ಪತ್ನಿಗೆ ಜೈದೇವ್​ ಹಾಕಿದ ವಿಷವನ್ನು ಅಮ್ಮನೇ ತಿಂತಾಳಾ? ಭೂಮಿಕಾ ಪ್ಲ್ಯಾನ್​ ಸಕ್ಸಸ್​ ಆಗತ್ತಾ.. ಅಥವಾ...?

Published : Mar 11, 2024, 12:19 PM IST
ಪತ್ನಿಗೆ ಜೈದೇವ್​ ಹಾಕಿದ ವಿಷವನ್ನು ಅಮ್ಮನೇ ತಿಂತಾಳಾ? ಭೂಮಿಕಾ ಪ್ಲ್ಯಾನ್​ ಸಕ್ಸಸ್​ ಆಗತ್ತಾ.. ಅಥವಾ...?

ಸಾರಾಂಶ

ಪತ್ನಿ ಮಲ್ಲಿಯನ್ನು ಸಾಯಿಸಲು ಜೈದೇವ ಅಡುಗೆಯಲ್ಲಿ ವಿಷ ಹಾಕಿದ್ದಾನೆ. ಅದನ್ನು ಶಕುಂತಲಾ ದೇವಿ ತಿಂತಾಳಾ? ಮುಂದೇನಾಗುತ್ತೆ?   

ಪತ್ನಿ ಮಲ್ಲಿಯನ್ನು ಹೇಗಾದ್ರೂ ಸಾಯಿಸಬೇಕು ಎಂದು ಪಣ ತೊಟ್ಟಿದ್ದಾನೆ ಜೈದೇವ. ಭೂಮಿಕಾ ತವರಿಗೆ ಹೋದಾಗ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕೆಯನ್ನು ಸಾಯಿಸಲು ನೋಡಿದ್ದ. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಅಡುಗೆಯಲ್ಲಿ ವಿಷ ಹಾಕಿದ್ದಾನೆ. ಇನ್ನು ಮಲ್ಲಿ ಸತ್ತೇ ಸಾಯುತ್ತಾಳೆ ಎಂದಿದ್ದಾನೆ. ಇದನ್ನು ಮಲ್ಲಿ ನೋಡಿ ಭೂಮಿಕಾಗೆ ತಿಳಿಸಿದ್ದಾಳೆ. ಯಾವ ರೀತಿಯ ಗಲಾಟೆ ಮಾಡದ ಭೂಮಿಕಾ ಉಪಾಯ ಮಾಡಿದ್ದಾಳೆ. ಮಲ್ಲಿಯದ್ದೇ ತಪ್ಪು ಎಂಬ ಅರ್ಥದಲ್ಲಿ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಇವಳ ತಿನಿಸಿನಲ್ಲಿ ಯಾರಾದ್ರೂ ವಿಷ ಹಾಕಿ ಕೊಟ್ಟರೆ ಎನ್ನುವ ಭ್ರಮೆ ಈಕೆಯದ್ದು ಎಂದು ಬೈದ ರೀತಿ ಮಾಡಿದ್ದಾಳೆ. ಅದಕ್ಕೆ ಅತ್ತೆ ಶಕುಂತಲಾ ದೇವಿ ಹಾಗಿದ್ದರೆ ಅಂಥ ಕೆಟ್ಟ ಬುದ್ಧಿ ಯಾರಲ್ಲೂ ಇಲ್ಲ. ಇನ್ನೇನು ಇವಳಿಗೆ ಕೊಡುವ ಆಹಾರವನ್ನು ನಾವೇ ತಿಂದು ಕೊಡಬೇಕಾ ಎಂದು ಕೇಳಿದ್ದಾಳೆ.

