ಜೀ ಕನ್ನಡ ನೀಡಿದ ವಿಶೇಷ ಗಿಫ್ಟ್ ಬಾಕ್ಸ್‌ನಲ್ಲಿ ಕಲಾವಿದರಿಗೆ ಸಿಕ್ಕ ಸರ್ಪೈಸ್ ಏನು?

Published : Oct 25, 2026, 11:30 AM IST
Zee Kannada

ಸಾರಾಂಶ

ಜೀ ಕನ್ನಡ ವಾಹಿನಿಯು ತನ್ನ 20ನೇ ವರ್ಷದ ಸಂಭ್ರಮದ ಪ್ರಯುಕ್ತ 2026ರ ಕುಟುಂಬ ಅವಾರ್ಡ್‌ಗೆ ಕಲಾವಿದರಿಗೆ ವಿಶೇಷ ಗಿಫ್ಟ್ ಬಾಕ್ಸ್ ನೀಡಿ ಆಹ್ವಾನಿಸಿದೆ. 'ಲಕ್ಷ್ಮೀ ನಿವಾಸ' ಧಾರಾವಾಹಿ ನಟಿ ಚೆರಿಕಾ ಮೂರ್ತಿ ಈ ಗಿಫ್ಟ್ ಬಾಕ್ಸ್ ಅನ್ನು ಅನ್‌ಬಾಕ್ಸ್ ಮಾಡಿದ್ದು, ಅದರಲ್ಲಿರುವ ವಿಶೇಷ ವಸ್ತುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Zee Kannada Kutumba Award 2026: ಮನರಂಜನಾ ವಾಹಿನಿ ಜೀ ಕನ್ನಡ 20 ವರ್ಷದ ಸಂಭ್ರಮದಲ್ಲಿದೆ. ಹಾಗೆಯೇ 2026ರ ಕುಟುಂಬ ಅವಾರ್ಡ್‌ ಕಾರ್ಯಕ್ರಮಕ್ಕೂ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ನಾಮಿನೇಷನ್ ಪ್ರೋಗ್ರಾಂನಲ್ಲಿ ವಾಹಿನಿಯ ಕಲಾವಿದರು ಮಿಂಚಿದ್ದು, ಪ್ರೋಮೋಗಳು ಬಿಡುಗಡೆಯಾಗುತ್ತಿವೆ. ಈ ಕುಟುಂಬ ಅವಾರ್ಡ್‌ ಕಾರ್ಯಕ್ರಮಕ್ಕೆ ಜೀ ವಾಹಿನಿ ತನ್ನೆಲ್ಲಾ ಸದಸ್ಯರಿಗೆ ವಿಶೇಷವಾಗಿ ಆಹ್ಚಾನಿಸಿದೆ. ಆಮಂತ್ರಣ ಪತ್ರಿಕೆ ಜೊತೆಯಲ್ಲಿ ಸುಂದರವಾದ ಗಿಫ್ಟ್ ಬಾಕ್ಸ್‌ ಸಹ ನೀಡಿದೆ. ಜೀ ಕನ್ನಡ ವಾಹಿನಿ ಸದಸ್ಯರು, ತಮಗೆ ನೀಡಲಾಗಿರುವು ಗಿಫ್ಟ್‌ನಲ್ಲಿ ಏನೆಲ್ಲಾ ನೀಡಲಾಗಿದೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಚೆರಿಕಾ ಮೂರ್ತಿ ಇನ್‌ಸ್ಟಾಗ್ರಾಂ ಪೋಸ್ಟ್!

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹೂ ಮಾರೋ ಚೆಲುವಿಯಾಗಿ ನಟಿಸುತ್ತಿರುವ ನಟಿ ಚೆರಿಕಾ ಮೂರ್ತಿ, ವಾಹಿನಿಯಿಂದ ಸಿಕ್ಕ ಕೊಡುಗೆಯ ಸಂತೋಷವನ್ನು ತಮ್ಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸೀರಿಯಲ್ ಸಹ ಕಲಾವಿದರ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ನಟಿ ಚೆರಿಕಾ ಶೇರ್ ಮಾಡಿಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಗಿಫ್ಟ್‌ನ್ನು ಅನ್‌ಬಾಕ್ಸ್ ಮಾಡಿದ್ದಾರೆ. ಹಾಗಾದ್ರೆ ಗಿಫ್ಟ್‌ ಬಾಕ್ಸ್‌ನಲ್ಲಿ ಏನೆಲ್ಲಾ ಇತ್ತು ಎಂದು ನೋಡೋಣ ಬನ್ನಿ.

