ಸುದೀಪ್​ ಬದ್ಲು ಸೃಜನ್​: ಬಿಗ್​ಬಾಸ್​ ಮನೆಯೊಳಕ್ಕೆ ತಂದ್ರು ಖಾಲಿ ಕಾರು! ವಾಪಸಾಗುವ ಸ್ಪರ್ಧಿ ಯಾರು?

By Suchethana D  |  First Published Oct 27, 2024, 11:57 AM IST

ಈ ವಾರ ಬಿಗ್​ಬಾಸ್​ ಮನೆಗೆ ಎಲಿಮಿನೇಷನ್​ ಮಾಡಲು ಸೃಜನ್​ ಲೋಕೇಶ್​ ಬಂದಿದ್ದಾರೆ. ಇವರು ತಂದಿರುವ ಖಾಲಿ ಕಾರಿನಲ್ಲಿ ವಾಪಸ್​ ಹೋಗುವವರು ಯಾರು?
 


ಬಿಗ್​ಬಾಸ್​ ಮನೆಯಲ್ಲಿ ಇದಾಗಲೇ ಮೂವರು ಎಲಿಮಿನೇಟ್​ ಆಗಿದ್ದಾರೆ. ಮುಂದಿನ ಸ್ಪರ್ಧಿ ಯಾರು ಎಂಬ ಬಗ್ಗೆ ಬಿಗ್​ಬಾಸ್​ ವೀಕ್ಷಕರಿಗೆ ಕುತೂಹಲ ಇದ್ದೇ ಇದೆ. ಅದೇ ಇನ್ನೊಂದೆಡೆ ಬಿಗ್​ಬಾಸ್​ ನಡೆಸಿಕೊಡುವ ನಟ ಸುದೀಪ್​ ಅವರ ತಾಯಿ ನಿಧನರಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿ ಸುದೀಪ್​ ಅವರು ಬಿಗ್​ಬಾಸ್​ ನಡೆಸಿಕೊಡಲು ಆಗುವುದಿಲ್ಲ. ಇದೇ ಕಾರಣಕ್ಕೆ ಈ ವಾರ ಯಾರಿಗೂ ಎಲಿಮಿನೇಷನ್​ ಇಲ್ಲ ಎಂದೇ ಹೇಳಲಾಗಿತ್ತು. ಏಕೆಂದರೆ,  ಕಳೆದ ವಾರ ಸುದೀಪ್​ ಇಲ್ಲದ ಕಾರಣದಿಂದ ಯಾರೂ  ಎಲಿಮಿನೇಟ್ ಆಗಿರಲಿಲ್ಲ.  ಈ ವಾರವೂ ಸಹ ಸುದೀಪ್ ಅವರು ಬರಲಿಲ್ಲವಾದ್ದರಿಂದ ಈ ವಾರವೂ ಯಾರೂ ಎಲಿಮಿನೇಟ್ ಆಗಲ್ಲ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದರು. ಆದರೆ ಈ ವಾರ ಎಲಿಮಿನೇಷನ್ ನಡೆದಿದೆ.  

ಆದರೆ ಎಲ್ಲರ ಅನಿಸಿಕೆ ಉಲ್ಟಾ ಆಗಿದೆ. ಸುದೀಪ್​ ಬದಲು ಸೃಜನ್​ ಅವರು ಎಲಿಮಿನೇಷನ್​ ಮಾಡಲು ಬಂದಿದ್ದಾರೆ. ನಿನ್ನೆ ನಿರ್ದೇಶಕ ಯೋಗರಾಜ್​ ಭಟ್​ ಅವರು ಬಂದಿದ್ದರು. ಇಂದಿನ ಸಂಚಿಕೆ ಅಂದರೆ ಭಾನುವಾರ ಅತಿಥಿಯಾಗಿ ಬರಲಿರುವವರು ಸೃಜನ್​ ಲೋಕೇಶ್​. ಶನಿವಾರದ ಸಂಚಿಕೆಗೆ ಬಂದಿದ್ದ ನಿರ್ದೇಶಕ ಯೋಗರಾಜ್ ಭಟ್ ಕೆಲವು ತಮಾಷೆಯ ಟಾಸ್ಕ್​ಗಳನ್ನು ಮಾಡುವ ಮೂಲಕ ಸ್ಪರ್ಧಿಗಳು ಹಾಗೂ ವೀಕ್ಷಕರನ್ನು ರಂಜಿಸಿದ್ದರು, ಜೊತೆಗೆ ಸ್ಪರ್ಧಿಗಳಿಗೆ ಒಂದಿಷ್ಟು ಬುದ್ಧಿಮಾತನ್ನೂ ಹೇಳಿದ್ದರು. ವಿಭಿನ್ನ ರೀತಿಯ ಟಾಸ್ಕ್​ ನೀಡಿರುವ ಸೃಜನ್​ ಅವರು ಇದೀಗ ಓರ್ವ ಸ್ಪರ್ಧಿಯನ್ನು ದೊಡ್ಮನೆಯಿಂದ ಅವರ ಮನೆಗೆ ಕಳುಹಿಸಲಿದ್ದಾರೆ! 

