
ಬಿಗ್‌ಬಾಸ್ 13 (Bigg Boss 13) ಹಿಂದಿನ ಸೀಸನ್ಗಳಿಗಿಂತಲೂ ತುಂಬಾ ಡಲ್ ಆಗ್ತಿದೆ. ವೀಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸೋತಿದೆ ಅಂತೆಲ್ಲಾ ತುಂಬಾ ಮಂದಿ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿರುವ ನಡುವೆಯೇ, ವೀಕ್ಷಕರನ್ನು ಸೆಳೆಯುವುದಕ್ಕಾಗಿ ಹೊಸ ಹೊಸ ತಂತ್ರಗಳನ್ನು ರೂಪಿಸಲಾಗುತ್ತಿದೆ. ಇದಾಗಲೇ ಎಂಟರ್ಟೇನ್ಮೆಂಟ್ ನೀಡುವುದಕ್ಕಾಗಿ ಕುಮಾರಿ ಅವರನ್ನೂ ಬಿಗ್‌ಬಾಸ್ ಮನೆಯೊಳಕ್ಕೆ ಕರೆಸಿಕೊಳ್ಳಲಾಗಿದೆ. ಸದ್ಯ ಈ ಸೀಸನ್ 50 ದಿನಗಳನ್ನು ಪೂರೈಸುತ್ತಿದೆ.
ಇವೆಲ್ಲವುಗಳ ನಡುವೆಯೇ, ಸೌಂದರ್ಯ ಶೆಟ್ಟಿ ಈ ವಾರ ಡಬಲ್ ಅಲ್ಲ, ತ್ರಿಬಲ್ ಧಮಾಕಾ ಮಾಡಿದ್ದಾರೆ. ಬಿಗ್‌ಬಾಸ್ ಇತಿಹಾಸದಲ್ಲಿಯೇ ಇದೊಂದು ದಾಖಲೆ ಎನ್ನಲಾಗುತ್ತಿರುವುದು ಒಂದೆಡೆಯಾದರೆ, ಅದೇ ಮತ್ತೊಂದೆಡೆ ಕಿಚ್ಚ ಸುದೀಪ್ ನಿರ್ಧಾರಕ್ಕೆ ಬಿಗ್ಬಾಸ್ನ ಕೆಲವು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ಕೂಡ ವ್ಯಕ್ತಪಡಿಸುತ್ತಿದ್ದಾರೆ.
‘ಶೆಟ್ಟಿ ಡಾನ್’ ಎಂದೇ ಬಿರುದು ಪಡೆದುಕೊಂಡಿರುವ ಸೌಂದರ್ಯ ಶೆಟ್ಟಿ, ಒಂದೇ ಟಾಸ್ಕ್‌ನಲ್ಲಿ ಸೌಂದರ್ಯ ಶೆಟ್ಟಿ ಅವರು ದಿ ಬೆಸ್ಟ್ ಎಂಟರ್‌ಟೈನರ್ ಆಗಿ ವೀಕ್ಷಕರ ಮನಸ್ಸು ಗೆದ್ದರು, ಉತ್ತಮ ಪದಕ ಪಡೆದರು ಜೊತೆಗೆ ಟಾಸ್ಕ್ ಗೆದ್ದು 7 ನೇವಾರದ ಕ್ಯಾಪ್ಟನ್ ಆಗಿದ್ದಾರೆ. ಎಷ್ಷೇ ಅಲ್ಲದೆ “ಬ್ಲಾಕ್ ಬಾಸ್ಟರ್ ಎಂಟರ್‌ಟೈನರ್ ಆಫ್ ದಿ ವೀಕ್ ಈ ವಾರ ಎರಡನೇ ಕಿಚ್ಚನ ಚಪ್ಪಾಳೆ ಸೌಂದರ್ಯ ಶೆಟ್ಟಿ ಅವರೇ ನಿಮಗೆ” ಎಂದು ಕಿಚ್ಚ ಸುದೀಪ್ ಅವರ ಕಡೆಯಿಂದ ಮೆಚ್ಚುಗೆಯ ಚಪ್ಪಾಳೆ ಪಡೆದಿದ್ದಾರೆ! ಈ ರೀತಿ ಒಂದೇ ಬಾರಿ ಮೂರು ಮೂರು ಅವಾರ್ಡ್ ಪಡೆದುಕೊಂಡಿರುವ ಸೌಂದರ್ಯ ಬಿಗ್ಬಾಸ್ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಹೀಗೆ ಆಗ್ತಿರೋದು ಇದೇ ಮೊದಲು ಎನ್ನಲಾಗುತ್ತಿದೆ.
