Lakshmi Baramma Serial ಮುಗಿದ್ರೂ ಕೀರ್ತಿಗೆ ನ್ಯಾಯ ಸಿಗ್ಲಿಲ್ಲ, ಸುಪ್ರೀತಾ ಬದುಕು ಸರಿ ಹೋಗ್ಲಿಲ್ಲ!

Published : Apr 12, 2025, 10:27 AM ISTUpdated : Apr 12, 2025, 11:22 AM IST
Lakshmi Baramma Serial ಮುಗಿದ್ರೂ ಕೀರ್ತಿಗೆ ನ್ಯಾಯ ಸಿಗ್ಲಿಲ್ಲ, ಸುಪ್ರೀತಾ ಬದುಕು ಸರಿ ಹೋಗ್ಲಿಲ್ಲ!

ಸಾರಾಂಶ

Lakshmi Baramma Kannada Serial last Episode: 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಅಂತ್ಯ ಕಂಡರೂ ಕೂಡ, ಸಾಕಷ್ಟು ಪ್ರಶ್ನೆಗಳು ಹಾಗೆ ಉಳಿದಿವೆ. 

ಏಕಾಏಕಿ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಅಂತ್ಯ ಆಗಿದೆ. ಈ ಸೀರಿಯಲ್‌ ಮೊದಲಿನಿಂದಲೂ ಸಾಕಷ್ಟು ಕುತೂಹಲಗಳನ್ನು ಹೊಂದಿದ್ದು, ಟ್ವಿಸ್ಟ್‌ ಇಟ್ಟುಕೊಂಡು ಮುಂದೆ ಸಾಗುತ್ತಿತ್ತು. ಈಗ ದಿಢೀರ್‌ ಸೀರಿಯಲ್‌ ಮುಕ್ತಾಯ ಆಗಿದ್ದು, ಅನೇಕ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ.

ಸೀರಿಯಲ್‌ ಮುಕ್ತಾಯದ ಬಗ್ಗೆ ರಜನಿ ಪ್ರವೀಣ್‌ ಏನಂದ್ರು? 
ನಟಿ ರಜನಿ ಪ್ರವೀಣ್‌ ಅವರು Asianet Suvarna News ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದು, “ನಮಗೆ ಸೀರಿಯಲ್‌ ಮುಗಿಯತ್ತೆ ಅಂತ ಕೊನೆ ಗಳಿಗೆಯಲ್ಲಿ ಗೊತ್ತಾಯ್ತು, ನಮಗೂ ನಂಬಲಾಗಲಿಲ್ಲ. ಟಿಆರ್‌ಪಿ ಚೆನ್ನಾಗಿದ್ದರೂ ಸೀರಿಯಲ್‌ ಮುಗಿದಿದ್ದು ನಿಜ. ಆದರೆ ಇದಕ್ಕೆ ಕಾರಣ ಏನೂ ಅಂತ ನಮಗೂ ಗೊತ್ತಾಗಲಿಲ್ಲ. ನಾವು ಏನಿರಬಹುದು ಅಂತ ಆಲೋಚನೆ ಮಾಡುತ್ತಿದ್ದೆವು” ಎಂದು ಹೇಳಿದ್ದಾರೆ.

Lakshmi Baramma Serial: ಪ್ರಪಾತಕ್ಕೆ ಬಿದ್ದು ಕೊನೆಯುಸಿರೆಳೆದ ಕಾವೇರಿ! ಸುಡೋಕೆ ಹೆಣವೂ ಸಿಕ್ಕಿಲ್ಲ!

ಸುಪ್ರೀತಾ ಗಂಡ ಯಾರು?
ರಜನಿ ಪ್ರವೀಣ್‌ ಮಾತನಾಡಿ, “ನಾವು ಕೂಡ ಸುಪ್ರೀತಾ ಗಂಡ ಯಾರು ಅಂತ ತಿಳಿಯೋಕೆ ಕಾದೆವು. ಕಾವೇರಿಗೆ ಏನಾದರೂ ಶಿಕ್ಷೆ ಆದರೆ ಕೃಷ್ಣಕಾಂತ್‌ ಒಬ್ಬರೇ ಆಗ್ತಾರೆ. ಆಗ ಕಾರುಣ್ಯಾ ಫ್ರೀ ಆಗಿದ್ದಾರಾ ಅಂತೆಲ್ಲ ನಾವು ಟೀಂನಲ್ಲಿ ಮಾತನಾಡಿಕೊಳ್ಳುತ್ತಿದ್ದೆವು” ಎಂದು ಹೇಳಿದ್ದಾರೆ.

