
ಸೀತಾರಾಮ ಕಲ್ಯಾಣಕ್ಕೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಹತ್ತು- ಹಲವು ಅಡೆತಡೆಗಳನ್ನು ಹಿಮ್ಮೆಟ್ಟಿಕೊಂಡು ಈ ಜೋಡಿ ಈಗ ಮದುವೆಯಾಗುವ ಕಾಲ ಕೂಡಿ ಬಂದಿದೆ. ಭರ್ಜರಿಯಾಗಿ ಎಂಗೇಜ್ಮೆಂಟ್ ನಡೆಯುತ್ತಿದೆ. ಇವರಿಬ್ಬರನ್ನೂ ಬೇರೆ ಮಾಡಲು ಭಾರ್ಗವಿ ಮಾಡಿರುವ ಮಸಲತ್ತುಗಳೆಲ್ಲವೂ ವರ್ಕ್ಔಟ್ ಆಗಿಲ್ಲ. ಇದೀಗ ಮದುವೆಯಾದ ಮೇಲೆ ಇಬ್ಬರನ್ನೂ ಬೇರೆ ಮಾಡುವ ತಂತ್ರ ರೂಪಿಸುತ್ತಿದ್ದಾಳೆ. ಆದರೆ ಅತ್ತ ರುದ್ರಪ್ರತಾಪ ಬಿಡಬೇಕಲ್ಲ! ಸೀತಾಳ ಮೇಲೆ ಕಣ್ಣು ಹಾಕಿದವ ಅವ. ಅವನಿಗೆ ಬೇಕಿದ್ದು ಸೀತಾ ಮತ್ತು ಅವಳ ಆಸ್ತಿ. ಕಳ್ಳತನದಿಂದ ಮದುವೆಯಾಗಲೂ ಹೊರಟಿದ್ದ. ಆದರೆ ಮದುವೆಯ ದಿನವೇ ಆತನ ಕುತಂತ್ರ ತಿಳಿದ ರಾಮ್ ಮದುವೆಯನ್ನು ನಿಲ್ಲಿಸಿದ್ದ. ಅದೇ ಕೋಪದಲ್ಲಿ ಅವನು ಕೊತಕೊತ ಕುದಿಯುತ್ತಿದ್ದಾರೆ.
ಆದರೆ ಇದೀಗ ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತಿದೆ ಎನ್ನುವಷ್ಟರಲ್ಲಿಯೇ ಮತ್ತೊಮ್ಮೆ ಬಿರುಗಾಳಿ ಎದ್ದಿದೆ ಈ ಜೋಡಿಯ ಬಾಳಲ್ಲಿ. ಸೀತಾಳ ಬಾಳಲ್ಲಿ ಅವಳಿಗೆ ಮಗಳೇ ಸರ್ವಸ್ವ, ಅದೇ ರೀತಿ ರಾಮ್ಗೂ ಸಿಹಿ ಎಂದರೆ ಪಂಚಪ್ರಾಣ. ಇದನ್ನು ಅರಿತಿರುವ ರುದ್ರಪ್ರತಾಪ, ಇವರಿಬ್ಬರನ್ನೂ ಬೇರೆ ಬೇರೆ ಮಾಡಲು ಸಿಹಿಯನ್ನು ಕಿಡ್ನ್ಯಾಪ್ ಮಾಡಿದ್ದಾನೆ. ಈ ಹಿಂದೆ ಕೂಡ ಸಿಹಿ ಕಿಡ್ನ್ಯಾಪ್ ಆಗಿದ್ದಳು. ಹರಸಾಹಸ ಪಟ್ಟು ಆಕೆಯನ್ನು ಬಿಡಿಸಿಕೊಂಡು ಬರಲಾಗಿತ್ತು. ಆದರೆ ಇದೀಗ ಎಲ್ಲವೂ ಸುಲಭವಾಗಿ ನಡೆಯುತ್ತಿದೆ, ಇನ್ನೇನು ಸೀತಾ-ರಾಮ ಮದುವೆಯಾಗುತ್ತಾರೆ ಎನ್ನುವಷ್ಟರಲ್ಲಿಯೇ ಬರಸಿಡಿಲು ಬಂದು ಬಡಿದಿದೆ.
ಮುದ್ದು ಸಿಹಿಯ ಆ್ಯಕ್ಟಿಂಗ್ಗೆ ಮನಸೋತವರೇ ಈಗ ಉಲ್ಟಾ ಹೊಡೀತಿದ್ದಾರೆ! ಇವಳನ್ನು ಹೀಗೆ ಬಿಟ್ರೆ...
