
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ತುಳಸಿ ಮಗು ಆರೋಗ್ಯವಾಗಿದೆ, ಆದರೆ ಶಾರ್ವರಿ ಮಾಡಿದ ಮೋಸದಿಂದ ತುಳಸಿ ಸಾವನ್ನಪ್ಪಿದ್ದಾಳೆ. ತುಳಸಿಯನ್ನು ಬದುಕಿಸೋಕೆ ಸಾಧ್ಯವಿಲ್ಲ ಎಂದು ಮೊದಲೇ ವೈದ್ಯರು ತಿಳಿಸಿದ್ದರು. ಹೆರಿಗೆಯಾದ ಬಳಿಕ ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದರು. ಶಾರ್ವರಿ ಸುಪಾರಿ ಕೊಟ್ಟು ತುಳಸಿ ಪ್ರಾಣ ತೆಗೆದಿದ್ದಾಳೆ.
ತುಳಸಿ ಇನ್ನಿಲ್ಲ…!
ತುಳಸಿ ಸತ್ತುಹೋದಳು ಅಂತ ತಿಳಿದು ಮನೆಯವರೆಲ್ಲರೂ ಶಾಕ್ ಆಗಿದ್ದಾರೆ. ದತ್ತ ಹಣೆ ಹಣೆ ಚಚ್ಚಿಕೊಳ್ತಿದ್ದಾನೆ, ಮಾಧವ ಕುಸಿದು ಬಿದ್ದಿದ್ದಾನೆ, ಎಲ್ಲರೂ ತಾಯಿ ಕಳೆದುಕೊಂಡೆವು ಅಂತ ಅಳುತ್ತಿದ್ದಾರೆ. ಮಾಧವ ಈಗಾಗಲೇ ಒಮ್ಮೆ ಪತ್ನಿಯನ್ನು ಕಳೆದುಕೊಂಡಿದ್ದನು, ಈಗ ಇನ್ನೊಮ್ಮೆ ಪತ್ನಿಯನ್ನು ಕಳೆದುಕೊಂಡಿದ್ದಾನೆ. ತುಳಸಿ ಆಸ್ಪತ್ರೆಗೆ ದಾಖಲಾದಮೇಲೆ “ಎಷ್ಟೇ ಖರ್ಚಾದರೂ ತಾಯಿಯನ್ನು ಉಳಿಸಿಕೊಳ್ತೀವಿ, ವಿದೇಶಕ್ಕೆ ಬೇಕಿದ್ರೂ ಕರೆದುಕೊಂಡು ಹೋಗ್ತೀವಿ, ನಮಗೆ ನಮ್ಮ ತಾಯಿ ಬೇಕು” ಎಂದು ಅವಿನಾಶ್, ಅಭಿ ವೈದ್ಯರ ಮುಂದೆ ಗೋಗರೆದಿದ್ದರು. ಒಟ್ಟಿನಲ್ಲಿ ಇವರೆಲ್ಲರ ಪ್ರಾರ್ಥನೆ ಫಲಿಸಿಲ್ಲ. ವೈದ್ಯರು ತುಳಸಿ ಬದುಕಿಲ್ಲ ಎಂದು ಹೇಳಿದ್ದಾರೆ.
Kannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್ ಯಾವುದು?
ಶಾರ್ವರಿ ಪಾಪದ ಕೊಡ ತುಂಬುತ್ತಿದೆ!
ತುಳಸಿ ಆರೋಗ್ಯವಾಗಿದ್ದಳು. ಆ ಟೈಮ್‌ನಲ್ಲೇ ಶಾರ್ವರಿ ಸುಪಾರಿ ಕೊಟ್ಟು ಕೊಲ್ಲಿಸಿದಳು. ಈಗಾಗಲೇ ದುಷ್ಟೆ ಶಾರ್ವರಿಯು ಸಿರಿ ತಂದೆಯನ್ನು ಆಕ್ಸಿಡೆಂಟ್ ಮಾಡಿ ಕೊಂದಿದ್ದಾಯ್ತು, ದತ್ತನಿಗೂ ಆಕ್ಸಿಡೆಂಟ್ ಮಾಡಿದ್ರೂ ಅವನು ಬಚಾವ್ ಆದ. ಒಟ್ಟಿನಲ್ಲಿ ಶಾರ್ವರಿ ಸೇಡು ತೀರಿಸಿಕೊಳ್ಳಲು ಹೋಗಿ ತನ್ನ ದಾರಿಗೆ ಬಂದವರಿಗೆಲ್ಲ ತೊಂದರೆ ಮಾಡುತ್ತಿದ್ದಾಳೆ. ಈ ಮೂಲಕ ಅವಳ ಪಾಪದ ಕೊಡ ತುಂಬುತ್ತಿದೆ.
ತುಳಸಿ ಸಾಯುತ್ತಾಳಾ?
