ಅನುಬಂಧ ಅವಾರ್ಡ್​ಗೆ ಭಾಗ್ಯಲಕ್ಷ್ಮಿ ಸೀರಿಯಲ್​ ಸುಷ್ಮಾರನ್ನು ರೆಡಿ ಮಾಡಿದ್ದು ಹೀಗೆ ನೋಡಿ...

Published : Sep 11, 2024, 03:49 PM IST
ಅನುಬಂಧ ಅವಾರ್ಡ್​ಗೆ ಭಾಗ್ಯಲಕ್ಷ್ಮಿ ಸೀರಿಯಲ್​ ಸುಷ್ಮಾರನ್ನು ರೆಡಿ ಮಾಡಿದ್ದು ಹೀಗೆ ನೋಡಿ...

ಸಾರಾಂಶ

ಕಲರ್ಸ್​ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್​ಗೆ ವೇದಿಕೆ ಸಜ್ಜಾಗಿದ್ದು,  ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯ ಅರ್ಥಾತ್​ ಸುಷ್ಮಾರನ್ನು ರೆಡಿ ಮಾಡಿದ್ದು ಹೀಗೆ ನೋಡಿ...  

ಕಲರ್ಸ್​ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್​ಗೆ ವೇದಿಕೆ ಸಜ್ಜಾಗಿದೆ. ಎಲ್ಲಾ ಸೀರಿಯಲ್​ ನಟ-ನಟಿಯರು ಭರ್ಜರಿ ರೆಡಿಯಾಗಿದ್ದು ಅವಾರ್ಡ್​ ತೆಗೆದುಕೊಳ್ಳಲು ಕಾತರರಾಗಿದ್ದಾರೆ. ಇದರ ಶೂಟಿಂಗ್​ ಮುಗಿದಿದ್ದು, ಇನ್ನೇನು ಮುಂದಿನ ವಾರ ಪರದೆಯ ಮೇಲೆ ವೀಕ್ಷಕರ ಮುಂದೆ ಬರಲಿದೆ. ಇದರಲ್ಲಿ ಹೈಲೈಟ್​ ಆಗಿರೋದು ಭಾಗ್ಯಲಕ್ಷ್ಮಿಯ ಭಾಗ್ಯ. ಭಾಗ್ಯ ಎಂದ್ರೆ ಸಾಕು, ಕಲರ್ಸ್​ ಕನ್ನಡ ಚಾನೆಲ್​ನ ಭಾಗ್ಯ ಥಟ್​ ಅಂತ ಕಣ್ಣೆದುರು ಪ್ರತ್ಯಕ್ಷ ಆಗಿ ಬಿಡುತ್ತಾಳೆ. ಸದ್ಯ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಸದ್ಯ ಭಾಗ್ಯಳದ್ದೇ ಹವಾ. ಅಳುಮುಂಜಿ ಭಾಗ್ಯ ಬದಲಾಗಿದ್ದಾಳೆ.   ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿರೋ ಭಾಗ್ಯ ಸಂಪೂರ್ಣ ಬದಲಾಗಿದ್ದಾಳೆ. ಅವಳ ವರಸೆಯೇ ಬದಲಾಗಿದೆ. ಈಗ ಏನಿದ್ರೂ ಅವಳು ಸ್ಟಾರ್​ ಹೋಟೆಲ್​ನ ಚೀಫ್​ ಶೆಫ್​. ಓಡಾಡಲು ಕಾರು ಇದೆ. ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ. ಮನೆಯಲ್ಲಿ ಎಲ್ಲರ ಪ್ರೀತಿ ಗಳಿಸಿದ್ದಾಳೆ. ಸರಿಯಾಗಿ ಇಂಗ್ಲಿಷ್​  ಮಾತನಾಡಲೂ ಬರದಿದ್ದ ಭಾಗ್ಯ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು  ಸಾಧ್ಯ ಎನ್ನುವ ಮೂಲಕ ಹಲವರಿಗೆ ಮಾದರಿಯಾಗಿದ್ದಾಳೆ. ಈಕೆ ಹತ್ತನೇ ಕ್ಲಾಸ್​ ಪರೀಕ್ಷೆ ಬರೆದದ್ದರಿಂದ ಸ್ಫೂರ್ತಿಗೊಂಡು, ನಿಜ ಜೀವನದಲ್ಲಿಯೂ ಮಹಿಳೆಯರು ಮಕ್ಕಳ ಜೊತೆ ಪರೀಕ್ಷೆ ಬರೆದಿದ್ದಾಳೆ. ಹೆಣ್ಣು ಅದರಲ್ಲಿಯೂ ಗೃಹಿಣಿ ಎಂದರೆ ತೀರಾ ಕಡೆಗಣನೆಯಿಂದ ನೋಡುತ್ತಿದ್ದವರಿಗೆಲ್ಲರಿಗೂ ಭಾಗ್ಯ ಬದುಕಿನ ಹೊಸ ದಿಸೆ ತೋರಿಸುತ್ತಿದ್ದಾಳೆ.

