
ಇಂದು ಸೀರಿಯಲ್ಗಳೆಂದರೆ ಅದು ಕೇವಲ ಸೀರಿಯಲ್ಗಳಾಗಿಲ್ಲ. ಬದಲಿಗೆ ಜನಮಿಡಿತವೂ ಆಗಿಬಿಟ್ಟಿದೆ. ನಮ್ಮ ನೆಚ್ಚಿನ ತಾರೆಯರು ಹೀಗೆಯೇ ಇರಬೇಕು ಎಂದು ದೊಡ್ಡ ಪ್ರೇಕ್ಷಕ ವರ್ಗವೇ ಬಯಸುತ್ತದೆ. ಅವರು ತೊಡುವ ಉಡುಗೆ ತೊಡುಗೆಗಳಿಂದ ಎಲ್ಲವೂ ಹೀಗೆಯೇ ಇರಬೇಕು ಎಂದು ಅಭಿಮಾನಿಗಳು ಬಯಸುವುದು ಸಹಜ. ಇದೇ ಕಾರಣಕ್ಕೆ ಹೀರೋ- ಹೀರೋಯಿನ್ಗಳಿಗೆ ಹೊರಗಡೆ ಹೋದರೂ ಅಷ್ಟೇ ಬೆಲೆ ಸಿಗುತ್ತದೆ, ವಿಲನ್ಗಳಿಗೆ ಹೊರಗಡೆ ಕೂಡ ಛೀಮಾರಿ ಹಾಕುವುದು ಇದೆ. ಅಷ್ಟರ ಮಟ್ಟಿಗೆ ಸೀರಿಯಗಳು ದೊಡ್ಡ ಪ್ರಮಾಣದ ವೀಕ್ಷಕರನ್ನು ಹಿಡಿದುಕೊಂಡಿದ್ದು, ಅದರಲ್ಲಿಯೂ ಮಹಿಳಾ ವರ್ಗವನ್ನು ಆವರಿಸಿಕೊಂಡು ಬಿಟ್ಟಿದೆ. ಸೀರಿಯಲ್ಗಳಲ್ಲಿ ಚಿಕ್ಕ ಪ್ರಮಾದವಾದರೂ ಅದನ್ನು ಸಹಿಸದ ಮಟ್ಟಿಗೆ ಪ್ರೇಕ್ಷಕರು ಹೋಗುತ್ತಾರೆ. ಹಿಂದೆಲ್ಲಾ ತಮ್ಮೊಳಗೇ ಈ ವಿಷಯಗಳನ್ನು ಚರ್ಚೆ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಸೋಷಿಯಲ್ ಮೀಡಿಯಾ ಸಕತ್ ಆ್ಯಕ್ಟೀವ್ ಆಗಿರುವ ಕಾಲದಲ್ಲಿ ಸೀರಿಯಲ್ಗಳನ್ನು ಎಷ್ಟರಮಟ್ಟಿಗೆ ಹೊಗಳುತ್ತಾರೋ ಅದಕ್ಕಿಂತಲೂ ಹೆಚ್ಚಿನಾದ ಬಾಯಿಗೆ ಬಂದಂತೆ ಬೈಯುವುದೂ ನಡೆಯುತ್ತದೆ.
ಇದೀಗ ಬಹು ಪ್ರೇಕ್ಷಕ ವರ್ಗದ ಮನಗೆದ್ದಿರುವ ಸೀತಾರಾಮ ಸೀರಿಯಲ್ ಕಥೆ ಕೇಳಿ. ಇದೀಗ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಸೀತಾ-ರಾಮ ಕಲ್ಯಾಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೀಗ ಅದ್ಧೂರಿಯಾಗಿ ನಿಶ್ಚಿತಾರ್ಥವೂ ನೆರವೇರುತ್ತಿದೆ. ಇನ್ನೇನು ಯಾವುದೇ ವಿಘ್ನ ಬಾರದಂತೆ ಸೀತಾ-ರಾಮ ಒಂದಾದರೆ ಸಾಕಪ್ಪ ಎನ್ನುವುದು ಅಭಿಮಾನಿಗಳ ಅಭಿಮತ. ಇದರ ನಡುವೆಯೇ ಎಲ್ಲರ ಕಣ್ಣು ಕುಕ್ಕಿದ್ದು, ಸೀತೆ ಉಟ್ಟ ಸೀರೆಯ ಬಗ್ಗೆ. ಸೀತಾಳನ್ನು ನೋಡಲು ರಾಮ್ನ ಮನೆಯವರು ಬಂದಾಗ ಸೀತಾ ಉಟ್ಟ ಸೀರೆಯನ್ನು ನೋಡಿ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಟ್ರೋಲ್ ಮಾಡಲಾಗಿತ್ತು.