ತುಳಸಿ ಹಾಗಾದರೆ ಸಾಯುತ್ತಾಳಾ? ತುಳಸಿ ಸಾಯೋದು ಡೌಟ್. ತುಳಸಿ ಸಾಯುತ್ತಾಳೆ ಎಂದರೆ ಅವಳ ಪಾತ್ರ ಮುಗಿಯುತ್ತದೆ ಎಂದರ್ಥ. ಇನ್ನೇನಾದರೂ ಮ್ಯಾಜಿಕ್ ಆಗಿ ಅವಳು ಬದುಕಬಹುದು. ಒಟ್ಟಿನಲ್ಲಿ ನಿರ್ದೇಶಕರು ಇನ್ನೇನಾದರೂ ಟ್ವಿಸ್ಟ್ ಕೊಡುತ್ತಾರೆ.
Shrirasthu Shubhamasthu Serial: ಮಾಧವನ ಕೈಗೆ ಮಗು ಬಂತು; ಇನ್ನೇನಿದ್ರೂ ತುಳಸಿ ಸಾಯೋದೊಂದೇ ಬಾಕಿ!
ಶಾರ್ವರಿ ಸತ್ಯ ಯಾವಾಗ ಬಯಲಾಗತ್ತೆ?
ಶಾರ್ವರಿ ಗಂಡನಿಗೆ ಮಾತ್ರ ಅವಳು ಏನು ಎಂದು ಗೊತ್ತಿದೆ. ಇನ್ನುಳಿದವರಿಗೆ ಯಾರಿಗೂ ಅವಳ ಬಗ್ಗೆ ಗೊತ್ತಿಲ್ಲ. ಸೇಡು ತೀರಿಸಿಕೊಳ್ಳಲು ಶಾರ್ವರಿ ಎಷ್ಟೆಲ್ಲ ಪಾಪದ ಕೆಲಸ ಮಾಡಿದಳು ಎನ್ನೋದು ತುಳಸಿಗೆ ಗೊತ್ತಿದ್ದು, ಹೇಗಾದರೂ ಮಾಡಿ ತಡೆಯಲು ನೋಡುತ್ತಿದ್ದಳು. ಈಗ ತುಳಸಿ ಕಥೆ ಮುಗಿದರೆ ಶಾರ್ವರಿ ಆಟ ಹೇಗೆ ಹೊರಗಡೆ ಬರುತ್ತದೆ? ಯಾರು ಇದಕ್ಕೆಲ್ಲ ಬ್ರೇಕ್ ಹಾಕುತ್ತಾರೆ? ಒಟ್ಟಿನಲ್ಲಿ ಸಾಕಷ್ಟು ಕುತೂಹಲಗಳಿದ್ದು, ಸದ್ಯಕ್ಕೆ ತುಳಸಿ ಪಾತ್ರ ಮುಗಿಯೋದು ಡೌಟ್ ಎನ್ನಬಹುದು.
'ಶ್ರೀರಸ್ತು ಶುಭಮಸ್ತು' ಧಾರಾವಾಹಿ: ಅತ್ತ ಶಾರ್ವರಿ ಪಾಪ ಬಯಲಾಗ್ತಿದ್ರೆ, ಇತ್ತ ತುಳಸಿ ಜೀವ ಹೋಗೋ ನ್ಯೂಸ್ ಬಂತು!
ಈ ಧಾರಾವಾಹಿಯಲ್ಲಿ ಇಬ್ಬರು ಮಧ್ಯವಯಸ್ಕರು ( ತುಳಸಿ-ಮಾಧವ್ ) ತಮ್ಮ ಸಂಗಾತಿಗಳನ್ನು ಕಳೆದುಕೊಂಡಿರುತ್ತಾರೆ. ಇವರಿಬ್ಬರ ಮಕ್ಕಳಿಗೆ ಮದುವೆಯಾಗಿರುತ್ತದೆ. ಆಗ ಇವರಿಬ್ಬರಿಗೂ ಪರಿಚಯ ಆಗಿ ಪ್ರೀತಿ ಹುಟ್ಟುವುದು. ದೈಹಿಕ ಸಂಪರ್ಕದಾಚೆ ಒಂದು ಸಾಂಗತ್ಯ ಬೇಕು ಎಂದು ಈ ಜೋಡಿ ಮಕ್ಕಳ ವಿರೋಧದ ಮಧ್ಯೆ ಮದುವೆಯಾಗುವುದು. ಆ ನಂತರ ಒಂದಿಷ್ಟು ಸವಾಲು ಎದುರಿಸುತ್ತಾರೆ. ಕೊನೆಗೂ ಇವರ ನಿರ್ಧಾರವನ್ನು ಮಕ್ಕಳು ಒಪ್ಪುತ್ತಾರೆ. ಎಲ್ಲ ಸಮಸ್ಯೆ ಬಗೆಹರಿದರೂ ಕೂಡ ಶಾರ್ವರಿ ಒಂದಲ್ಲ ಒಂದು ತೊಂದರೆ ಕೊಡುತ್ತಿರುತ್ತಾಳೆ.
ಪಾತ್ರಧಾರಿಗಳು
ಶಾರ್ವರಿ- ಸಪ್ನಾ ದೀಕ್ಷಿತ್
ತುಳಸಿ- ಸುಧಾರಾಣಿ
ಮಾಧವ್- ಅಜಿತ್ ಹಂದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.