ಅದಕ್ಕೆ ಥಟ್ಟನೆ ಭೂಮಿಕಾ, ಇದೇ ಸರಿಯಾದ ಐಡಿಯಾ ಎಂದಿದ್ದಾಳೆ. ಸರಿ ಎಂದು ಶಕುಂತಲಾ ಆಹಾರವನ್ನು ತಿನ್ನಲು ಶುರು ಮಾಡಿದಾಗ ಜೈದೇವ ಬೇಡ ತಿನ್ನಬೇಡಮ್ಮ ಎನ್ನುತ್ತಾ ಮನಸ್ಸಿನಲ್ಲಿ ಅಂದುಕೊಂಡಿದ್ದಾನೆ. ಇನ್ನೇನು ತಿನ್ನುತ್ತಾಳೆ ಎನ್ನುವಾಗ ಅದೇನು ಆಗಿದ್ಯೋ ಗೊತ್ತಿಲ್ಲ, ಜೈದೇವನಿಗೆ ತುಂಬಾ ಖುಷಿಯಾದಂತೆ ಕಂಡಿದೆ. ಅಡುಗೆಯನ್ನು ಖುದ್ದು ಮಲ್ಲಿಯೇ ತಿಂದುಬಿಟ್ಟಳಾ ಎನ್ನುವುದು ತಿಳಿದಿಲ್ಲ. ಇದರ ಪ್ರೊಮೋ ಬಿಡುಗಡೆಯಾಗಿದೆ. ಊಟದಲ್ಲಿ ವಿಷ ಹಾಕಿದ್ದನ್ನು ಕಂಡಿರುವ ಮಲ್ಲಿ ಅತ್ತೆ ವಿಷ ಸೇವಿಸುವುದನ್ನು ನೋಡಲು ಆಗದೇ ತಾನೇ ತಿಂದುಬಿಟ್ಟಳಾ ಎನ್ನುವ ಸಂದೇಹವೂ ಪ್ರೊಮೋದಲ್ಲಿ ಕಾಣಿಸುತ್ತಿದೆ. ಹಾಗಿದ್ದರೆ ವಿಷ ಯಾರು ಸೇವಿಸುತ್ತಾರೆ? ಮುಂದೇನಾಗುತ್ತದೆ ಎಂದು ನೋಡಲು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್​ ನೋಡಬೇಕು. 

ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ಬಂದ ಸೀತಾ-ರಾಮ: ಮುಳ್ಳಾಗಿ ಚುಚ್ಚೇ ಬಿಟ್ಳು ಚಾಂದನಿ: ಮುಂದೇನು?

ಇಲ್ಲಿಯವರೆಗಿನ ಕಥೆಯಲ್ಲಿ, ಜೈದೇವ ಪತ್ನಿ ಮಲ್ಲಿಯ ಮೇಲೆ ಕೈಮಾಡಿದ್ದಾಗಿ ಭೂಮಿಕಾ ಜೈದೇವನ ವಿರುದ್ಧ ತಿರುಗಿ ಬಿದ್ದಿದ್ದಳು. ಭೂಮಿಕಾ ಹೆಸರನ್ನು ಕೆಡಿಸಲು ಆಕೆಯ ಹೆಸರು ಹೇಳಿ ಖುದ್ದು ಜೈದೇವನೇ ತನ್ನ ಮೇಲೆ ಕೇಸು ದಾಖಲು ಮಾಡಿಕೊಂಡು ಭೂಮಿಕಾ ವಿರುದ್ಧ ಎಲ್ಲರ ದೃಷ್ಟಿಯಲ್ಲಿ ಆರೋಪಿ  ಮಾಡಿದ್ದ. ಇದು ಕೊನೆಗೆ ಭೂಮಿಕಾಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಜೈದೇವನಿಗೆ ಚಾಲೆಂಜ್‌ ಹಾಕಿದ್ದಾಳೆ. ತನ್ನ ಮದುವೆ ಸಿಂಧುವೇ ಅಲ್ಲ ಎಂದಿದ್ದ ಜೈದೇವ. ಅಷ್ಟಕ್ಕೆ ಸುಮ್ಮನಾಗದ ಭೂಮಿಕಾ ಇಬ್ಬರ ಮದುವೆಯನ್ನು ನೋಂದಣಿ ಮಾಡಿಸಿಬಿಟ್ಟಿದ್ದಾಳೆ. ಇನ್ನು ತನ್ನ ಆಟ ಶುರು ಮಾಡಿಕೊಂಡಿದ್ದಾಳೆ. ಕಂಪೆನಿಯ ಕಾರ್ಯಕ್ರಮದಲ್ಲಿಯೂ ಮಲ್ಲಿಯನ್ನು ಕರೆತಂದಿದ್ದು, ಜೈದೇವನನ್ನು ಮತ್ತಷ್ಟು ಉರಿಸಿದ್ದಾಳೆ. 

