ಅಭಿ ಅಹಂಕಾರಕ್ಕೆ ಕೊನೆಗಾಲ ಬಂದಾಯ್ತು; ಕೆಂಪಾಯ್ತು ಶಾರ್ವರಿ, ದೀಪಿಕಾ ಕಣ್ಣು

By Mahmad Rafik  |  First Published Jun 2, 2024, 6:20 PM IST

Shreerastu Shubhamastu: ಕಂಪನಿಯ ಪ್ರಮುಖ ಕೆಲಸಗಳ ಜವಾಬ್ದಾರಿಯನ್ನು ಸಮರ್ಥ್‌ಗೆ ನೀಡಲು ಮಾಧವ ಮತ್ತು ಅವಿನಾಶ ನಿರ್ಧರಿಸಿದ್ದಾರೆ. ನನ್ನದೇ ಕಂಪನಿಯ ಕೆಲಸಗಳು ಬೇಕಾದಷ್ಟಿವೆ. ಅಭಿ ಕಂಪನಿ ಕೆಲಸ ನೋಡಿಕೊಳ್ಳೋದು ನನಗೆ ಕಷ್ಟವಾಗುತ್ತೆ ಎಂದು ಅವಿನಾಶ್ ಹೇಳುತ್ತಾನೆ.


ಬೆಂಗಳೂರು: ಶ್ರೀರಸ್ತು ಶುಭಮಸ್ತು (Shreerastu Shubhamastu Serial) ಜೀ ಕನ್ನಡ ವಾಹಿನಿ (Zee Kannada) ಸೂಪರ್ ಹಿಟ್ ಧಾರವಾಹಿಗಳಲ್ಲಿ ಒಂದಾಗಿದೆ. ನಟಿ ಸುಧಾರಾಣಿ (Actress Sudharani) ಧಾರಾವಾಹಿಯ ಸೆಂಟರ್ ಆಫ್ ಅಟ್ರಾಕ್ಷನ್. ಸುಧಾರಾಣಿಯವರ ತುಳಸಿ ಪಾತ್ರ ಕರುನಾಡಿನ ಜನತೆಗೆ ಇಷ್ಟವಾಗಿದ್ದು, ಇದ್ದರೆ ಹಾಗಿರಬೇಕು ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಮಾಧವನ ಹಿರಿಯ ಮಗ ಅವಿನಾಶ್, ತುಳಸಿಯನ್ನು ತಾಯಿ ಎಂದು ಒಪ್ಪಿಕೊಂಡಿದ್ದಾನೆ. ಕಿರಿಯ ಮಗ ಅಭಿ ಮಾತ್ರ ತನ್ನ ಅಹಂಕಾರದಲ್ಲಿಯೇ ಇದ್ದಾನೆ. ಇನ್ನೇನು ಅಭಿ ಬದಲಾಗ್ತಾನೆ ಅನ್ನೋವಷ್ಟರಲ್ಲಿ ಚಿಕ್ಕಮ್ಮ ಶಾರ್ವರಿ ಮತ್ತು ಪತ್ನಿ ದೀಪಿಕಾ ಆತನ ಮನಸ್ಸಿನಲ್ಲಿ ವಿಷ ಬೀತ ಬಿತ್ತನೆ ಮಾಡುತ್ತಾರೆ. ಮಾವ ಜನಾರ್ಧನನ ನೀಚತನ ಎಲ್ಲರ ಮುಂದೆ ಬಯಲಾದ್ರು ಆತ ಒಳ್ಳೆಯವನು ಎಂಬ ನಂಬಿಕೆಯಲ್ಲಿದ್ದು, ಮನೆಯವರ ವಿರುದ್ಧವೇ ನಿಂತು ಕಂಪನಿ ಕೆಲಸಗಳನ್ನು ಮಾಡುತ್ತಿದ್ದಾನೆ.

ಇತ್ತ ತುಳಸಿ ಮಗ ಸಮರ್ಥ್, ಅಭಿಯ ಕುತಂತ್ರದಿಂದ ಒಳ್ಳೆಯ ಕೆಲಸ ಕಳೆದುಕೊಂಡು ಮಾಧವನ ಮನೆಯಲ್ಲಿಯೇ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಆಗಾಗ್ಗೆ ಅಭಿ ಮತ್ತು ಸಮರ್ಥ್ ನಡುವೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ. ಅಭಿಯ ಅಹಂಕಾರಕ್ಕೆ ಸಮಯ ಸಿಕ್ಕಾಗೆಲ್ಲಾ ಸಮರ್ಥ್ ತಿರುಗೇಟು ಕೊಡುತ್ತಿರುತ್ತಾನೆ. 

