಯಾಶನ್‌ ಅಲ್ವಾ. ಅಂಥದ್ದಕ್ಕೆ ಜನ ಬೇಗನೆ ಮಾರುಹೋಗ್ತಾರೆ ಕೂಡ. ವೈಭವೋಪೇತವಾದ ಮಾಲ್‌ ಕಟ್ಟಿ, ಅದರೊಳಗೆ ಒಂದು ಗುಡಿಸಲು ಇಟ್ಟು ಹುಲ್ಲಿನ ಮಾಡು ರಚಿಸುವ ಶೋಆಫ್‌ಗೆ (Show Off) ಆಚಾರ್ಯ ʼಮೊದ್ಲು ಅಲ್ಲಿ ಗುಡಿಸಲೇ ಇತ್ತು. ಅದನ್ನೆ ಕೆಡವಿ ಮಾಲ್‌ ಕಟ್ಟಿ, ಈಗ ಅದರೊಳಗೆ ಗುಡಿಸಲು ಕಟ್ತಿರೋದುʼ ಎಂದು ಹೇಳ್ತಾ ಟ್ವಿಸ್ಟ್‌ ಕೊಡ್ತಾರೆ. ಮನೆಗೆ ಬಂದ ಅತಿಥಿಗಳ ಮುಂದೆ ತಮ್ಮ ಮಕ್ಕಳನ್ನು ʼಎಬಿಸಿಡಿ ಹೇಳುʼ ʼಡ್ಯಾನ್ಸ್‌ ಮಾಡುʼ ಅಂತ ಹೇಳ್ತಾ ಟಾರ್ಚರ್‌ ಕೊಡೋ ಅಪ್ಪ ಅಮ್ಮನ ಕಾಲೆಳೆದು ತಮಾಷೆ ಮಾಡುತ್ತಾರೆ. ಕೋವಿಡ್‌ ಸಂದರ್ಭದಲ್ಲಿ ಡಾಕ್ಟರ್‌ಗಳಿಗೇ ಆ ವೈರಸ್‌ನ ಬಗ್ಗೆ ಇನ್ನೂ ಏನೂ ಗೊತ್ತಿಲ್ಲದೇ ಇದ್ದಾಗ, ನಮ್ಮವರೆಲ್ಲಾ ʼಮೂಗಿನಲ್ಲಿ ನಿಂಬೆಹಣ್ಣು ರಸ (Lemon Juice) ಬಿಟ್ಟುಕೊಳ್ಳಿ, ಎಲ್ಲಾ ಓಡಿಹೋಗುತ್ತೆʼ ಎಂದು ಹೇಳಿ ಅತಿ ಬುದ್ಧಿವಂತಿಕೆ ಪ್ರದರ್ಶಿಸುತ್ತಿದ್ದುದನ್ನೂ ಗೇಲಿ ಮಾಡುತ್ತಾರೆ. ʼಸಾಯುವ ಮೊದಲು ಎವರೆಸ್ಟ್‌ ಹತ್ತಿ ಬರುತ್ತೀನಿʼ ಎಂದು ಹೇಳುವ ಫ್ರೆಂಡ್‌, ಎರಡು ಮಹಡಿ ಹತ್ತಿ ಬಟ್ಟೆ ಆರಿಸಿ ವಾಪಸು ಬರುವಾಗಲೇ ಏದುಸಿರು ಬಿಡುವುದನ್ನು ಅಭಿನಯ ಸಹಿತ ವರ್ಣಿಸಿ ನಗು ತರಿಸುತ್ತಾರೆ.

ರಾಘವೇಂದ್ರ ಆಚಾರ್ಯ ಅವರ ಕಾಮಿಡಿಗಳು ಹಳ್ಳಿ ಜೀವನದೊಂದಿಗೇ (Village Life) ಪೇಟೆಯ ಜನರ ಜೀವನವನ್ನು ಆಡಿಕೊಂಡು ನಗುವ, ಕಾಲೆಳೆಯುವ, ಮುಖದ ಮೇಲೆ ಮುಗುಳ್ನಗೆ ಮೂಡಿಸುವ ಕಾಮಿಡಿಗಳು. ಅವರೂ ತಂಡದ ಭಾಗವಾಗಿರುವ ಯೂಟ್ಯೂಬ್‌ ಚಾನೆಲ್‌ (Youtube Channel) ʼನಮ್ದುಕೆʼಗೆ ಈಗಾಗಲೇ 22 ಲಕ್ಷ ಜನ ಸಬ್‌ಸ್ಕ್ರೈಬರ್ಸ್‌ ಆಗಿದ್ದಾರೆ ಅಂದರೆ ಅವರ ಜನಪ್ರಿಯತೆ ಎಷ್ಟು ಎಂಬುದನ್ನು ನೀವೇ ಊಹಿಸಬಹುದು!

Kannadathi : ಅಮ್ಮಮ್ಮನ ಅಂತ್ಯಕ್ರಿಯೆ ನನ್ನನ್ನೂ ಬಾಧಿಸಿತು : ಚಿತ್ಕಳಾ ಬಿರಾದಾರ್
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಗಿಲ್ಲಿ ನಟನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾದ ರಘು; ಪ್ಲ್ಯಾನ್‌ ಏನು?
Bigg Boss: 'ಜುಂ ಜುಂ ಮಾಯಾ, ಪ್ರಾಯ ಬಂದ್ರೆ..' ಗಿಲ್ಲಿ- ಅಶ್ವಿನಿ ರೊಮಾನ್ಸ್​, ಕಾವ್ಯಾನ ಕಣ್ಣು ಮುಚ್ರಪ್ಪೋ ಪ್ಲೀಸ್​