ಹಾಯ್ ಜನರೇ, ಬನ್ನಿ ಬನ್ನಿ ಜನರೇ ಎಂದು ಹೇಳುತ್ತ ರೀಲ್ಸ್ ಮೂಲಕ ಫೇಮಸ್ ಆಗಿರೋ ಕಿಪ್ಪಿ ಕೀರ್ತಿ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಕಿಪ್ಪಿ ಕೀರ್ತಿ ಅವರು ಬ್ರೇಕಪ್ ಮಾಡಿಕೊಂಡಿರುವ ವಿಚಾರವನ್ನೇ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ಅವರು ಕಾರಣವನ್ನು ಕೂಡ ಹೇಳಿದ್ದಾರೆ. ಕಿಪ್ಪಿ ಕೀರ್ತಿ ಅವರು ಮುತ್ತು ಎನ್ನುವವರನ್ನು ಪ್ರೀತಿಸುತ್ತಿದ್ದರಂತೆ.
ಕಿಪ್ಪಿ ಕೀರ್ತಿ ಪೋಸ್ಟ್ ಏನು?
“ಎಲ್ಲೇ ಇರು, ಚೆನ್ನಾಗಿರು, ಖುಷಿಯಾಗಿರು ಅಷ್ಟೇ ಯಾವತ್ತೂ ಪ*** ಮುಖ ತೋರ್ಸೋದಿಲ್ಲ. ನೀನು ನನ್ನ ಬಗ್ಗೆ ತಪ್ಪು ತಿಳ್ಕೊಂಡು ದೂರ ಮಾಡಿದೆ ಅಲ್ವಾ ? ಹೇಗಿರಲಿ ನಾನು ಅಂತ ಗೊತ್ತಿಲ್ಲ. ಎಲ್ಲರಿಗೂ ಹಾಲು ಕುಡಿದಷ್ಟು ಸಂತೋಷ ಆಗಿರಬಹುದು , ಚೆನ್ನಾಗಿರಿ ಅಂತ ಅಷ್ಟೇ ಬಯಸೋದು. ನನಗೆ ಇನ್ನೇನು ಬೇಡ. ನಿನ್ನ ಮರೆಯೋಕೆ ಕಷ್ಟ ಆಗಬಹುದು. ಆದರೆ ಮರೆಯೋದಿಲ್ಲ, ಇನ್ಮುಂದೆ ನಾನು ಯಾರನ್ನೂ ಮದುವೆನೂ ಆಗಲ್ಲ. ಇದು ಪ್ರೀತಿ ಮೇಲೆ ಆಣೆ . ಸ್ವಲ್ಪ ಆದ್ರೂ ನೀನು ನನ್ನ ಮಾತು ಕೇಳಬಹುದಿತ್ತು, ಆದ್ರೆ ನೀನು ನನ್ ಮೇಲೆ ಅನುಮಾನ ಪಟ್ಟೆ” ಎಂದು ಕಿಪ್ಪಿ ಕೀರ್ತಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಕೊನೆಗೂ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದ ಕಿಪಿ ಕೀರ್ತಿ; ಫ್ಯಾಮಿಲಿ ಸಪೋರ್ಟ್ ಇಲ್ಲ ಎಂದು ಬೇಸರ
ವೀಕ್ಷಕರು ಏನು ಹೇಳಿದ್ದಾರೆ?