ಕೀರ್ತಿ ಮುಂದಿನ ಕಥೆ ಏನು?
ಕೀರ್ತಿ ಮನೆ ಬಿಟ್ಟು ಹೋದಳು. ಅವಳು ಮುಂದೆ ಏನಾಗ್ತಾಳೆ? ಏನು ಮಾಡ್ತಾಳೆ ಎನ್ನುವ ಪ್ರಶ್ನೆಗೆ ಉತ್ತರವೇ ಇಲ್ಲದಂತಾಗಿದೆ. ಲಕ್ಷ್ಮೀ-ವೈಷ್ಣವ್‌ ಜೀವನ ಸರಿ ಹೋಯ್ತು, ಆದರೆ ಕೀರ್ತಿ ಮುಂದೆ ಏಕಾಂಗಿಯಾಗಿ ಜೀವನ ನಡೆಸ್ತಾಳಾ? ಎಂಬ ಪ್ರಶ್ನೆ ಎದುರಾಗಿದೆ. 

ಕೀರ್ತಿಗೆ ನ್ಯಾಯ ಸಿಗಲೇ ಇಲ್ಲ!
ಕಾವೇರಿಯಿಂದ ಕೀರ್ತಿಗೆ ವೈಷ್ಣವ್‌ ಸಿಗಲಿಲ್ಲ. ಯಾರೋ ಮಾಡಿದ ಪಾಪಕ್ಕೆ ಕೀರ್ತಿ ಬಲಿಯಾದಳು. ಈಗ ಕೀರ್ತಿ ಮನೆ ಬಿಟ್ಟು ದೂರ ಹೋಗಿದ್ದಾಳೆ. ಯಾರೂ ಕೂಡ ಅವಳನ್ನು ಕಾಂಟ್ಯಾಕ್ಟ್‌ ಮಾಡಬಾರದು ಎಂದು ಅವಳು ಆಣೆ ಮಾಡಿಸಿಕೊಂಡಿದ್ದಾಳೆ. ಹೀಗಾಗಿ ಅಷ್ಟು ಪ್ರೀತಿಸುವ ಹುಡುಗಿ ಕೀರ್ತಿಗೆ ಹೀಗೆ ಆಗಬಾರದಿತ್ತು ಅಂತ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ.

ವಿಧಿ ಅಷ್ಟು ಬೇಗ ಸರಿಹೋದಳಾ?
ವಿಧಿ ತಾಯಿ ಕಾವೇರಿ ಸತ್ತು ಹೋದಳು. ವಿಧಿಗೆ ಲಕ್ಷ್ಮೀ ಕಂಡರೆ ಆಗೋದೇ ಇಲ್ಲ. ಈಗ ಅವಳು ಲಕ್ಷ್ಮೀಯನ್ನು ಒಪ್ಪಿಕೊಂಡು, ನನ್ನ ಅತ್ತಿಗೆ, ನನಗೆ ಅಳಿಯನೋ-ಸೊಸೆ ಬರ್ತಿದ್ದಾಳೆ ಅಂತ ಹೇಳ್ತಾಳೆ. ಇಷ್ಟು ಬೇಗ ವಿಧಿಗೆ ಲಕ್ಷ್ಮೀ ಮೇಲಿನ ಸಿಟ್ಟು ಕರಗಿ ಹೋಯ್ತಾ? ಎನ್ನುವ ಪ್ರಶ್ನೆ ಎದ್ದಿದೆ. ಇನ್ನೊಂದು ಕಡೆ ವಿಧಿ ಗಂಡ ವಿಖ್ಯಾತ್‌ ಮನೆಯವರು ಯಾರು? ಈ ಮದುವೆಯನ್ನು ಅವರು ಒಪ್ಪಿಕೊಳ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.

