Indian Idol ಸಂಗೀತ ರಿಯಾಲಿಟಿ ಶೋನಲ್ಲಿ ಅವಮಾನ; ಡಿಲೀಟ್‌ ಸೀನ್‌ಗಳ ಬಗ್ಗೆ ಮೌನ ಮುರಿದ ನಟಿ ಅನು

Published : Nov 18, 2022, 02:47 PM ISTUpdated : Nov 18, 2022, 02:56 PM IST
Indian Idol ಸಂಗೀತ ರಿಯಾಲಿಟಿ ಶೋನಲ್ಲಿ ಅವಮಾನ; ಡಿಲೀಟ್‌ ಸೀನ್‌ಗಳ ಬಗ್ಗೆ ಮೌನ ಮುರಿದ ನಟಿ ಅನು

ಸಾರಾಂಶ

ಜನಪ್ರಿಯಾ ರಿಯಾಲಿಟಿ ಶೋನಲ್ಲಿ ಆಶಿಖಿ ನಟಿ ಅನು ಅಗ್ರವಾಲ್‌ಗೆ ಅವಮಾನ. ಯುವಕರಿಗೆ ಸ್ಪೂರ್ತಿ ನೀಡುವ ಮಾತುಗಳು ಹೇಳಿದ್ದೇ ತಪ್ಪಾ? 

1990ರಲ್ಲಿ ಸೂಪರ್ ಹಿಟ್ ಪ್ರದರ್ಶನ ಕಂಡ ಆಶಿಖಿ ಸಿನಿಮಾದ ಮ್ಯೂಸಿಕಲ್ ಟ್ರಿಬ್ಯೂಟ್ ಎಂದು ಇಂಡಿಯನ್ ಐಡಲ್ ಸೀಸನ್ 13ರಲ್ಲಿ ಸೆಲೆಬ್ರೇಟ್ ಮಾಡಲಾಗಿತ್ತು. ಅನು ಅಗ್ರವಾಲ್, ರಾಹುಲ್ ರಾಯ್, ದೀಪಕ್ ಮತ್ತು ಗಾಯ ಕುಮಾರ್ ಸಾನು ಭಾಗಿಯಾಗಿದ್ದರು. ಈ ವೇಳೆ ಸ್ಪರ್ಧಿಗಳ ಜೊತೆ ಮಾತನಾಡಿದ ಮ್ಯೂಸಿಕ್‌ನ ಎಂಜಾಯ್ ಮಾಡಿದ್ದಾರೆ. ಎಪಿಸೋಡ್‌ ಟಿವಿಯಲ್ಲಿ ಪ್ರಸಾರವಾಗಿದ್ದು ನಟಿ ಅನು ಅಗ್ರವಾಲ್‌ನ ಒಂದು ಕ್ಷಣವೂ ತೋರಿಸಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಸಂಚಿಕೆ ಚಿತ್ರೀಕರಣದಲ್ಲಿ ಅನು ಸಖತ್ ಆಕ್ಟಿವ್ ಆಗಿದ್ದು ರಾಹುಲ್ ಮತ್ತು ದೀಪಕ್ ಪಕ್ಕ ಕುಳಿತಿದ್ದರಂತೆ ಆದರೆ ಟಿವಿಯಲ್ಲಿ ನಾಯಕರನ್ನು ಮಾತ್ರ ತೋರಿಸಿದ್ದಾರೆ ಎಂದು ಅಸಮಾದಾನ ಹೊರ ಹಾಕಿದ್ದಾರೆ. 'ನನ್ನ ಬಗ್ಗೆ ನಾನೇ ಖುಷಿ ಪಡಬೇಕು. ಸದ್ಯ ನಾನು ಸನ್ಯಾಸಿನಿ ಆಗಿರುವೆ. ನನ್ನಲ್ಲಿ ego ಅನ್ನೋದು ಇಲ್ಲ. ಹೀಗಾಗಿ ಯಾವ ವಿಚಾರಕ್ಕೂ ಬೇಸರ ಮಾಡಿಕೊಳ್ಳುವುದಿಲ್ಲ. ನೀವು ಕಲ್ಪನೆ ಮಾಡಿಕೊಂಡಿರುವುದಿಲ್ಲ ಅಷ್ಟು ಮಾತನಾಡಿರುವೆ. ತುಂಬಾ ಚೆನ್ನಾಗಿ ಹಿಂದಿ ಮಾತನಾಡಿರುವೆ. ಯಾಕೆ ಡಿಲೀಟ್ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಲು ನನಗೆ ಮನಸ್ಸಿಲ್ಲ ಹಾಗಂತ ಬೇಸರ ಕೂಡ ಮಾಡಿಕೊಳ್ಳುವುದಿಲ್ಲ ಅಥವ ದ್ವೇಷ ಸಾಧಿಸುವುದಿಲ್ಲ. ಏನೇ ಇರಲಿ ಬಿಡಿ. ಸೋನಿ ಟಿವಿ ಎಡಿಟರ್‌ ಅಥವಾ ಯಾರನ್ನೂ ನಾನು ಪ್ರಶ್ನೆ ಮಾಡುವುದಿಲ್ಲ' ಎಂದು ಇಂಡಿಯಾ.ಕಾಮ್‌ ಜೊತೆ ಅನು ಮಾತನಾಡಿದ್ದಾರೆ. 

