ಕಿರುತೆರೆಯ ಲೇಡಿ ಸಿಂಗಂ ಅಮೃತಧಾರೆಯ ಭೂಮಿಕಾ!

Published : Mar 11, 2024, 03:45 PM IST
ಕಿರುತೆರೆಯ ಲೇಡಿ ಸಿಂಗಂ ಅಮೃತಧಾರೆಯ ಭೂಮಿಕಾ!

ಸಾರಾಂಶ

ಜೀ ಕನ್ನಡದ ಫೇಮಸ್ ಸೀರಿಯಲ್ ಅಮೃತಧಾರೆಯಲ್ಲಿ ನಾಯಕಿ ಭೂಮಿಕಾಗೆ ಲೇಡಿ ಸಿಂಗಂ ಅಂತ ಈ ಸೀರಿಯಲ್ ವೀಕ್ಷಕರು ಹೆಮ್ಮೆಯ ಹೆಸರಿಟ್ಟಿದ್ದಾರೆ. ಅದಕ್ಕೆ ಕಾರಣವೂ ಇದೆ.

'ಅಮೃತಧಾರೆ' ಸೀರಿಯಲ್‌ನಲ್ಲಿ ಭೂಮಿಕಾ ಭಾರೀ ಒಳ್ಳೆಯ ಹೆಣ್ಣುಮಗಳು. ಒಳ್ಳೆತನದ ಪರಮಾವಧಿ ಈಕೆಯಲ್ಲಿದೆ. ಆದರೆ ಉಳಿದ ಸೀರಿಯಲ್ ನಾಯಕಿಯರಿಗಿಂತ ಒಂದು ಎದ್ದು ಕಾಣುವ ವ್ಯತ್ಯಾಸ ಅಂದರೆ ಈಕೆ ಒಳ್ಳೆತನದಲ್ಲಿ ಉಳಿದ ಸೀರಿಯಲ್ ಹೀರೋಯಿನ್ ಥರವೇ ಇದ್ದರೂ ಅವರಂತೆ ಅಳುಮುಂಜಿಯಲ್ಲ. ಸಮಸ್ಯೆಗೆ ನೇರ ಮುಖಾಮುಖಿಯಾಗಿ ಪ್ರೈಮ್ ಮಿನಿಸ್ಟರ್ ಎದುರು ಬಂದರೂ ಧೈರ್ಯವಾಗಿ ಮಾತನಾಡಬಲ್ಲ ಗಟ್ಟಿಗಿತ್ತಿ. ತಪ್ಪು ಅಂತ ಅನಿಸಿದ್ದನ್ನು ನೇರವಾಗಿ ಹೇಳ್ತಾಳೆ. ಸದ್ಯ ಭೂಮಿಕಾ ತನ್ನ ತಂಗಿಯ ಜೊತೆಗೆ ನಡೆಯಬೇಕಿದ್ದ ಜೈದೇವ್ ಮದುವೆ ತಪ್ಪಿಸಿದ್ದಾಳೆ. ಜೈದೇವ್‌ನಿಂದ ಬಸುರಾದ ಮಲ್ಲಿಯ ಸಹಾಯಕ್ಕೆ ನಿಂತಿದ್ದಾಳೆ.

ಇತ್ತ ಕ್ರೂರಿ ಜೈದೇವ್ ಮಲ್ಲಿ ಹೊಟ್ಟೆಯಲ್ಲಿ ತನ್ನ ಮಗು ಬೆಳೆಯುತ್ತಿದ್ದರೂ ಮಗುವನ್ನೂ ಮಲ್ಲಿಯನ್ನೂ ಸಾಯಿಸಲು ಮುಂದಾಗುತ್ತಿದ್ದಾನೆ. ಆತನ ಆಜ್ಞೆಯಂತೆ ಗೂಂಡಾಗಳು ಮಲ್ಲಿ ಮನೆಗೆ ಆಗಮಿಸುತ್ತಾರೆ. ಗೂಂಡಾಗಳಿಂದ ಪೆಟ್ಟು ತಿಂದಂತೆ ಜೈದೇವ್‌ ನಾಟಕವಾಡುತ್ತಾನೆ. ಗೂಂಡಾಗಳು ಮಲ್ಲಿಯನ್ನು ಹಿಡಿಯುತ್ತಾರೆ. ಆಗ ಕರೆಕ್ಟ್ ಟೈಮಿಗೆ ಲೇಡಿ ಸಿಂಗಂ ಭೂಮಿಕಾಳ ಎಂಟ್ರಿ ಆಗುತ್ತದೆ.