Lakshmi Baramma Serial: ಪ್ರಪಾತಕ್ಕೆ ಬಿದ್ದು ಕೊನೆಯುಸಿರೆಳೆದ ಕಾವೇರಿ! ಸುಡೋಕೆ ಹೆಣವೂ ಸಿಕ್ಕಿಲ್ಲ!

ಭಾಗ್ಯಲಕ್ಷ್ಮೀ ಕುಸುಮಂಗೆ ಗೊತ್ತಾಗಲೇ ಇಲ್ಲ.
ಕಾವೇರಿ ಸತ್ತರೂ ಕೂಡ ಕುಸುಮಾಗೆ ಈ ವಿಷಯ ಗೊತ್ತಾಗಲಿಲ್ಲ. ಲಕ್ಷ್ಮೀ ಮನೆ ಬಿಟ್ಟಿದ್ದು, ವೈಷ್ಣವ್‌ಗೆ ನಿಶ್ಚಿತಾರ್ಥದ ತಯಾರಿ ನಡೆದರೂ ಕೂಡ, ಅದು ಕುಸುಮಾ ಮನೆಗೆ ಗೊತ್ತಾಗಲೇ ಇಲ್ಲ. ನಾನು ಹೇಳಿ ಮಾಡಿಸಿದ ಮದುವೆ, ಲಕ್ಷ್ಮೀಗೆ ಮೋಸ ಆಗಬಾರದು ಅಂತ ಕುಸುಮಾ ಒಂದೇ ಸಮನೆ ಕೂಗುತ್ತಿದ್ದಳು. ಇವಳ ಕೂಗನ್ನು ಯಾರೂ ಕೇಳಿಸಿಕೊಂಡಂತಿಲ್ಲ.

ಕಾವೇರಿ ಸರಿ ಹೋಗಲೇ ಇಲ್ಲ
ತನ್ನ ಸ್ವಾಭಿಮಾನ, ಅಹಂಕಾರದಿಂದಲೇ ಕಾವೇರಿ ದುರಂತ ಅಂತ್ಯ ಕಂಡಿದ್ದಾಳೆ. ಈ ರೀತಿ ಇರಬಾರದು ಎನ್ನೋದಿಕ್ಕೆ ಕಾವೇರಿ ಉದಾಹರಣೆ ಆಗಿಬಿಟ್ಟಳು. 

ಲಕ್ಷ್ಮೀ ಪ್ರಗ್ನೆಂಟ್‌ ಆಗಿರೋದೇ ರೋಚಕ!
ಲಕ್ಷ್ಮೀ ಹಾಗೂ ವೈಷ್ಣವ್‌ ಪ್ರೀತಿ ಹೇಳಿಕೊಂಡರೂ ಕೂಡ ಒಂದಾದ ಹಾಗೆ ಕಂಡಿಲ್ಲ. ಯಾವ ಗ್ಯಾಪ್‌ನಲ್ಲಿ ಈ ಜೋಡಿ ಈಗ ಮಗು ಬರಮಾಡಿಕೊಂಡಿದೆ ಎಂದು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ. ಲಕ್ಷ್ಮೀ ಸೀಮಂತ ಆಗಿದ್ದು, ಮತ್ತೆ ಕಾವೇರಿ ಹುಟ್ಟಿ ಬರ್ತಾಳಾ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸಾಕಷ್ಟು ಪ್ರಶ್ನೆಗಳನ್ನಿಟ್ಟು ಈ ಸೀರಿಯಲ್‌ ಅಂತ್ಯ ಆಗಿದೆ.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ನೀನು ಫ್ರೀ ಪ್ರೊಡಕ್ಟ್‌, ಏನೂ ಮಾಡದೆ ಇಲ್ಲಿದ್ದೀಯಾ? ಕೊನೆಗೂ ಕಾವ್ಯ ವಿರುದ್ಧ ತಿರುಗಿಬಿದ್ದ ಗಿಲ್ಲಿ ನಟ
Bigg Boss: ರೊಮ್ಯಾನ್ಸ್‌ ಎಂದ ರಜತ್;‌ ಎಪಿಸೋಡ್‌ನಲ್ಲಿ ಇಲ್ಲ ಅಂತ ವೀಕ್ಷಕರು ಅಂದ್ಕೊಂಡ್ರೆ ಏನ್‌ ಮಾಡಲಿ?: ರಾಶಿಕಾ