
‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಗುಂಡಣ್ಣ ಅಲಿಯಾಸ್ ತನ್ಮಯ್ ಶೂ ಪಾಲಿಶ್ ಮಾಡಿ ಹಣ ಮಾಡ್ತಿರೋದು ತಾಂಡವ್ ಕಣ್ಣಿಗೆ ಬಿದ್ದಿದೆ. ಮಗ ಈ ರೀತಿ ಕೆಲಸ ಮಾಡೋದು ನೋಡಿ ಅವನು ಫುಲ್ ಸಿಟ್ಟಾಗಿದ್ದಾನೆ. ಇವನೀಗ ಇದನ್ನು ಕೂಡ ಭಾಗ್ಯ ಹಣೆಗೆ ಕಟ್ಟುತ್ತಾನೋ ಏನೋ!
ಭಾಗ್ಯಗೆ ಪ್ರತಿ ತಿಂಗಳು ಇಎಂಐ ಕಟ್ಟಿ ಮನೆ ಉಳಿಸಿಕೊಳ್ಳಬೇಕಿದೆ. ಅಷ್ಟೇ ಅಲ್ಲದೆ ಇಡೀ ಮನೆಯ ಖರ್ಚು ವೆಚ್ಚು ನೋಡಿಕೊಳ್ಳಬೇಕಿದೆ. ಅಷ್ಟೇ ಅಲ್ಲದೆ ತನ್ಮಯ್, ತನ್ವಿ ಓದಿನ ಖರ್ಚು ಕೂಡ ನೋಡಿಕೊಳ್ಳಬೇಕು. ಇಷ್ಟೆಲ್ಲ ಸವಾಲುಗಳನ್ನು ಭಾಗ್ಯ ಎದುರಿಸಬೇಕು. ಭಾಗ್ಯ ಗೆಲ್ಲಬಾರದು ಅಂತ ತಾಂಡವ್-ಶ್ರೇಷ್ಠ ಕೂಡ ಒದ್ದಾಡುತ್ತಿದ್ದಾರೆ.
Kannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್ ಯಾವುದು?
ಭಾಗ್ಯಗೆ ಸತ್ಯ ಗೊತ್ತಿಲ್ಲ!
ಶಾಲೆ ಬಳಿ ತನ್ಮಯ್ ಶೂ ಪಾಲಿಶ್ ಮಾಡ್ತಿರೋದು ನೋಡಿ ತಾಂಡವ್ ಸಿಟ್ಟಾಗಿದ್ದಾನೆ. ಮಗನ ಮುಂದೆ ಅವನು ಕೂಗಾಡಿದ್ದಾನೆ. ತಂದೆ ಕೂಗಾಡಿದ್ದು ನೋಡಿ ತನ್ಮಯ್ ಕೂಡ ಬೆಚ್ಚಿ ಬಿದ್ದಿದ್ದಾನೆ, ಇನ್ನೊಂದು ಕಡೆ ಮಗನ ಶರ್ಟ್ ಎಲ್ಲ ಗಲೀಜಾಗಿರೋದು ನೋಡಿ ಭಾಗ್ಯ ಕೂಡ ಶಾಕ್ ಆಗಿದ್ದಾಳೆ. ಮಗನ ಶರ್ಟ್‌ನಲ್ಲಿ ಶೂ ಪಾಲಿಶ್ ಮಾಡೋ ಕಿಟ್ ನೋಡಿ ಅವಳಿಗೂ ಆಶ್ಚರ್ಯ ಆಗಿದೆ. ಭಾಗ್ಯಗೂ ಕೂಡ ಮಗ ಶೂ ಪಾಲಿಶ್ ಮಾಡೋ ವಿಚಾರ ಇನ್ನೂ ಗೊತ್ತಾಗಬೇಕಿದೆ.
ಇದೇ ವಿಷಯ ಇಟ್ಕೊಂಡು ಮಕ್ಕಳನ್ನು ನನ್ನ ಜೊತೆ ಕಳಿಸು, ನಿನಗೆ ಅವರನ್ನು ಸಾಕೋ ಯೋಗ್ಯತೆ ಇಲ್ಲ. ನೀನು ಚಾಲೆಂಜ್‌ನಲ್ಲಿ ಗೆಲ್ಲಬೇಕು ಅಂತ ಮಗನನ್ನು ಈ ರೀತಿ ಕೆಲಸ ಮಾಡಿಸೋಕೆ ಕಳಿಸ್ತೀಯಾ ಅಂತ ತಾಂಡವ್, ಭಾಗ್ಯಳಿಗೆ ಬೈಯ್ಯಬಹುದು. ಒಟ್ಟಿನಲ್ಲಿ ಭಾಗ್ಯ ಒಂದಿಲ್ಲೊಂದು ಸಮಸ್ಯೆ ಬರೋದು, ಆಮೇಲೆ ಅವಳು ಅದನ್ನು ಎದುರಿಸೋದೇ ಆಗಿದೆ.
'ಭಾಗ್ಯಲಕ್ಷ್ಮೀ' ಧಾರಾವಾಹಿ; ಭಾಗ್ಯ ಶ್ರೀಮಂತೆಯಾಗೋದು ಕನಸು ಅನ್ಕೋಬೇಡಿ! ಇಲ್ಲೇ ಇರೋದು ಅಸಲಿ ಮ್ಯಾಟರ್!
ಈ ಎಪಿಸೋಡ್ ನೋಡಿ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.