Tap to resize

Latest Videos

ಈ ಆಂಕರ್‌ಗೆ ಹಣದ ಹುಚ್ಚು, ದುಡಿದ ದುಡ್ಡೆಲ್ಲಾ ಏನ್ ಮಾಡ್ತೀರಿ ಎಂದು ಕೇಳಿದ ಫ್ಯಾನ್ಸ್

ಇದೀಗ ಅಭಿ ಕಂಪನಿಯ ಪ್ರಮುಖ ಕೆಲಸಗಳ ಜವಾಬ್ದಾರಿಯನ್ನು ಸಮರ್ಥ್‌ಗೆ ನೀಡಲು ಮಾಧವ ಮತ್ತು ಅವಿನಾಶ ನಿರ್ಧರಿಸಿದ್ದಾರೆ. ನನ್ನದೇ ಕಂಪನಿಯ ಕೆಲಸಗಳು ಬೇಕಾದಷ್ಟಿವೆ. ಅಭಿ ಕಂಪನಿ ಕೆಲಸ ನೋಡಿಕೊಳ್ಳೋದು ನನಗೆ ಕಷ್ಟವಾಗುತ್ತೆ ಎಂದು ಅವಿನಾಶ್ ಹೇಳುತ್ತಾನೆ. 

ಸಮರ್ಥ್ ಹೆಗಲಿಗೆ ಕಂಪನಿ ಜವಾಬ್ದಾರಿ 

ಸಮರ್ಥ್‌ಗೆ ಈ ಜವಾಬ್ದಾರಿಯನ್ನು ನೀಡಿದ್ರೆ ಹೇಗಿರುತ್ತೆ ಎಂದು ಮಾಧವ ಮಗನನ್ನು ಪ್ರಶ್ನಿಸುತ್ತಾನೆ. ಇದು ಒಳ್ಳೆಯ ಆಲೋಚನೆ ಅನ್ನೋ ಅವಿನಾಶ್, ಆತ ನಮ್ಮೊಂದಿಗೆ ಕೆಲಸ ಮಾಡಿದರೆ ಲಾಭವಾಗುತ್ತದೆ.  ಸಮರ್ಥ್‌ಗೆ ಈ ಕೆಲಸದಲ್ಲಿ ಒಳ್ಳೆಯ ಅನುಭವವಿದೆ ಎಂದು ಅವಿನಾಶ್ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಸಮರ್ಥ್‌ನನ್ನು ಕರೆದು ಕಂಪನಿಯ ಪ್ರೊಡೆಕ್ಟ್ ಸಂಬಂಧ ನನ್ನ ಜೊತೆ ಕೆಲಸ ಮಾಡಬೇಕೆಂದು ಅವಿನಾಶ್ ಹೇಳುತ್ತಾನೆ. 

ಅಭಿಮಾನಿಗಳೇ ಈಗಾದ್ರೂ ಖುಷಿನಾ..? ನಿಮ್ಮಾಸೆ ಕೊನೆಗೂ ನೆರವೇರಿತು ಅಂತಿದೆ ಶ್ರೀರಸ್ತು- ಶುಭಮಸ್ತು

ಅಭಿ ಅಹಂಕಾರ ಇಳಿಯುತ್ತಾ?

ಮೊದಲಿಗೆ ಅವಿನಾಶ್ ಮಾತು ಒಪ್ಪದ ಸಮರ್ಥ್ ನಂತರ ಎಲ್ಲರ ಒತ್ತಾಯಕ್ಕೆ ಮಣಿದು ಕೆಲಸ ಮಾಡಲು ಒಪ್ಪಿಕೊಳ್ಳುತ್ತಾನೆ. ತನ್ನ ತಪ್ಪಿನಿಂದ ಕಂಪನಿಯಿಂದ ದೂರವಾಗಿರುವ ಅಭಿ ಸ್ಥಾನಕ್ಕೆ ಸಮರ್ಥ್ ಬಂದಿದ್ದಾನೆ. ಮುಂದಿನ ಸಂಚಿಕೆಯಲ್ಲಿ ಸಮರ್ಥ್- ಅಭಿ ನಡುವಿನ ಜಟಾಪಟಿಯ ಕಾವು ಮತ್ತಷ್ಟು ಹೆಚ್ಚಾಗಲಿದೆ. ಇತ್ತ ಮಾಧವ ಮತ್ತು ಅವಿನಾಶ್ ತೆಗೆದುಕೊಂಡ ನಿರ್ಧಾರದಿಂದ ಶಾರ್ವರಿ ಮತ್ತು ದೀಪಿಕಾಳ ಕಣ್ಣು ಕೆಂಪಾಗಿಸಿದೆ. ಮುಂದೆ ಇವರಿಬ್ಬರು ಅಭಿ ತಲೆಯಲ್ಲಿ ಇನ್ನು ಏನೇನೂ ತುಂಬ್ತಾರೆ ಎಂದು ಫ್ಯಾನ್ಸ್ ಚರ್ಚೆ ನಡೆಸುತ್ತಿದ್ದಾರೆ.

click me!