ಅಭಿಮಾನಿಗಳೇ ಈಗಾದ್ರೂ ಖುಷಿನಾ..? ನಿಮ್ಮಾಸೆ ಕೊನೆಗೂ ನೆರವೇರಿತು ಅಂತಿದೆ ಶ್ರೀರಸ್ತು- ಶುಭಮಸ್ತು
ಕಡುನೀಲಿ ಅಂದರೆ ಇಂಕ್ ಬಣ್ಣದ ಮೇಲೆ ಬೆಳ್ಳಿ ಬಣ್ಣದ ದೊಡ್ಡ ಹೂಗಳ ಡಿಸೈನ್ ಇರುವ ಸೀರೆಯನ್ನು ಸೀತಾ ಉಟ್ಟಿದ್ದಳು. ಇದಕ್ಕೆ ಕಾಂಬಿನೇಶನ್ ಆಗಿ ಸ್ಯಾಂಡಲ್ ವುಡ್ ಕಲರ್ ಬ್ಲೌಸ್ ತೊಟ್ಟಿದ್ದಳು. ಇದನ್ನು ವೀಕ್ಷಕರು ಸ್ವಲ್ಪವೂ ಇಷ್ಟಪಟ್ಟಿರಲಿಲ್ಲ. ಥೂ ಮಿಸ್ ಮ್ಯಾಚ್, ಅಷ್ಟೂ ಗೊತ್ತಾಗಲ್ವಾ? ಡ್ರೆಸ್ ಸೆನ್ಸ್ ಇಲ್ವಾ? ವಯಸ್ಸಾದವರ ರೀತಿ ಕಾಣಿಸ್ತಾ ಇದ್ದಾಳೆ ಸೀತಾ... ಹೀಗೆ ಏನೇನೋ ಕಮೆಂಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದೂ ಆಯ್ತು. ಸೀತಾ ಸೀರೆ ಸೆಲೆಕ್ಷನ್ನೇ ಸರಿಯಾಗಿಲ್ಲ, ಬ್ಲೌಸ್ ಖರಾಬಾಗಿದೆ. ಸೀತಾ ಈ ಲುಕ್‌ನಲ್ಲಿ ಅಜ್ಜಿ ಥರ ಕಾಣ್ತಿದ್ದಾಳೆ. ಸೀತಾಗೆ ಸ್ವಲ್ಪನೂ ಡೆಸ್ ಸೆನ್ಸ್ ಇಲ್ಲ... ಹೀಗೆ ಬಂದಿರುವ ನೂರಾರು ಕಮೆಂಟ್‌ಗಳನ್ನು ಸೀತಾ ಓದದೇ ಇರುತ್ತಾಳೆಯೆ?
ಹೌದು ಸೀತಾರಾಮ ಸೀತೆ ಅರ್ಥಾತ್ ವೈಷ್ಣವಿ ಗೌಡ ಅವರೂ ತಮ್ಮ ಸೀರೆಯ ಬಗ್ಗೆ ಬಂದಿರುವ ನೂರಾರು ಕಮೆಂಟ್‌ಗಳನ್ನು ಓದಿ ಬೇಸರ ವ್ಯಕ್ತಪಡಿಸಿದ್ದಾರೆ. ಅಂದ ಮಾತ್ರಕ್ಕೆ ಅವರೇನೂ ಕಮೆಂಟ್ ಮಾಡಿರುವವರ ಬಗ್ಗೆ ಬೇಸರ ವ್ಯಕ್ತಪಡಿಸಲಿಲ್ಲ. ಬದಲಿಗೆ ತಾವು ಅಂದು ಉಟ್ಟುಕೊಂಡಿದ್ದ ಸೀರೆ-ಬ್ಲೌಸ್ ನೋಡಿ ವೀಕ್ಷಕರಿಗೆ ತುಂಬಾ ಬೇಸರವಾಗಿರುವ ಬಗ್ಗೆ ವೈಷ್ಣವಿ ಅವರು ಬೇಸರಿಸಿಕೊಂಡಿದ್ದಾರೆ. ಸಾರಿ. ನಿಮ್ಮ ರಾಶಿ ರಾಶಿ ಕಮೆಂಟ್‌ಗಳನ್ನು ನೋಡಿದೆ. ಅದು ಅರ್ಜೆಂಟ್ನಲ್ಲಿ ಆಗಿ ಹೋಯ್ತು. ನಾನೂ ಸರಿಯಾಗಿ ಗಮನಿಸಲಿಲ್ಲ. ನಿಮಗೆಲ್ಲಾ ಬೇಸರವಾಗಿದೆ ಎನ್ನುವುದು ಕಮೆಂಟ್ ನೋಡಿದರೆ ತಿಳಿಯುತ್ತದೆ. ಅದಕ್ಕಾಗಿ ಕ್ಷಮೆ ಕೋರುತ್ತೇನೆ. ಮುಂದೆಂದೂ ಹೀಗೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸೀತಾರಾಮ ಎಂಗೇಜ್ಮೆಂಟ್ ಶೂಟಿಂಗ್ ಹೇಗೆ ನಡೆಯಿತು ಎಂಬ ಬಗ್ಗೆ ಯೂಟ್ಯೂಬ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ ವೈಷ್ಣವಿ ಅವರು, ಕೊನೆಯಲ್ಲಿ ಮಿಸ್ಮ್ಯಾಚ್ ಸೀರೆ ಬಗ್ಗೆ ಮಾತನಾಡಿ ಕ್ಷಮೆ ಕೋರಿದ್ದಾರೆ. ಇವರ ದೊಡ್ಡತನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸೀರಿಯಲ್ಗಳಲ್ಲಿ ಮಹಡಿ, ಬಾಲ್ಕನಿ ಮೇಲಿಂದ ಹೇಗೆ ಬೀಳ್ತಾರೆ ನಟರು? ಶೂಟಿಂಗ್ ಹೀಗೆ ನಡೆಯತ್ತೆ ನೋಡಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.