ವೈರಲ್ ಆಗ್ತಿರೋ ಆ್ಯಂಕರ್ ವಿಡಿಯೋ, ಹೀಗ್ ಮಾಡ್ಬಹುದಾ ಅಂತಿರೋ ನೆಟ್ಟಿಗರು!

By Shriram Bhat  |  First Published Oct 27, 2024, 11:57 AM IST

ಆಂಕರ್ ಮಾಡಿದ ತಪ್ಪನ್ನು ಸೋಷಿಯಲ್ ಮೀಡಿಯಾದಲ್ಲಿ ಯಾರೋ ಶೇರ್ ಮಾಡಿ ಜಗತ್ತಿಗೆಲ್ಲ ಈ ಸಂಗತಿ ತಿಳಿಸಿದ್ದಾರೆ. ಲೈಚ್ ಸ್ಟೇಜ್‌ ಮೇಲೆ ಕೆಲವೊಮ್ಮೆ ಇಂತಹ ತಪ್ಪುಗಳು ಘಟಿಸುತ್ತವೆ. ಅದು ಹೇಳಿದವರಿಗೆ ಹಾಗೂ ಕರೆಸಿಕೊಂಡವರಿಗೆ ಇಬ್ಬರಿಗೂ ಮುಜುಗರ ತರುವ ಸಂಗತಿಯಾಗಿರುತ್ತದೆ. ಆದರೆ, ಅಲ್ಲಿ


ಅದೊಂದು ಖಾಸಗಿ ಚಾನಲ್ ಪ್ರಶಸ್ತಿ ಸಮಾರಂಭದ ಸ್ಟೇಜ್. ಲೈವ್‌ನಲ್ಲಿ ಇರೋ ಆಂಕರ್ ಸ್ಟೇಜ್ ಮೇಲೆ 'ನಟ ನಿರ್ದೇಶಕ ಚಕ್ರವರ್ತಿ ಸೂಲಿಬೆಲೆ ಸರ್ ದಯಮಾಡಿ ವೇದಿಕೆ ಮೇಲೆ ಬರ್ಬೇಕು' ಎಂದಿದ್ದಾರೆ. ಆದರೆ, ಯಾರೂ ಸ್ಟೇಜ್ ಮೇಲೆ ಬಂದೇ ಇಲ್ಲ. ಅದನ್ನು ಗಮನಿಸಿದ ಪಕ್ಕದಲ್ಲಿದ್ದ ಯಾರೋ ಒಬ್ಬರು ಮೈಕ್‌ನಲ್ಲಿ 'ಚಕ್ರವರ್ತಿ ಚಂದ್ರಚೂಡ್' ಎಂದು ಹೇಳಿ ತಪ್ಪನ್ನು ತಿದ್ದಿದ್ದಾರೆ. ಜೊತೆಗೆ, ಚಿಕ್ಕ ಚಿಕ್ಕ ಮಕ್ಕಳು, ಈಗ್ಲೇ ಎನೋ ಕಲಿತಾ ಇದೀವಿ. ದಯವಿಟ್ಟು ಹೊಟ್ಟೆಗೆ ಹಾಕ್ಕೊಳ್ಳಿ ಸರ್. ದಯವಿಟ್ಟು ಬನ್ನಿ ಸರ್..' ಎಂದಿದ್ದಾರೆ. 

ಆಗಲೇ ತನ್ನಿಂದಾದ ಭಾರೀ ಪ್ರಮಾದವನ್ನು ಅದನ್ನು ಅರ್ಥ ಮಾಡಿಕೊಂಡ ಆಂಕರ್ 'ಯಾಕೆ ಬರ್ತಿಲ್ಲ ಅಂತ ಯೋಚ್ನೆ ಮಾಡ್ತಾ ಇದ್ದೆ.. ಸರ್, ಸಾರಿ, ದಯವಿಟ್ಟು ಸಾರಿ. ತಪ್ಪಾಗೋಯ್ತು.. ಬನ್ನಿ ಸರ್, ಎಂದಿದ್ದಾರೆ... ಅಲ್ಲಿ ಸ್ಟೇಜ್ ಮೇಲಿದ್ದ ನಟ ರಾಜೇಶ್ ನಟರಂಗ ಅವರು ಕೂಡ ಒಮ್ಮೆ ಶಾಕ್ ಆಗಿ ನಕ್ಕಿದ್ದಾರೆ. ಆಂಕರ್ ಮಾಡಿದ ತಪ್ಪನ್ನು ಸೋಷಿಯಲ್ ಮೀಡಿಯಾದಲ್ಲಿ ಯಾರೋ ಶೇರ್ ಮಾಡಿ ಜಗತ್ತಿಗೆಲ್ಲ ಈ ಸಂಗತಿ ತಿಳಿಸಿದ್ದಾರೆ. 

Tap to resize

Latest Videos

undefined

ಯಾರವನು? ಚಾಲಾಕಿ ಹನುಮಂತ ಗುಣಗಾನ ಮಾಡ್ತಿರೋ ಆ ಸೊಕ್ಕಿನ ಶ್ರೀಮಂತ!