ಸೀತಾ ಅತ್ತಿಗೆ ಮತ್ತು ಸಿಹಿ ಜೊತೆ ದೇವಸ್ಥಾನಕ್ಕೆ ಹೋಗಿದ್ದಾಳೆ. ಅಲ್ಲಿ ಅತ್ತಿಗೆಗೆ ಬೆಟ್ಟ ಹತ್ತಲು ಆಗಲಿಲ್ಲ. ಸಿಹಿ ಕೂಡ ಅತ್ತಿಗೆ ಜೊತೆಯಲ್ಲಿ ಕೆಳಗೇ ಉಳಿದುಕೊಂಡಿದ್ದಾಳೆ. ಸೀತಾ ದೇವಸ್ಥಾನಕ್ಕೆ ಬೆಟ್ಟ ಹತ್ತಿ ಹೋಗಿ ಬರುವಷ್ಟರಲ್ಲಿ ಸಿಹಿ ಕಾಣೆಯಾಗಿದ್ದಾಳೆ. ಅತ್ತಿಗೆ ಮಲಗಿರುವ ಸಮಯದಲ್ಲಿ ಸಿಹಿ ಸುಮ್ಮನೇ ಅಲ್ಲಿ ಇಲ್ಲಿ ಅಡ್ಡಾಡಿ ದಾರಿ ತಪ್ಪಿಸಿಕೊಂಡಿದ್ದಾಳೆ. ಆಗ ಅಲ್ಲಿಯೇ ಇರುವ ರುದ್ರಪ್ರತಾಪ ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದಾನೆ. ಸೀತಾ ಕೆಳಗೆ ಬಂದಾಗ ಸಿಹಿ ಕಾಣದೇ ಪರಿತಪಿಸುತ್ತಿದ್ದಾಳೆ. ಸಿಹಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾಳೆ. ಅಲ್ಲಿ ದಾರಿ ತಪ್ಪಿಸಿಕೊಂಡಿರುವ ಸಿಹಿ ರುದ್ರಪ್ರತಾಪನ ಕೈ ಸೇರಿದ್ದಾಳೆ.
ನನ್ನ ಸೀತಾಳನ್ನು ನೀನು ಮದ್ವೆಯಾಗ್ತಿರುವೆಯಲ್ಲ, ನಿನ್ನ ಗುಬ್ಬಚ್ಚಿ ಮರಿಯನ್ನು ನಾನು ಇಟ್ಟುಕೊಂಡಿರುವೆ ಎನ್ನುತ್ತಲೇ ರುದ್ರಪ್ರತಾಪ ರುದ್ರಾವತಾರ ತೋರಿದ್ದಾನೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಸೀತಾರಾಮ ಫ್ಯಾನ್ಸ್ ರೊಚ್ಚಿಗೆದ್ದು ಹೋಗಿದ್ದಾರೆ. ಕಥೆಯನ್ನು ಎಳೆಯಲು ನಿಮಗೆ ಸಿಹಿನೇ ಬೇಕಾ? ಏನ್ ಡೈರೆಕ್ಟರ್ ಸಾಹೇಬ್ರೇ ನಿಮ್ ಗೋಳು. ಸೀತಾ- ರಾಮ ಕಲ್ಯಾಣ ಮಾಡುವುದು ಬಿಟ್ಟು, ಪದೇ ಪದೇ ಸಿಹಿಯನ್ನು ಕಿಡ್ನ್ಯಾಪ್ ಮಾಡಿಸುತ್ತಲೇ ಕಥೆಯನ್ನು ಎಳೆಯುತ್ತೀರಲ್ಲ, ಬೇರೆ ಏನೂ ಕಥೆ ಸಿಗುತ್ತಿಲ್ವಾ? ಇದೊಂದೇ ಕಥೆ ಇರೋದಾ ನಿಮಗೆ ಎಂದೆಲ್ಲಾ ನೂರೆಂಟು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ರುದ್ರಪ್ರತಾಪನ ಕೈ ಸೇರಿದ ಸಿಹಿಯನ್ನು ಸೀತಾ-ರಾಮ ಹೇಗೆ ಬಿಡಿಸಿಕೊಂಡು ಬರುತ್ತಾರೋ ಕಾದು ನೋಡಬೇಕಿದೆ.
ತಿಳಿಯದೇ ತಪ್ಪಾಗೋಯ್ತು, ಪ್ಲೀಸ್ ಕ್ಷಮಿಸಿ ಬಿಡಿ... ಅಭಿಮಾನಿಗಳ ಕ್ಷಮೆ ಕೋರಿದ ಸೀತಾರಾಮ ನಟಿ ವೈಷ್ಣವಿ ಗೌಡ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.