ಗಿಫ್ಟ್‌ಬಾಕ್ಸ್‌ನಲ್ಲಿ ಏನೇನಿದೆ?

ಗುಳೇದಗುಡ್ಡ ಕಣದ ಬಟ್ಟೆಯಲ್ಲಿ ಪುಟಾಣಿ ಚೀಲವೊಂದಿದ್ದು, ಅದರಲ್ಲಿ ಕರ್ನಾಟಕದ ಹೆಮ್ಮೆ ಮೈಸೂರು ಸ್ಯಾಂಡಲ್‌ಸೋಪ್ ಇರಿಸಲಾಗಿದೆ. ಸುಂದರವಾದ ನಂದಿ ವಿಗ್ರಹ, ದೀಪ, ಅಂಬಾರಿ ಹೊತ್ತಿರುವ ಆನೆ ಚಿತ್ರವುಳ್ಳ ಎರಡು ಮಗ್, ಸ್ವೀಟ್ಸ್ ಇರೋ ಜಾರ್, ಪುಟಾಣಿ ಡಬ್ಬದಲ್ಲಿ ಏಲಕ್ಕಿ ಸೇರಿದಂತೆ ಕೆಲವು ಮಸಾಲೆಗಳು, ಸುವಾಸನೆ ಸ್ಟಿಕ್ಸ್, ಅಂಬಾರಿ ಚಿತ್ರವುಳ್ಳ ನೀರಿನ್ ಬಾಟೆಲ್ ಮತ್ತು ಆಮಂತ್ರಣ ಪತ್ರಿಕೆ. ಇದರ ಜೊತೆಯಲ್ಲಿ ಕರ್ನಾಟಕದ ಹೆಮ್ಮೆ ಅಂತ ಕರೆಸಿಕೊಳ್ಳುವ ಸ್ಥಳಗಳ ಕೆಲವು ಸ್ಟಿಕ್ಕರ್ ಸಹ ನೀಡಲಾಗಿದೆ.

ಪೋಷಕ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿರುವ ಚೆರಿಕಾ ಮೂರ್ತಿ

ಈ ಹಿಂದೆ ಚೆರಿಕಾ ಮೂರ್ತಿ ಅವರು ಜೀ ಕನ್ನಡದ ಬಾಕ್ಸ್‌ನ್ನು ವೆಂಕಿ ಜೊತೆಯಲ್ಲಿಯೇ ಅನ್‌ಬಾಕ್ಸ್ ಮಾಡಿದ್ದರು. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಾರಿ ಚೆರಿಕಾ ಮೂರ್ತಿ, ನೆಚ್ಚಿನ ಪೋಷಕ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.

ಇದನ್ನೂ ಓದಿ: ವಿಶೇಷ 3 In 1 ಟ್ಯಾಟೂ ಹಾಕಿಸಿಕೊಂಡ ನಂದಗೋಕುಲದ ನಟಿ ಅರ್ಪಿತಾ ಗೌಡ, ಮೂರು ರೇಖೆಯಲ್ಲುಂಟು ಜೀವ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿಶೇಷ 3 In 1 ಟ್ಯಾಟೂ ಹಾಕಿಸಿಕೊಂಡ ನಂದಗೋಕುಲದ ನಟಿ ಅರ್ಪಿತಾ, ರೇಖೆಯಲ್ಲುಂಟು ಜೀವ
DKD ವೇದಿಕೆಯಲ್ಲಿ 'ನಿನ್ನಂಥ ಅಪ್ಪ ಇಲ್ಲ' ಹಾಡು ರೀಕ್ರಿಯೇಟ್​: ಆ ದಿನಗಳ ನೆನೆದು ಕಣ್ಣೀರಿಟ್ಟ ಸುಧಾರಾಣಿ