ಪತ್ನಿ ಎಷ್ಟು ಪ್ರೀತಿ ಮಾಡ್ತಾಳಂತ ಗಂಡನಿಗೆ ತಿಳಿಯಲು ಅವಳಿಗೆ ಮದ್ಯ ಕುಡಿಸೋದು ಅನಿವಾರ್ಯನಾ?

ಇದಕ್ಕೂ ಮೊದಲು ಶಕುಂತಲಾದೇವಿ ಮತ್ತು ಜೈದೇವ್‌ ನಾಟಕದ ಭಾಗವಾಗಿ ಮನೆಯಿಂದ ಎಲ್ಲರನ್ನೂ ಹೊರಕ್ಕೆ ಕಳುಹಿಸಲಾಗಿರುತ್ತದೆ. ಈ ಸಮಯದಲ್ಲಿ ಮಲ್ಲಿಯನ್ನು ಮುಗಿಸಲು ಜೈದೇವ್‌ ಗೂಂಡಾಗಳನ್ನು ಕರೆಸಿಕೊಂಡಿರುತ್ತಾನೆ. ತವರು ಮನೆಯಲ್ಲಿದ್ದ ಭೂಮಿಕಾಗೆ ಏನೋ ಅನುಮಾನ ಬರುತ್ತದೆ. ಶಿವರಾತ್ರಿ ನಡೆಯುತ್ತಿದ್ದ ತವರು ಮನೆಯಿಂದ ಅನುಮಾನಗೊಂಡ ಭೂಮಿಕಾ ವಾಪಸ್‌ ಬರುತ್ತಾಳೆ. ಇನ್ನೊಂದೆಡೆ ಏನೂ ಗೊತ್ತಿಲ್ಲದ ಮಲ್ಲಿ ಮನೆಯಲ್ಲಿ ಇರುತ್ತಾಳೆ. ಆ ಸಮಯದಲ್ಲಿ ನಾಲ್ಕೈದು ಗೂಂಡಗಳು ಮನೆಗೆ ಆಗಮಿಸುತ್ತಾರೆ. ಅವರನ್ನು ನೋಡಿ ಮಲ್ಲಿ ಬೆಚ್ಚಿ ಬೀಳುತ್ತಾಳೆ.ಈ ವೇಳೆ ರೌಡಿಗಳು ಮಲ್ಲಿ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತಾರೆ. ಜೈದೇವ್‌ ತನಗೂ ಏಟು ಬಿದ್ದಂತೆ ನಟಿಸುತ್ತಾನೆ.

ಇನ್ನೊಂದೆಡೆ ಆಟೋದಲ್ಲಿ ಭೂಮಿಕಾ ಬರುತ್ತಾಳೆ. ಇನ್ನೊಂದೆಡೆ ಮಲ್ಲಿ ಪ್ರಾಣ ಉಳಿಸಿಕೊಳ್ಳಲು ದಿಕ್ಕೆಟ್ಟು ಓಡುತ್ತಾಳೆ. ರೌಡಿಗಳು ಬೆನ್ನಟ್ಟುತ್ತಾರೆ. ಆಕೆ ಅಡಗಿಕೊಳ್ಳುತ್ತಾಳೆ. ಮನೆಯಲ್ಲಿ ಗೂಂಡಗಳು ಹುಡುಕಾಟ ನಡೆಸುತ್ತಾರೆ. ಮತ್ತೆ ಇವಳನ್ನು ನೋಡಿದ ಅವರೆಲ್ಲ ಬೆನ್ನಟ್ಟುತ್ತಾರೆ. ಇದೇ ಸಮಯದಲ್ಲಿ ಹೊರಗೆ ತಾತಾನ ನೋಡಿ ಮಲ್ಲಿ ಜೋರಾಗಿ ತಾತಾ ಎಂದು ಕರೆಯುತ್ತಾಳೆ. ತಾತಾನ ಕಣ್ಣಿಗೆ ಗೂಂಡಾಗಳು ಬೀಳುತ್ತಾರೆ. ತಾತಾ ಓಡೋಡಿ ಬರುತ್ತಾನೆ. ತಾತಾನಿಗೆ ಹೊಡೆಯುತ್ತಾರೆ. ತಾತಾ ಬೀಳುತ್ತಾನೆ. ಇನ್ನೊಂದೆಡೆ ಭೂಮಿಕಾ ಮನೆಗೆ ಆಗಮಿಸುತ್ತಾಳೆ. ಮಲ್ಲಿಯನ್ನು ಹಿಡಿದಿಟ್ಟುಕೊಳ್ಳುತ್ತಾರೆ.

