ಕಿರುತೆರೆಯಲ್ಲಿ ಹವಾ ಸೃಷ್ಟಿಸಿದ್ದ ಅಗ್ನಿಸಾಕ್ಷಿ ಧಾರಾವಾಹಿ ಮುಕ್ತಾಯ/ 1500ಕ್ಕೂ ಅಧಿಕ ಸಂಚಿಕೆ ಪ್ರಸಾರ/ ಧಾರಾವಾಹಿಯಿಂದ ಹೊರಬಂದಿದ್ದ ಸಿದ್ಧಾರ್ಥ್ ವಿಜಯ್ ಸೂರ್ಯ/ ಹೊಸ ದಾರಿಯ ಸಂದೇಶ ಸಾರಿ ಮುಕ್ತಾಯ
ಹಳ್ಳಿ ಕಟ್ಟೆಗಳಲ್ಲಿಯೂ ಅತ್ತಿಗೆ, ಅತ್ತೆ, ಸೊಸೆ, ಓರಗಿತ್ತಿಯರ ನಡುವೆ ಧಾರಾವಾಹಿ ಕತೆ ಚರ್ಚೆ ಆಗುತ್ತಿತ್ತು. ನಾಳೆ ಏನಾಗುತ್ತದೆ ಎಂಬ ಕುತೂಹಲ ಮಹಿಳೆಯರನ್ನು ಎಡೆಬಿಡದೇ ಕಾಡುತ್ತಿತ್ತು.
ಕಿರುತೆರೆಯಲ್ಲಿ ವರ್ಷಗಳ ಕಾಲ ನಂಬರ್ 1 ಧಾರಾವಾಹಿಯಾಗಿ ಮೆರೆದ ಅಗ್ನಿಸಾಕ್ಷಿ ಮುಕ್ತಾಯವಾಗಿದೆ. ಕಿರುತೆರೆಯ ಡಿಂಪಲ್ ಕಪಲ್ ಎಂದೇ ಪಾಪ್ಯೂಲರ್ ಆಗಿದ್ದ ಸಿದ್ದಾರ್ಥ ಹಾಗೂ ಸನ್ನಿಧಿ ಜೋಡಿ ಒಂದು ಹವಾ ಸೃಷ್ಟಿ ಮಾಡಿಸಿದ್ದು ಸುಳ್ಳಲ್ಲ.
undefined
1500 ಸಂಚಿಕೆಗಳನ್ನು ದಾಟಿ ಮುಂದಕ್ಕೆ ಹೋಗಿದ್ದ ಧಾರಾವಾಹಿ ಹೊಸ ವರ್ಷ 2020ರ ಆರಂಭದಲ್ಲಿ ಕೊನೆಯಾಗಿದೆ. ಧಾರಾವಾಹಿಯಲ್ಲಿ ಚಂದ್ರಿಕಾ ಪಾತ್ರ ಮಾಡುತ್ತಿದ್ದ ಪ್ರಿಯಾಂಕಾ ಬಿಗ್ ಬಾಸ್ ಮನೆ ಸೇರಿಕೊಂಡಿದ್ದು ಹಳೆಯ ಸುದ್ದಿ.
ಅಗ್ನಿಸಾಕ್ಷಿ ಬಿಟ್ಟು IAS ಅಧಿಕಾರಿ ಆಗ್ತಾರಾ ಅಂಜಲಿ?
ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಸುದರ್ಶನ್ ಸಹ ಧಾರಾವಾಹಿಯ ಪಾತ್ರವಾಗಿದ್ದರು. ಸಿದ್ಧಾರ್ಥ್ ವಿಜಯ್ ಸೂರ್ಯಗೆ ಸ್ಟಾರ್ ಇಮೇಜ್ ತಂದುಕೊಟ್ಟ ಧಾರಾವಾಹಿ ಇದು.
ಅಗ್ನಿಸಾಕ್ಷಿ ಚಂದ್ರಿಕಾ ಮನೆಗೆ ಲಿಟಲ್ ಪ್ರಿನ್ಸೆಸ್!
ಸನ್ನಿಧಿ ವೈಷ್ಣವಿ ಗೌಡ, ಸಿದ್ಧಾರ್ಥ್ ವಿಜಯ್ ಸೂರ್ಯ, ರಾಜೇಶ್ ಧ್ರುವ, ಪ್ರಿಯಾಂಕಾ, ಸುಕೃತಾ ನಾಗರಾಜು ಸೇರಿದಂತೆ ಎಲ್ಲ ಕಲಾವಿದರಿಗೂ ಹೆಸರು ತಂದುಕೊಟ್ಟಿತ್ತು. ವಿಜಯ್ ಸೂರ್ಯ ಧಾರಾವಾಹಿಯಿಂದ ಕೆಲ ತಿಂಗಳುಗಳ ಹಿಂದೆ ಹೊರಗೆ ಬಂದಿದ್ದರು.