
ಧಾರಾವಾಹಿ ಎಂದರೆ ಮೊದಲು ನೆನಪಾಗುವುದೇ 'ಅಗ್ನಿಸಾಕ್ಷಿ' ಎನ್ನುವಷ್ಟು ಜನಪ್ರಿಯತೆ ಗಳಿಸಿದೆ ಈ ಧಾರಾವಾಹಿ. ಸನ್ನಿಧಿ- ಸಿದ್ಧಾರ್ಥ್ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. 1500 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುಕ್ತಾಯಗೊಂಡಿದೆ.
'ಮಿಥುನರಾಶಿ'ಯಲ್ಲಿ ಆಟೋ ಓಡ್ಸೋ ರಾಶಿ ಅದೃಷ್ಟ ಹಿಂಗಿದೆ ನೋಡಿ!
ಸನ್ನಿಧಿ- ಸಿದ್ದಾರ್ಥ್ ನವಿರಾದ ಪ್ರೇಮ ಕಥೆ, ಚಂದ್ರಿಕಾ ಕುತಂತ್ರ, ಸಿದ್ದಾರ್ಥ್- ಅಖಿಲ್ ಬಾಂಧವ್ಯ, ಅಣಜಲಿ ತುಂಟಾಟ, ಮುಖ್ಯಮಂತ್ರಿ ಚಂದ್ರು ಪ್ರಬುದ್ಧತೆ ಇವೆಲ್ಲವೂ ನಮ್ಮ ಮನೆಯಲ್ಲಿ ನಡೆಯುವ ಕಥೆಯೇನೋ ಅನ್ನುವಷ್ಟು ಆತ್ಮೀಯತೆ ನೀಡುತ್ತಿದ್ದವು. ಅಲ್ಲಲ್ಲಿ ಸ್ವಲ್ಪ ಎಳೆದಂತೆ ಭಾಸವಾದರೂ ಜನ ಮಾತ್ರ ನೋಡುವುದನ್ನು ಬಿಟ್ಟಿರಲಿಲ್ಲ.
ವಿಜಯ್ ಸೂರ್ಯ 'ಅಗ್ನಿಸಾಕ್ಷಿ'ಯಿಂದ ಹೊರಬಂದು ಪ್ರೇಮಲೋಕ ಧಾರಾವಾಹಿಯನ್ನು ಬ್ಯುಸಿಯಾದರು. ವಿಜಯ್ ಸೂರ್ಯ ಹೊರ ಬಂದಾಗ ಧಾರಾವಾಹಿ ಬೋರ್ ಹೊಡೆಸುತ್ತದೆ. ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಭಾವಿಸಲಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಮುಗಿದು ಹೋಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಉಳಿದ ಪಾತ್ರಗಳು ಅದನ್ನು ಸರಿದೂಗಿಸಿಕೊಂಡು ಹೋದವು. 'ಪ್ರೇಮಲೋಕ' ಸೀರಿಯಲ್ ಕೂಡಾ ಸಿದ್ಧಾರ್ಥ್‌ಗೆ ಒಳ್ಳೆಯ ಇಮೇಜನ್ನು ತಂದು ಕೊಟ್ಟಿತು.
ಸಿದ್ದಾರ್ಥ್ ‘ಅಗ್ನಿಸಾಕ್ಷಿ’ ಬಿಟ್ಟೋದ ನಂತರ ಬದಲಾದ ಸನ್ನಿಧಿ!
ಇನ್ನು ವಿಲನ್ ಚಂದ್ರಿಕಾ ಪಾತ್ರವನ್ನು ಇವರನ್ನು ಬಿಟ್ಟರೆ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ ಎನ್ನುವಷ್ಟು ಬೆಸೆದುಕೊಂಡಿದ್ದ ಚಂದ್ರಕಾ ಅಲಿಯಾಸ್ ಪ್ರಿಯಾಂಕ ಗೌಡ ಬಿಗ್‌ಬಾಸ್‌ಗೆ ತೆರಳಿದರು. ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಆಚೆ ಬರುತ್ತಾರೆ ಎನ್ನಲಾಗಿತ್ತು. ಆದರೆ ಅವರು 'ಧಾರಾವಾಹಿಯಿಂದ ಹೊರ ಬರುವ ಆಲೋಚನೆಯಿಲ್ಲ' ಎಂದು ಸ್ಪಷ್ಟನೆ ನೀಡಿದ್ದರು.
ಇದೀಗ ಅಗ್ನಿಸಾಕ್ಷಿ ಮುಕ್ತಾಯಗೊಂಡಿದೆ. ಪ್ರೇಕ್ಷಕರ ಜೊತೆ ಬೆಸೆದುಕೊಂಡಿದ್ದ ಈ ಧಾರಾವಾಹಿ ಮುಗಿದಿರುವುದು ಕೆಲವರಿಗೆ ಬೇಸರ ತಂದಿದ್ದರೆ ಇನ್ನು ಕೆಲವರು ಟ್ರೋಲ್ ಮಾಡ್ತಾ ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.