ಕಾಲೇಜ್‌ನಲ್ಲಿ ಆ ಹುಡುಗಿಗೆ ಐ ಲವ್ ಯೂ ಹೇಳೋಕೆ 1 ವರ್ಷ ತೆಗೊಂಡೆ; ಕೊನೆಗೂ ಹಳೆ ಕಹಾನಿ ಬಿಚ್ಚಿಟ್ಟ ರವಿಚಂದ್ರನ್

Published : Mar 14, 2025, 12:32 PM ISTUpdated : Mar 14, 2025, 12:50 PM IST
ಕಾಲೇಜ್‌ನಲ್ಲಿ ಆ ಹುಡುಗಿಗೆ ಐ ಲವ್ ಯೂ ಹೇಳೋಕೆ 1 ವರ್ಷ ತೆಗೊಂಡೆ; ಕೊನೆಗೂ ಹಳೆ ಕಹಾನಿ ಬಿಚ್ಚಿಟ್ಟ ರವಿಚಂದ್ರನ್

ಸಾರಾಂಶ

ಕ್ರೇಜಿ ಸ್ಟಾರ್ ರವಿಚಂದ್ರನ್, 'ಭರ್ಜರಿ ಬ್ಯಾಚುಲರ್ಸ್' ವೇದಿಕೆಯಲ್ಲಿ ತಮ್ಮ ಕಾಲೇಜು ಪ್ರೇಮದ ನೆನಪುಗಳನ್ನು ಹಂಚಿಕೊಂಡರು. ಆಗಿನ ಪ್ರೀತಿಗೂ ಈಗಿನ ಪ್ರೀತಿಗೂ ವ್ಯತ್ಯಾಸವಿಲ್ಲ, ತಂತ್ರಜ್ಞಾನ ಬದಲಾಗಿದೆ ಅಷ್ಟೇ ಎಂದರು. ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಸುವ ಅನುಭವವೇ ಬೇರೆ. ಅವರ ಸೂಪರ್ ಹಿಟ್ ಸಿನಿಮಾಗಳು ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಪ್ರೀತಿಯ ಕಥೆಗಳಾಗಿವೆ ಎಂದು ಹೇಳಿದರು.

ಕನ್ನಡ ಚಿತ್ರರಂಗ ಕ್ರೇಜಿ ಸ್ಟಾರ್ ರವಿಚಂದ್ರನ್ ಸೂಪರ್ ಹಿಟ್ ಲವ್ ಸ್ಟೋರಿ ಸಿನಿಮಾಗಳನ್ನು ನೋಡಿ ಅರೇಂಜ್ಡ್‌ ಮ್ಯಾರೇಜ್ ಆಗಿಬಿಟ್ರಾ?  ಹಾಗಿದೆ ಈ ಲವ್ ಮ್ಯಾಟರ್ ಸ್ಟೋರಿ ಬರೆಯಲು ಅವರಿಗೆ ಏನ್ ಸ್ಫೂರ್ತಿ? ಲವ್ ಆಗಿಲ್ಲ ಅನ್ನೋರು ಅಷ್ಟು ಚೆನ್ನಾಗಿ ಸೀನ್‌ನಲ್ಲಿ ರೊಮ್ಯಾನ್ಸ್ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ಭರ್ಜರಿ ಬ್ಯಾಚುಲರ್ ವೇದಿಯಲ್ಲಿ ರವಿಚಂದ್ರನ್ ತಮ್ಮ ಕಾಲೇಜ್ ಪ್ರಿತಿ ನೆನೆಪು ಮಾಡಿಕೊಂಡಿದ್ದಾರೆ.

ಹೌದು! ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ಮೂರನೇ ವಾರದ ಸ್ಪೆಷಲ್ ಎಪಿಸೋಡ್ ಇರುವುದು ರೀ-ಕ್ರಿಯೇಷನ್‌ ರೌಂಡ್. ತನ್ನ ನೆಚ್ಚಿನ ನಟರ ಸಿನಿಮಾ ಒಂದೊಂದು ಸೀನ್‌ಗಳನ್ನು ಜೋಡಿಗಳು ನಟಿಸಬೇಕು. ರವಿಚಂದ್ರನ್ ಸೂಪರ್ ಹಿಟ್ ಸಿನಿಮಾ ರಣಧೀರ ಚಿತ್ರದ ಸೀನ್ ರೀ-ಕ್ರಿಯೇಟ್ ಮಾಡಲಾಗಿತ್ತು. ಜೋಡಿಗಳ ಆಕ್ಟಿಂಗ್‌ ರವಿಚಂದ್ರನ್ ಫಿದಾ ಆಗುತ್ತಾರೆ. ಆಗ ಎದುರಾದ ಪ್ರಶ್ನೆ ಏನೆಂದರೆ ಆಗಿನ ಕಾಲದಲ್ಲಿ ಆಗುತ್ತಿದ್ದ ಲವ್‌ಗೂ ಈಗಿನ ಕಾಲದಲ್ಲಿ ಆಗುತ್ತಿರುವ ಲವ್‌ಗೂ ಏನಾದರೂ ವ್ಯತ್ಯಾಸ ಇದ್ಯಾ ಎಂದು. ಅದಕ್ಕೆ ರವಿಮಾಮ ಕೊಟ್ಟ ಉತ್ತರ.... 'ಲವ್‌ನಲ್ಲಿ ವ್ಯತ್ಯಾಸ ಇರೋದಕ್ಕೆ ಸಾಧ್ಯನೇ ಇಲ್ಲ. ಟೆಕ್ನಾಲಜಿ ಪ್ರಕಾರ ಎಲ್ಲಾ ಬೆಳೆದುಬಿಡ್ತಾರೆ ಅಷ್ಟೇ. ಯಾರೋ ಒಬ್ಬರನ್ನು ನೋಡಿದ ಕೂಡಲೇ ಏನಕ್ಕೆ ಅವರು ಇಷ್ಟ ಆಗ್ತಾರೆ ಅಂತ ಇವತ್ತಿನವರೆಗೂ ಯಾರಿಗೂ ಗೊತ್ತಿಲ್ಲ. ಒಂದು ಗುಣ ನೋಡಿ ಇಷ್ಟ ಪಡುಬಹುದು ಅಥವಾ ಕಾರಣವಿಲ್ಲದೆ ಇಷ್ಟ ಪಡಬಹುದು. ಮನಸ್ಸು ಪ್ರೀತಿ ಕಡೆಗೆ ಹಂಗೆ ಟಪ್ ಅಂತ ಎಳೆದುಬಿಡುತ್ತದೆ' ಎಂದು ರವಿಚಂದ್ರನ್ ಮಾತನಾಡಿದ್ದಾರೆ.