ದುಬೈ ಉದ್ಯಮಿ ಅಲ್ಲ ಪಕ್ಕಾ RR ನಗರದ ಗೌಡ್ರು; ಪತಿ ಬಗ್ಗೆ ಸತ್ಯ ಬಿಚ್ಚಿಟ್ಟ ದೀಪಿಕಾ ದಾಸ್

ಮಲ್ಲಿಯನ್ನು ಗೂಂಡಗಳು ಎಳೆದುಕೊಂಡು ಹೋಗುತ್ತ ಇರುತ್ತಾರೆ. ಮರೆಯಲ್ಲಿ ನಿಂತು ನೋಡುತ್ತ ಜೈದೇವ್‌ ಖುಷಿ ಪಡುತ್ತಾನೆ. ಆ ಸಮಯದಲ್ಲಿ ಭೂಮಿಕಾ ನಿಂತುಕೊಳ್ಳಿ ಎನ್ನುತ್ತಾಳೆ. ಲೋಕಿ ಭೂಮಿಕಾಳಿಗೆ ಅವಾಜ್‌ ಹಾಕುತ್ತಾನೆ. ಆ ಸಮಯದಲ್ಲಿ ಭೂಮಿ ಕೈಯಲ್ಲಿ ಪಿಸ್ತೂಲ್‌ ತೋರಿಸಿ ಎಲ್ಲರನ್ನೂ ಬೆದರಿಸುತ್ತಾಳೆ. ಆಕೆ ಮನೆಯಿಂದ ರಿವಾಲ್ವರ್‌ ಹಿಡಿದುಕೊಂಡು ಬಂದಿರುತ್ತಾಳೆ. ಗೂಂಡಾಗಳು ಓಡಿ ಹೋಗುತ್ತಾರೆ. ಜೈದೇವ್‌ ತಲೆಮೇಲೆ ಕೈಯಿಟ್ಟುಕೊಳ್ಳುತ್ತಾನೆ. ಮಲ್ಲಿಯನ್ನು ಭೂಮಿ ಸಂತೈಸುತ್ತಾಳೆ ಎಂಬಲ್ಲಿಗೆ ಲೇಡಿ ಸಿಂಗಂ ಸಾಹಸದ ಒಂದು ಅಧ್ಯಾಯ ಮುಕ್ತಾಯವಾಗುತ್ತದೆ.

ಈಗ ಮತ್ತೊಂದು ಎಪಿಸೋಡಿನಲ್ಲಿ ಮಲ್ಲಿಗೆ ವಿಷ ಉಣಿಸಲು ಜೈದೇವ್ ಮುಂದಾಗಿದ್ದಾನೆ. ಭೂಮಿಕಾ ಈ ಡ್ರಾಮಾವನ್ನೂ ಸಮರ್ಥವಾಗಿ ನಿಭಾಯಿಸಲು ಹೊರಟಿದ್ದಾಳೆ. ಜೈದೇವ್‌ ತಾಯಿ ಶಕುಂತಳಾನೇ ಆ ಆಹಾರ ತಿನ್ನೋ ಹಾಗೆ ಮಾಡುತ್ತಾಳೆ. ಆದರೆ ಸ್ವಲ್ಪದರಿಂದಲೇ ಶಕುಂತಳಾ ಬಚಾವ್ ಆಗ್ತಾಳೆ.

 

ಈ ಸೀರಿಯಲ್‌ನಲ್ಲಿ ಭೂಮಿ ಪಾತ್ರದಲ್ಲಿ ಸಖತ್ತಾಗಿ ನಟಿಸುತ್ತಿರುವವರು ಒಂದು ಕಾಲದ ಸಿನಿಮಾಗಳ ಜನಪ್ರಿಯ ನಾಯಕಿ ಛಾಯಾ ಸಿಂಗ್. ಈಕೆಗೆ ಸಮರ್ಥ ನಾಯಕನಾಗಿ ರಾಜೇಶ್ ನಟರಂಗ ಇದ್ದಾರೆ. ಶಕುಂತಳಾ ಪಾತ್ರದಲ್ಲಿ ವನಿತಾ ವಾಸು ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