ಲೈಚ್ ಸ್ಟೇಜ್‌ ಮೇಲೆ ಕೆಲವೊಮ್ಮೆ ಇಂತಹ ತಪ್ಪುಗಳು ಘಟಿಸುತ್ತವೆ. ಅದು ಹೇಳಿದವರಿಗೆ ಹಾಗೂ ಕರೆಸಿಕೊಂಡವರಿಗೆ ಇಬ್ಬರಿಗೂ ಮುಜುಗರ ತರುವ ಸಂಗತಿಯಾಗಿರುತ್ತದೆ. ಆದರೆ, ಅಲ್ಲಿ ಅದನ್ನು ನೋಡಿದವರಿಗೆ ಅದೊಂದು ಭಾರೀ ತಮಾಷೆಯ ಸಂಗತಿ ಆಗಿರುತ್ತದೆ. ಹೀಗಾಗಿ ಅದನ್ನು ಯಾರೋ ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡಿ ಕಾಲೆಳೆದು ಮಜಾ ತೆಗೆದುಕೊಂಡಿದ್ದಾರೆ, ಬೇರೆಯವರಿಗೂ ಮಜಾ ಕೊಡಲೆಂದು ಹರಿಯಬಿಟ್ಟಿದ್ದಾರೆ. 

ನಿರೂಪಕಿ ಮಾಡಿದ ಈ ಯಡವಟ್ಟು ಇದೀಗ ಜಗತ್ತನ್ನು ಸುತ್ತಿ ಸುತ್ತಿ ಎಲ್ಲರಲ್ಲೂ ನಗು ತರಿಸುತ್ತಿದೆ. ಕೆಲವರು ಕೋಪಗೊಂಡಿದ್ದರು, ಎನ್ನೂ ಕೆಲವರು ಕನಿಕರ ವ್ಯಕ್ತಪಡಿಸಿದ್ದಾರೆ. ಆದರೆ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವವರಿಗೆ ಇಲ್ಲೊಂದು ಪಾಠವಿದೆ. ಅದೇನೆಂದರೆ, 'ನಿರೂಪಣೆ ಮಾಡುವವರಿಗೆ ಸರಿಯಾದ ಹೋಮ್‌ ವರ್ಕ್ ಅಗತ್ಯವಿರುತ್ತದೆ. ಅಲ್ಲಿನ ಪ್ರೋಗ್ರಾಂ ಬಗ್ಗೆ, ಅಲ್ಲಿ ಬರುವ ಅತಿಥಿಗಳ ಬಗ್ಗೆ, ಪ್ರಶಸ್ತಿ ವಿಜೇ ಕಲಾವಿದರ ಬಗ್ಗೆ ಬೇಸಿಕ್ ಜ್ಞಾನ ಅಗತ್ಯ. ಇಲ್ಲದಿದ್ದರೆ, ಕಾರ್ಯಕ್ರಮದ ನಿರೂಪಕರಿಗೆ ಮಾತ್ರವಲ್ಲ, ಇಡೀ ಪ್ರೋಗ್ರಾಂ ರೂವಾರಿಗಳಿಗೂ ಮುಜುಗರ ಉಂಟಾಗುತ್ತದೆ' ಎಂಬ ಸಂಗತಿ!

ಕೂಗಿದ್ರೂ ಪಕ್ಕದಲ್ಲಿ ಹೆಂಡತಿಯೂ ಇಲ್ಲ, ಸ್ನೇಹಿತೆಯೂ ಇಲ್ಲ: ಭಾರೀ ಬೆನ್ನು ನೋವು, ಅಯ್ಯೋ ದರ್ಶನ್!

ಒಟ್ಟಿನಲ್ಲಿ, ಈ ವಿಡಿಯೋ ನೋಡಿದ ಜನರು ಈಗ 'ಚಕ್ರವರ್ತಿ ಸೂಲಿಬೆಲೆ ಯಾವಾಗ ನಟ-ನಿರ್ದೇಶಕರಾಗಿದ್ದು' ಎಂದು ಆಡಿಕೊಂಡು ನಗುತ್ತಿದ್ದರೆ, ಇನ್ನೂ ಕೆಲವರು 'ನಟ-ನಿರ್ದೇಶಕ ಚಂದ್ರಚೂಡ್ ಯಾವಾಗ ಚಕ್ರವರ್ತಿ ಸೂಲಿಬೆಲೆ ಆಗಿದ್ದು' ಎಂದು ತಮಾಷೆ ಮಾಡಿ ನಗುತ್ತಿದ್ದಾರೆ. ಇರಲಿ, ಸೋಷಿಯಲ್ ಮೀಡಿಯಾ ಅಂದರೇ ಹೀಗೆ. ತಪ್ಪು-ಸರಿಯನ್ನು, ಅವಮಾನ-ಬಹುಮಾನ ಎಲ್ಲವನ್ನೂ ಕ್ಷಣಾರ್ಧದಲ್ಲಿ ಜಗತ್ತಿಗೇ ರೀಚ್ ಮಾಡಿಸಿಬಿಡುತ್ತದೆ..! ವಿಡಿಯೋ ನೋಡಿದವರು 'ಮುಂದೆ ಹುಶಾರಾಗಿರಿ ಆ್ಯಂಕರ್..!' ಅಂತಿದಾರೆ. 

click me!