ಯಶ್‌ ನನ್ನ ಬರ್ತಡೇ ಪಾರ್ಟಿಗೆ ಬರ್ತಿದ್ರು, ತಂದೆ ಫ್ರೆಂಡ್‌ ಮೇಲೆ ಕ್ರಶ್ ಆಗಲ್ಲ: ಸಾನ್ವಿ ಸುದೀಪ್ ಹೇಳಿಕೆ ವೈರಲ್

'ಕಾಲೇಜ್‌ನಲ್ಲಿ ಇರುವಾಗ ಲವ್ ಸ್ಟೋರಿ ಸ್ಟಾರ್ ಆಗಿದ್ದು ಕೂಡ ಹೀಗೆಯೇ..ನಾನು ಬೈಕ್‌ನಲ್ಲಿ ಕಾಲೇಜ್‌ನೊಳಗೆ ಎಂಟ್ರಿ ಆಗಬೇಕಾದ್ರೆ ಅಲ್ಲಿ ನಿಂತಿದ್ದ ಹುಡುಗಿ ತಿರುಗ್ತಾಳೆ ಅಷ್ಟೇ. ಅದರೆ ಅಷ್ಟಕ್ಕೆ ನನ್ನ ಲವ್ ಸ್ಟೋರಿ ಸ್ಟಾರ್ಟ್‌ ಆಗಿ ಹೋಯಿತ್ತು. ನಾನು ಬರೀ ಐ ಲವ್ ಯೂ ಹೇಳೋಕ್ಕೆ 1 ವರ್ಷ ತೆಗೆದುಕೊಂಡೆ. ಇವತ್ತಿನವರೆಗೆ ಒಂದು ಸೆಕೆಂಡ್ ಸಾಕು. ಇವತ್ತು ಟೆಕ್ನಾಲಜಿ ಎಲ್ಲರ ಕೈಯಲ್ಲಿದೆ. ನೋಡಿದ ಕೂಡಲೇ ವಾಟ್ಸಾಪ್‌ನಲ್ಲಿ ಮೆಸೇಜ್ ಹೋಗಿ ಬಿಡುತ್ತದೆ. ಅನಂತ ಎಲ್ಲ ಮುಗಿದೇ ಹೋಗುತ್ತದೆ. ಅರ್ಧ ಲವ್ ಸ್ಟೋರಿ ಮೊಬೈಲ್‌ಗಳಲ್ಲಿ ಮುಗಿದು ಹೋಗುತ್ತದೆ ಇವತ್ತು. ಆದರೆ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪ್ರೀತಿ ಇದೆಲ್ಲಾ ಅದರ ಬೆಲೆಯೇ ಬೇರೆ. ನನ್ನ ರಣಧೀರ, ಪ್ರೇಂ ಲೋಕ, ಯಾರೇ ನೀನು ಚೆಲುವೆ, ಪ್ರೀತ್ಸೋದ್ ತಪ್ಪಾ ಸಿನಿಮಾಗಳು ಇವತ್ತಿಗೂ ಚೆನ್ನಾಗಿದೆ ಅಂತ ಅನಿಸಿದರೆ ಅದಕ್ಕೆ ಕಾರಣ ಅವು ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಸಿನಿಮಾಗಳು' ಎಂದು ರವಿಚಂದ್ರನ್ ಹೇಳಿದ್ದಾರೆ. 

ಅಪ್ಪು ಪಕ್ಕದಲ್ಲಿ ಆಕ್ಟ್‌ ಆಂಡ್ ಡ್ಯಾನ್ಸ್ ಮಾಡುವುದಕ್ಕೆ ಸಖತ್ ಭಯ ಆಗುತ್ತಿತ್ತು: ರಕ್ಷಿತಾ ಪ್ರೇಮ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