Tap to resize

Latest Videos

undefined

ಬಿಗ್​ಬಾಸ್​​ಗೆ ಪುನಃ ಹೋಗ್ತಾರಾ ಜಗದೀಶ್? ನೇರ ಪ್ರಸಾರದಲ್ಲಿ ದೊಡ್ಮನೆಯ ಗುಟ್ಟು ಬಿಚ್ಚಿಟ್ಟ ಲಾಯರ್​ ಹೇಳಿದ್ದೇನು?

ಅಂದಹಾಗೆ, ಸೃಜನ್​ ಲೋಕೇಶ್​ ಅವರಿಗೆ ಬಿಗ್​ಬಾಸ್​ ಹೊಸತೇನಲ್ಲ. ಈ ಹಿಂದೆ ಅವರು, ಬಿಗ್​ಬಾಸ್​ ಮನೆಗೆ ಸ್ಪರ್ಧಿಯಾಗಿ ಬಂದಿದ್ದರು. ಆದರೆ ಈಗ  ಅತಿಥಿಯಾಗಿ ಬಂದು ಎಲಿಮಿನೇಷನ್​ ಮಾಡುತ್ತಿದ್ದಾರೆ. ಬರುವಾಗ ಒಂದಲ್ಲ ಎರಡು   ಟಾಟಾ ಕರ್ವ್ ಕಾರುಗಳನ್ನು ಸಹ ತಂದಿರೋ ಕಾರಣ, ಎಲಿಮಿನೇಟ್​ ಆಗುವವರು ಒಬ್ಬರೋ, ಇಬ್ಬರೋ ಎನ್ನುವ ಡೌಟ್​ ಕೂಡ ಕಾಡುತ್ತಿದೆ.  ಸದ್ಯ ನಾಮಿನೇಟ್ ಆದವರಲ್ಲಿ ಸುಮಾರು ಏಳು ಸ್ಪರ್ಧಿಗಳು ಇದ್ದಾರೆ. ಅವರಲ್ಲಿ ಸೃಜನ್ ಲೋಕೇಶ್ ತಂದಿರೋ ಕಾರಿನಲ್ಲಿ ಯಾರು ಹೋಗ್ತಾರೆ ಎಂದು ನೋಡಬೇಕಿದೆ.
 
ಬಿಗ್​ಬಾಸ್​ ಮನೆಗೆ ಬಂದವರೇ ಸೃಜನ್​ ಅವರು ಕೆಲವು ತಮಾಷೆಯ ಟಾಸ್ಕ್​ಗಳನ್ನು ಸ್ಪರ್ಧಿಗಳಿಗೆ ನೀಡಿದ್ದಾರೆ. ಎರಡೂ ಕೈಗಳನ್ನ ಕಟ್ಟಿಕೊಂಡು ಕೇಸರಿ ಬಾತ್ ತಿನ್ನೋ ಟಾಸ್ಕ್ ಕೂಡ ಇಲ್ಲಿದೆ.   ಬಳಿಕ,  ಮನೆಯಿಂದ ಯಾರು ಹೊರಗೆ ಹೋಗಬೇಕು ಮತ್ತು ಏಕೆ ಕಾರಣ ನೀಡಿ ಎಂದು ಸ್ಪರ್ಧಿಗಳನ್ನೇ ಕೇಳಿದ್ದಾರೆ. ಆಗ  ಐಶ್ವರ್ಯಾ ಸೇರಿದಂತೆ ಕೆಲವು ಸ್ಪರ್ಧಿಗಳು ವಿಕ್ರಂ ಅವರ ಹೆಸರು ಹೇಳಿದ್ದರೆ, ಮತ್ತೆ ಕೆಲವರು ಉಗ್ರಂ ಮಂಜು ಎಂದಿದ್ದಾರೆ. ಮನೆಯ ಕ್ಯಾಪ್ಟನ್ ತ್ರಿವಿಕ್ರಮ್ ವಿರುದ್ಧವೇ ಮೋಕ್ಷಿತಾ ಪೈ ಆರೋಪ ಮಾಡಿದರು. ಬಿಗ್ ಬಾಸ್ ಮನೆಯಲ್ಲಿ ಪ್ಲಾನ್ ಮಾಡಿಯೇ ನಾಮಿನೇಷನ್ ಮಾಡ್ತಿದ್ದಾರೆ. ಇದಕ್ಕೆ ಇನ್ನು ಕೆಲವ್ರು ಕೈ ಜೋಡಿಸಿದ್ದಾರೆ. ಇದಕ್ಕೆ ದೊಡ್ಮನೆಯಲ್ಲಿ ಜಾಗ ಇರ ಕೂಡದು ಎಂದರು.  ಎಲ್ಲಾ ಸ್ಪರ್ಧಿಗಳು ತಮ್ಮ ಮನಸ್ಸಿಗೆ ಬಂದವರ ಹೆಸರು ಹೇಳಿದ್ದಾರೆ.  ಕೊನೆಗೆ ಮತಗಳ ಆಧಾರದಲ್ಲಿ ಒಬ್ಬ ಸ್ಪರ್ಧಿಯನ್ನು ಇಂದು ಬಿಗ್​ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ. ಅವರು ಯಾರು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

ಹೇರ್​ ಕಲರ್​ ತಂದ ಫಜೀತಿ: ಏನೋ ಹೇಳಿದ್ರೆ, ಏನೋ ಮಾಡಿದ್ರು! ಬಿಗ್​ಬಾಸ್​ ಸಂಗೀತಾ ಶೃಂಗೇರಿ ಗರಂ!

click me!