ಕನ್ನಡ ಬೃಂದಾವನ ಧಾರಾವಾಹಿ ನಟ ವರುಣ್ ಆರಾಧ್ಯ ನನ್ನ ಖಾಸಗಿ ಪೊಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಜೀವ ಬೆದರಿಕೆ ಹಾಕಿದ್ದಾನೆಂದು ಆತನ ಮಾಜಿ ಪ್ರೇಯಸಿ ದೂರು ದಾಖಲಿಸಿದ್ದಾರೆ.
ಬೆಂಗಳೂರು (ಸೆ.11): ಕನ್ನಡದ ಬೃಂದಾವನ ಧಾರಾವಾಹಿಯ ನಟ ವರುಣ್ ಆರಾಧ್ಯ ಮಾಜಿ ಪ್ರಿಯತಮೆಗೆ ನಿನ್ನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಹಾಗೂ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿರಿಯಲ್ ನಟ, ರೀಲ್ಸ್ ಸ್ಟಾರ್ ವರುಣ್ ಆರಾಧ್ಯ ವಿರುದ್ಧ ಕೊಲೆ ಬೆದರಿಕೆ ಆರೋಪ ಕೇಳಿಬಂದಿದೆ. ಖಾಸಗಿ ಫೋಟೋ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್ ಮೇಲ್. ತನ್ನ ಮಾಜಿ ಪ್ರೇಯಸಿಗೆ ಬೆದರಿಕೆ ಹಾಕಿರುವ ವರುಣ್. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬೃಂದಾವನ ಧಾರಾವಾಹಿಯಲ್ಲಿ ನಟಿಸಿದ್ದ ವರುಣ್ ಆರಾಧ್ಯ. ರೀಲ್ಸ್ ನಲ್ಲಿ ಸಾಕಷ್ಟು ಫೇಮಸ್ ಆಗಿದ್ದ ವರ್ಷಾ, ವರುಣ್ ಜೋಡಿ. ಇವರು 2019 ರಿಂದ ಪ್ರೇಮಿಗಳಾಗಿದ್ದರು. ಇಬ್ಬರು ಸಲುಗೆಯಿಂದ ಇದ್ದಾಗ ಖಾಸಗಿ ಪೋಟೋ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ವರುಣ್. ಕಳೆದ ವರ್ಷ ಬೇರೆ ಯುವತಿಯ ಖಾಸಗಿ ಫೋಟೋ, ವಿಡಿಯೋಗಳನ್ನು ತನ್ನ ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದನು. ಇದು ಯಾರ ಫೋಟೋಗಳು ಎಂದು ಪ್ರೆಯಸಿ ಪ್ರಶ್ನೆ ಮಾಡಿದಾಗ ಬೆದರಿಕೆ ಹಾಕಿದ್ದನು.
ರಾನಿ ರಿಲೀಸ್‌ಗೂ ಮುನ್ನವೇ ಶಾಕಿಂಗ್ ನ್ಯೂಸ್ ನೀಡಿದ ಕಿರಣ್ ರಾಜ್!
ಇನ್ನು ಈ ಬಗ್ಗೆ ಯಾರ ಬಳಿಯಾದರೂ ಹೇಳಿದರೆ ನಿನ್ನ ಖಾಸಗಿ ಫೋಟೋ, ವಿಡಿಯೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದನು. ಹೀಗಾಗಿ ವರುಣ್ ನಿಂದ ಪ್ರೆಯಸಿ ದೂರವಾಗುದ್ದಳು. ಕಳೆದ ವರ್ಷ ಪ್ರೇಯಸಿಗೆ ಆಕೆಯ ಖಾಸಗಿ ಫೋಟೋ ಕಳುಹಿಸಿದ್ದನು. ನೀನು ಬೇರೆಯವರನ್ನು ಮದುವೆಯಾದರು ನಿನ್ನನ್ನು ನಿನ್ನ ಗಂಡನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನು. ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ವರುಣ್ ವಿರುದ್ಧ ಸಂತ್ರಸ್ಥೆ ದೂರು ನೀಡಿದ್ದಾಳೆ. ಸದ್ಯ ಪಶ್ಚಿಮ ವಿಭಾಗದ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಕಿರುತೆರೆ ನಟಿ ಜೊತೆ ವರುಣ್ ಆರಾಧ್ಯ ಲವ್ವಿ ಡವ್ವಿ?; ಟ್ರೋಲಿಗರಿಗೆ ಉತ್ತರ ಕೊಟ್ಟ ನಟ!
ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿಯಿಂದ ದೂರು ನೀಡಿದ್ದಾರೆ. ವರ್ಷಾ ಕಾವೇರಿಯ ಖಾಸಗಿ ವಿಡಿಯೋ, ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆಂದು ಆರೋಪ ಮಾಡಲಾಗಿದೆ. ಇವರಿಬ್ಬರೂ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಿದ್ದ ಜೋಡಿ ಆಗಿದ್ದರು. ಅವರು ಜೊತೆಯಲ್ಲಿದ್ದಾಗ ವೈಯಕ್ತಿಕ ಪೋಟೊ ಮತ್ತು ವಿಡಿಯೋ ಮಾಡಿಕೊಂಡು ಈಗ ಬೆದರಿಕೆ ಹಾಕುತ್ತಿದ್ದಾನೆ. ಇನ್ನು ನೀನು ಬೇರೆಯವರನ್ನ ಮದುವೆಯಾದರೂ ಅವನನ್ನ ಸಾಯುಸಿ ನಿನ್ನನ್ನು ಸಾಯಿಸುತ್ತೇನೆ ಎಂದು ವರ್ಷಾ ಕಾವೇರಿಯ ವಾಟ್ಸಪ್‌ಗೆ ಖಾಸಗಿ ಪೋಟೊ ಕಳುಹಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇದೀಗ ವರ್ಷಾ ಕಾವೇರಿ ನೀಡಿದ ದೂರು ಆಧರಿಸಿ ಬಸವೇಶ್ವರ ನಗರ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಆಗಿದೆ.