ಪದೇ ಪದೇ ಇನ್​ಸಲ್ಟ್​ ಮಾಡುವವರನ್ನು ನಗುನಗುತ್ತಲೇ ಸೋಲಿಸೋದು ಎಂದ್ರೆ ಇದೇನಾ?

Published : Mar 11, 2024, 02:30 PM ISTUpdated : Mar 11, 2024, 03:30 PM IST
ಪದೇ ಪದೇ ಇನ್​ಸಲ್ಟ್​ ಮಾಡುವವರನ್ನು ನಗುನಗುತ್ತಲೇ ಸೋಲಿಸೋದು ಎಂದ್ರೆ ಇದೇನಾ?

ಸಾರಾಂಶ

ಕಾಲು ಕೆದರಿಕೊಂಡು ಪದೇ ಪದೇ ಜಗಳಕ್ಕೆ ಬರುವವರ ಮೇಲೆ ಕೋಪ ಮಾಡಿಕೊಳ್ಳದೇ ನಗುನಗುತ್ತಲೇ ಸೋಲಿಸುವುದು ಸಾಧ್ಯನಾ? ಇಲ್ಲಿದೆ ಉತ್ತರ...   

ಕೆಲವರ ಜಾಯಮಾನವೇ ಹಾಗಿರುತ್ತದೆ. ಬೇರೊಬ್ಬರನ್ನು ಪದೇ ಪದೇ ಇನ್​ಸಲ್ಟ್​ ಮಾಡುವುದು ಎಂದರೆ ಎಲ್ಲಿಲ್ಲದ ಖುಷಿ. ಇಲ್ಲದಿದ್ದರೆ ತಿಂದ ಅನ್ನ ಜೀರ್ಣ ಆಗುವುದಿಲ್ಲವೋ ಎಂಬಷ್ಟರ ಮಟ್ಟಿಗೆ ಅವರ ನಡೆ ಇರುತ್ತದೆ. ಮನೆಯಲ್ಲಿ, ಕಚೇರಿಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ ಇಂಥವರನ್ನು ಸಾಮಾನ್ಯವಾಗಿ ನೋಡಬಹುದು.   ಅವರ ವಿರುದ್ಧ ಗರಂ ಆಗಿ, ಕಿಡಿಕಿಡಿ ಆಗಿ, ಸಿಡಿಮಿಡಿಗೊಂಡು ತಿರುಗೇಟು ನೀಡಲೇಬೇಕಾದ ಪ್ರಸಂಗವೂ ಎದುರಾಗುತ್ತದೆ. ಆದರೆ ಇಂಥ ಸ್ವಭಾವದವರನ್ನು ತಿದ್ದಿ ತೀಡುವುದು ಕಷ್ಟ. ಅವರ ವಿರುದ್ಧ ಸಿಟ್ಟಾದರೆ ಸಿಟ್ಟಾಗುವವರ ಆರೋಗ್ಯಕ್ಕೆ ಹಾನಿಯೇ ಹೊರತು ಮತ್ತಿನ್ನೇನೂ ಆಗಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ ನಗುನಗುತ್ತಲೇ ಅಂಥ ಸ್ವಭಾವದವರನ್ನು ಸೋಲಿಸಲು ಸಾಧ್ಯನಾ?

ಹೌದು ಎನ್ನುತ್ತದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್​. ಇದರಲ್ಲಿ ನಾಯಕಿ ತುಳಸಿಯ ಮಗ ಸಮರ್ಥ್​ನನ್ನು ಪದೇ ಪದೇ ಇನ್​ಸಲ್ಟ್​ ಮಾಡುವುದು ಎಂದರೆ ನಾಯಕ ಮಾಧವ್​ ಪುತ್ರ ಅಭಿಗೆ ಇನ್ನಿಲ್ಲದ ಖುಷಿ. ತುಳಸಿ ಮನೆಗೆ ಮದುವೆಯಾಗಿ ಬಂದಾಗಿನಿಂದಲೂ ಅವಳ ಮೇಲೆ ಹಗೆ ಸಾಧಿಸುತ್ತಿರುವ ಅಭಿಗೆ ಆಕೆಯ ಪುತ್ರ ಸಮರ್ಥ್​ ಮೇಲೆ ಇನ್ನಿಲ್ಲದ ಕೋಪ. ಅಮ್ಮನ ಮನೆಯಲ್ಲಿಯೇ ಡ್ರೈವರ್​ ಆಗಿ ಬಂದಿದ್ದಾನೆ ಸಮರ್ಥ್​, ಈ ಮೊದಲು ಕೆಲಸ ಮಾಡುತ್ತಿದ್ದ ಕಂಪೆನಿಯಿಂದ ಆತನನ್ನು ತೆಗೆದು ಹಾಕುವಲ್ಲಿ ಅಭಿ ಯಶಸ್ವಿಯಾಗಿದ್ದ. ಆ ಬಳಿಕ ತನ್ನದೇ ಕಂಪೆನಿಯಲ್ಲಿ ಸಮರ್ಥ್​ನನ್ನು ಜವಾನನ್ನಾಗಿ ನೇಮಕ ಮಾಡಿದ್ದ. ಅಲ್ಲಿ ಆತನಿಗೆ ಆಗುತ್ತಿದ್ದ ಇನ್​ಸಲ್ಟ್​ ನೋಡಿ ಸಮರ್ಥ್​ ಪತ್ನಿ ಸಿರಿ ಆ ಕೆಲಸದಿಂದ ಗಂಡನನ್ನು ಬಿಡಿಸಿದ್ದಳು.

ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ಬಂದ ಸೀತಾ-ರಾಮ: ಮುಳ್ಳಾಗಿ ಚುಚ್ಚೇ ಬಿಟ್ಳು ಚಾಂದನಿ: ಮುಂದೇನು?

ಇದೀಗ ತಿರುಗಿ ತಿರುಗಿ ಅನಿವಾರ್ಯವಾಗಿ ಅಮ್ಮನ ಮನೆಗೇ ಡ್ರೈವರ್​ ಆಗಿ ಹೋಗಬೇಕಾದ ಅನಿವಾರ್ಯತೆ ಅವನಿಗೆ ಉಂಟಾಯಿತು. ಸಮರ್ಥ್​ ಎಷ್ಟೇ ತಾಳ್ಮೆಯಿಂದ ತನ್ನ ಕೆಲಸ ಮಾಡುತ್ತಿದ್ದರೂ, ಆತನನ್ನು ಕಾಡಿಸಿ, ರೇಗಿಸಿ, ಪೀಡಿಸಿ ನೋವು ಕೊಡುವುದು ಎಂದರೆ ಮಾಧವ್​ ಪುತ್ರ ಅಭಿಗೆ ಇನ್ನಿಲ್ಲದ ಖುಷಿ. ಇದೇ ಕಾರಣಕ್ಕೆ ಪದೇ ಪದೇ ಇವರಿಬ್ಬರ ನಡುವೆ ಅದೆಷ್ಟೋ ಬಾರಿ ಜಗಳ ಆಗಿದ್ದುಂಟು.

ಆದರೆ ಶ್ರೀಮಂತರ ಮಕ್ಕಳು ಏನು ಮಾಡಿದರೂ ನಡೆಯುತ್ತದೆ ಎನ್ನುವಂತೆ ಪ್ರತಿ ಸಲವೂ ಸಮರ್ಥ್​ ಸೋಲು ಒಪ್ಪಿಕೊಳ್ಳಬೇಕಾಗಿತ್ತು. ಆ ಮನೆಯಲ್ಲಿ ಶಾಂತಿಯನ್ನು ಕಾಪಾಡಲು ತುಳಸಿಗೆ ಇದು ಅನಿವಾರ್ಯವೂ ಆಗಿದೆ.  ಹೆತ್ತ ಮಗನೇ ಈ ರೀತಿ ನೋವು ಅನುಭವಿಸುತ್ತಿದ್ದರೂ ಆಕೆಗೆ ಏನೂ ಮಾಡಲು ಸಾಧ್ಯವಾಗದ ಸ್ಥಿತಿ. ಇದೀಗ ತುಳಸಿಯ ಮಾವ ಅಂದರೆ ತನ್ನ ಅಜ್ಜ ದತ್ತನ ಬಳಿ ಸಮರ್ಥ್​ ನೋವು ತೋಡಿಕೊಂಡಿದ್ದಾನೆ.  ಆ ಮನೆಯಲ್ಲಿ ಅಭಿಯಿಂದ ಪದೇ ಪದೇ ಇನ್​ಸಲ್ಟ್​ ಮಾಡಿಸಿಕೊಂಡು ಇರಲು ಆಗುವುದಿಲ್ಲ ಎಂದಿದ್ದಾನೆ. ಆಗ ದತ್ತಜ್ಜ ಒಂದು ಸಲಹೆ ಕೊಟ್ಟಿದ್ದಾನೆ. ನೀನು ಪ್ರೀತಿಯಿಂದಲೇ ಅವನನ್ನು ಸೋಲಿಸು ಎಂದು. ಈ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದಾನೆ ಸಮರ್ಥ್​. ಅಭಿಗೆ ಪ್ರೀತಿಯಿಂದಲೇ ಛಡಿಯೇಟು ನೀಡುತ್ತಿದ್ದಾನೆ. ಕಾಲು ಕೆದರಿ ಜಗಳಕ್ಕೆ ಹೋಗದೇ ಅವನಾಡುವ ಮಾತುಗಳು ಅಭಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಇಂಥ ಐಡಿಯಾಕ್ಕೆನೆಟ್ಟಿಗರು ಭೇಷ್​ ಭೇಷ್​ ಎನ್ನುತ್ತಿದ್ದಾರೆ. 

ನನ್​ ಮಕ್ಕಳು ಓಡೋಗಿ ಮದ್ವೆಯಾಗ್ಲಪ್ಪಾ ಎಂದ ನಟಿ ಟ್ವಿಂಕಲ್​ ಖನ್ನಾ! ಇದರ ಹಿಂದಿದೆ ಇಂಟರೆಸ್ಟಿಂಗ್​ ಕಾರಣ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