ಇದರ ನಡುವೆಯೇ ಅತ್ತ ತಾಂಡವ್​ ಮದುವೆಗೆ ಸಿದ್ಧವಾಗಿದ್ದಾನೆ. ಆದ್ರೆ ಇದು ಭಾಗ್ಯಳಿಗೆ ತಿಳಿದಿಲ್ಲ. ಅತ್ತೆ ಕುಸುಮಾಗೆ ಈಗಷ್ಟೇ ಗೊತ್ತಾಗಿದೆ. ಅವಳ ಮುಂದಿನ ನಡೆ ಏನು ಎಂಬುದು ಈಗಿರುವ ಕುತೂಹಲ. ಇವೆಲ್ಲವುಗಳ ನಡುವೆಯೇ ಅನುಬಂಧ ಅವಾರ್ಡ್​ಗೆ ಭಾಗ್ಯ ಹೇಗೆ ರೆಡಿಯಾಗಿದ್ದಾಳೆ ನೋಡಿ. ಅಷ್ಟಕ್ಕೂ ಭಾಗ್ಯಲಕ್ಷ್ಮಿಯ ಪಾತ್ರಧಾರಿ ಸುಷ್ಮಾ ಕೆ.ರಾವ್​. ಇವರ ನಿರೂಪಣಾ ಶೈಲಿ ಟಿ.ವಿ. ವೀಕ್ಷಕರಿಗೆ ಚಿರಪರಿಚಿತ.  ಇದೀಗ ಅಣ್ಣನ ತೋಟದಲ್ಲಿ ಕಳೆ ಕೀಳುತ್ತಾ, ವೀಳ್ಯದೆಲೆ ತೆಗೆಯುತ್ತಾ ಇರೋ ಭಾಗ್ಯ ಈಚೆಗಷ್ಟೇ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ವೀಳ್ಯದೆಲೆಯನ್ನು  ತೆಗೆಯುತ್ತಾ, ವೀಳ್ಯದೆಲೆ ಮಾರಾಟಕ್ಕೆ ಇಳಿದಿದ್ದೇನೆ. ನಿಮಗೂ ಬೇಕಾದ್ರೆ ಹೇಳಿ ಎಂದು ತಮಾಷೆ ಮಾಡಿದ್ದರು. ಕನಕಪುರದಲ್ಲಿರುವ ತಮ್ಮ ಅಣ್ಣನ ತೋಟದಲ್ಲಿ ತಾವು ಕೆಲಸ ಮಾಡುತ್ತಿರುವುದಾಗಿ ಸುಷ್ಮಾ ಹೇಳಿಕೊಂಡಿದ್ದರು. ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ಸುಷ್ಮಾ ಅವರು ಆಗಾಗ್ಗೆ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ.

ಭಾಗ್ಯಲಕ್ಷ್ಮಿ ಆದರ್ಶ ಕುಸುಮತ್ತೆಗೆ ಹುಟ್ಟುಹಬ್ಬದ ಸಂಭ್ರಮ: ಜೈಲುಪಾಲಾಗದಿರಲಿ ಎಂದು ಹಾರೈಸ್ತಿರೋ ಫ್ಯಾನ್ಸ್​

ಆದರೆ ಇದೀಗ ಅನುಬಂಧ ಅವಾರ್ಡ್​ಗೆ ನಟಿಯನ್ನು ರೆಡಿ ಮಾಡಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ ಮೇಕಪ್​ ಆರ್ಟಿಸ್ಟ್​ ಪ್ರಿಯಾ ಚಂದ್ರ. ಸುಷ್ಮಾ ಅವರು ಯಾವುದೇ ಮೇಕಪ್​ ಇಲ್ಲದೆಯೂ ಸುಂದರವಾಗಿ ಕಾಣಿಸುತ್ತಾರೆ. ಆದರೆ ಫಂಕ್ಷನ್​ ಎಂದ ಮೇಲೆ ಮೇಕಪ್​ ಅನಿವಾರ್ಯ. ಅದರಲ್ಲಿಯೂ ವಾಹಿನಿಗಳ ಅವಾರ್ಡ್​ ಫಂಕ್ಷನ್​ ಎಂದರೆ ಕೇಳಬೇಕೆ? ಇದಕ್ಕೆ ಸುಷ್ಮಾ ಅವರನ್ನು ಮದುಮಗಳಂತೆ ಶೃಂಗಾರ ಮಾಡಲಾಗಿದ್ದು, ಅದರ ವಿಡಿಯೋ ಅದನ್ನು ಮೇಕಪ್​ ಆರ್ಟಿಸ್ಟ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ.

ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.  

 ಶೂಟಿಂಗ್​ನಲ್ಲಿ ಶ್ರೇಷ್ಠಾಳ ಮುಖಕ್ಕೆ ಬೂದಿ ಎರೆಚಿದಾಗ ಎಲ್ಲೆಲ್ಲೋ ಹೋಗಿ ಏನೇನಾಯ್ತು ನೋಡಿ...!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!