ಅಸಮಾಧಾನಕ್ಕೆ ಕಾರಣ, ಪ್ರತಿದಿನವೂ ಎಂಟರ್ಟೈನ್ ಮಾಡಿದ್ದ ಗಿಲ್ಲಿನಟನಿಗೆ ನೀಡದ ಗೌರವ ಸೌಂದರ್ಯ ಅವರಿಗೆ ನೀಡಿರುವುದು. ಸೌಂದರ್ಯ ಶೆಟ್ಟಿ ಬಳಸಿದ ಶಬ್ದಗಳನ್ನು ಕೆಲವು ಬಾರಿ ಬೀಪ್‌ನಿಂದ ಮರೆ ಮಾಡಲಾಗಿದೆ. ಹೀಗಿದ್ದರೂ ಅವರು ಎಂಟರ್‌ಟೈನರ್ ಆಗಲು ಹೇಗೆ ಸಾಧ್ಯ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಗಿಲ್ಲಿನಟನಿಗೆ ಒಂದು ದಿನವೂ ಹೊಗಳಿಗೆ ಸಿಗಲಿಲ್ಲ. ವಾರ ಪೂರ್ತಿ ಇರಿಟೇಟ್ ಮಾಡಿರುವ ಸೌಂದರ್ಯ ಅವರಿಗೆ ಈ ಅವಾರ್ಡಾ ಎಂದು ಪ್ರಶ್ನಿಸುತ್ತಿದ್ದಾರೆ.
‘ಲೂಟಿಕೋರರು ಮತ್ತು ರಾಕ್ಷಸರು’ ಟಾಸ್ಕ್ ನಡೆಯುತ್ತಿದೆ. ಇದನ್ನು ವೀಕ್ಷಕರು ಎಂಜಾಯ್ ಮಾಡುತ್ತಿದ್ದಾರೆ.ಇದರ ನಡುವೆಯೇ, 6ನೇ ವಾರದಲ್ಲಿ ಬಿಗ್ ಬಾಸ್ ಒಂದು ಟಾಸ್ಕ್ ನೀಡಲಾಗಿತ್ತು. ಅದು ಗ್ರಾಸರಿ ಪಡೆಯಲು ಬಿಬಿ ಸಿನಿಮಾ ನೋಡಿ, ಕೇಳಿದ ಪ್ರಶ್ನೆ ಸರಿಯಾಗಿ ಉತ್ತರಿಸಿದರೆ ಗ್ರಾಸರಿ ಸಿಗುವ ಟಾಸ್ಕ್ ಇದು. ಈ ಸಂದರ್ಭದಲ್ಲಿ ಗಗನ್ ಮತ್ತು ತಾಂಡವ್ ಅವರ ಸ್ನೇಹದ ಕುರಿತು ಪ್ರಶ್ನೆ ಎದುರಾಗಿತ್ತು. ಗಗನ್ ಚಿನ್ನಪ್ಪ ಅವರ ಜೊತೆಗೆ ತಾಂಡವ್ ರಾಮ್ ಬಗ್ಗೆ ಸೌಂದರ್ಯ ಶೆಟ್ಟಿ ಅವರು ಕೋಪ ತೋರಿಸಿಕೊಂಡಿದ್ದರು. ತಾಂಡವ್ ‘ಸೋ ಡಮ್’ ಎಂಬ ಪದ ಬಳಿಸಿದ್ದರು. ಈ ಕುರಿತು ಗಗನ್ ಅವರು ಒಂದು ಮಾತು ಕೂಡ ತಾಂಡವ್ ಪರ ಮಾತನಾಡಲಿಲ್ಲ.
ಇದೇ ವಿಚಾರವಾಗಿ ‘ವಾರದ ಕತೆ ಕಿಚ್ಚನ ಜೊತೆ’ ಪಂಚಾಯಿತಿ ಕಟ್ಟೆಯಲ್ಲಿ ಸುದೀಪ್ ಅವರು ಗಗನ್ ಚಿನ್ನಪ್ಪ ಅವರಿಗೆ ಸ್ನೇಹದ ಪಾಠ ಮಾಡಿದ್ದಾರೆ. ‘ನೀವು ತಾಂಡವ್ ರಾಮ್ ಸ್ನೇಹಕ್ಕೆ ಅರ್ಹರಲ್ಲ ಎಂದು ನೇರವಾಗಿಯೇ ಬುದ್ದಿ ಹೇಳಿದ್ದಾರೆ. ಇತ್ತ ತಾಂಡವ್‌ಗೆ ನಿಮ್ಮ ತಾಕತ್ತು ಬೇರೆಯದ್ದೇ ಇದೆ ಎಂದು ಚಪ್ಪಾಳೆ ತಟ್ಟಿದ್ದಾರೆ. ಹಾಗೇ ತಾಂಡವ್ ರಾಮ್ ಅವರಿಗೂ ಕಿಚ್ಚನ ಚಪ್ಪಾಳೆ ಲಭಿಸಿದ್ದು, ಸೌಂದರ್ಯ ಮತ್ತು ತಾಂಡವ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್-13’ರ ದಿ ಬೆಸ್ಟ್ ಪರ್ಫಾಮರ್ಸ್ ಎನಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.