'ಈ ವಿಚಾರದಲ್ಲಿ ಜಗಳ ಮಾಡುವ ಮನಸ್ಸು ನನಗಿಲ್ಲ ಹಾಗಂತ ಈ ಕೆಲಸ ಮಾಡಿರುವವರ ಬಗ್ಗೆ ದೂರು ಹೇಳಿಕೊಂಡು ಕೂರಲು ಸಮಯವಿಲ್ಲ. ಬೇಸರ ಯಾಕೆಂದ್ರೆ ಅಲ್ಲಿದ ಸ್ಪರ್ಧಿಗಳ ಜೊತೆ ಚೆನ್ನಾಗಿ ಮಾತನಾಡಿರುವ ಜೀವನ ಹೇಗೆ ನಾವು ಹೇಗಿರಬೇಕು ಎಂದು ಸ್ಪೂರ್ತಿ ಮಾತುಗಳನ್ನು ಹೇಳಿರುವೆ. ನಾನು ಕಾಣಿಸಿಕೊಂಡಿಲ್ಲ ಅಂತ ತಲೆಯಲ್ಲಿ ಇಲ್ಲ ನಾನು ಹೇಳಿದ ಒಳ್ಳೆಯ ಮಾತಿಗೆ ಬೆಲೆ ಇಲ್ಲ ಅಂತ ಬೇಸರ. ಇಲ್ಲಿ ಪ್ರತಿಯೊಬ್ಬರಿಗೂ ಸ್ಪೂರ್ತಿ ಮತ್ತೊಬ್ಬರು ಇಲ್ಲಿ ಎಲ್ಲರೂ ಹೀರೋಗಳೇ' ಎಂದು ಅನು ಹೇಳಿದ್ದಾರೆ.

ಡಿಲೀಟ್ ಸೀನ್:

'ನಾನು ವೇದಿಕೆ ಮೇಲೆ ನಡೆದುಕೊಂಡು ಹೋಗುವಾಗ ಜನರು ಜೋರಾಗಿ ಕೂಗಿ ಚಪ್ಪಾಳೆ ಹೊಡೆದರು. ಮನಸ್ಸಿಗೆ ಎಷ್ಟು ಖುಷಿ ಆಯ್ತು ಅಂದ್ರೆ ಆ ಕ್ಷಣವೇ ದೇವರಿಗೆ ಧನ್ಯವಾದಗಳನ್ನು ತಿಳಿಸಿದೆ. ಕುಮಾರ್ ಸಾನು ಚಪ್ಪಾಳೆ ಹೊಡೆದರು ಆಗ ಪ್ರತಿಯೊಬ್ಬರು ಎದ್ದು ನಿಂತುಕೊಂಡರು. ಇದೆಲ್ಲವೂ ಡಿಲೀಟ್ ಮಾಡಲಾಗಿದೆ' ಎಂದಿದ್ದಾರೆ. 

ಬ್ಯೂಟಿಗಾಗಿ ಅಲ್ಲ ನಾನು ಜೀವಂತವಾಗಿರಲು ಸಾಕಷ್ಷು ಸರ್ಜರಿ ಮಾಡಿಸಿಕೊಂಡಿದ್ದೇನೆ - ಅನು ಅಗರ್ವಾಲ್‌

ಆಶಿಖಿ ಸಿನಿಮಾ ಸೂಪರ್ ಹಿಟ್ ಆದ ಕಾರಣ ಎರಡನೇ ಭಾಗವನ್ನು 2013ರಲ್ಲಿ ಆದಿತ್ಯಾ ರಾಯ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯಿಸಿದ್ದರು. ಎರಡನೇ ಭಾಗವೂ ಹಿಟ್ ಆಗಿ ಬಾಲಿವುಡ್‌ನಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿತ್ತು.

ಸೋನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇಂಡಿಯನ್ ಇಡಲ್ ಸೀಸನ್ 13 ಸಂಗೀತ ರಿಯಾಲಿಟಿ ಶೋನಲ್ಲಿ ನೇಹಾ ಕಕ್ಕರ್, ವಿಶಾಲ್ ದಲಾನಿ ಮತ್ತು ಹಿಮಾನ್ಶಿ ತೀರ್ ತೀರ್ಪುಗಾರರಾಗಿದ್ದಾರೆ. ಆದಿತ್ಯಾ ನಾರಾಯಣ ನಿರೂಪಕನಾಗಿದ್ದು 13ನೇ ಸೀಸನ್ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!