ಇದರ ನಡುವೆಯೇ ಭೂಮಿಕಾ ಮಲ್ಲಿಯನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದಳು. ಇದೇ ಟೈಂಗೆ ಕಾಯುತ್ತಿದ್ದ ಜೈದೇವ. ಮಲ್ಲಿಯನ್ನು ಭೂಮಿಕಾಳಿಂದ ಎಸ್ಕೇಪ್‌ ಮಾಡಿಸುವೆ ಎಂಬ ಡೈಲಾಗ್‌ ಬೇರೆ ಹೊಡೆದಿದ್ದ.  ಮಲ್ಲಿಯನ್ನು ಸಾಯಿಸಲು ಪ್ಲ್ಯಾನ್​ ಮಾಡಿದ್ದ. ಆದರೆ ಭೂಮಿಕಾ ಬಚಾವ್​ ಮಾಡಿದ್ದಳು. ಆದರೆ ಈಗ ಊಟದಲ್ಲಿ ವಿಷ ಹಾಕಿದ್ದಾನೆ. ಅದನ್ನು ತಿನ್ನುವವರು ಯಾರು? ಒಂದು ವೇಳೆ ಮಲ್ಲಿ ತಿಂದರೆ ಆಕೆ ಮತ್ತು ಹೊಟ್ಟೆಯಲ್ಲಿ ಇರುವ ಮಗುವಿನ ಕಥೆ ಏನಾಗುತ್ತದೆ ಎನ್ನುವ ಆತಂಕ ಅಭಿಮಾನಿಗಳದ್ದು. ಅತ್ತೆ ಶಕುಂತಲಾದೇವಿ ಸತ್ತರೂ ಪರವಾಗಿಲ್ಲ, ಮಲ್ಲಿಗೆ ಏನೂ ಮಾಡಬೇಡಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಅದೇ ಇನ್ನೊಂದೆಡೆ, ಬುದ್ಧಿವಂತಿಕೆಯಿಂದ ಯಾರ ವಿರೋಧವನ್ನೂ ಕಟ್ಟಿಕೊಳ್ಳದೇ ಭೂಮಿಕಾ ಈ ರೀತಿಯ ಪ್ಲ್ಯಾನ್​ ಮಾಡಿರುವುದಕ್ಕೂ ಅಭಿಮಾನಿಗಳು ಭಲೇ ಭಲೇ ಎನ್ನುತ್ತಿದ್ದಾರೆ. 

ನಿವೇದಿತಾ ಕನ್ನಡಕ್ಕೆ ನೆಟ್ಟಿಗರು ಕಿಡಿಕಿಡಿ: 'ನಾಟಕ ಏಕೆ? ಕರ್ನಾಟಕದಲ್ಲಿ ಏಕೆ ಬಾಳ್ತಿದ್ದಿ' ಕೇಳ್ತಿದ್ದಾರೆ ನೆಟ್ಟಿಗರು

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಪಘಾತದಲ್ಲಿ ಪ್ರತಿಭಾವಂತ ಮಗಳು ನಿಧನ; ಜಾತಕದಲ್ಲಿ ಏನಿತ್ತು? Nanda Gokula Serial ನಟಿ ಮಾತು
Sankeerthana Movie: ಈ ವಯಸ್ಸಿನಲ್ಲೂ ಸಿನಿಮಾ ಮಾಡಿ ಯಶಸ್ವಿಯಾದ ಸೀತಾರಾಮ ಧಾರಾವಾಹಿ ಅಜ್ಜಿ